
ಚೆನ್ನೈ(ಅ.22): ಒಂದಲ್ಲೊಂದು ವಿವಾದಗಳನ್ನೇ ಮೈಮೇಲೆ ಎಳೆದುಕೊಳ್ಳುವ ವೇಗಿ ಎಸ್ ಶ್ರೀಶಾಂತ್ ಇದೀಗ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸ್ಫಾಟ್ ಫಿಕ್ಸಿಂಗ್ ಆರೋಪದಿಂದ ಬಿಸಿಸಿಐನಿಂದ ಅಜೀವ ನಿಷೇಧಕ್ಕೊಳಗಾಗಿರುವ ವೇಗಿ ಶ್ರೀಶಾಂತ್ ಇದೀಗ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಮೇಲೆ ಗಂಭೀರ್ ಆರೋಪ ಮಾಡಿದ್ದರು. ಇದಕ್ಕೆ ಕಾರ್ತಿಕ್ ತಕ್ಕ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ಟೆಸ್ಟ್ ಕ್ರಿಕೆಟ್‌ನಲ್ಲಿ 100 ನನ್ನ ವಿಕೆಟ್ ಗುರಿ; ಮತ್ತೆ ಕಣಕ್ಕಳಿಯಲು ರೆಡಿಯಾದ ಶ್ರೀ!
2013ರ ಐಪಿಎಲ್ ಟೂರ್ನಿಯಲ್ಲಿ ಸ್ಪಾಟ್ ಫಿಕ್ಸಿಂಗ್ ಆರೋಪ ಭುಗಿಲೆದ್ದಿತು. ಇದರಲ್ಲಿ ಎಸ್ ಶ್ರೀಶಾಂತ್, ಅಜಿತ್ ಚಂಡೀಲಾ ಹಾಗೂ ಅಕಿಂತ್ ಚವ್ಹಾಣ್ ಮೇಲೆ ಅಜೀವ ನಿಷೇಧ ಹೇರಿತು. ಬಿಸಿಸಿಐ ವಿರುದ್ದ ಕಾನೂನು ಹೋರಾಟ ಮುಂದುವರಿಸಿದ ಶ್ರೀಶಾಂತ್, ಕೇರಳಾ ಹೈಕೋರ್ಟ್‌ನಿಂದ ಕ್ಲೀನ್ ಚಿಟ್ ಪಡೆದುಕೊಂಡರೂ, ಬಿಸಿಸಿಐ ಮಾತ್ರ ನಿಷೇಧ ತೆರವುಗೊಳಿಸಲಿಲ್ಲ. ಇದೀಗ ನಿಷೇಧದ ಶಿಕ್ಷೆಯನ್ನು ಬಿಸಿಸಿಐ ಕಡಿತಗೊಳಿಸಿದೆ. ಈ ವಿಚಾರ ತಣ್ಣಗಾಗುತ್ತಲೇ, ದಿನೇಶ್ ಕಾರ್ತಿಕ್‌ನಿಂದ ತಾನು ಟೀಂ ಇಂಡಿಯಾದಿಂದ ಹೊರಬಿದ್ದೆ ಎಂದು ಹೊಸ ಬಾಂಬ್ ಸಿಡಿಸಿದ್ದರು.
ಇದನ್ನೂ ಓದಿ: ಶ್ರೀಶಾಂತ್‍ಗೆ ಬಿಗ್ ರಿಲೀಫ್; ನಿಷೇಧ ಕಡಿತಗೊಳಿಸಿದ BCCI!
ಶ್ರೀಶಾಂತ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ದಿನೇಶ್ ಕಾರ್ತಿಕ್, ಶ್ರೀಶಾಂತ್ ಆರೋಪ ನನ್ನ ಗಮನಕ್ಕೆ ಬಂದಿದೆ. ನನ್ನಿಂದ ಶ್ರೀಶಾಂತ್ ಟೀಂ ಇಂಡಿಯಾ ಅವಕಾಶ ಕಳೆದುಕೊಂಡಿದ್ದಾರೆ ಅನ್ನೋ ಮಾತುಗಳನ್ನು ಕೇಳಿದ್ದೇನೆ. ಇದಕ್ಕೆ ಪ್ರತಿಕ್ರಿಯಿಸಿದರೆ ಸಣ್ಣವನಾಗುತ್ತೇನೆ ಎಂದು ಕಾರ್ತಿಕ್ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.