ಪತ್ನಿ ಪ್ರಜ್ಞಾಹೀನಳಾಗಿದ್ಳು, ನಾನು ಅಳ್ತಿದ್ದೆ; ಆಗ ಕಾಪಾಡಿದ್ದು ಇಲ್ಲಿಯವ್ರು: ಭಾರತೀಯರ ಕೃತಜ್ಞತೆ ನೆನೆದ ವಾಸಿಂ ಅಕ್ರಮ್

By BK AshwinFirst Published Feb 28, 2023, 1:22 PM IST
Highlights

ಅಕ್ಟೋಬರ್ 2009 ರಲ್ಲಿ, ಪಾಕಿಸ್ತಾನದ ಮಾಜಿ ನಾಯಕ ವಾಸಿಂ ಅಕ್ರಮ್‌ ಅವರು ತಮ್ಮ ಪತ್ನಿಗೆ ಸಿಂಗಾಪುರಕ್ಕೆ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಿದ್ದ ಕಾರಣ ಲಾಹೋರ್‌ನಿಂದ ಸಿಂಗಾಪುರಕ್ಕೆ ಏರ್ ಆಂಬುಲೆನ್ಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ, ಇಂಧನ ತುಂಬುವುದಕ್ಕಾಗಿ ಚೆನ್ನೈ ವಿಮಾನ ನಿಲ್ದಾಣದಲ್ಲಿ ಆ ವಿಮಾನ ನಿಲ್ಲಿಸಿದಾಗ, ಅಧಿಕಾರಿಗಳು ತಮಗೆ ಹೆಚ್ಚು ಸಹಾಯ ಮಾಡಿದರು ಎಂದು ವಾಸಿಂ ಅಕ್ರಮ್ ಬಹಿರಂಗಪಡಿಸಿದರು.

ಚೆನ್ನೈ (ಫೆಬ್ರವರಿ 28, 2023): ಕ್ರೀಡೆಗೆ ಯಾವುದೇ ಗಡಿಯ ಹಂಗಿಲ್ಲ. ಟೆನ್ನಿಸ್, ಫುಟ್ಬಾಲ್‌, ಬ್ಯಾಸ್ಕೆಟ್‌ಬಾಲ್‌ , ಕ್ರಿಕೆಟ್‌ನ ಆಟಗಾರರು ಜಗತ್ತಿನಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಪ್ರಮುಖವಾಗಿ ಭಾರತೀಯರಿಗೆ ಕ್ರಿಕೆಟ್‌ ಅಂದ್ರೆ ಪಂಚಪ್ರಾಣ. ಇನ್ನು, ಸಚಿನ್‌ ತೆಂಡೂಲ್ಕರ್‌, ವಿರಾಟ್‌ ಕೊಹ್ಲಿ, ಧೋನಿ ಸೇರಿದಂತೆ ಹಲವು ಕ್ರಿಕೆಟಿಗರು ಜಗತ್ತಿನ ವಿವಿಧ ದೇಶಗಳಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಇದೇ ರೀತಿ, ಪಾಕಿಸ್ತಾನದ ವಾಸಿಂ ಅಕ್ರಮ್‌ಗೆ ಸಹ ಭಾರತದಲ್ಲೂ ಅಭಿಮಾನಿಗಳಿದ್ದಾರೆ. ಪಾಕಿಸ್ತಾನದ ಮಾಜಿ ವೇಗಿ ವಾಸಿಂ ಅಕ್ರಮ್‌ ಅಂದ್ರೆ ಎಲ್ಲ ಕ್ರಿಕೆಟ್‌ ಪ್ರೇಮಿಗಳಿಗೂ ಗೊತ್ತು. ಇವರು ಭಾರತದಲ್ಲಿ ನಡೆದ ಘಟನೆಯೊಂದನ್ನು ನೆಪಿಸಿಕೊಂಡಿದ್ದು, ಭಾರತೀಯರ ಮಾನವೀಯತೆಯನ್ನು ನೆನಪಿಸಿಕೊಂಡಿದ್ದಾರೆ. 

ದಿ ಹಿಂದೂ ಲಿಟ್ ಫಾರ್ ಲೈಫ್ ಲಿಟರೇಚರ್ ಫೆಸ್ಟಿವಲ್‌ನಲ್ಲಿ ವಾಸಿಂ ಅಕ್ರಮ್‌ (Wasim Akram) ತಮ್ಮ ಆತ್ಮಚರಿತ್ರೆಯ (Autobiography) ಚರ್ಚೆಯಲ್ಲಿ ಭಾಗವಹಿಸಿದ್ದು, ಈ ವೇಳೆ 2009 ರಲ್ಲಿ ನಡೆದ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ. 2009 ರಲ್ಲಿ ಹೃದಯ (Heart) ಮತ್ತು ಮೂತ್ರಪಿಂಡದ ತೊಂದರೆಗಳಿಂದ (Kidney Problem) ನಿಧನರಾದ (Death) ತಮ್ಮ ದಿವಂಗತ ಪತ್ನಿ ಹುಮಾ ಅಕ್ರಂ (Huma Akram) ಬಗ್ಗೆ ಅವರು ನೆನಪಿಸಿಕೊಂಡಿದ್ದಾರೆ. 

ಇದನ್ನು ಓದಿ: ಐಸಿಸಿ ಟ್ರೋಫಿ ಗೆಲ್ಲ​ದ್ದಕ್ಕೆ ನಾನು ವಿಫ​ಲ ನಾಯ​ಕ​ನಾ​ದೆ: ವಿರಾ​ಟ್‌ ಕೊಹ್ಲಿ ಮಾರ್ಮಿಕ ನುಡಿ

ಅಕ್ಟೋಬರ್ 2009 ರಲ್ಲಿ, ಪಾಕಿಸ್ತಾನದ ಮಾಜಿ ನಾಯಕ ವಾಸಿಂ ಅಕ್ರಮ್‌ ಅವರು ತಮ್ಮ ಪತ್ನಿಗೆ ಸಿಂಗಾಪುರಕ್ಕೆ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಿದ್ದ ಕಾರಣ ಲಾಹೋರ್‌ನಿಂದ ಸಿಂಗಾಪುರಕ್ಕೆ ಏರ್ ಆಂಬುಲೆನ್ಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ, ಇಂಧನ ತುಂಬುವುದಕ್ಕಾಗಿ ಚೆನ್ನೈ ವಿಮಾನ ನಿಲ್ದಾಣದಲ್ಲಿ ಆ ವಿಮಾನ ನಿಲ್ಲಿಸಿದಾಗ, ಅಧಿಕಾರಿಗಳು ತಮಗೆ ಹೆಚ್ಚು ಸಹಾಯ ಮಾಡಿದರು ಎಂದು ವಾಸಿಂ ಅಕ್ರಮ್ ಬಹಿರಂಗಪಡಿಸಿದರು.

“ನಾನು ನನ್ನ (ದಿವಂಗತ) ಹೆಂಡತಿಯೊಂದಿಗೆ ಸಿಂಗಾಪುರಕ್ಕೆ ಹಾರುತ್ತಿದ್ದೆ ಮತ್ತು ಇಂಧನ ತುಂಬಲು ಚೆನ್ನೈನಲ್ಲಿ ವಿಮಾನ ನಿಲ್ಲಿಸಲಾಗಿತ್ತು. ನಾವು ಇಳಿದಾಗ, ಅವಳು ಪ್ರಜ್ಞಾಹೀನಳಾಗಿದ್ದಳು, ನಾನು ಅಳುತ್ತಿದ್ದೆ ಮತ್ತು ಜನರು ನನ್ನನ್ನು ವಿಮಾನ ನಿಲ್ದಾಣದಲ್ಲಿ ಗುರುತಿಸಿದರು. ನಮ್ಮ ಬಳಿ ಭಾರತೀಯ ವೀಸಾ ಇರಲಿಲ್ಲ. ನಾವಿಬ್ಬರೂ ಪಾಕಿಸ್ತಾನಿ ಪಾಸ್‌ಪೋರ್ಟ್ ಹೊಂದಿದ್ದೆವು. ಚೆನ್ನೈ ವಿಮಾನ ನಿಲ್ದಾಣದಲ್ಲಿದ್ದ ಜನರು, ಭದ್ರತಾ ಪಡೆಗಳು ಮತ್ತು ಕಸ್ಟಮ್ಸ್ ಹಾಗೂ ಇಮಿಗ್ರೇಷನ್ ಅಧಿಕಾರಿಗಳು ವೀಸಾದ ಬಗ್ಗೆ ಚಿಂತಿಸಬೇಡಿ ಮತ್ತು ನಿಮ್ಮ ಹೆಂಡತಿಯನ್ನು ಆಸ್ಪತ್ರೆಗೆ ಕರೆದೊಯ್ಯಿರಿ ಎಂದು ಹೇಳಿದರು. ಕ್ರಿಕೆಟಿಗನಾಗಿ ಮತ್ತು ಮನುಷ್ಯನಾಗಿ ಈ ಘಟನೆ ನಾನು ಎಂದಿಗೂ ಮರೆಯಲಾಗದ ಸಂಗತಿಯಾಗಿದೆ’’ ಎಂದು ವಾಸಿಂ ಅಕ್ರಮ್ ದಿ ಹಿಂದೂ ಲಿಟ್ ಫಾರ್ ಲೈಫ್ ಈವೆಂಟ್‌ನಲ್ಲಿ ಭಾರತದಲ್ಲಿ ನಡೆದ ಹಳೆಯ ಘಟನೆಯನ್ನು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಸಿಕ್ಸರ್ ಚಚ್ಚುವುದರಲ್ಲಿ ಧೋನಿ, ರೋಹಿತ್, ತೆಂಡುಲ್ಕರ್ ದಾಖಲೆ ಮುರಿದ ಟಿಮ್ ಸೌಥಿ..!

ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚು ಜನ ಸಂಪರ್ಕ ಹೊಂದುವ ಬಗ್ಗೆ ವಾಸಿಂ ಅಕ್ರಮ್ ಈ ಹಿಂದೆಯೂ ಹೇಳಿಕೊಂಡಿದ್ದಾರೆ. ಪಾಕಿಸ್ತಾನದ ಲಾಹೋರ್‌ನಲ್ಲಿ ಜನಿಸಿದ ಪಂಜಾಬಿ ಮೂಲದ ವಾಸಿಂ ಅಕ್ರಮ್‌ ಅವರು ಭಾರತದಲ್ಲಿ ಅಪಾರ ಜನಪ್ರಿಯತೆಯನ್ನು ಹೊಂದಿದ್ದಾರೆ. ಈ ಮಾಜಿ ವೇಗಿ, ಎರಡು ದೇಶಗಳ ನಡುವಿನ ಕ್ರಿಕೆಟ್ ಸಂಬಂಧಗಳನ್ನು ಪುನರಾರಂಭಿಸಲು ಆಗಾಗ್ಗೆ ಕರೆ ನೀಡಿದ್ದಾರೆ.

ಆದ್ದರಿಂದ, ಆ ಕಠಿಣ ಅವಧಿಯಲ್ಲಿ ತನಗೆ ಸಹಾಯ ಮಾಡಿದ ಭಾರತೀಯ ಅಧಿಕಾರಿಗಳಿಗೆ ವಾಸಿಂ ಅಕ್ರಮ್ ಕೃತಜ್ಞತೆಯನ್ನು ವ್ಯಕ್ತಪಡಿಸುವುದನ್ನು ನೋಡಿದರೆ ಆಶ್ಚರ್ಯವೇನಿಲ್ಲ.
ಈ ಈವೆಂಟ್‌ನಲ್ಲಿ, ವಾಸಿಂ ಅಕ್ರಮ್ 1999 ರಲ್ಲಿ ಚೆನ್ನೈನಲ್ಲಿ ಪಾಕಿಸ್ತಾನದ ಪ್ರಸಿದ್ಧ ಟೆಸ್ಟ್ ಗೆಲುವೊಂದನ್ನು ಸಹ ನೆನಪಿಸಿಕೊಂಡರು. ಅಲ್ಲದೆ, ಈ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್‌ ದೂಸ್ರಾ ಬೌಲಿಂಗ್‌ನಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಬೇಗನೆ ಔಟಾಗಿದ್ದರು. ನಂತರ, ಅವರು ದೂಸ್ರಾ ಬೌಲಿಂಗ್ ಬಗ್ಗೆ ಅಡುವುದನ್ನು ಅಬ್ಯಾಸ ಮಾಡಿಕೊಂಡರು. ಅದಕ್ಕಾಗಿಯೇ ಸಚಿನ್ ತೆಂಡೂಲ್ಕರ್‌ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎಂದೂ ವಾಸಿಂ ಅಕ್ರಮ್ ಹೊಗಳಿದ್ದಾರೆ. 

click me!