Omicron Variant Threat: ಸರಣಿ ಮುಂದೂಡುವಂತೆ ದಕ್ಷಿಣ ಆಫ್ರಿಕಾಗೆ ಬಿಸಿಸಿಐ ಮನವಿ?

By Suvarna NewsFirst Published Dec 3, 2021, 9:20 AM IST
Highlights

* ಅನಿಶ್ಚಿತತೆಯ ಭೀತಿ ಎದುರಿಸುತ್ತಿರುವ ಭಾರತ-ದಕ್ಷಿಣ ಆಫ್ರಿಕಾ ಸರಣಿ

* ಹರಿಣಗಳ ನಾಡಿಗೆ ದೀರ್ಘಕಾಲಿಕ ಪ್ರವಾಸ ಕೈಗೊಳ್ಳಲಿರುವ ಭಾರತ

* ಆಫ್ರಿಕಾ ಪ್ರವಾಸಕ್ಕೂ ಮುನ್ನ Omicron Variant  ಭೀತಿ

ಮುಂಬೈ(ಡಿ.03): ಟೀಂ ಇಂಡಿಯಾದ (Team India) ದಕ್ಷಿಣ ಆಫ್ರಿಕಾ ಪ್ರವಾಸ ಮುಂದೂಡಿಕೆಯಾಗುವುದು ಬಹುತೇಕ ಖಚಿತ ಎನಿಸಿದೆ. ಸರಣಿಯನ್ನು ಒಂದು ವಾರ ಮುಂದೂಡುವಂತೆ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿಗೆ (Cricket South Africa) ಬಿಸಿಸಿಐ ಮನವಿ ಸಲ್ಲಿಸುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ನ್ಯೂಜಿಲೆಂಡ್‌ ವಿರುದ್ಧದ ಸರಣಿ ಮುಕ್ತಾಯಗೊಂಡ ಬಳಿಕ ಡಿಸೆಂಬರ್ 9ರಂದು ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ (India  Tour of South Africa) ತೆರಳಬೇಕಿದ್ದು, 3 ಟೆಸ್ಟ್‌, 3 ಏಕದಿನ ಹಾಗೂ 4 ಟಿ20 ಪಂದ್ಯಗಳನ್ನು ಆಡಬೇಕಿದೆ.

ಆದರೆ ಒಮಿಕ್ರೋನ್‌ ವೈರಸ್‌ ಭೀತಿ(Omicron Variant Threat) ಹಿನ್ನೆಲೆಯಲ್ಲಿ ಪ್ರವಾಸ ಕೈಗೊಳ್ಳಲು ಕೇಂದ್ರ ಸರ್ಕಾರದ ಅನುಮತಿಗಾಗಿ ಬಿಸಿಸಿಐ(BCCI) ಕಾಯುತ್ತಿದೆ. ಇದೇ ವೇಳೆ ಪ್ರವಾಸದ ಅವಧಿಯನ್ನು ಕಡಿತಗೊಳಿಸುವ ಬಗ್ಗೆ ಚಿಂತಿಸುತ್ತಿರುವ ಬಿಸಿಸಿಐ, 3 ಟೆಸ್ಟ್‌ ಬದಲು 2 ಟೆಸ್ಟ್‌ ಆಡುವ ಸಾಧ್ಯತೆ ಇದೆ ಎನ್ನಲಾಗಿದೆ.

ದಕ್ಷಿಣ ಆಫ್ರಿಕಾ ಪ್ರವಾಸದ ಬಗ್ಗೆ 2-3 ದಿನಗಳಲ್ಲಿ ಸ್ಪಷ್ಟತೆ: ಕೊಹ್ಲಿ

ಮುಂಬೈ: ದಕ್ಷಿಣ ಆಫ್ರಿಕಾ ಪ್ರವಾಸದ ಬಗ್ಗೆ ಮುಂದಿನ 2-3 ದಿನಗಳಲ್ಲಿ ಸ್ಪಷ್ಟತೆ ಸಿಗಲಿದೆ. ಈ ಬಗ್ಗೆ ಬಿಸಿಸಿಐ ಜೊತೆ ಚರ್ಚೆ ನಡೆಸುತ್ತಿದ್ದೇವೆ ಎಂದು ಟೀಂ ಇಂಡಿಯಾ (Team India) ನಾಯಕ ವಿರಾಟ್‌ ಕೊಹ್ಲಿ (Virat Kohli) ಹೇಳಿದ್ದಾರೆ. 

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಂಡದ ಎಲ್ಲಾ ಹಿರಿಯ ಸದಸ್ಯರ ಜೊತೆ ಈಗಾಗಲೇ ಮಾತುಕತೆ ನಡೆಸಲಾಗಿದೆ. ಕೋಚ್‌ ರಾಹುಲ್ ದ್ರಾವಿಡ್‌ (Rahul Dravid) ಬಿಸಿಸಿಐ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಸರಣಿಯ ಬಗ್ಗೆ ಇನ್ನೆರಡು ದಿನಗಳಲ್ಲಿ ಸ್ಪಷ್ಟತೆ ಸಿಗುವ ಭರವಸೆ ಇದೆ. ಸಾಕಷ್ಟು ಚರ್ಚೆ, ಸಿದ್ಧತೆಗಳು ಆದ ಬಳಿಕವೇ ತೀರ್ಮಾನ ಕೈಗೊಳ್ಳಬೇಕಾಗಿದೆ’ ಎಂದಿದ್ದಾರೆ.

ಟೆಸ್ಟ್‌: ಭಾರತ ‘ಎ’ ವಿರುದ್ಧ ದಕ್ಷಿಣ ಆಫ್ರಿಕಾ ‘ಎ’ಗೆ ಮುನ್ನಡೆ

ಬ್ಲೂಮ್‌ಫೌಂಟೇನ್‌: ಭಾರತದ ವಿರುದ್ಧ 4 ದಿನಗಳ ಅನಧಿಕೃತ ಟೆಸ್ಟ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ‘ಎ’ ತಂಡ ಮುನ್ನಡೆ ಸಾಧಿಸಿದೆ. ಮೊದಲ ಇನ್ನಿಂಗ್ಸಲ್ಲಿ 21 ರನ್‌ಗಳ ಅಲ್ಪ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್‌ ಆರಂಭಿಸಿದ ದ.ಆಫ್ರಿಕಾ 3ನೇ ದಿನದಂತ್ಯಕ್ಕೆ 5 ವಿಕೆಟ್‌ ನಷ್ಟಕ್ಕೆ 116 ರನ್‌ ಕಲೆಹಾಕಿದ್ದು, 137 ರನ್‌ ಮುನ್ನಡೆ ಪಡೆದಿದೆ. 

India Tour of South Africa: ನಿಗದಿಯಂತೆ ದಕ್ಷಿಣ ಆಫ್ರಿಕಾ ಪ್ರವಾಸ: BCCI ಸ್ಪಷ್ಟನೆ!

ಸರೆಲ್‌ ಎರ್ವಿ 41, ರೇನಾರ್ಡ್‌ ವ್ಯಾನ್‌ 33 ರನ್‌ ಗಳಿಸಿದ್ದು, ಭಾರತದ ಪರ ಇಶಾನ್‌ ಪೊರೆಲ್‌ 2 ವಿಕೆಟ್‌ ಪಡೆದಿದ್ದಾರೆ. ಆಫ್ರಿಕಾವನ್ನು ಮೊದಲ ಇನ್ನಿಂಗ್ಸಲ್ಲಿ 297 ರನ್‌ಗೆ ಕಟ್ಟಿಹಾಕಿದ ಭಾರತ ‘ಎ’, 276 ರನ್‌ಗೆ ಆಲೌಟಾಗಿದೆ. ಶುಕ್ರವಾರ ಪಂದ್ಯದ ಕೊನೆ ದಿನವಾಗಿದೆ.

2ನೇ ಟೆಸ್ಟ್‌: ಲಂಕಾಗೆ 279 ರನ್‌ ಮುನ್ನಡೆ

ಗಾಲೆ: ಧನಂಜಯ ಡಿ ಸಿಲ್ವ ಅವರ ಭರ್ಜರಿ ಶತಕದ ನೆರವಿನಿಂದ 2ನೇ ಟೆಸ್ಟ್‌ನಲ್ಲಿ ವೆಸ್ಟ್‌ಇಂಡೀಸ್‌ ವಿರುದ್ಧ ಆತಿಥೇಯ ಶ್ರೀಲಂಕಾ ತಂಡ (Sri Lanka Cricket) ಭಾರೀ ಮುನ್ನಡೆ ಸಾಧಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 49 ರನ್‌ ಹಿನ್ನಡೆಯೊಂದಿಗೆ ಬ್ಯಾಟಿಂಗ್‌ ಆರಂಭಿಸಿದ ಲಂಕಾ 4ನೇ ದಿನದಂತ್ಯಕ್ಕೆ 8 ವಿಕೆಟ್‌ ನಷ್ಟಕ್ಕೆ 328 ರನ್‌ ಕಲೆ ಹಾಕಿದ್ದು, 279 ರನ್‌ ಮುನ್ನಡೆಯಲ್ಲಿದೆ. 

Ind vs NZ Kanpur Test: ಕಿವೀಸ್‌ ಪಡೆಯನ್ನು ಸೋಲಿನಿಂದ ಪಾರು ಮಾಡಿದ 'ಭಾರತದ' ಜೋಡಿ..!

ಪಥುಮ್‌ ನಿಸ್ಸಂಕ 66 ರನ್‌ ಗಳಿಸಿದರೆ, 153 ರನ್‌ ಸಿಡಿಸಿರುವ ಡಿಸಿಲ್ವ 5ನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ. ಇದಕ್ಕೂ ಮೊದಲು, ಪ್ರಥಮ ಇನ್ನಿಂಗ್ಸ್‌ನಲ್ಲಿ ಲಂಕಾವನ್ನು 204 ರನ್‌ಗೆ ನಿಯಂತ್ರಿಸಿದ್ದ ವಿಂಡೀಸ್‌, 253 ರನ್‌ ಕಲೆ ಹಾಕಿತ್ತು.

click me!