11ನೇ ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿ ಧೋನಿ-ಸಾಕ್ಷಿ; ಮೊದಲ ಭೇಟಿಯಲ್ಲಿದೆ ಟ್ವಿಸ್ಟ್!

By Suvarna News  |  First Published Jul 4, 2021, 6:23 PM IST
  • ಮಾಜಿ ನಾಯಕ ಧೋನಿ-ಸಾಕ್ಷಿ ಮದುವೆ ವಾರ್ಷಿಕೋತ್ಸವ ಸಂಭ್ರಮ
  • 11 ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧೋನಿ-ಸಾಕ್ಷಿ
  • ಇವರಿಬ್ಬರ ಮೊದಲ ಭೇಟಿಯಲ್ಲಿದೆ ಒಂದು ಟ್ವಿಸ್ಟ್

ರಾಂಚಿ(ಜು.04): ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ಹಾಗೂ ಸಾಕ್ಷಿ ಧೋನಿಗೆ ಮದುವೆ ವಾರ್ಷಿಕೋತ್ಸವ ಸಂಭ್ರಮ. 11ನೇ ವಾರ್ಷಿಕೋತ್ಸವ ಸಂಭ್ರಮದಲ್ಲಿರುವ ಈ ಜೋಡಿಗೆ ಕ್ರಿಕೆಟಿಗರು, ಸೆಲೆಬ್ರೆಟಿಗಳು, ಅಭಿಮಾನಿಗಳು ಶುಭಹಾರೈಸಿದ್ದಾರೆ.  ಕಟುಂಬದ ಜೊತೆ ಧೋನಿ 11ನೇ ವರ್ಷದ ಮದುವೆ ವಾರ್ಷಿಕೋತ್ಸವ ಆಚರಿಸಿದ್ದಾರೆ.

ಪಾಠ ಮಾಡ್ತಾರಾ ಧೋನಿ ? MSDಗೆ ಟೀಚರ್ ಜಾಬ್..?

Tap to resize

Latest Videos

undefined

ಜುಲೈ 4, 2010ರಲ್ಲಿ ಧೋನಿ, ಸಾಕ್ಷಿ ಸಿಂಗ್ ವರಿಸಿದರು. ಧೋನಿ ಆಪ್ತರು, ಕುಟುಂಬಸ್ಥರು ಮಾತ್ರ ಪಾಲ್ಗೊಂಡಿದ್ದ ಈ ಸೀಕ್ರೆಟ್ ಮದುವೆ ಭಾರತದಲ್ಲಿ ಸಂಚಲನ ಮೂಡಿಸಿತ್ತು. 11 ವರ್ಷಗಳ ಸುಂದರ ಬದುಕಿಗೆ ಪುತ್ರಿ ಝಿವಾ ಧೋನಿ ಮತ್ತಷ್ಟು ಸುಮಧುರ ಕ್ಷಣಗಳನ್ನು ನೀಡಿದ್ದಾರೆ.

ಧೋನಿ ಕುರಿತು ಸೀಕ್ರೆಟ್ ಮಾಹಿತಿಗಳೆಲ್ಲಾ ಎಂ.ಎಸ್.ಧೋನಿ, ದಿ ಅನ್‌ಟೋಲ್ಡ್ ಸ್ಟೋರಿ ಬಾಲಿವುಡ್ ಬಯೋಗ್ರಫಿ ಸಿನಿಮಾದಲ್ಲಿದೆ. ಈ ಸಿನಿಮಾದಲ್ಲಿ ಧೋನಿ-ಸಾಕ್ಷಿ ಮೊದಲ ಭೇಟಿ, ಪ್ರೀತಿ, ಪ್ರಣಯ ಕುರಿತ ಮಾಹಿತಿಗಳಿವೆ. ಆದರೆ ಇವರ ಮೊದಲ ಭೇಟಿಯಲ್ಲಿ ಸಣ್ಣ ಟ್ವಿಸ್ಟ್ ಇದೆ.

ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಗೆಲುವಿಗೆ 8 ವರ್ಷ ಭರ್ತಿ; ಧೋನಿ ನಾಯಕತ್ವಕ್ಕೆ ಐಸಿಸಿ ಸೆಲ್ಯೂಟ್

ಹೊಟೆಲ್‌ನಲ್ಲಿ ಧೋನಿ, ಸಾಕ್ಷಿಯನ್ನು ಭೇಟಿಯಾಗಿರುವುದು ನಿಜ. ಆದರೆ ಸಾಕ್ಷಿ ಹಾಗೂ ಧೋನಿಯ ಕಾಮನ್ ಫ್ರೆಂಡ್ ಮೂಲಕ ಹೊಟೆಲ್‌ನಲ್ಲಿ ಭೇಟಿಯಾಗಿದ್ದಾರೆ. ಅದು ತಾಜ್ ಹೊಟೆಲ್‌ನಲ್ಲಿ ಟ್ರೈನಿಯಾಗಿದ್ದ ಸಾಕ್ಷಿಯ ಕೊನೆಯ ದಿನ ಭೇಟಿ ನಡೆದಿತ್ತು. ಚಿತ್ರದಲ್ಲಿ ಸಣ್ಣ ಬದಲಾವಣೆಗಳಿವೆ. ಈ ಕುರಿತು ಸ್ವತಃ ಸಾಕ್ಷಿ ಧೋನಿ ಹೇಳಿಕೊಂಡಿದ್ದಾರೆ. 

ಭೇಟಿಗೂ ಮೊದಲು ಸಾಕ್ಷಿ ತಾಯಿ ಧೋನಿ ಅಭಿಮಾನಿಯಾಗಿದ್ದರು. ಉದ್ದ ಕೂದಲು, ಭರ್ಜರಿ ಸಿಕ್ಸರ್ ಕಾರಣಕ್ಕೆ ಧೋನಿಯ ಅಭಿಮಾನಿಯಾಗಿದ್ದರು. ಇತ್ತ ಸಾಕ್ಷಿಗೆ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ ಮಾತ್ರ ತಿಳಿದಿತ್ತು. ಧೋನಿ ಕುರಿತು ತಿಳಿದೇ ಇರಲಿಲ್ಲ. ಭೇಟಿಯಾದ ಬಳಿಕ ಸಾಕ್ಷಿ ತನ್ನ ತಾಯಿಗೆ ಧೋನಿಗೆ ಉದ್ದ ಕೂದಲಿಲ್ಲ ಹಾಗೂ ಸಾಮಾನ್ಯ ಹುಡುಗ ಎಂದು ವಿವರಿಸಿದ್ದರು.

ಮೊದಲ ಭೇಟಿ ಬಳಿಕ ಧೋನಿ, ಕಾಮನ್ ಫ್ರೆಂಡ್ ಮೂಲಕ ಸಾಕ್ಷಿ ನಂಬರ್ ಪಡೆದುಕೊಂಡು ಚಾಟಿಂಗ್ ಆರಂಭಿಸಿದ್ದರು. ಬಳಿಕ ಇವರ ಪ್ರೀತಿ ಮದುವೆ ಅರ್ಥ ಪಡೆದುಕೊಂಡ ವಿಚಾರ ಎಲ್ಲರಿಗೂ ತಿಳಿದೇ ಇದೆ. ಇದೀಗ ಧೋನಿ ಹಾಗೂ ಸಾಕ್ಷಿ ದಾಂಪತ್ಯ ಜೀವನದಲ್ಲಿ 11 ವರ್ಷ ಸ್ಮರಣೀಯವಾಗಿ ಕಳೆದಿದ್ದಾರೆ.

click me!