ವಿರಾಟ್‌ಗೆ ಕಾಕಾ ಎಂದು ಭಾರತೀಯರ ಹೃದಯ ಕದ್ದ ಗೇಲ್

Suvarna News   | Asianet News
Published : Aug 28, 2020, 06:38 PM ISTUpdated : Aug 28, 2020, 09:27 PM IST
ವಿರಾಟ್‌ಗೆ ಕಾಕಾ ಎಂದು ಭಾರತೀಯರ ಹೃದಯ ಕದ್ದ ಗೇಲ್

ಸಾರಾಂಶ

ವಿರುಷ್ಕಾ ಜೋಡಿ ತಮ್ಮ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮುದ್ದಾದ ಫೋಟೋವನ್ನು ಶೇರ್ ಮಾಡಿಕೊಳ್ಲುವ ಮೂಲಕ ನಾವೀಗ ಮೂರು ಮಂದಿ. ಜನವರಿ ವೇಳೆ ಬರುತ್ತಿದ್ದಾರೆ ಎಂದು ಬರೆದುಕೊಂಡಿದ್ದರು. ಈ ತಾರಾ ಜೋಡಿಗೆ ಆರ್‌ಸಿಬಿ ಮಾಜಿ ಆಟಗಾರ ಕ್ರಿಸ್ ಗೇಲ್ ವಿನೂತನವಾಗಿ ಶುಭ ಕೋರಿದ್ದಾರೆ. 

ದುಬೈ(ಆ.28): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಜೋಡಿ ತಮ್ಮ ಅಭಿಮಾನಿಗಳಿಗೆ ಗುರುವಾರಷ್ಟೇ ತಾವು ಜನವರಿ ವೇಳೆಗೆ ಮೂರು ಮಂದಿಯಾಗುತ್ತೇವೆ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಸಿಹಿಸುದ್ದಿಯನ್ನು ನೀಡಿದ್ದರು.

ವಿರುಷ್ಕಾ ಜೋಡಿ ತಮ್ಮ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮುದ್ದಾದ ಫೋಟೋವನ್ನು ಶೇರ್ ಮಾಡಿಕೊಳ್ಲುವ ಮೂಲಕ ನಾವೀಗ ಮೂರು ಮಂದಿ. ಜನವರಿ ವೇಳೆ ಬರುತ್ತಿದ್ದಾರೆ ಎಂದು ಬರೆದುಕೊಂಡಿದ್ದರು. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬರಲಾರಂಭಿಸಿದೆ. 

ಮೊದಲಿಗೆ ಲೆಗ್‌ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಅಣ್ಣ ಅತ್ತಿಗೆಗೆ ಅಭಿನಂದನೆಗಳು ಎಂದು ಶುಭ ಕೋರಿದ್ದಾರೆ. ನಂತರ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಫಾಫ್ ಡುಪ್ಲೆಸಿಸ್ ಕೂಡಾ ಅಭಿನಂದನೆಗಳು ಸಹೋದರ ಎಂದು ಶುಭ ಹಾರೈಸಿದರು.

IPL ಆರಂಭಕ್ಕೂ ಮುನ್ನ ಅಭಿಮಾನಿಗಳಿಗೆ ಗುಡ್‌ ನ್ಯೂಸ್ ನೀಡಿದ ವಿರುಷ್ಕಾ ಜೋಡಿ

ಅಭಿನಂದನೆಗಳು ಕಾಕಾ ಎಂದ ಗೇಲ್: ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಆಟಗಾರ ಕ್ರಿಸ್ ಗೇಲ್, ಟೀಂ ಇಂಡಿಯಾ ನಾಯಕನಿಗೆ ವಿನೂತನ ಶೈಲಿಯಲ್ಲಿಯೇ ಶುಭ ಕೋರಿದ್ದಾರೆ. ಅಭಿನಂದನೆಗಳು ಕಾಕಾ ಎನ್ನುವ ಮೂಲಕ ದೇಸಿ ಸೊಗಡಿನಲ್ಲೇ ಗೇಲ್ ಶುಭ ಹಾರೈಸಿದ್ದಾರೆ. 

ಈ ಈ ರೀತಿ ಶುಭ ಕೋರುತ್ತಿದ್ದಂತೆಯೇ ಈ ಕಮೆಂಟ್‌ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಗೇಲ್ ಭಾರತೀಯ ಭಾಷೆಗಳ ಮೇಲೆ ಅಭಿಮಾನದಿಂದಲೇ ಕಾಕಾ ಎಂದು ಶುಭಕೋರಿದ್ದಾರೆ ಎಂದು ಪೋಸ್ಟ್ ಮಾಡುವ ಮೂಲಕ ಈ ಕಮೆಂಟ್‌ನ್ನು ವೈರಲ್ ಮಾಡಿದ್ದಾರೆ.

ಸದ್ಯ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದುಬೈನಲ್ಲಿದ್ದು, 13ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಸಜ್ಜಾಗುತ್ತಿದ್ದಾರೆ. ಕಳೆದ 12 ಆವೃತ್ತಿಗಳಲ್ಲೂ ಕಪ್ ಗೆಲ್ಲಲು ವಿಫಲವಾಗಿರುವ ರಾಯಲ್ ಚಾಲೆಂಜರ್ಸ್‌ ತಂಡ ಇದೇ ಸೆಪ್ಟೆಂಬರ್ 19ರಿಂದ ಆರಂಭವಾಗಲಿರುವ ಐಪಿಎಲ್‌ ಟೂರ್ನಿಯಲ್ಲಿ ಹೊಸ ಉತ್ಸಾಹದೊಂದಿಗೆ ಕಣಕ್ಕಿಳಿಯಲು ಎದುರು ನೋಡುತ್ತಿದೆ.
"

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?