Ind vs Eng ಲೀಡ್ಸ್ ಟೆಸ್ಟ್: ವೇಗಿ ಸಿರಾಜ್‌ ಮೇಲೆ ಬಾಲ್‌ ಎಸೆದ ಇಂಗ್ಲೆಂಡ್‌ ಪ್ರೇಕ್ಷಕರು!

Suvarna News   | Asianet News
Published : Aug 27, 2021, 12:47 PM IST
Ind vs Eng ಲೀಡ್ಸ್ ಟೆಸ್ಟ್: ವೇಗಿ ಸಿರಾಜ್‌ ಮೇಲೆ ಬಾಲ್‌ ಎಸೆದ ಇಂಗ್ಲೆಂಡ್‌ ಪ್ರೇಕ್ಷಕರು!

ಸಾರಾಂಶ

* ಲೀಡ್ಸ್‌ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಪ್ರೇಕ್ಷಕರಿಂದ ಅನುಚಿತ ವರ್ತನೆ * ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಮೇಲೆ ಬಾಲ್ ಎಸೆತ * ವಿಕೆಟ್ ಕೀಪರ್ ರಿಷಭ್ ಪಂತ್ ಅವರಿಂದ ಮಾಹಿತಿ

ಲೀಡ್ಸ್(ಆ.27)‌: ಇಂಗ್ಲೆಂಡ್‌ನಲ್ಲಿ ಭಾರತೀಯ ಆಟಗಾರರ ಮೇಲಿನ ದಾಳಿಯನ್ನು ಇಂಗ್ಲೆಂಡ್‌ ಪ್ರೇಕ್ಷಕರು ಮುಂದುವರಿಸಿದ್ದು, 3ನೇ ಟೆಸ್ಟ್‌ನ ಮೊದಲ ದಿನ ವೇಗಿ ಮೊಹಮ್ಮದ್‌ ಸಿರಾಜ್‌ ಮೇಲೆ ಬಾಲ್‌ ಎಸೆದಿದ್ದಾರೆ. ಇದನ್ನು ಟೀಂ ಇಂಡಿಯಾ ವಿಕೆಟ್‌ ಕೀಪರ್ ರಿಷಭ್ ಪಂತ್‌ ಬಹಿರಂಗಪಡಿಸಿದ್ದಾರೆ.

‘ಫೀಲ್ಡಿಂಗ್‌ ವೇಳೆ ಕೆಲ ಪ್ರೇಕ್ಷಕರು ಸಿರಾಜ್‌ ಮೇಲೆ ಬಾಲ್‌ ಎಸೆದಿದ್ದಾರೆ. ಇದರಿಂದ ವಿರಾಟ್ ಕೊಹ್ಲಿ ನಿರಾಸೆಗೊಂಡಿದ್ದಾರೆ. ನೀವು ಏನೇ ಮಾಡಿ, ಆದರೆ ಫೀಲ್ಡರ್‌ಗಳ ಮೇಲೆ ವಸ್ತುಗಳನ್ನು ಎಸೆಯುವುದು ತಪ್ಪು. ಇದು ಕ್ರಿಕೆಟ್‌ಗೆ ಒಳ್ಳೆಯದ್ದಲ್ಲ’ ಎಂದು ಪಂತ್ ಹೇಳಿದ್ದಾರೆ. 

ಇದೇ ಸರಣಿಯ 2ನೇ ಪಂದ್ಯದಲ್ಲೂ ಪ್ರೇಕ್ಷಕರು ಕೆ.ಎಲ್‌.ರಾಹುಲ್‌ ಮೇಲೆ ಕಾರ್ಕ್‌ಗಳನ್ನು ಎಸೆದು ಫೀಲ್ಡಿಂಗ್‌ಗೆ ಅಡ್ಡಿಪಡಿಸಿದ್ದರು. ಸಿರಾಜ್‌ ಈ ಮೊದಲು ಆಸ್ಪ್ರೇಲಿಯಾ ಸರಣಿಯಲ್ಲಿ ಆಸೀಸ್‌ ಪ್ರೇಕ್ಷಕರಿಂದ ಜನಾಂಗೀಯ ನಿಂದನೆಗೆ ಗುರಿಯಾಗಿದ್ದರು. ಆ ಬಳಿಕ ಕಾಂಗರೂ ನಾಡಿನಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ  ಭಾರತ ಪರ ಸರಣಿಯಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಆಗಿ ಹೊರಹೊಮ್ಮಿದ್ದರು.

Ind vs Eng Leeds Test ಭಾರತ ಎದುರು ಇಂಗ್ಲೆಂಡ್‌ ರನ್‌ ಪರ್ವತ..!

ಭಾರತ ಹಾಗೂ ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಈಗಾಗಲೇ 1-0 ಮುನ್ನಡೆ ಸಾಧಿಸಿದೆ. ಲೀಡ್ಸ್‌ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್‌ನ ಎರಡನೇ ದಿನದಾಟದಂತ್ಯದ ವೇಳೆಗೆ ಇಂಗ್ಲೆಂಡ್ 8 ವಿಕೆಟ್ ನಷ್ಟಕ್ಕೆ 423 ರನ್‌ ಬಾರಿಸಿದ್ದು 345 ರನ್‌ಗಳ ಮುನ್ನಡೆ ಸಂಪಾದಿಸಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಐಪಿಎಲ್ ಹರಾಜಿನಲ್ಲಿ ₹25.20 ಕೋಟಿ ಪಡೆದ ಕ್ಯಾಮರೂನ್ ಗ್ರೀನ್‌ಗೆ ಕೊಡುವ ಮೊತ್ತ ₹18 ಕೋಟಿ ಮಾತ್ರ
ಕೇವಲ 30 ಲಕ್ಷ ಮೂಲ ಬೆಲೆ ಹೊಂದಿದ್ದ ಮಂಗೇಶ್ ಯಾದವ್ 5.2 ಕೋಟಿಗೆ ಆರ್‌ಸಿಬಿ ಪಾಲು? ಅಷ್ಟಕ್ಕೂ ಯಾರು ಈ ಎಡಗೈ ವೇಗಿ?