ಟೆಸ್ಟ್ ಸರಣಿ ಗೆಲುವಿನ ಶ್ರೇಯಸ್ಸು ರೋಹಿತ್‌ಗೆ ಸಲ್ಲಬೇಕು; ವಿರಾಟ್!

By Web Desk  |  First Published Oct 22, 2019, 7:11 PM IST

ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಗೆಲುವಿಗೆ ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಕೊಡುಗೆಯೇ ಮುಖ್ಯ ಕಾರಣ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ರೋಹಿತ್ ಪ್ರದರ್ಶನದ ಕುರಿತು ಕೊಹ್ಲಿ ಮಾತುಗಳು ಇಲ್ಲಿವೆ.


ರಾಂಚಿ(ಅ.22): ಸೌತ್ ಆಫ್ರಿಕಾ ವಿರುದ್ದದ 3 ಟೆಸ್ಟ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಟೀಂ ಇಂಡಿಯಾ ಸರಣಿ ಕ್ಲೀನ್ ಸ್ವೀಪ್ ಮಾಡಿದೆ. ಮೂರು ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟ್ಸ್‌ಮನ್ ಹಾಗೂ ಬೌಲರ್ಸ್ ದಿಟ್ಟ ಹೋರಾಟ ನೀಡಿದ್ದಾರೆ. ಸರಣಿ ಗೆಲುವಿನ ಬಳಿಕ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಪ್ರದರ್ಶವನ್ನು ಕೊಂಡಾಡಿದ್ದಾರೆ.

ಇದನ್ನೂ ಓದಿ: ಹರಿಣಗಳ ಶಿಕಾರಿ: ಟೀಂ ಇಂಡಿಯಾಗೆ ಜೈ ಹೋ ಎಂದ ಟ್ವಿಟರಿಗರು

Latest Videos

undefined

ಸೌತ್ ಆಫ್ರಿಕಾ ವಿರುದ್ದದ  ಟೆಸ್ಟ್ ಸರಣಿ ಗೆಲುವಿನಲ್ಲಿ ರೋಹಿತ್ ಶರ್ಮಾ ಪಾತ್ರ ಪ್ರಮುಖವಾಗಿದೆ. ಆತಂಕ,  ಹಿಂಜರಿಕೆಯಿಂದ ಹೊರಬಂದ ರೋಹಿತ್ ದಾಖಲೆ ಪ್ರದರ್ಶನ ನೀಡಿದರು. ಇದು ಭಾರತದ ಗೆಲುವಿಗೆ ಕಾರಣವಾಯಿತು ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಹರಿಣಗಳ ಶಿಕಾರಿ; ಸರಣಿ ಕ್ಲೀನ್ ಸ್ವೀಪ್ ಮಾಡಿದ ಟೀಂ ಇಂಡಿಯಾ

ರೋಹಿತ್ ಟೆಸ್ಟ್ ಮಾದರಿಯಲ್ಲೂ ಆರಂಭಿಕನಾಗಿ ಯಶಸ್ಸು ಕಂಡಿದ್ದಾರೆ. ತಂಡದ ಅನುಭವಿ ಆರಂಭಿಕರ ಅನುಪಸ್ಥಿತಿಯಲ್ಲಿ ರೋಹಿತ್ ಬಡ್ತಿ ಪಡೆದಾಗ ಸಹಜವಾಗಿ ಆತಂಕ ಎದುರಾಗಿತ್ತು. ಆದರೆ ರೋಹಿತ್ ಸಲೀಸಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ ಎಂದು ಕೊಹ್ಲಿ ಹೇಳಿದರು.

ಮೊದಲ ಟೆಸ್ಟ್ ಪಂದ್ಯದಲ್ಲಿ 176 ಹಾಗೂ 127, ಮೂರನೇ ಟೆಸ್ಟ್ ಪಂದ್ಯದಲ್ಲಿ 212 ರನ್ ಸಿಡಿಸಿದರು. ಈ ಮೂಲಕ 3 ಪಂದ್ಯದ 4 ಇನಿಂಗ್ಸ್‌ಗಳಿಂದ 529 ರನ್ ಸಿಡಿಸಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. 

ಇದನ್ನೂ ಓದಿ: ಟೀಂ ಇಂಡಿಯಾ ಗೆಲುವಿನ ಬಳಿಕ ಡ್ರೆಸ್ಸಿಂಗ್ ರೂಂನಲ್ಲಿ ಧೋನಿ ಪ್ರತ್ಯಕ್ಷ!

ಸೌತ್ ಆಫ್ರಿಕಾ ವಿರುದ್ದದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ 203 ರನ್ ಗೆಲವು ಸಾಧಿಸಿತು. ಇನ್ನು 2ನೇ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 137 ರನ್ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 202 ರನ್ ಗೆಲುವು ಸಾಧಿಸಿತು.

click me!