IPL 2021: ಪ್ಯಾಟ್ ಕಮಿನ್ಸ್‌ ಬದಲಿಗೆ ಕೆಕೆಆರ್ ತಂಡ ಕೂಡಿಕೊಂಡ ಕಿವೀಸ್‌ ವೇಗಿ..!

By Suvarna NewsFirst Published Aug 27, 2021, 3:26 PM IST
Highlights

* ಯುಎಇ ಚರಣದ ಐಪಿಎಲ್‌ಗೆ ಕೆಕೆಆರ್ ತಂಡಕ್ಕೆ ವೇಗಿ ಪ್ಯಾಟ್ ಕಮಿನ್ಸ್‌ ಅಲಭ್ಯ

* ಕಮಿನ್ಸ್‌ ಬದಲಿಗೆ ಕೆಕೆಆರ್ ತಂಡ ಕೂಡಿಕೊಂಡ ಕಿವೀಸ್‌ ವೇಗಿ ಸೌಥಿ

* ಯುಎಇ ಚರಣದ ಐಪಿಎಲ್‌ ಸೆಪ್ಟೆಂಬರ್ 19ರಿಂದ ಆರಂಭ

ನವದೆಹಲಿ(ಆ.27): ಐಪಿಎಲ್‌ 14ನೇ ಆವೃತ್ತಿಯ ಭಾಗ-2ಕ್ಕೆ ನ್ಯೂಜಿಲೆಂಡ್‌ನ ವೇಗದ ಬೌಲರ್‌ ಟಿಮ್‌ ಸೌಥಿ ಕೋಲ್ಕತಾ ನೈಟ್‌ ರೈಡ​ರ್ಸ್‌ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಇತ್ತೀಚೆಗಷ್ಟೇ ತಂದೆಯಾದ ಆಸ್ಪ್ರೇಲಿಯಾದ ಪ್ಯಾಟ್‌ ಕಮಿನ್ಸ್‌ ಟೂರ್ನಿಯಿಂದ ಹಿಂದೆ ಸರಿದ ಕಾರಣ ತಂಡವು ಸೌಥಿ ಅವರನ್ನು ಸೇರಿಸಿಕೊಂಡಿದೆ. 

2019ರಲ್ಲಿ ಆರ್‌ಸಿಬಿ ಪರ ಆಡಿದ್ದ ಸೌಥಿ, 2020ರ ಹರಾಜಿನಲ್ಲಿ ಬಿಕರಿಯಾಗಿರಲಿಲ್ಲ. ಎರಡು ಬಾರಿಯ ಐಪಿಎಲ್ ಚಾಂಪಿಯನ್‌ ಕೆಕೆಆರ್ ತಂಡವು ನ್ಯೂಜಿಲೆಂಡ್‌ನ ಅತ್ಯಂತ ಅನುಭವಿ ವೇಗಿಯನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದುವರೆಗೂ ನ್ಯೂಜಿಲೆಂಡ್ ಪರ ಒಟ್ಟು 305 ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿರುವ ಸೌಥಿ, 603 ವಿಕೆಟ್ ಕಬಳಿಸಿದ್ದಾರೆ. 

Officially a Knight 😍

Kiwi pacer to don 💜💛 for the UAE leg of .

Welcome aboard, Tim. https://t.co/l0fRhdEVhV

— KolkataKnightRiders (@KKRiders)

ಇನ್ನು ಐಪಿಎಲ್‌ನಲ್ಲಿ ಟಿಮ್‌ ಸೌಥಿ ಆರ್‌ಸಿಬಿ ಮಾತ್ರವಲ್ಲದೇ ವಿವಿಧ ಫ್ರಾಂಚೈಸಿಗಳ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್(2011), ರಾಜಸ್ಥಾನ ರಾಯಲ್ಸ್‌(2014,2015), ಮುಂಬೈ ಇಂಡಿಯನ್ಸ್‌(2016,2017) ಹಾಗೂ ರಾಯಲ್ಸ್‌ ಚಾಲೆಂಜರ್ಸ್ ಬೆಂಗಳೂರು(2018,2019)ರಲ್ಲಿ ಕಣಕ್ಕಿಳಿದಿದ್ದರು. ಇದುವರೆಗೂ ಒಟ್ಟು 40 ಐಪಿಎಲ್ ಪಂದ್ಯಗಳನ್ನಾಡಿರುವ ಸೌಥಿ 28 ವಿಕೆಟ್ ಕಬಳಿಸಿದ್ದಾರೆ.

IPL 2021 ಆರ್‌ಸಿಬಿಗೆ ಜಾರ್ಜ್‌ ಗಾರ್ಟನ್‌, ರಾಯಲ್ಸ್‌ಗೆ ಶಂಸಿ ಸೇರ್ಪಡೆ..!

ಕೋಲ್ಕತ ನೈಟ್‌ ರೈಡರ್ಸ್‌ ತಂಡವು ಯುಎಇ ಚರಣದ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಎದುರಿಸಲಿದೆ. ಸೆಪ್ಟೆಂಬರ್ 20ರಂದು ನಡೆಯಲಿರುವ ಈ ಹೈವೋಲ್ಟೇಜ್ ಪಂದ್ಯಕ್ಕೆ ಅಬುಧಾಬಿಯ ಶೇಖ್ ಜಾಯೆದ್ ಮೈದಾನ ಆತಿಥ್ಯವನ್ನು ವಹಿಸಿದೆ.

The one who will surely brighten up your feed - Adil Rashid ⭐️

We know we have chosen the right one to bowl the wrong ones 🕸😉 pic.twitter.com/F5f0vfgr5l

— Punjab Kings (@PunjabKingsIPL)

ಇದೇ ವೇಳೆ ಆಸ್ಪ್ರೇಲಿಯಾ ವೇಗಿ ಜಾಯ್‌ ರಿಚರ್ಡ್‌ಸನ್‌ ಬದಲಿಗೆ ಪಂಜಾಬ್‌ ಕಿಂಗ್ಸ್‌ ತಂಡಕ್ಕೆ ಇಂಗ್ಲೆಂಡ್‌ ಸ್ಪಿನ್ನರ್‌ ಆದಿಲ್‌ ರಶೀದ್‌ ಸೇರ್ಪಡೆಗೊಂಡಿದ್ದಾರೆ. ಸೆಪ್ಟೆಂಬರ್ 19ರಿಂದ ಐಪಿಎಲ್‌ ಆರಂಭಗೊಳ್ಳಲಿದೆ.

click me!