ಯುವ ಕ್ರಿಕೆಟಿಗರಿಗೆ ಮಣೆ: ಈ ಸ್ಟಾರ್ ಆಟಗಾರನಿಗೆ ಕರ್ನಾಟಕ ತಂಡದ ಬಾಗಿಲು ಬಂದ್‌!

By Naveen Kodase  |  First Published Dec 12, 2024, 5:33 PM IST

ಹಿರಿಯ ಆಟಗಾರ ಮನೀಶ್ ಪಾಂಡೆ ಅವರನ್ನು ಕರ್ನಾಟಕ ತಂಡದಿಂದ ಕೈಬಿಡಲಾಗಿದೆ. ಯುವ ಆಟಗಾರರಿಗೆ ಅವಕಾಶ ನೀಡುವ ಉದ್ದೇಶದಿಂದ ಕೆಎಸ್‌ಸಿಎ ಈ ನಿರ್ಧಾರ ಕೈಗೊಂಡಿದೆ. ಮುಂಬರುವ ವಿಜಯ್ ಹಜಾರೆ ಟ್ರೋಫಿ ಮತ್ತು ರಣಜಿ ಟ್ರೋಫಿಯಲ್ಲಿ ಮನೀಶ್ ಪಾಂಡೆ ಆಡುವುದಿಲ್ಲ.


ಬೆಂಗಳೂರು: ಹಿರಿಯ ಆಟಗಾರ ಮನೀಶ್‌ ಪಾಂಡೆಗೆ ಕರ್ನಾಟಕ ತಂಡದ ಬಾಗಿಲು ಬಂದ್ ಆಗಿದೆ. ಪ್ರತಿಭಾವಂತ ಯುವ ಆಟಗಾರರಿಗೆ ಮಣೆ ಹಾಕಲು ನಿರ್ಧರಿಸಿರುವ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ), ಮನೀಶ್‌ರನ್ನು ಮುಂಬರುವ ವಿಜಯ್‌ ಹಜಾರೆ ಏಕದಿನ ತಂಡದಿಂದ ಹೊರಗಿಟ್ಟಿದೆ. ರಣಜಿ ಕ್ರಿಕೆಟ್‌ಗೂ ಮನೀಶ್‌ರನ್ನು ಆಯ್ಕೆ ಮಾಡುವುದಿಲ್ಲ ಎಂದು ಕೆಎಸ್‌ಸಿಎ ಸ್ಪಷ್ಟಪಡಿಸಿದೆ.

35 ವರ್ಷದ ಮನೀಶ್‌ ಕಳೆದ 16 ವರ್ಷಗಳಿಂದಲೂ ಕರ್ನಾಟಕ ಪರ ಆಡುತ್ತಿದ್ದಾರೆ. ಆದರೆ ಕಳೆದೆರಡು ವರ್ಷಗಳಿಂದ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗುತ್ತಿದ್ದಾರೆ. ಈ ಋತುವಿನ 5 ಪಂದ್ಯಗಳಲ್ಲಿ 1 ಅರ್ಧಶತಕ ಸೇರಿ ಕೇವಲ 137 ರನ್‌ ಗಳಿಸಿದ್ದಾರೆ. ಮುಷ್ತಾಕ್‌ ಅಲಿ ಟಿ20ಯಲ್ಲೂ ಅವರು ವೈಫಲ್ಯ ಕಂಡಿದ್ದಾರೆ.

Tap to resize

Latest Videos

ಈ ಬಗ್ಗೆ ಮಾತನಾಡಿರುವ ರಾಜ್ಯ ಕ್ರಿಕೆಟ್‌ ಸಂಸ್ಥೆ ಆಯ್ಕೆ ಸಮಿತಿ ಮುಖ್ಯಸ್ಥ ಜೆ.ಅಭಿರಾಮ್‌, ‘ಕರ್ನಾಟಕ ಪರ ಮನೀಶ್‌ರ ವೃತ್ತಿಬದುಕು ಅತ್ಯುತ್ತಮವಾಗಿದೆ. ಆದರೆ ಈಗ ಯುವಕರಿಗೆ ದಾರಿ ಬಿಟ್ಟುಕೊಡಬೇಕಾದ ಅಗತ್ಯವಿದೆ. ಹೀಗಾಗಿ ರಣಜಿ 2ನೇ ಹಂತದಲ್ಲೂ ಮನೀಶ್‌ ರಾಜ್ಯ ತಂಡಕ್ಕೆ ಮರಳುವುದಿಲ್ಲ. ಯುವ ಪ್ರತಿಭಾವಂತ ಆಟಗಾರರಿಗೆ ಅವಕಾಶ ಮಾಡಿಕೊಡುತ್ತೇವೆ’ ಎಂದಿದ್ದಾರೆ. 

ಗಾಬಾದಲ್ಲಿ ಭಾರತಕ್ಕೆ ಬೌನ್ಸರ್‌ ಟೆಸ್ಟ್‌: ಟೀಂ ಇಂಡಿಯಾಗೆ ಈ ಬಾರಿ ಮತ್ತೊಮ್ಮೆ ಕಠಿಣ ಸವಾಲು!

undefined

‘ನಮ್ಮ ನಿರ್ಧಾರವನ್ನು ಮನೀಶ್‌ಗೂ ತಿಳಿಸಿದ್ದೇವೆ. ಅವರು ಕೋಚ್ ಆಗಿ ಅಥವಾ ಇನ್ನಾವುದೇ ಪಾತ್ರದಲ್ಲಿ ಕರ್ನಾಟಕ ಕ್ರಿಕೆಟ್‌ನೊಂದಿಗೆ ಸಂಪರ್ಕದಲ್ಲಿರಲು ನಾವು ಬಯಸುತ್ತೇವೆ’ ಎಂದು ಅಭಿರಾಂ ಹೇಳಿದ್ದಾರೆ.

ಇನ್ನು, ಸಂಭಾವ್ಯರ ಪಟ್ಟಿಯಲ್ಲಿ ಕೆ.ಎಲ್‌.ರಾಹುಲ್‌, ಮಯಾಂಕ್‌ ಅಗರ್‌ವಾಲ್‌, ದೇವದತ್‌ ಪಡಿಕ್ಕಲ್, ಯುವ ತಾರೆಗಳಾದ ಅಭಿಲಾಶ್‌ ಶೆಟ್ಟಿ, ಹಾರ್ದಿಕ್‌ ರಾಜ್‌, ಪರಾಸ್‌ ಆರ್ಯ, ಕಿಶಾನ್‌ ಬೆದರೆ, ಶ್ರೀಜಿಲ್‌ ಕೆ.ಎಲ್‌. ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಮೈದಾನಕ್ಕೆ ಶುದ್ಧ ನೀರು ಬಳಸಿದ್ದಕ್ಕೆ ಕೆಎಸ್‌ಸಿಎಗೆ ಕಾರಣ ಕೇಳಿದ ಎನ್‌ ಜಿಟಿ

ನವದೆಹಲಿ: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಶುದ್ಧ ನೀರು ಬಳಸಿದ್ದಕ್ಕೆ ಕಾರಣ ಕೊಡಿ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಎ) ಗೆ ಸೂಚನೆ ನೀಡಿದೆ.

(ಎನ್‌ಜಿಟಿ)ಯು ಕಳೆದ ಏಪ್ರಿಲ್‌ನಲ್ಲಿ ಬೆಂಗಳೂರಿನಲ್ಲಿ ನೀರಿಗೆ ತೀವ್ರ ಬರ ಇದ್ದಾಗ ಐಪಿಎಲ್ ಪಂದ್ಯಗಳ ವೇಳೆ ಕ್ರೀಡಾಂಗಣಕ್ಕೆ ಸುಮಾರು 75,000 ಲೀಟರ್ ನೀರು ಬಳಸಲಾಗಿತ್ತು. ಈ ಬಗ್ಗೆ ಉತ್ತರ ನೀಡಲು ಏಪ್ರಿಲ್‌ನಲ್ಲಿ ಕೆಎಸ್ ಸಿಎಗೆ ಎನ್‌ಜಿಟಿ ಸೂಚಿಸಿತ್ತು.

ಪೈಸೆ ಪೈಸೆಗೂ ಪರದಾಡುತ್ತಿರುವ ವಿನೋದ್ ಕಾಂಬ್ಳಿ; ಬೀದಿಗೆ ಬೀಳುವ ಆತಂಕದಲ್ಲಿ ಮಾಜಿ ಕ್ರಿಕೆಟರ್!

ಇದಕ್ಕೆ ಉತ್ತರಿಸಿದ್ದ ಕೆಎಸ್‌ಎ, ಬೋರ್‌ವೆಲ್‌ ನೀರನ್ನು ಮೈದಾನಕ್ಕೆ ಬಳಸಿದ್ದಾಗಿ ತಿಳಿಸಿತ್ತು. ನ.26ರ ತನ್ನ ಆದೇಶದಲ್ಲಿ ಎನ್‌ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಅವರ ಪೀಠವು, ಶುದ್ಧ ನೀರು ಬಳಸಿದ್ದಕ್ಕೆ ಉತ್ತರ ನೀಡುವಂತೆ ಸೂಚಿಸಿ, ವಿಚಾರಣೆ ಯನ್ನು ಮಾ.19ಕ್ಕೆ ಮುಂದೂಡಿದೆ.

click me!