ಕಳೆದ 50 ವರ್ಷಗಳಲ್ಲಿ ಕ್ರಿಕೆಟ್ ಜಗತ್ತು ಕಂಡ ಅತ್ಯಂತ ಸ್ಪೋರ್ತಿದಾಯಕ ನಾಯಕ ಧೋನಿ ಎಂದ ಮಾಜಿ ಕೋಚ್ ಚಾಪೆಲ್

Suvarna News   | Asianet News
Published : Aug 29, 2020, 07:59 AM ISTUpdated : Aug 29, 2020, 10:01 AM IST
ಕಳೆದ 50 ವರ್ಷಗಳಲ್ಲಿ ಕ್ರಿಕೆಟ್ ಜಗತ್ತು ಕಂಡ ಅತ್ಯಂತ ಸ್ಪೋರ್ತಿದಾಯಕ ನಾಯಕ ಧೋನಿ ಎಂದ ಮಾಜಿ ಕೋಚ್ ಚಾಪೆಲ್

ಸಾರಾಂಶ

ಕಳೆದ 50 ವರ್ಷಗಳಲ್ಲಿ ಕ್ರಿಕೆಟ್ ಜಗತ್ತು ಕಂಡ ಅತ್ಯಂತ ಸ್ಪೋರ್ತಿದಾಯಕ ನಾಯಕ ಧೋನಿ ಎಂದು ಟೀಂ ಇಂಡಿಯಾ ಮಾಜಿ ಕೋಚ್ ಗ್ರೇಗ್ ಚಾಪೆಲ್ ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ನವದೆಹಲಿ(ಆ.29): ಟೀಂ ಇಂಡಿಯಾದ ಮಾಜಿ ಆಟಗಾರ ಎಂ.ಎಸ್‌. ಧೋನಿ ಕಳೆದ 50 ವರ್ಷಗಳ ಕ್ರಿಕೆಟ್‌ ಇತಿಹಾಸದಲ್ಲಿ ಕಾಣಿಸಿದ ಅತ್ಯಂತ ಸ್ಫೂರ್ತಿದಾಯಕ ನಾಯಕ ಎಂದು ಆಸ್ಪ್ರೇಲಿಯಾದ ಮಾಜಿ ಕ್ರಿಕೆಟಿಗ, ಭಾರತದ ಮಾಜಿ ಕೋಚ್‌ ಗ್ರೇಗ್‌ ಚಾಪೆಲ್‌ ಹೇಳಿದ್ದಾರೆ. 

ಭಾರತ ತಂಡಕ್ಕೆ 2 ವಿಶ್ವಕಪ್‌ಗಳನ್ನು ಗೆದ್ದುಕೊಟ್ಟ ಧೋನಿ, ಜಾಗತಿಕ ಕ್ರಿಕೆಟ್‌ನಲ್ಲಿ ಮಿಂಚಿದ ಮೈಕಲ್‌ ಬೇರ್ಲಿ, ಇಯಾನ್‌ ಚಾಪೆಲ್‌, ಮಾರ್ಕ್ ಟೇಲರ್‌ ಮತ್ತು ಕ್ಲೈವ್‌ ಲಾಯ್ಡ್‌ ಅವರಂತಹ ಸರ್ವಶ್ರೇಷ್ಠ ನಾಯಕರ ಸಾಲಿನಲ್ಲಿ ಗುರುತಿಸಿಕೊಳ್ಳುತ್ತಾರೆ ಎಂದು ಚಾಪೆಲ್‌ ಹೇಳಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ ಮೊದಲೆರಡು ವರ್ಷಗಳಲ್ಲಿ(2005-2007) ಗ್ರೇಗ್ ಚಾಪೆಲ್ ತಂಡದ ಕೋಚ್ ಆಗಿದ್ದರು. ಧೋನಿ ನಮ್ಮೆಲ್ಲರ ನಿರೀಕ್ಷೆಗಳನ್ನು ಮೀರಿ, ಭಾರತ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕರಾಗಿ ಬೆಳೆದು ನಿಂತರು ರಂದು ಚಾಪೆಲ್ ಅಭಿಪ್ರಾಯಪಟ್ಟಿದ್ದಾರೆ.

"

ಧೋನಿಯ ಬಳಿ ಅಸಾಧಾರಣ ಕೌಶಲ್ಯಗಳಿವೆ ಹಾಗೂ ಅವರು ಸವಾಲುಗಳನ್ನು ಯಾವಾಗಲೂ ಇಷ್ಟಪಡುತ್ತಾರೆ. ಸವಾಲುಗಳನ್ನು ಮೈಮೇಲೆ ಎಳೆದುಕೊಂಡು ಅದರ ಜತೆಯೇ ಅತ್ಯಂತ ತಾಳ್ಮೆಯಿಂದ ಅದನ್ನು ಎದುರಿಸುವ ಕಲೆಯನ್ನು ಧೋನಿ ಕರಗತ ಮಾಡಿಕೊಂಡಿದ್ದರು. ಇದರ ಧೋನಿ ಹಾಸ್ಯ ಪ್ರೌವೃತ್ತಿಯನ್ನು ಹೊಂದಿದ್ದರು ಎಂದು ಚಾಪೆಲ್ ಗುಣಗಾನ ಮಾಡಿದ್ದಾರೆ.

ಧೋನಿ ನಿವೃತ್ತಿಯ ಬೆನ್ನಲ್ಲೇ ಬಿಸಿಸಿಐನಿಂದ ಗುಡ್‌ ನ್ಯೂಸ್..!

ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾದಲ್ಲಿ ನಡೆದ 2007ರ ಟಿ20 ವಿಶ್ವಕಪ್, 2011ರಲ್ಲಿ ನಡೆದ ಏಕದಿನ ವಿಶ್ವಕಪ್ ಹಾಗೂ 2013ರಲ್ಲಿ ನಡೆದ ಮಿನಿ ವಿಶ್ವಕಪ್ ಎಂದೇ ಕರೆಯಲ್ಪಡುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಟ್ಟಿದ್ದಾರೆ. ಈ ಮೂಲಕ ಮೂರೂ ಐಸಿಸಿ ಟ್ರೋಫಿ ಜಯಿಸಿದ ಜಗತ್ತಿನ ಏಕೈಕ ಕ್ರಿಕೆಟಿಗ ಎನ್ನುವ ಗೌರವ ಧೋನಿ ಹೆಸರಿನಲ್ಲಿದೆ. ಇದೇ ಆಗಸ್ಟ್ 15ರಂದು ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?