ದೇಶಿ ಕ್ರಿಕೆಟ್ ಟೂರ್ನಿ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ

By Suvarna NewsFirst Published Jul 3, 2021, 5:11 PM IST
Highlights

* ದೇಶಿ ಕ್ರಿಕೆಟ್‌ ಟೂರ್ನಿ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ

* ನವೆಂಬರ್‌ 16ರಿಂದ ಫೆಬ್ರವರಿ 19, 2022ರವರೆಗೆ ದೇಶಿ ಕ್ರಿಕೆಟ್ ಟೂರ್ನಿ

* ರಣಜಿ ಕ್ರಿಕೆಟ್ ಟೂರ್ನಿ ನವೆಂಬರ್ 16ರಿಂದ ಆರಂಭ

ಮುಂಬೈ(ಜು.03): ಕಳೆದ ವರ್ಷ ಕೋವಿಡ್ ಕಾರಣದಿಂದಾಗಿ ರಣಜಿ ಟ್ರೋಫಿ ರದ್ದಾಗಿತ್ತು. ಇದೀಗ ಮುಂಬರುವ ನವೆಂಬರ್‌ 16ರಿಂದ ಫೆಬ್ರವರಿ 19, 2022ರವರೆಗೆ ದೇಶಿ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಲು ಬಿಸಿಸಿಐ ತೀರ್ಮಾನಿಸಿದೆ.

ದೇಶಿ ಕ್ರಿಕೆಟ್ ಟೂರ್ನಿಯು ಸೆಪ್ಟೆಂಬರ್ 21ರಿಂದ ಆರಂಭವಾಗಲಿದ್ದು, ಸೀನಿಯರ್‌ ಮಹಿಳಾ ಏಕದಿನ ಕ್ರಿಕೆಟ್ ಲೀಗ್ ಆರಂಭವಾಗಲಿದೆ. ಇದಾದ ಬಳಿಕ ಸೀನಿಯರ್ ಮಹಿಳಾ ಏಕದಿನ ಚಾಲೆಂಜರ್‌ ಟ್ರೋಫಿ ಆರಂಭವಾಗಲಿದೆ. ಇದಾದ ಬಳಿಕ ಸಯ್ಯದ್ ಮುಷ್ತಾಕ್‌ ಅಲಿ ಟೂರ್ನಿಯು ಅಕ್ಟೋಬರ್ 20ರಿಂದ ಆರಂಭವಾಗಿ ನವೆಂಬರ್ 12ರವರೆಗೆ ನಡೆಯಲಿದೆ. ಇನ್ನು ವಿಜಯ್ ಹಜಾರೆ ಟ್ರೋಫಿಯು ಫೆಬ್ರವರಿ 23, 2022ರಿಂದ ಆರಂಭವಾಗಿ ಮಾರ್ಚ್‌ 26, 2022ರವರೆಗೆ ನಡೆಯಲಿದೆ.

ಶಿಖರ್ ಧವನ್ ಪಡೆಯನ್ನು 'ಭಾರತ ಬಿ' ಟೀಂ ಎಂದ ರಣತುಂಗ; ನೆಟ್ಟಿಗರು ಗರಂ

ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ಒಟ್ಟಾರೆ ಎಲ್ಲಾ ಮಾದರಿಯಲ್ಲಿ ಒಟ್ಟು 2127 ದೇಶಿ ಪಂದ್ಯಗಳು ನಡೆಯಲಿವೆ. ದೇಸಿ ಟೂರ್ನಿಯನ್ನು ಅತ್ಯಂತ ಸುರಕ್ಷಿತ ಹಾಗೂ ಅಚ್ಚುಕಟ್ಟಾಗಿ ಆಯೋಜಿಸುವ ವಿಶ್ವಾಸವಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ.
 

click me!