IPL 2022: ಆರ್‌ಸಿಬಿ ಮುಂದಿನ ನಾಯಕ ಯಾರು? ಮ್ಯಾಕ್ಸ್‌ವೆಲ್‌ಗೆ ಮಣೆಹಾಕಿದ ಡೆನಿಯಲ್ ವೆಟ್ಟೋರಿ !

By Suvarna NewsFirst Published Dec 1, 2021, 8:11 PM IST
Highlights
  • ಆರ್‌ಸಿಬಿ ತಂಡದ ಮುಂದಿನ ನಾಯಕ ಯಾರು?
  • ಕೊಹ್ಲಿ ನಾಯಕನಾಗಿ ಮಾಡಿದ ಡೇನಿಯಲ್ ವೆಟ್ಟೋರಿ ಉತ್ತರ
  • ಕೊಹ್ಲಿ ಬಳಿಕ ಮ್ಯಾಕ್ಸ್‌ವೆಲ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಬಲ್ಲರು

ಬೆಂಗಳೂರು(ಡಿ.01):  IPL 2022ರ ಟೂರ್ನಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು( Royal Challengers Bangalore) ಫ್ರಾಂಚೈಸಿ ತಯಾರಿ ಮಾಡಿಕೊಳ್ಳುತ್ತಿದೆ. ಹರಾಜಿನಲ್ಲಿ ಬಲಿಷ್ಠ ಆಟಗಾರರನ್ನು ಖರೀದಿಸಿ ಹೊಸ ತಂಡ ರಚಿಸಲು ಸಜ್ಜಾಗಿದೆ. ಇದರ ಜೊತೆಗೆ ಹೊಸ ನಾಯಕನ್ನು ಆಯ್ಕೆ ಮಾಡಬೇಕಿದೆ. ರಾಯಲ್ ಚಾಲೆಂಜರ್ಸ್ ತಂಡಕ್ಕೆ ವಿರಾಟ್ ಕೊಹ್ಲಿಯನ್ನು(Virat kohli) ನಾಯಕನಾಗಿ ಆಯ್ಕೆ ಮಾಡಿದ ಮಾಜಿ ನಾಯಕ ಡೇನಿಯಲ್ ವೆಟ್ಟೋರಿ ಮುಂದಿನ ನಾಯಕನ ಕುತೂಹಲಕ್ಕೆ ಉತ್ತರ ನೀಡಿದ್ದಾರೆ. ಗ್ಲೆನ್ ಮ್ಯಾಕ್ಸ್‌ವೆಲ್(Glenn Maxwell),  ಕೊಹ್ಲಿ ಬಳಿಕ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಬಲ್ಲರು ಎಂದಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಅತ್ಯುತ್ತಮ ಕ್ರಿಕೆಟಿಗ. ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಬ್ಯಾಟಿಂಗ್ ನಡೆಸುವ ಸಾಮರ್ಥ್ಯ ಗ್ಲೆನ್ ಮ್ಯಾಕ್ಸ್‌ವೆಲ್‌ಗಿದೆ. ಹೀಗಾಗಿ ವಿರಾಟ್ ಕೊಹ್ಲಿ ಬಳಿಕ, ಮ್ಯಾಕ್ಸ್‌ವೆಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಯಶಸ್ವಿಯಾಗಿ ಮುನ್ನಡೆಸಲಿದ್ದಾರೆ ಎಂದು ವೇಟ್ಟೋರಿ(Daniel Vettori) ಹೇಳಿದ್ದಾರೆ.

IPL retention: ಚಹಾಲ್, ಕನ್ನಡಿಗರ ಕೈಬಿಟ್ಟು, ಕೊಹ್ಲಿ ಸೇರಿ ಮೂವರ ಉಳಿಸಿಕೊಂಡ RCB!

ಆರ್‌ಸಿಬಿ ನಾಯಕ ಡೇನಿಯಲ್ ವೆಟ್ಟೋರಿ 2013ರಲ್ಲಿ ನಾಯಕತ್ವಕ್ಕೆ ವಿದಾಯ ಹೇಳಿದ್ದರು. ಬಳಿಕ ಡೇನಿಯಲ್ ವೆಟ್ಟೋರಿ, ಯುವ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ನಾಯಕತ್ವ ನೀಡಿದ್ದರು. ವೆಟ್ಟೋರಿ ನಡೆಯನ್ನು ಅಂದಿನ ಆರ್‌ಸಿಬಿ ಮುಖ್ಯಸ್ಥ ವಿಜಯ್ ಮಲ್ಯ(Vijay Mallya) ಸ್ವಾಗತಿಸಿದ್ದರು. ಅತ್ಯುತ್ತಮ ನಡೆ ಎಂದು ಕೊಂಡಿದ್ದರು ಎಂದು ವೆಟ್ಟೋರಿ ಹೇಳಿದ್ದಾರೆ.

ಆರ್‌ಸಿಬಿ (RCB) ತಂಡಕ್ಕೆ ನಾನು ಮಾಡಿದ ಉತ್ತಮ ಕೊಡುಗೆ ಎಂದರೆ ಕೊಹ್ಲಿಯನ್ನು ನಾಯಕನಾಗಿ ಆಯ್ಕೆ ಮಾಡಿರುವುದು. ಕೊಹ್ಲಿ ನಾಯಕನಾದ ಬಳಿಕ ಆರ್‌ಸಿಬಿ ತಂಡದ ಪ್ರದರ್ಶನ ಎಲ್ಲರೂ ಗಮನಿಸಿದ್ದಾರೆ. ಬಳಿಕ ಕೊಹ್ಲಿ ಟೀಂ ಇಂಡಿಯಾದ ಮೂರು ಮಾದರಿಗೆ ನಾಯಕನಾಗಿ ಆಯ್ಕೆಯಾಗಿದ್ದಾರೆ ಎಂದು ವೆಟೋರಿ ಹೇಳಿದ್ದಾರೆ. ಬಿಗ್‌ಬ್ಯಾಶ್ ಲೀಗ್ ಟೂರ್ನಿಯಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ತಂಡದ  ನಾಯಕನಾಗಿರುವ ಗ್ಲೆನ್ ಮ್ಯಾಕ್ಸ್‌ವೆಲ್‌, ಉತ್ತಮವಾಗಿ ನಾಯಕತ್ವ ನಿಭಾಯಿಸಿದ್ದಾರೆ. ನಾಯಕತ್ವದಲ್ಲಿ ಅನುಭವ ಹೊಂದಿರುವ ಮ್ಯಾಕ್ಸ್‌ವೆಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನೆರವಾಗಲಿದ್ದಾರೆ ಎಂದು ವೆಟ್ಟೋರಿ ಹೇಳಿದ್ದಾರೆ.

IPL retention: ಪಾಂಡ್ಯ ಬ್ರದರ್ಸ್ ಔಟ್, ರೋಹಿತ್ ಶರ್ಮಾ ಸೇರಿ ನಾಲ್ವರ ಉಳಿಸಿಕೊಂಡ ಮುಂಬೈ!

ಪಂಜಾಬ್ ಕಿಂಗ್ಸ್ ತಂಡದಲ್ಲಿ ನೀರಸ ಪ್ರದರ್ಶನ ನೀಡಿದ್ದ ಗ್ಲೆನ್ ಮ್ಯಾಕ್ಸ್‌ವೆಲ್, 14ನೇ ಆವೃತ್ತಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿಕೊಂಡರು. ಕಳೆದ ಆವೃತ್ತಿಯಲ್ಲಿ ಮ್ಯಾಕ್ಸ್‌ವೆಲ್ ಉತ್ತಮ ಪ್ರದರ್ಶನ ನೀಡಿದ್ದಾರೆ. ರಾಯಲ್ ಚಾಲೆಂಜರ್ಸ್ ತಂಡ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಮೊಹಮ್ಮದ್ ಸಿರಾಜ್ ರಿಟೈನ್ ಮಾಡಿಕೊಂಡಿದೆ.

8 ಫ್ರಾಂಚೈಸಿಗಲಿಗೆ ನಾಲ್ವರು ಆಟಗಾರರನ್ನು ರಿಟೈನ್ ಮಾಡಿಕೊಳ್ಳುವ ಅವಕಾಶ ನೀಡಲಾಗಿತ್ತು. ಆದರೆ ಆರ್‌ಸಿಬಿ ಮೂವರನ್ನು ರಿಟೈನ್ ಮಾಡಿಕೊಂಡಿದೆ. ವಿರಾಟ್ ಕೊಹ್ಲಿಗೆ 15 ಕೋಟಿ ರೂಪಾಯಿ ನೀಡಿ ರಿಟೈನ್ ಮಾಡಿಕೊಂಡಿದ್ದರೆ, ಗ್ಲೆನ್ ಮ್ಯಾಕ್ಸ್‌ವೆಲ್‌ಗೆ 11 ಕೋಟಿ ರೂಪಾಯಿ ನೀಡಲಾಗಿದೆ. ಇನ್ನು ಮೊಹಮ್ಮದ್ ಸಿರಾಜ್‌ಗೆ 7 ಕೋಟಿ ರೂಪಾಯಿ ನೀಡಲಾಗಿದೆ.

2021ರ ಐಪಿಎಲ್ ಟೂರ್ನಿ ಬಳಿಕ ವಿರಾಟ್ ಕೊಹ್ಲಿ ಆರ್‌ಸಿಬಿ ನಾಯಕತ್ವ ತ್ಯಜಿಸಿದರು. ಮುಂದಿನ ಆವೃತ್ತಿಗಳಲ್ಲಿ ಆಟಗಾರನಾಗಿ ಮುಂದುವರಿಯುವುದಾಗಿ ಘೋಷಿಸಿದ್ದರು. ನಾಯಕನಾಗಿ ಕೊನೆಯ ಆವೃತ್ತಿಯಲ್ಲಿ ಕೊಹ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ತಂಡವನ್ನು ಪ್ಲೇ ಆಫ್ ಹಂತಕ್ಕೆ ಕೊಂಡೊಯ್ದಿದ್ದಾರೆ. ಆದರೆ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲೇ ಇಲ್ಲ.

ರಿಟೈನ್ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬಳಿ 57 ಕೋಟಿ ರೂಪಾಯಿ ಉಳಿದಿಕೊಂಡಿದೆ. ಈ ಹಣದಲ್ಲಿ ಆರ್‌ಸಿಬಿ ಹರಾಜಿನಲ್ಲಿ ಆಟಗಾರರನ್ನು ಖರೀದಿಸಲಿದೆ. ಸದ್ಯ ತಂಡದಿಂದ ಕೈಬಿಟ್ಟಿರುವ ಸ್ಪಿನ್ನರ್ ಯಜುವೇಂದ್ರ ಚಹಾಲ್ ಹಾಗೂ  ಸ್ಪೋಟಕ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ ಖರೀದಿಸಲು ಚಿಂತನೆ ನಡೆಸಿದೆ.
 

click me!