ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಇನ್ನೊಂದು ಸಿಕ್ಸರ್ ಬಾರಿಸಿದರೆ, ಭಾರತದ ಪರ ಅಪರೂಪದ ದಾಖಲೆ ಮಾಡಲಿದ್ದಾರೆ. ಯುವಿ, ಸೆಹ್ವಾಗ್, ಸಚಿನ್ ಅವರಿಂದ ಮಾಡಲಾಗದ ದಾಖಲೆ ಇದೀಗ ರೋಹಿತ್ ಪಾಲಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಹೈದರಾಬಾದ್[ಡಿ.05]: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 400 ಸಿಕ್ಸರ್ ಬಾರಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಎನ್ನುವ ದಾಖಲೆ ಬರೆಯಲು ರೋಹಿತ್ ಶರ್ಮಾಗೆ ಕೇವಲ ಒಂದು ಸಿಕ್ಸರ್‌ನ ಅವಶ್ಯಕತೆ ಇದೆ. ಶುಕ್ರವಾರ ಇಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ನಡೆಯಲಿರುವ ಮೊದಲ ಟಿ20 ಪಂದ್ಯದಲ್ಲಿ 400 ಸಿಕ್ಸರ್ ಮೈಲಿಗಲ್ಲು ತಲುಪಲು ರೋಹಿತ್ ಎದುರು ನೋಡುತ್ತಿದ್ದಾರೆ.
ಲಾರಾ ದಾಖಲೆ ಮುರಿಯಲು ಟೀಂ ಇಂಡಿಯಾ ಕ್ರಿಕೆಟಿಗನಿಗೆ ಸಾಧ್ಯ; ವಾರ್ನರ್!
ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಇನ್ನೊಂದು ಸಿಕ್ಸರ್ ಸಿಡಿಸಿದರೆ 400 ಸಿಕ್ಸರ್ ಮೈಲಿಗಲ್ಲು ತಲುಪಿದ ವಿಶ್ವದ 3ನೇ ಆಟಗಾರ ಎನ್ನುವ ಹಿರಿಮೆಗೆ ಅವರು ಪಾತ್ರರಾಗಲಿದ್ದಾರೆ. ಡಿಸೆಂಬರ್ 06ರಿಂದ ವೆಸ್ಟ್ ಇಂಡೀಸ್ ವಿರುದ್ಧದ 3 ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ.
ವಿಂಡೀಸ್ ಸವಾಲಿಗೆ ಟೀಂ ಇಂಡಿಯಾ ಸಿದ್ಧತೆ
ವೆಸ್ಟ್‌ಇಂಡೀಸ್‌ನ ಬ್ಯಾಟಿಂಗ್ ದೈತ್ಯ ಕ್ರಿಸ್ ಗೇಲ್ 534 ಸಿಕ್ಸರ್‌ಗಳೊಂದಿಗೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ 476 ಸಿಕ್ಸರ್ ಬಾರಿಸಿ 2ನೇ ಸ್ಥಾನದಲ್ಲಿದ್ದಾರೆ. ಟೆಸ್ಟ್‌ನಲ್ಲಿ 52 ಸಿಕ್ಸರ್ ಸಿಡಿಸಿರುವ ರೋಹಿತ್, ಏಕದಿನದಲ್ಲಿ 232, ಅಂತಾರಾಷ್ಟ್ರೀಯ ಟಿ20ಯಲ್ಲಿ 115 ಸಿಕ್ಸರ್ ಬಾರಿಸಿದ್ದಾರೆ.