
ಪೋರ್ಟ್ ಆಫ್ ಸ್ಪೇನ್(ಆ.28): ವೆಸ್ಟ್ ಇಂಡೀಸ್ ಆಲ್‌ರೌಂಡರ್ ಡ್ವೇನ್ ಬ್ರಾವೋ ಟಿ20 ಕ್ರಿಕೆಟ್‌ನಲ್ಲಿ ವಿಶಿಷ್ಟ ದಾಖಲೆ ಮಾಡಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಬ್ರಾವೋ 500 ವಿಕೆಟ್ ಪಡೆಯುವ ಮೂಲಕ ಈ ಸಾಧನೆ ಮಾಡಿದ ಜಗತ್ತಿನ ಮೊದಲ ಬೌಲರ್ ಎನ್ನುವ ಕೀರ್ತಿಗೆ ಡಿಜೆ ಬ್ರಾವೋ ಪಾತ್ರರಾಗಿದ್ದಾರೆ.
ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್)ನಲ್ಲಿ ಬ್ರಾವೋ ಈ ಮೈಲಿಗಲ್ಲು ಬರೆದಿದ್ದಾರೆ. ಸಿಪಿಎಲ್ ಟೂರ್ನಿಯಲ್ಲಿ ಟ್ರಿನಬಾಗೊ ನೈಟ್ ರೈಡರ್ಸ್ ತಂಡದ ಬ್ರಾವೋ, ಸೇಂಟ್ ಲೂಸಿಯಾ ಝೌಕ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಈ ವಿಶೇಷ ದಾಖಲೆ ಮಾಡಿದರು. ಬರೋಬ್ಬರಿ ತಾವಾಡಿದ 459ನೇ ಟಿ20 ಪಂದ್ಯದಲ್ಲಿ ಬ್ರಾವೋ ಈ ಸಾಧನೆ ಮಾಡಿದ್ದಾರೆ
ಸಿಪಿಎಲ್‌ನಲ್ಲಿ 100 ವಿಕೆಟ್, ಅಂತಾರಾಷ್ಟ್ರೀಯ ಟಿ20ಯಲ್ಲಿ 59 ವಿಕೆಟ್, ಐಪಿಎಲ್, ಬಾಂಗ್ಲಾ ಪ್ರೀಮಿಯರ್ ಲೀಗ್, ಪಾಕಿಸ್ತಾನ ಸೂಪರ್ ಲೀಗ್ ಸೇರಿದಂತೆ ಇತರೆ ಟಿ20 ಟೂರ್ನಿಗಳಲ್ಲಿ ಬ್ರಾವೋ ಮುನ್ನೂರಕ್ಕೂ ಅಧಿಕ ವಿಕೆಟ್ ಪಡೆದಿದ್ದಾರೆ. ಇನ್ನೂ ಕಾಕಾತಾಳೀಯವೆಂದರೆ ಸಿಎಪಿಎಲ್‌ನಲ್ಲಿ ತಾವಾಡಿದ ನೂರನೇ ಪಂದ್ಯದಲ್ಲೇ 100 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
ಆಟಗಾರರ ಸಂಪೂರ್ಣ ರಕ್ಷಣೆಗೆ ಇನ್ಶೂರೆನ್ಸ್- ಮ್ಯಾಕ್ಸ್ ಜೊತೆ RCB ಒಪ್ಪಂದ!
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅನುಭವಿ ಆಲ್ರೌಂಡರ್ ಡ್ವೇನ್ ಬ್ರಾವೋ ಟಿ20 ಕ್ರಿಕೆಟ್‌ನಲ್ಲಿ 300 ಹಾಗೂ 400 ವಿಕೆಟ್ ಪಡೆದ ಮೊದಲ ಬೌಲರ್ ಎನಿಸಿದ್ದರು. ಇದೀಗ 500 ವಿಕೆಟ್ ವಿಕೆಟ್ ಪಡೆದ ಸಾಧನೆಯು ಬ್ರಾವೋ ಪಾಲಾಗಿದೆ. ಈ ಪಟ್ಟಿಯಲ್ಲಿ ಶ್ರೀಲಂಕಾದ ಲಸಿತ್ ಮಲಿಂಗಾ (389), ಸುನಿಲ್ ನರೇನ್ (383) ನಂತರದ ಸ್ಥಾನದಲ್ಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.