ಐಪಿಎಲ್‌ ಹಣೆಬರಹ ಇಂದು ನಿರ್ಧಾರ?

Published : Jul 17, 2020, 01:48 PM IST
ಐಪಿಎಲ್‌ ಹಣೆಬರಹ ಇಂದು ನಿರ್ಧಾರ?

ಸಾರಾಂಶ

ಸೆಪ್ಟೆಂಬರ್‌ನಿಂದ ನವೆಂಬರ್‌ ವರೆಗೂ ಐಪಿ​ಎಲ್‌ ನಡೆ​ಸಲು ಬಿಸಿ​ಸಿಐ ಚಿಂತನೆ ನಡೆ​ಸಿದ್ದು, ಟೂರ್ನಿ ವಿದೇಶಕ್ಕೆ ಸ್ಥಳಾಂತರಗೊಳ್ಳು​ವುದು ಬಹು​ತೇಕ ಖಚಿತವಾಗಿದೆ.  ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ನವ​ದೆ​ಹ​ಲಿ(ಜು.17): 2020ರ ಇಂಡಿಯನ್‌ ಪ್ರೀಮಿ​ಯರ್‌ ಲೀಗ್‌ (ಐ​ಪಿ​ಎಲ್‌) ಟಿ20 ಟೂರ್ನಿಯ ಭವಿಷ್ಯ ಶುಕ್ರ​ವಾರ ನಿರ್ಧಾರವಾಗುವ ಸಾಧ್ಯತೆ ಇದೆ. ಬಿಸಿ​ಸಿಐ ಅಪೆಕ್ಸ್‌ ಕೌನ್ಸಿಲ್‌ ಸಭೆ ಆನ್‌ಲೈನ್‌ನಲ್ಲಿ ನಡೆ​ಯ​ಲಿದ್ದು, ಟೂರ್ನಿ ಆಯೋ​ಜನೆ ಸೇರಿ​ದಂತೆ ಒಟ್ಟು 11 ವಿಚಾರಗಳ ಬಗ್ಗೆ ಚರ್ಚೆ ನಡೆ​ಯಲಿದೆ. 

ಸೆಪ್ಟೆಂಬರ್‌ನಿಂದ ನವೆಂಬರ್‌ ವರೆಗೂ ಐಪಿ​ಎಲ್‌ ನಡೆ​ಸಲು ಬಿಸಿ​ಸಿಐ ಚಿಂತನೆ ನಡೆ​ಸಿದ್ದು, ಟೂರ್ನಿ ವಿದೇಶಕ್ಕೆ ಸ್ಥಳಾಂತರಗೊಳ್ಳು​ವುದು ಬಹು​ತೇಕ ಖಚಿತವಾಗಿದೆ. ಇದೇ ವೇಳೆ ರಣಜಿ ಟ್ರೋಫಿ ಸೇರಿ​ದಂತೆ ದೇಸಿ ಪಂದ್ಯಾ​ವ​ಳಿಗಳನ್ನು ನಡೆ​ಸು​ವುದು, ಪ್ರಯೋ​ಜ​ಕತ್ವ ಗುತ್ತಿಗೆ ನವೀ​ಕ​ರಣ ಸೇರಿ​ದಂತೆ ಪ್ರಮುಖ ವಿಚಾರಗಳ ಬಗ್ಗೆ ನಿರ್ಧ​ರಿ​ಸ​ಲಾ​ಗು​ವುದು ಎನ್ನ​ಲಾಗಿದೆ.

ಭಾರತ-ಇಂಗ್ಲೆಂಡ್ ಸರಣಿ ಮುಂದೂ​ಡಿಕೆ..! IPL ನಡೆಯೋದು ಪಕ್ಕಾ..?

ಬಿಸಿಸಿಐ ಈಗಾಗಲೇ ಕೇಂದ್ರೀಯ ಗುತ್ತಿಗೆ ಹೊಂದಿರುವ ಆಟಗಾರರಿಗೆ ಆರು ವಾರಗಳ ಕಾಲ ದುಬೈನಲ್ಲಿ ತರಭೇತಿ ಆಯೋಜಿಸಲು ಚಿಂತನೆ ನಡೆಸಿದೆ ಎನ್ನಲಾಗಿದೆ. ಇದರ ಜತೆಗ ಭಾರತದಲ್ಲಿ ಈ ವರ್ಷ ಐಪಿಎಲ್ ಆಯೋಜಿಸಲು ಸಾಧ್ಯವಾಗದಿದ್ದರೆ, ಬಿಸಿಸಿಐ ಪಾಲಿಗೆ ದುಬೈ ಮೊದಲ ಆಯ್ಕೆ ಆಗಿರಲಿದೆ ಎನ್ನಲಾಗಿದೆ. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನಿವೃತ್ತಿಗೂ ಮೊದಲು ಕೊಹ್ಲಿ ಏಕೈಕ ಗುರಿ ಒಂದೇ, ಈ ಐದು ದಾಖಲೆಗಳ ಮುರಿಯಲು ಬಿಗ್ ಟಾರ್ಗೆಟ್
ಬರೋಬ್ಬರಿ 103 ವರ್ಷಗಳ ಹಳೆಯ ದಾಖಲೆ ಮುರಿದ ಚಿನ್ಮಯ್ ಸುತಾರ್! ರಣಜಿ ಟ್ರೋಫಿಯಲ್ಲಿ ಸಂಚಲನ ಸೃಷ್ಟಿದ ಈತ ಯಾರು?