ಐಸಿಸಿ ಚಾಂಪಿಯನ್ಸ್‌ ಟ್ರೋಫಿ: ಹಿಂದಕ್ಕೆ ಸರಿದರೆ ಪಾಕ್‌ ಕ್ರಿಕೆಟ್‌ಗೆ ಭಾರೀ ನಷ್ಟ

Published : Dec 13, 2024, 03:17 PM IST
ಐಸಿಸಿ ಚಾಂಪಿಯನ್ಸ್‌ ಟ್ರೋಫಿ: ಹಿಂದಕ್ಕೆ ಸರಿದರೆ ಪಾಕ್‌ ಕ್ರಿಕೆಟ್‌ಗೆ ಭಾರೀ ನಷ್ಟ

ಸಾರಾಂಶ

ಐಸಿಸಿ ಚಾಂಪಿಯನ್ಸ್ ಟ್ರೋಫಿಯಿಂದ ಹಿಂದೆ ಸರಿಯುವ ಬೆದರಿಕೆ ಒಡ್ಡಿದ್ದ ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ಗೆ ಒಂದು ವೇಳೆ ಹೀಗೆ ಮಾಡಿದರೆ ಮತ್ತೊಂದು ಬಿಗ್ ಶಾಕ್ ಎದುರಾಗುವ ಸಾಧ್ಯತೆಯಿದೆ.

ಕರಾಚಿ: ಮುಂದಿನ ವರ್ಷ ಫೆಬ್ರವರಿ- ಮಾರ್ಚ್‌ನಲ್ಲಿ ನಿಗದಿಯಾಗಿರುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಿಂದ ಹಿಂದೆ ಸರಿಯಲು ನಿರ್ಧರಿಸಿದರೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ)ಯು ಭಾರೀ ಆರ್ಥಿಕ ನಷ್ಟವನ್ನು ಎದುರಿಸುವ ಸಾಧ್ಯತೆಯಿದೆ ಎಂದು ಪಿಸಿಬಿ ಆಡಳಿತಾಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಈ ಬಗ್ಗೆ ಪಿಟಿಐಗೆ ಮಾಹಿತಿ ನೀಡಿರುವ ಅವರು, ‘ಐಸಿಸಿ ಮತ್ತು ಬಿಸಿಸಿಐ ಸೂಚಿಸಿರುವ ಹೈಬ್ರಿಡ್‌ ಮಾದರಿಯನ್ನು ಒಪ್ಪಿಕೊಳ್ಳದಿದ್ದರೆ, ಟೂರ್ನಿಯಿಂದ ಪಿಸಿಬಿ ಹೊರಬರುವುದು ಸುಲಭದ ಮಾತಲ್ಲ. ಪಾಕಿಸ್ತಾನವು ಕೇವಲ ಐಸಿಸಿ ಜೊತೆ ಒಪ್ಪಂದಕ್ಕೆ ಸಹಿ ಹಾಕಿಲ್ಲ. ಟೂರ್ನಿಯಲ್ಲಿ ಭಾಗವಹಿಸುವ ಇತರ ರಾಷ್ಟ್ರಗಳಂತೆ ಐಸಿಸಿಯೊಂದಿಗೆ ಕಡ್ಡಾಯ ಸದಸ್ಯರ ಭಾಗವಹಿಸುವಿಕೆ ಒಪ್ಪಂದ(ಎಂಪಿಎ)ಕ್ಕೆ ಸಹಿ ಹಾಕಿದೆ’ ಎಂದಿದ್ದಾರೆ. 

‘ಈ ಸಹಿ ಹಾಕಿದ ನಂತರವೇ ದೇಶವು ಆದಾಯದ ಪಾಲನ್ನು ಪಡೆಯಲು ಅರ್ಹವಾಗಿರುತ್ತದೆ. ಆದರೆ ಪಂದ್ಯಾವಳಿಯಿಂದ ಪಾಕಿಸ್ತಾನ ಹಿಂದಕ್ಕೆ ಸರಿದರೆ ಪಿಸಿಬಿಗೆ ಕಾನೂನು ತೊಡಕಿನ ಜೊತೆಗೆ ಆರ್ಥಿಕತೆಯ ಮೇಲೆಯೂ ಪ್ರತಿಕೂಲ ಪರಿಣಾಮ ಬೀರಲಿದೆ’ ಎಂದು ಅವರು ಎಚ್ಚರಿಸಿದ್ದಾರೆ.

ಟೀಕಾಕಾರರ ಬಾಯಿ ಮುಚ್ಚಿಸಿದ ವಿನೋದ್ ಕಾಂಬ್ಳಿ; ಬಾಲ್ಯದ ಗೆಳೆಯ ಸಚಿನ್ ಬಗ್ಗೆ ಖಡಕ್ ಮಾತಾಡಿದ ಮಾಜಿ ಕ್ರಿಕೆಟರ್!

3 ಮಾದರಿಯಲ್ಲೂ ತಲಾ 100 ವಿಕೆಟ್‌: ಶಾಹೀನ್‌ ಅಫ್ರಿದಿ 4ನೇ ಬೌಲರ್‌!

ಡರ್ಬನ್‌: ಶಾಹೀನ್‌ ಅಫ್ರಿದಿ ಎಲ್ಲಾ 3 ಮಾದರಿಯಲ್ಲೂ ತಲಾ 100 ವಿಕೆಟ್‌ ಕಿತ್ತ ಪಾಕಿಸ್ತಾನದ ಮೊದಲ ಹಾಗೂ ವಿಶ್ವದ 4ನೇ ಬೌಲರ್‌ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ದ.ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 3 ವಿಕೆಟ್‌ ಕಬಳಿಸಿದ ಶಾಹೀನ್‌, ಅಂ.ರಾ.ಟಿ20ಯಲ್ಲಿ 100 ವಿಕೆಟ್‌ ಪೂರೈಸಿದರು. ನ್ಯೂಜಿಲೆಂಡ್‌ನ ಟಿಮ್‌ ಸೌಥಿ, ಬಾಂಗ್ಲಾದೇಶದ ಶಕೀಬ್‌-ಅಲ್‌-ಹಸನ್‌, ಶ್ರೀಲಂಕಾದ ಲಸಿತ್‌ ಮಾಲಿಂಗ ಈ ಮೊದಲು ಮೂರೂ ಮಾದರಿಯಲ್ಲಿ ತಲಾ 100 ವಿಕೆಟ್‌ ಕಬಳಿಸಿದ್ದರು.

ಇಂಗ್ಲೆಂಡ್‌ನ ಬ್ರೂಕ್‌ ವಿಶ್ವ ನಂ.1 ಟೆಸ್ಟ್‌ ಬ್ಯಾಟರ್‌

ದುಬೈ: ಇಂಗ್ಲೆಂಡ್‌ನ ಯುವ ಬ್ಯಾಟರ್‌ ಹ್ಯಾರಿ ಬ್ರೂಕ್‌ ವಿಶ್ವ ಟೆಸ್ಟ್‌ ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರಿದ್ದಾರೆ. ಬುಧವಾರ ಪ್ರಕಟಗೊಂಡ ನೂತನ ರ್‍ಯಾಂಕಿಂಗ್‌ ಪಟ್ಟಿಯಲ್ಲಿ 25 ವರ್ಷದ ಬ್ರೂಕ್‌, ಹಿರಿಯ ಬ್ಯಾಟರ್‌ ಜೋ ರೂಟ್‌ ಅವರನ್ನು ಹಿಂದಿಕ್ಕಿದರು. ರೂಟ್‌ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. ಕೇನ್ ವಿಲಿಯಮ್ಸನ್‌ 3ನೇ, ಯಶಸ್ವಿ ಜೈಸ್ವಾಲ್‌ 4ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ರಿಷಭ್‌ ಪಂತ್‌ 9ನೇ ಸ್ಥಾನಕ್ಕೆ ಕುಸಿದಿದ್ದರೆ, ಶುಭ್‌ಮನ್‌ ಗಿಲ್‌ 17, ವಿರಾಟ್‌ ಕೊಹ್ಲಿ 20ನೇ ಸ್ಥಾನದಲ್ಲಿದ್ದಾರೆ.

7ನೇ ವಯಸ್ಸಿನಲ್ಲಿ ಚೆಸ್ ಆರಂಭಿಸಿ 18ರಲ್ಲಿ ವಿಶ್ವ ಚಾಂಪಿಯನ್ ಕಿರೀಟ ತೊಟ್ಟ ಗುಕೇಶ್ ಯಾರು? 

ಇನ್ನು, ಬೌಲರ್‌ಗಳ ಪಟ್ಟಿಯಲ್ಲಿ ಜಸ್‌ಪ್ರೀತ್‌ ಬೂಮ್ರಾ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಅಶ್ವಿನ್‌ 5ನೇ, ಜಡೇಜಾ 6ನೇ ಸ್ಥಾನದಲ್ಲಿದ್ದಾರೆ. ಆಲ್ರೌಂಡ್‌ ವಿಭಾಗದಲ್ಲಿ ಜಡೇಜಾ ಅಗ್ರಸ್ಥಾನದಲ್ಲೇ ಮುಂದುವರಿದಿದ್ದಾರೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜೈಸ್ವಾಲ್‌ ಸಖತ್‌ ಸೆಂಚುರಿ, ಟೆಸ್ಟ್‌ ಸರಣಿ ಸೋಲಿಗೆ ಏಕದಿನದಲ್ಲಿ ಸೇಡು ತೀರಿಸಿಕೊಂಡ ಭಾರತ!
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌