ವಿಂಡೀಸ್ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ಒಂದೇ ಒಂದು ಪಂದ್ಯದಲ್ಲೂ ಬ್ಯಾಟ್ ಬೀಸಲಿಲ್ಲ. ಟಿ20 ಸರಣಿಯಿಂದ ಕೊಹ್ಲಿ ಕೈಬಿಟ್ಟಿರುವುದು ಉತ್ತಮ ಲಯದಲ್ಲಿರುವ ಅವರಿಗೆ ಅಡ್ಡಿಯಾಗುವ ಸಾಧ್ಯತೆಯಿದೆ
ಬೆಂಗಳೂರು(ಆ.05): ಟೀಂ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯನ್ನೇನೋ ಗೆದ್ದುಕೊಂಡಿದೆ. ಆದ್ರೆ, ಸರಣಿ ಗೆದ್ರು, ತಂಡದ ಕೋಚ್ ರಾಹುಲ್ ದ್ರಾವಿಡ್ ವಿರುದ್ಧ ಟೀಕೆಗಳು ಕೇಳಿ ಬರ್ತಿವೆ. ಯಾಕಂದ್ರೆ, ಏಕದಿನ ವಿಶ್ವಕಪ್ ಟೂರ್ನಿ ಹತ್ತಿರವಾಗ್ತಿದ್ರು, ಇನ್ನು ಕೋರ್ ಟೀಂ ರೆಡಿಯಾಗಿಲ್ಲ. ಕೇವಲ ಅನಗತ್ಯ ಪ್ರಯೋಗಳನ್ನ ಮಾಡೋದ್ರಲ್ಲೇ, ದ್ರಾವಿಡ್ ಆ್ಯಂಡ್ ಕಂಪನಿ ಬ್ಯುಸಿಯಾಗಿದೆ. ಅಲ್ಲದೇ, ತಂಡದ ಸೀನಿಯರ್ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾಗೆ ರೆಸ್ಟ್ ನೀಡಿದ್ದೇ, ಈಗ ಬಿಗ್ ಡಿಬೇಟ್ ಆಗಿದೆ.
ಅನಗತ್ಯ ರೆಸ್ಟ್ನಿಂದಾಗಿ ಫಾರ್ಮ್ ಕಳೆದುಕೊಳ್ಳಲಿದ್ದಾರಾ..?
ಯೆಸ್, ವಿಂಡೀಸ್ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ಒಂದೇ ಒಂದು ಪಂದ್ಯದಲ್ಲೂ ಬ್ಯಾಟ್ ಬೀಸಲಿಲ್ಲ. ಮೊದಲ ಪಂದ್ಯದಲ್ಲಿ ಕೊಹ್ಲಿ ಬ್ಯಾಟಿಂಗ್ ಮಾಡಲಿಲ್ಲ. ಕೊಹ್ಲಿ ಬದಲು ಸೂರ್ಯ ಕುಮಾರ್ ಯಾದವ್ರನ್ನ 3ನೇ ಕ್ರಮಾಂಕದಲ್ಲಿ ಆಡಿಸಲಾಯ್ತು. ಇನ್ನು 2 ಮತ್ತು 3ನೇ ಪಂದ್ಯದಿಂದ ರೆಸ್ಟ್ ನೀಡಲಾಯ್ತು. ವಾಟರ್ಬಾಯ್ ಮತ್ತು ಸಬ್ಸಿಟಿಟ್ಯುಟ್ ರೂಪದಲ್ಲಿ ರನ್ಮಷಿನ್ ಫೀಲ್ಡಲ್ಲಿ ಕಾಣಿಸಿಕೊಂಡ್ರು.
ಟೀಂ ಇಂಡಿಯಾ ಆಯ್ಕೆಯಲ್ಲಿ ಲಾಜಿಕ್ಕೂ ಇಲ್ಲ, ಮ್ಯಾಜಿಕ್ಕೂ ಇಲ್ಲ..! ಹಿಂಗಾದ್ರೆ ಕಪ್ ಗೆಲ್ಲುತ್ತಾ ಭಾರತ?
ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ನಲ್ಲಿ ಕೊಹ್ಲಿ ಫ್ಲಾಪ್ ಶೋ ನೀಡಿದ್ರು. ಆದ್ರೆ, ಕೆರಿಬಿಯನ್ ಪಡೆ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡಿದ ಎರಡು ಇನ್ನಿಂಗ್ಸ್ಗಳಲ್ಲಿ ಒಂದು ಅರ್ಧಶತಕ ಮತ್ತು ಶತಕ ಸಿಡಿಸಿ ಮಿಂಚಿದ್ರು. ಆದ್ರೆ, ಅದ್ಭುತ ಫಾರ್ಮ್ನಲ್ಲಿದ್ದ ಕೊಹ್ಲಿಗೆ ಏಕದಿನ ಸರಣಿಯಲ್ಲಿ ಅನಗತ್ಯವಾಗಿ ರೆಸ್ಟ್ ನೀಡಿದ್ದೇಕೆ..? ಇನ್ನೆರೆಡು ತಿಂಗಳಲ್ಲಿ ವಿಶ್ವಕಪ್ ಇಟ್ಟುಕೊಂಡು, ಇನ್ಫಾರ್ಮ್ ಆಟಗಾರರಿಗೆ ರೆಸ್ಟ್ ನೀಡಿ, ಆವರ ರಿದಮ್ನ ಹಾಳು ಮಾಡಲಾಗ್ತಿದೆ ಅಂತ ಫ್ಯಾನ್ಸ್ ದ್ರಾವಿಡ್ ವಿರುದ್ಧ ಕಿಡಿಕಾರ್ತಿದ್ದಾರೆ.
ಯಾವುದೇ ಸಿದ್ಧತೆ ಇಲ್ಲದೆ ಏಷ್ಯಾಕಪ್ ಆಡಲಿರೋ ವಿರಾಟ್ ಕೊಹ್ಲಿ..!
ಯೆಸ್, ಕೊಹ್ಲಿ ಏಕದಿನ ಪಂದ್ಯದಲ್ಲಿ ಬ್ಯಾಟ್ ಬೀಸಿ, 5 ತಿಂಗಳುಗಳಾಗಿವೆ. ಮತ್ತೊಂದೆಡೆ ಏಷ್ಯಾಕಪ್ವರೆಗು ಟೀಂ ಇಂಡಿಯಾ ಯಾವುದೇ ಏಕದಿನ ಪಂದ್ಯಗಳನ್ನಾಡಲ್ಲ. ಇದರಿಂದ ಕೊಹ್ಲಿ ಡೈರೆಕ್ಟ್ ಏಷ್ಯಾಕಪ್ನಲ್ಲಿ ಕಣಕ್ಕಿಳಿಯಲಿದ್ದಾರೆ. ಯಾವುದೇ ಪ್ರಿಪರೇಷನ್ ಇಲ್ಲದೇ, ಮೆಗಾ ಟೂರ್ನಿಯಲ್ಲಿ ಬಲಿಷ್ಠ ಬೌಲಿಂಗ್ ಲೈನ್ಅಪ್ ಹೊಂದಿರೋ ಪಾಕಿಸ್ತಾನ ವಿರುದ್ಧ ಬ್ಯಾಟ್ ಬೀಸಬೇಕಿದೆ. ಇದು ಕೊಹ್ಲಿಯ ಪ್ರದರ್ಶನದ ಮೇಲೆ ಪರಿಣಾಮ ಬೀರಲಿದೆ. ಪಾಕ್ ವಿರುದ್ಧ ಕೊಹ್ಲಿ ಅದ್ಭುತ ದಾಖಲೆ ಹೊಂದಿದ್ದಾರೆ. ಒಂದು ವೇಳೆ ಕೊಹ್ಲಿ ವೈಫಲ್ಯ ಅನುಭವಿಸಿದ್ರೆ, ತಂಡಕ್ಕೆ ಹಿನ್ನಡೆಯಾಗೋದು ಪಕ್ಕಾ.
ಪ್ರೀತಿ ಬಲೆಯಲ್ಲಿ National Crush ಸ್ಮೃತಿ ಮಂಧನಾ..! ಆ ಲಕ್ಕಿ ಹುಡುಗ ಯಾರು ಗೊತ್ತಾ?
ಕೊಹ್ಲಿ ಮಾತ್ರವಲ್ಲ, ಟೀಂ ಇಂಡಿಯಾದ ಹಲವು ಆಟಗಾರರು ಏಕದಿನ ಪಂದ್ಯವಾಡಿ ಹಲವು ತಿಂಗಳು ಕಳೆದಿವೆ. ಸದ್ಯ ಇಂಜುರಿಯಿಂದಾಗಿ ತಂಡದಿಂದ ಹೊರಗುಳಿದಿರೋ ಕೆ.ಎಲ್ ರಾಹುಲ್, ಶ್ರೇಯಸ್ ಅಯ್ಯರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ 5 ತಿಂಗಳಿಂದ ಯಾವುದೇ ಏಕದಿನ ಪಂದ್ಯವಾಡಿಲ್ಲ. ಈ ಎಲ್ಲಾ ಆಟಗಾರರು ಮಾರ್ಚ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ ಒಟ್ಟಿಗೆ ಆಡಿದ್ರು. ಇನ್ನು ವೇಗಿ ಜಸ್ಪ್ರೀತ್ ಬುಮ್ರಾ ಕಳೆದ ವರ್ಷ ತಮ್ಮ ಇಂಗ್ಲೆಂಡ್ ವಿರುದ್ಧ ಆಡಿದ್ದೇ ಲಾಸ್ಟ್. ಅಲ್ಲಿಂದ ಇಲ್ಲಿವರೆಗು ಯಾವುದೇ ಪಂದ್ಯವಾಡದೇ, ಏಷ್ಯಾಕಪ್ ಆಡಲಿದ್ದಾರೆ.
ಒಟ್ಟಿನಲ್ಲಿ ರಾಹುಲ್ ದ್ರಾವಿಡ್ ಅದೇನು ಮಾಡ್ತಿದ್ದಾರೋ, ಅವ್ರ ತಲೆಯಲ್ಲಿ ಏನು ಓಡುತ್ತಿದ್ಯೋ ಅನ್ನೋದೆ ಅರ್ಥವಾಗ್ತಿಲ್ಲ. ಆದ್ರೆ, ಈ ಪ್ರಯೋಗಗಳು ತಂಡಕ್ಕೆ ಸಂಕಷ್ಟ ತರದೇ ಇದ್ರೆ, ಅಷ್ಟೇ ಸಾಕು.