18 ವರ್ಷಕ್ಕೆ ನಿವೃತ್ತಿ ಘೋಷಿಸಿದ ಪಾಕಿಸ್ತಾನಿ ಕ್ರಿಕೆಟರ್, ಇಸ್ಲಾಂ ಪ್ರಕಾರ ಬದುಕಲು ನಿರ್ಧಾರ!

By Suvarna NewsFirst Published Jul 24, 2023, 10:56 AM IST
Highlights

15ನೇ ವರ್ಷಕ್ಕೆ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಪಾದರ್ಪಣೆ ಮಾಡಿದ ಪ್ರತಿಭಾನ್ವಿತ ಕ್ರಿಕೆಟ್ ಆಟಗಾರ್ತಿ ಆಯೇಷಾ ನಸೀಮ್ ಕೇವಲ ಮೂರೇ ವರ್ಷಕ್ಕೆ ಅಂದರೆ ತನ್ನ 18ನೇ ವಯಸ್ಸಿಗೆ ನಿವೃತ್ತಿ ಘೋಷಿಸಿದ್ದಾರೆ. ಇಸ್ಲಾಂ ಪ್ರಕಾರ ಜೀವನ ನಡೆಸಲು ಕ್ರಿಕೆಟ್‌ಗೆ ಗುಡ್ ಬೈ ಹೇಳುತ್ತಿರುವುದಾಗಿ ಆಯೇಷಾ ಘೋಷಿಸಿದ್ದಾರೆ.

ಇಸ್ಲಾಮಾಬಾದ್(ಜು.24) ಅಂತಾರಾಷ್ಟ್ರೀಯ ಕ್ರಿಕೆಟ್ ಪ್ರತಿನಿಧಿಸಲು ಪ್ರತಿಭಾನ್ವಿತ ಕ್ರಿಕೆಟಿಗರು ಸತತ ಪರಿಶ್ರಮದ ಮೂಲಕ ಅವಕಾಶಕ್ಕಾಗಿ ಕಾದು ಕುಳಿತಿರುತ್ತಾರೆ. ಅದೃಷ್ಠ ಪಡೆದ ಕ್ರಿಕೆಟಿಗರು ಸ್ಥಾನ ಉಳಿಸಲು ಹರಸಾಹಸ ಪಡುತ್ತಾರೆ. ಅದೆಷ್ಟೇ ಟೀಕೆ, ಟಿಪ್ಪಣಿ ಎದುರಾದರೂ ತಮ್ಮ ಪರಿಶ್ರಮ, ಅಭ್ಯಾಸ ಬಿಡುವುದಿಲ್ಲ. ತಂಡದಿಂದ ಹೊರಬಿದ್ದರೂ ಮತ್ತೆ ಸ್ಥಾನ ಗಿಟ್ಟಿಸಲು ಹೋರಾಡುತ್ತಾರೆ. ಆದರೆ ಪಾಕಿಸ್ತಾನದ ಪ್ರತಿಭಾನ್ವಿತ ಕ್ರಿಕೆಟ್ ಆಟಗಾರ್ತಿ ಆಯೇಷಾ ನಸೀಮ್ ಅಚ್ಚರಿಯ ನಿರ್ಧಾರ ತೆಗದುಕೊಂಡಿದ್ದಾರೆ. 2020ರಲ್ಲಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಆಯೇಷಾ ನಸೀಮ್, 2023ರಲ್ಲಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ತಮ್ಮ 18ನೇ ವಯಸ್ಸಿಗೆ ಕ್ರಿಕೆಟ್‌‌ಗೆ ನಿವೃತ್ತಿ ಘೋಷಿಸಿದ್ದಾರೆ. ಇಸ್ಲಾಂ ಪ್ರಕಾರ ಜೀವನ ಸಾಗಿಸಲು ನಿವೃತ್ತಿಯಾಗುತ್ತಿರುವುದಾಗಿ ಆಯೇಷಾ ಹೇಳಿದ್ದಾರೆ.

15ನೇ ವರ್ಷಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದರ್ಪಣೆ ಮಾಡಿದ ಆಯೇಷಾ ನಸೀಮ್ ತಮ್ಮ 18ನೇ ವಯಸ್ಸಿಗೆ ವಿದಾಯ ಹೇಳಿದ್ದಾರೆ. ಇಸ್ಲಾಂ ಪ್ರಕಾರ ಜೀವನ ನಡೆಸಬೇಕು. ಇಸ್ಲಾಂ ಧರ್ಮದ ಅನುಸಾರವಾಗಿ ಜೀವನ ಸಾಗಿಸುತ್ತೇನೆ. ಹೀಗಾಗಿ ಕ್ರಿಕೆಟ್‌ಗೆ ನಿವೃತ್ತಿ ಹೇಳತ್ತಿದ್ದೇನೆ ಎಂದಿದ್ದಾರೆ. ಆಯೇಷಾ ನಿರ್ಧಾರಕ್ಕೆ ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಎಮರ್ಜಿಂಗ್ ಏಷ್ಯಾಕಪ್ ಫೈನಲ್‌ನಲ್ಲಿ ಭಾರತಕ್ಕೆ ಶಾಕ್, ಪಾಕಿಸ್ತಾನ ಎ ವಿರುದ್ಧ 128 ರನ್ ಸೋಲು!

2020ರಲ್ಲಿ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಆಯೇಷಾ, 2021ರಲ್ಲಿ ಏಕದಿನ ಕ್ರಿಕೆಟ್‌ಗೆ ಡೆಬ್ಯೂ ಮಾಡಿದ್ದಾರೆ. 30 ಅಂತಾರಾಷ್ಟ್ರೀಯ ಟಿ20 ಪಂದ್ಯದಿಂದ 369 ರನ್ ಸಿಡಿಸಿದ್ದಾರೆ. ಇನ್ನು ಏಕದಿನದಲ್ಲಿ 4 ಪಂದ್ಯದಿಂದ 33 ರನ್ ಸಿಡಿಸಿದ್ದಾರೆ. ಜನವರಿಯಲ್ಲಿ ಆಸ್ಟ್ರೇಲಿಯಾ ವಿರುದ್ದ ನಡೆದ ಟಿ20 ಪಂದ್ಯದಲ್ಲಿ ಆಯೇಷಾ 20 ಎಸೆತದಲ್ಲಿ 24 ರನ್ ಸಿಡಿಸಿ ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿ ಗಮನಸೆಳೆದಿದ್ದರು.

ಪಾಕಿಸ್ತಾನದ ಅಬೋಟೋಬಾದ್‌ನ ಬಗನ್ ಗ್ರಾಮದಲ್ಲಿ ಹುಟ್ಟಿದ ಆಯೇಷಾ ನಸೀಮ್ ಹಲವು ಕಟ್ಟುಪಾಡು, ಸಂಪ್ರದಾಯ ತೊಡದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ತಂಡ ಪ್ರತಿನಿಧಿಸಿದ್ದರು. ಅಬೋಟೋಬಾದ್ ಇಸ್ಲಾಂ ಕಟ್ಟುಪಾಡುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಪ್ರಾಂತ್ಯವಾಗಿದೆ. ಇಲ್ಲಿ ಹೆಣ್ಣು ಮಕ್ಕಳು ಶಾಲೆಗೆ ಹೋಗುವುದು ವಿರಳ. ಇದರ ನಡುವೆ ಕ್ರಿಕೆಟ್ ಆಟ ಇಲ್ಲವೇ ಇಲ್ಲ. ಆದರೆ ಪೋಷಕರ ನೆರವು, ತನ್ನ ಧೈರ್ಯದಿಂದ ಆಯೇಷಾ ನಸೀಮ್ ಕ್ರಿಕೆಟ ಸಾಧನೆಗೆ ಹೆಜ್ಜೆ ಇಟ್ಟಿದ್ದಳು. 

Asia Cup 2023: 15 ದಿನಗಳ ಅಂತರದಲ್ಲಿ ಇಂಡೋ-ಪಾಕ್ 3 ಬಾರಿ ಮುಖಾಮುಖಿ? ಇಲ್ಲಿದೆ ಲೆಕ್ಕಾಚಾರ

ಪ್ರಯತ್ನ , ಪ್ರತಿಭೆಯಿಂದ ಆಯೇಷಾ 15ನೇ ವಯಸ್ಸಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಿಂಚಲು ಆರಂಭಿಸಿದ್ದಳು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಿಂಚಲು ಆರಂಭಿಸುತ್ತಿದ್ದಂತೆ ಇದೀಗ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ ಆಯೇಷಾ ನಸೀಮ್ ಅತೀ ಕಿರಿಯ ವಯಸ್ಸಿಗೆ ನಿವೃತ್ತಿ ಘೋಷಿಸಿದ ಕ್ರಿಕೆಟ್ ಆಟಗಾರ್ತಿಯಾಗಿದ್ದಾರೆ. 

click me!