ಹೊಸ ಲುಕ್‌ನಲ್ಲಿ MS ಧೋನಿ ಪ್ರತ್ಯಕ್ಷ; ಚಾಂಪಿಯನ್ ನಗುವಿಗೆ ಮನಸೋತ ಫ್ಯಾನ್ಸ್!

Published : Jul 17, 2020, 09:37 PM IST
ಹೊಸ ಲುಕ್‌ನಲ್ಲಿ MS ಧೋನಿ ಪ್ರತ್ಯಕ್ಷ;  ಚಾಂಪಿಯನ್ ನಗುವಿಗೆ ಮನಸೋತ ಫ್ಯಾನ್ಸ್!

ಸಾರಾಂಶ

ಎಂ.ಎಸ್.ಧೋನಿ ಕ್ರಿಕೆಟ್‌ನಿಂದ ದೂರ ಉಳಿದ ಒಂದು ವರ್ಷಗಳೇ ಉರುಳಿದೆ. ಐಪಿಎಲ್ ಟೂರ್ನಿಯಲ್ಲಿ ಧೋನಿ ನೋಡಲು ಕಾತರರಾಗಿದ್ದ ಅಭಿಮಾನಿಗಳಿಗೆ ಕೊರೋನಾ ಹೊಡೆತ ನೀಡಿತು. ಹೀಗಾಗಿ ಕಳೆದೊಂದು ವರ್ಷದಿಂದ ಧೋನಿಯನ್ನು ಮೈದಾನದಲ್ಲಿ ನೋಡದೆ ನಿರಾಸೆಗೊಂಡಿದ್ದ ಅಭಿಮಾನಿಗಳಿಗೆ ಧೋನಿ ದರ್ಶನ ನೀಡಿದ್ದಾರೆ.

ರಾಂಚಿ(ಜು.17): ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಕಾರಣ ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. 2019ರ ವಿಶ್ವಕಪ್ ಟೂರ್ನಿ ಬಳಿಕ ಧೋನಿ ಯಾವುದೇ ಕ್ರಿಕೆಟ್ ಟೂರ್ನಿಯಲ್ಲಿ ಕಾಣಿಸಿಕೊಂಡಿಲ್ಲ. ಇದರ ನಡುವೆ ಮನೆಯಲ್ಲಿರುವ ಧೋನಿ ಕೆಲ ಫೋಟೋಗಳು ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿತ್ತು. ಬಿಳಿ ಗಡ್ಡ, ಬಿಳಿ ಕೂದಲಿನ ಧೋನಿ ನೋಡಿ ಅಭಿಮಾನಿಗಳು ಹೌಹಾರಿದ್ದರು. ಕಾರಣ ಕಮ್‌ಬ್ಯಾಕ್ ನಿರೀಕ್ಷೆಯಲ್ಲಿದ್ಧ ಅಭಿಮಾನಿಗಳು ಫೋಟೋ ನೋಡಿ ಬೆಚ್ಚಿ ಬಿದ್ದಿದ್ದರು.

ಸಹಜ ಸ್ಥಿತಿಗೆ ಮರಳುವವರೆಗೆ ಬ್ರ್ಯಾಂಡ್ ಪ್ರಮೋಶನ್ ಮಾಡಲ್ಲ ಎಂದ ಧೋನಿ!

ಇದೀಗ ಧೋನಿ ಯುವಕನಂತೆ ಕಾಣಿಸಿಕೊಂಡಿದ್ದಾರೆ. ಧೋನಿ ವಿಡಿಯೋವನ್ನು ಪತ್ನಿ ಸಾಕ್ಷಿ ಹಂಚಿಕೊಂಡಿದ್ದಾರೆ. ಇಷ್ಟೇ ಅಲ್ಲ ಚೆನ್ನೈ ಸೂಪರ್ ಕಿಂಗ್ಸ್ ತಮ್ಮ ಅಧೀಕೃತ ಟ್ವಿಟರ್ ಖಾತೆಯಲ್ಲೂ ಹಂಚಿಕೊಂಡಿದೆ. 

 

ಧೋನಿ ಗಡ್ಡ ಕಪ್ಪಾಗಿದೆ. ಕೂದಲು ಟ್ರಿಮ್ ಮಾಡಲಾಗಿದೆ. ಚಿರ ಯುವಕನಂತೆ ಕಾಣುವ ಧೋನಿ ಈಗಲೂ ಅದೇ ಫಿಟ್ನೆಸ್ ಉಳಿಸಿಕೊಂಡಿರುವಂತೆ ಕಾಣುತ್ತಿದೆ. ಇದೀಗ ಧೋನಿಯ ಈ ವಿಡಿಯೋ ವೈರಲ್ ಆಗಿದೆ.

MS ಧೋನಿ ಹುಟ್ಟುಹಬ್ಬಕ್ಕೆ ಹೆಲಿಕಾಪ್ಟರ್ 7 ಹಾಡು ಗಿಫ್ಟ್ ನೀಡಿದ DJ ಬ್ರಾವೋ!.

ಕೊರೋನಾ ವೈರಸ್ ಹರಡುತ್ತಿರುವ ಈ ಸಂದರ್ಭದಲ್ಲಿ ಧೋನಿ ತಮ್ಮ ಮನೆಯಲ್ಲಿ ಪುತ್ರಿ ಝಿವಾ ಜೊತೆ ಆಟವಾಡುತ್ತಿರುವ ಫೋಟೋ, ಇತ್ತೀಚೆಗೆ ಹುಟ್ಟು ಹಬ್ಬ ಆಚರಿಸಿಕೊಂಡ ವಿಡಿಯೋಗಳು ವೈರಲ್ ಆಗಿತ್ತು. ಇದೀಗ ಧೋನಿಯ ಹೊಸ ಲುಕ್ ಕೂಡ ವೈರಲ್ ಆಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಿವೀಸ್ ಸರಣಿ: ಶ್ರೇಯಸ್ ಅಯ್ಯರ್ ಕಮ್‌ಬ್ಯಾಕ್ ಮತ್ತಷ್ಟು ತಡ; ಈ ಆಟಗಾರನಿಗೆ ಚಾನ್ಸ್?
2025ರಲ್ಲಿ ಅತೀ ಹೆಚ್ಚು ಗೂಗಲ್‌ ಹುಡುಕಾಟದಲ್ಲಿ ಇವರೇ ಟಾಪ್! ಕ್ರಿಕೆಟ್ ಲೋಕದ ಅಚ್ಚರಿಯ ಮುಖಗಳಿವು