ಕಿಡ್ನಾಪ್; ಮುಂಬೈ ಕ್ರಿಕೆಟಿಗ ಸೆರೆ, ಸ್ಫೋಟಕ ಮಾಹಿತಿ ಬಹಿರಂಗ!

By Web DeskFirst Published Dec 5, 2019, 6:19 PM IST
Highlights

ಮುಂಬೈ ಮಾಜಿ ಕ್ರಿಕೆಟಿಗ ಕಿಡ್ನಾಪ್ ಕೇಸ್‍ನಲ್ಲಿ ಅರೆಸ್ಟ್ ಆಗಿದ್ದಾರೆ. ದಶಗಳ ಹಿಂದಿನ ಕೇಸ್ ಮತ್ತೆ ವಿಚಾರಣೆ ನಡೆಸಿದ ಮುಂಬೈ ಪೊಲೀಸರು ಕ್ರಿಕೆಟಿಗ ಸೇರಿದಂತೆ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮುಂಬೈ(ಡಿ.05): ದೇಶದ ಲೀಗ್‌ಗಳಲ್ಲಿ ಫಿಕ್ಸಿಂಗ್ ಹಾಗೂ ಕಳ್ಳಾಟ ಪ್ರಕರಣಗಳು ಹೆಚ್ಚಾಗುತ್ತಿದೆ. ಮಾದರಿಯಾಗಿದ್ದ ಕ್ರಿಕೆಟಿಗರು ಮೋಸದಾಟದಲ್ಲಿ ಭಾಗಿಯಾಗಿರುವುದು ಖಚಿತವಾಗುತ್ತಿದೆ. ಇದರ ಜೊತೆಗೆ ಮುಂಬೈನ ಮಾಜಿ ಕ್ರಿಕೆಟಿಗ  ಸೇರಿದಂತೆ ನಾಲ್ವರನ್ನು ಪೊಲೀಸರು ಕಿಡ್ನಾಪ್ ಆರೋಪದ ಮೇಲೆ ಅರೆಸ್ಟ್ ಮಾಡಲಾಗಿದೆ. ಮುಂಬೈನ ಮಾಜಿ ಕ್ರಿಕೆಟಿಗ ರಾಬಿನ್ ಮೊರಿಸ್ ಬಂಧಿತ ಆರೋಪಿ. 

ಇದನ್ನೂ ಓದಿ: 3 ಪ್ರಸಿದ್ಧ ಚಿತ್ರನಟಿಯರ ಬಳಸಿ ಕೆಪಿಎಲ್‌ ಕ್ರಿಕೆಟಿಗರ ಹನಿಟ್ರ್ಯಾಪ್‌!

ವರ್ಷಗಳ ಹಿಂದೆ ನಡೆದಿದ್ದ ಘಟನೆ ಇದೀಗ ಅಂತಿಮ ಘಟ್ಟ ತಲುಪಿದೆ. ಮುಂಬೈ ಪರ ಪ್ರಥಮ ದರ್ಜೆ, ಲಿಸ್ಟ್ ಎ ಹಾಗೂ ಟಿ20 ಕ್ರಿಕೆಟ್ ಆಡಿರುವ ರೊಬಿನ್ ಮೊರಿಸ್, 2004ರಲ್ಲಿ ವಿದಾಯ ಹೇಳಿದ್ದಾರೆ. 2008ರಲ್ಲಿ ರಾಬಿನ್ ಮೊರಿಸ್ 3 ಕೋಟಿ ರೂಪಾಯಿ ಸಾಲಕ್ಕಾಗಿ ಎಜೆಂಟನ್ನು ಸಂಪರ್ಕಿಸಿದ್ದಾರೆ. ಎಜೆಂಟ್‌ಗೆ ಕಮಿಶನ್ ಕೂಡ ನೀಡಿದ್ದಾರೆ. ಆದರೆ ರೊಬಿನ್ ಮೊರಿಸ್ ಬ್ಯಾಂಕ್ ಖಾತೆ, ಹಣ ನಿರ್ವಹಣೆ ಲೆಕ್ಕಹಾಕಿದ ಬ್ಯಾಂಕ್ 3 ಕೋಟಿ ಸಾಲ ನೀಡಲು ನಿರಾಕರಿಸಿದೆ.

ಇದನ್ನೂ ಓದಿ:  KPL ಮ್ಯಾಚ್ ಫಿಕ್ಸಿಂಗ್: ಸಾಕ್ಷಿ ಸಹಿತ ಸುದೀಂದ್ರ ಶಿಂಧೆ ಆರೆಸ್ಟ್.

ಇದರಿಂದ ರೊಚ್ಚಿಗೆದ್ದ ರಾಬಿನ್ ಮೊರಿಸ್, ಎಜೆಂಟ್‌ನನ್ನು ಮುಂಬೈನ ಕುರ್ಲಾದಲ್ಲಿರುವ ರೆಸ್ಟೋರೆಂಟ್‌ಗೆ ಕರೆಯಿಸಿದ ರೊಬಿನ್ ಹಾಗೂ ಇತರ ನಾಲ್ವರು ವಾಹನದಲ್ಲಿ ಕರೆದೊಯ್ದಿದ್ದಾರೆ. ರೊಬಿನ್ ಹಳೇ ಮನೆಗೆ ಕರೆದೊಯ್ದು ಕಮಿಶನ್ ವಾಪಾಸ್ ನೀಡುವಂತೆ ಬೆದರಿಕೆ ಹಾಕಿದ್ದಾರೆ. ಈ ಕುರಿತು ಮುಂಬೈನ ಕುರ್ಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ನೆನೆಗುದಿಗೆ ಬಿದ್ದಿದ್ದ ಕೇಸ್ ಮತ್ತೆ ವಿಚಾರಣೆ ನಡೆಸಿದಾಗ, ರೊಬಿನ್ ಮೊರಿಸ್ ಮೇಲಿನ ಕಿಡ್ನಾಪ್ ಆರೋಪ ಸಾಬೀತಾಗಿದೆ. ಹೀಗಾಗಿ ರಾಬಿನ್ ಮೊರಿಸ್‌ನನ್ನು ಪೊಲೀಸರು ಬಂಧಿಸಿದ್ದಾರೆ. ರಾಬಿನ್ ಮೊರಿಸ್ ಜೊತೆಗೆ  ಕಿಡ್ನಾಪ್‌ಗೆ ಸಹಕರಿಸಿದ ಇತರ ಮೂವರನ್ನು ಬಂಧಿಸಲಾಗಿದೆ.ವಿಚಾರಣೆಯಲ್ಲಿ ರೊಬಿನ್ ಮೊರಿಸ್ ಇತ್ತೀಚೆಗಷ್ಟೇ ಫಿಕ್ಸಿಂಗ್ ನಡೆಸಿರುವ ಮಾಹಿತಿಯೂ ಬಹಿರಂಗವಾಗಿದೆ. 

ಇದನ್ನೂ ಓದಿ: ಹಿರಿಯ ಆಟಗಾರರಿಂದ ಬೆಟ್ಟಿಂಗ್ ಕೃತ್ಯ; ವಿಚಾರಣೆ ಬಳಿಕ ಬುಲ್ಸ್ ಮಾಲೀಕನ ಹೇಳಿಕೆ!

3 ವರ್ಷಗಳ ಹಿಂದೆ ಫಿಕ್ಸಿಂಗ್ ನಡೆಸಿದ ಪ್ರಕರಣವೂ ರಾಬಿನ್ ಮೊರಿಸ್ ಮೇಲಿದೆ. ಖಾಸಹಿ ಸುದ್ದಿ ವಾಹಿನಿಯ ಕುಟುಕು ಕಾರ್ಯಚರಣೆಯಲ್ಲಿ ರಾಬಿನ್ ಮೊರಿಸ್ ಫಿಕ್ಸಿಂಗ್ ನಡೆಸುತ್ತಿರುವುದು ಬಯಲಾಗಿತ್ತು. ಇದೀಗ ಕಿಡ್ನಾಪ್ ಕೇಸ್ ಮೇಲೆ ಮೊರಿಸ್ ಅರೆಸ್ಟ್ ಆಗಿದ್ದಾರೆ.
 

click me!