ವಿರಾಟ್​ ಕೊಹ್ಲಿ ವಾಚ್​ಗಳ ಮೇಲೆ ಎಲ್ಲರ ಕಣ್ಣು..! ಕೊಹ್ಲಿ ಕಟ್ಟುವ ವಾಚ್‌ನಲ್ಲಿ ಸಾವಿರಾರು ಜನ ಜೀವನ ಮಾಡಬಹುದು..!

By Suvarna News  |  First Published Aug 5, 2023, 1:44 PM IST

ಜಗತ್ತಿನ ಶ್ರೀಮಂತ ಕ್ರಿಕೆಟರ್ ಆಗಿರೋ ಕೊಹ್ಲಿ, ಎಲ್ಲದರಲ್ಲೂ ರಿಚ್ಚೇ..! ಆಫ್​ಫೀಲ್ಡ್​ನಲ್ಲಿ ಕೊಹ್ಲಿ ಧರಿಸೋ ಬಟ್ಟೆ, ಶೂಸ್ ಸೇರಿದಂತೆ ಪ್ರತಿಯೊಂದು ವಸ್ತುವಿನ ಬೆಲೆ ಲಕ್ಷ, ಲಕ್ಷದಲ್ಲೇ ಇರುತ್ತೆ. ಇದ್ರಲ್ಲಿ ಹತ್ತಾರು ಸಂಸಾರ ನಡೆಸಬಹುದು. 


ಬೆಂಗಳೂರು: ವಿರಾಟ್ ಕೊಹ್ಲಿ..! ಸದ್ಯ ಕ್ರಿಕೆಟ್​ ದುನಿಯಾದ ಶ್ರೀಮಂತ ಆಟಗಾರ. ತಮ್ಮ ಅದ್ಭುತ ಬ್ಯಾಟಿಂಗ್​ನಿಂದ ಹಲವು ದಾಖಲೆಗಳನ್ನ ಬರೆದಿರೋ ರನ್​ಮಷಿನ್, ಸಾವಿರಾರು ಕೋಟಿಗೆ ಒಡೆಯರಾಗಿದ್ದಾರೆ. ಸೋಷಿಯಲ್ ಮೀಡಿಯಾ ಮೂಲಕವೇ ಕೊಹ್ಲಿಗೆ ಕೋಟ್ಯಂತರ ರೂಪಾಯಿ ಆದಾಯ ಹರಿದು ಬರುತ್ತೆ. ಬಿಸಿಸಿಐ, ಐಪಿಎಲ್‌ನಿಂದ ಬರೋ ಸಂಬಳ, ಜಾಹೀರಾತು ಶೂಟಿಂಗ್, ಸ್ವಂತ ವ್ಯಾಪಾರ ಸೇರಿದಂತೆ ವಿವಿಧ ಮೂಲಗಳಿಂದ ಕೊಹ್ಲಿ ವರ್ಷಕ್ಕೆ ನೂರಾರು ಕೋಟಿ ಗಳಿಸ್ತಾರೆ.

ಜಗತ್ತಿನ ಶ್ರೀಮಂತ ಕ್ರಿಕೆಟರ್ ಆಗಿರೋ ಕೊಹ್ಲಿ, ಎಲ್ಲದರಲ್ಲೂ ರಿಚ್ಚೇ..! ಆಫ್​ಫೀಲ್ಡ್​ನಲ್ಲಿ ಕೊಹ್ಲಿ ಧರಿಸೋ ಬಟ್ಟೆ, ಶೂಸ್ ಸೇರಿದಂತೆ ಪ್ರತಿಯೊಂದು ವಸ್ತುವಿನ ಬೆಲೆ ಲಕ್ಷ, ಲಕ್ಷದಲ್ಲೇ ಇರುತ್ತೆ. ಇದ್ರಲ್ಲಿ ಹತ್ತಾರು ಸಂಸಾರ ನಡೆಸಬಹುದು. ಆದ್ರೆ,  ಕೊಹ್ಲಿ ಧರಿಸೋ ಈ ವಸ್ತುವಿನ ಬೆಲೆ ಮಾತ್ರ ಕೋಟಿಯಲ್ಲೇ ಇರುತ್ತೆ. ಇದರಲ್ಲಿ ಎರಡು ಸಂಸಾರ ಅಲ್ಲ, ವರ್ಷಕ್ಕೆ ಸಾವಿರಾರು ಜನರನ್ನ ಸಾಕಬಹುದು. 

Latest Videos

undefined

ಕೊಹ್ಲಿ ವಾಚ್‌ವೊಂದರ ಬೆಲೆ 88 ಲಕ್ಷ..!  ಮತ್ತೊಂದರ ಬೆಲೆ 3.2 ಕೋಟಿ..! 

ಯೆಸ್, ವೆಸ್ಟ್ ಇಂಡೀಸ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ  ವಿರಾಟ್​ ಕೊಹ್ಲಿ ಪ್ಲೇಯಿಂಗ್ ಇಲೆವೆನ್​ನಲ್ಲಿ ಇರಲಿಲ್ಲ. ಆದ್ರೆ, ಸಬ್​ಸ್ಟಿಟ್ಯುಟ್​ ಆಗಿ ಮೈದಾನಕ್ಕಿಳಿದಿದ್ರು. ಈ ವೇಳೆ ಕೊಹ್ಲಿ ಧರಿಸಿದ್ದ ವಾಚ್​ ಈಗ ಹಾಟ್ ಟಾಪಿಕ್ ಆಗಿದೆ. ಪಾಟೆಕ್ ಫಿಲಿಪ್ ಕಂಪನಿಯ ಅಕ್ವಾನಾಟ್ ವಾಚ್​​ನ ಕೊಹ್ಲಿ ಕಟ್ಟಿ ಕೊಂಡಿದ್ರು. ಈ ವಾಚ್​​ನ ಬೆಲೆ ಬರೋಬ್ಬರಿ 88 ಲಕ್ಷ ರೂಪಾಯಿಯಾಗಿದೆ. 

ಟೀಂ ಇಂಡಿಯಾ ಆಯ್ಕೆಯಲ್ಲಿ ಲಾಜಿಕ್ಕೂ ಇಲ್ಲ, ಮ್ಯಾಜಿಕ್ಕೂ ಇಲ್ಲ..! ಹಿಂಗಾದ್ರೆ ಕಪ್‌ ಗೆಲ್ಲುತ್ತಾ ಭಾರತ?

ಇನ್ನು ಕೊಹ್ಲಿ ಭಾರತಕ್ಕೆ ಮರಳೋವಾಗ ಮತ್ತೊಂದು ವಾಚ್ ಧರಿಸಿದ್ರು. ಇದ್ರ ಬೆಲೆ 3.2 ಕೋಟಿ ರೂಪಾಯಿ. ರೋಲೆಕ್ಸ್ ಕಂಪನಿಯ ಡೇಟೋನಾ ವಾಚ್ ಇದಾಗಿದೆ. ಇವೆರೆಡು ಅಷ್ಟೇ ಅಲ್ಲ, ಕೊಹ್ಲಿ ಬಳಿ ಹಲವು ಲಕ್ಷರಿ ವಾಚ್​ಗಳ ಕಲೆಕ್ಷನ್ನೇ ಇದೆ. ಈ ಎಲ್ಲಾ ವಾಚ್​ಗಳ ಮೌಲ್ಯವೇ 10 ಕೋಟಿಗೂ ಅಧಿಕವಾಗಿದೆ. 

ಸ್ಪೆಷಲ್​ ಫ್ಲೈಟ್​ನಲ್ಲಿ ಭಾರತಕ್ಕೆ ರನ್​ಮಷಿನ್..! 

ಯೆಸ್, ವೆಸ್ಟ್​ ಇಂಡೀಸ್ ವಿರುದ್ಧದ T20 ಸರಣಿಯಿಂದ ಕೊಹ್ಲಿಗೆ ರೆಸ್ಟ್ ನೀಡಲಾಗಿದೆ. ಹೀಗಾಗಿ ಕೊಹ್ಲಿ ಕೆರಿಬಿಯನ್ ನಾಡಿನಿಂದ ಭಾರತಕ್ಕೆ ವಾಪ ಸ್ಸಾಗಿದ್ದಾರೆ. ವಿಶೇಷ ಅಂದ್ರೆ, ಕೊಹ್ಲಿ ಒಬ್ಬರೇ ಸ್ಪೆಷಲ್ ಚಾರ್ಟರ್​ ಜೆಟ್​ ಫ್ಲೈಟ್​ನಲ್ಲಿ ತವರಿಗೆ ಮರಳಿದ್ದಾರೆ. ಗ್ಲೋಬಲ್ ಏರ್ ಸರ್ವೀಸಸ್ ಕಂಪನಿ ಕೊಹ್ಲಿಗಾಗಿ ಈ ವಿಶೇಷ ಫ್ಲೈಟ್​ನ ಅರೇಂಜ್ ಮಾಡಿತ್ತು ಎನ್ನಲಾಗಿದೆ. ಒಟ್ಟಿನಲ್ಲಿ ಕೊಹ್ಲಿಯ ಏನೇ ಮಾಡಿದ್ರು, ಸ್ಪೆಷಲ್ ಆ್ಯಂಡ್ ರಿಚ್ ಆಗಿರುತ್ತೆ ಅನ್ನೋದಕ್ಕೆ ಈ ಪೋಟೋಗಳೇ ಸಾಕ್ಷಿ.

ಪ್ರೀತಿ ಬಲೆಯಲ್ಲಿ National Crush ಸ್ಮೃತಿ ಮಂಧನಾ..! ಆ ಲಕ್ಕಿ ಹುಡುಗ ಯಾರು ಗೊತ್ತಾ?

ಇನ್ನು ಕೊಹ್ಲಿ ಕ್ರಿಕೆಟ್ ವಿಚಾರಕ್ಕೆ ಬಂದರೆ, ವೆಸ್ಟ್ ಇಂಡೀಸ್ ಎದುರಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಒಂದು ಅರ್ಧಶತಕ ಹಾಗೂ ಒಂದು ಶತಕ ಸಿಡಿಸಿದ್ದರು. ಇನ್ನು ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ತಂಡದಲ್ಲಿ ಸ್ಥಾನ ಪಡೆದಿದ್ದರಾದರೂ, ಬ್ಯಾಟಿಂಗ್ ಮಾಡಲು ಅವಕಾಶ ಸಿಕ್ಕಿರಲಿಲ್ಲ. ಇದಾದ ಬಳಿಕ ಉಳಿದೆರಡು ಪಂದ್ಯಗಳಿಂದ ವಿಶ್ರಾಂತಿ ಪಡೆದುಕೊಂಡಿದ್ದರು. ಇನ್ನು ಈ ತಿಂಗಳಾಂತ್ಯದಲ್ಲಿ ನಡೆಯಲಿರುವ ಐರ್ಲೆಂಡ್ ಎದುರಿನ ಟಿ20 ಸರಣಿಗೂ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಲಾಗಿದೆ. ಇನ್ನು ವಿರಾಟ್ ಕೊಹ್ಲಿ ಆಗಸ್ಟ್‌ 30ರಿಂದ ಆರಂಭವಾಗಲಿರುವ ಏಷ್ಯಾಕಪ್ ಟೂರ್ನಿಗೆ ಭಾರತ ತಂಡ ಕೂಡಿಕೊಳ್ಳಲಿದ್ದಾರೆ.

click me!