ತಂದೆಯಂತೆ ಮಗ; ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮುಗಿಲೆತ್ತರದ ಸಿಕ್ಸರ್ ಸಿಡಿಸಿದ ಸಮಿತ್ ದ್ರಾವಿಡ್‌..! ವಿಡಿಯೋ ವೈರಲ್

By Naveen Kodase  |  First Published Aug 17, 2024, 4:32 PM IST

ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ ಆಕರ್ಷಕ ಸಿಕ್ಸರ್ ಸಿಡಿಸಿ ಗಮನ ಸೆಳೆದಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ


ಬೆಂಗಳೂರು: ಭಾರತದ ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್, ಸದ್ಯ ಮಹಾರಾಜ ಟಿ20 ಲೀಗ್ ಟೂರ್ನಿಯಲ್ಲಿ ಮೈಸೂರು ವಾರಿಯರ್ಸ್‌ ತಂಡವನ್ನು ಪ್ರತಿನಿಧಿಸುತ್ತಿದ್ದು, ತಂದೆಯ ಹಾದಿಯನ್ನೇ ಫಾಲೋ ಮಾಡುತ್ತಿದ್ದಾರೆ.  ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಕೆಎಸ್‌ಸಿಎ ಮಹಾರಾಜ ಟಿ20 ಟ್ರೋಫಿ ಟೂರ್ನಿಯಲ್ಲಿ ಸಮಿತ್ ದ್ರಾವಿಡ್ ಆಕರ್ಷಕ ಸಿಕ್ಸರ್ ಸಿಡಿಸುವ ಮೂಲಕ ಮತ್ತೊಮ್ಮೆ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸಮಿತ್ ದ್ರಾವಿಡ್ ಸಿಡಿಸಿದ ಸಿಕ್ಸರ್ ಅವರ ತಂದೆ ದ್ರಾವಿಡ್ ಅವರ ಬ್ಯಾಟಿಂಗ್ ಅನ್ನೇ ಹೋಲುವಂತಿದೆ ಎಂದು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. 

ಬೆಂಗಳೂರು ಬ್ಲಾಸ್ಟರ್ಸ್‌ ಎದುರಿನ ಪಂದ್ಯದಲ್ಲೂ ಸಮಿತ್ ದ್ರಾವಿಡ್ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದರು. ಹೀಗಿದ್ದೂ ಸಮಿತ್ ದ್ರಾವಿಡ್ ಸಿಡಿಸಿದ ಮುಗಿಲೆತ್ತರದ ಸಿಕ್ಸ್ ಕ್ರಿಕೆಟ್ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಮಿತ್ ಸಿಡಿಸಿದ ಸಿಕ್ಸರ್ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

Tap to resize

Latest Videos

undefined

ವಿನೇಶ್ ಫೋಗಟ್ ಸ್ವಾಗತಿಸುವ ಭರದಲ್ಲಿ ಭಾರತದ ಬಾವುಟ ತುಳಿದ ಬಜರಂಗ್ ಪೂನಿಯಾ..! ವಿಡಿಯೋ ವೈರಲ್

ಹೀಗಿತ್ತು ನೋಡಿ ಸಮಿತ್ ದ್ರಾವಿಡ್ ಬಾರಿಸಿದ ಸಿಕ್ಸರ್:

ದ್ರಾವಿಡ್ ಸರ್ ಮಗ ಗುರು ಇವ್ರು..🤯🔥

ಈ ಸಿಕ್ಸ್ ಗೆ ಒಂದು ಚಪ್ಪಾಳೆ ಬರ್ಲೇಬೇಕು..👏👌

📺 ನೋಡಿರಿ Maharaja Trophy KSCA T20 | ಬೆಂಗಳೂರು vs ಮೈಸೂರು | LIVE NOW ದಲ್ಲಿ pic.twitter.com/ROsXMQhtwO

— Star Sports Kannada (@StarSportsKan)

ಇನ್ನು ಸಮಿತ್ ದ್ರಾವಿಡ್ ಬ್ಯಾಟಿಂಗ್‌ನಲ್ಲಿ ಕೇವಲ 7 ರನ್ ಬಾರಿಸಲಷ್ಟೇ ಶಕ್ತರಾದರು. ಮಳೆ ಅಡಚಣೆಯ ನಡುವೆಯೂ ನಡೆದ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ತಂಡವು ಬೆಂಗಳೂರು ಬ್ಲಾಸ್ಟರ್ಸ್‌ ಎದುರು 4 ರನ್ ವಿರೋಚಿತ ಸೋಲು ಅನುಭವಿಸಿತು. 

ಲೀಗ್ ಕ್ರಿಕೆಟ್‌ಗೆ ಎಂಟ್ರಿಕೊಟ್ಟ ದ್ರಾವಿಡ್ ಪುತ್ರ ಸಮಿತ್..! ಮೊದಲ ಪಂದ್ಯದಲ್ಲಿ ಗಳಿಸಿದ ಸ್ಕೋರ್ ಎಷ್ಟು?

ಮೊದಲು ಬ್ಯಾಟ್ ಮಾಡಿದ ಮೈಸೂರು ವಾರಿಯರ್ಸ್ ತಂಡವು ನಿಗದಿತ 18 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 182 ರನ್ ಬಾರಿಸಿತು. ಮನೋಜ್ ಬಾಂಡಗೆ(58) ಹಾಗೂ ಹರ್ಷಿತ್ ಧರ್ಮನಿ(50) ಸ್ಪೋಟಕ ಅರ್ಧಶತಕ ಸಿಡಿಸಿ ತಂಡಕ್ಕೆ ಆಸರೆಯಾದರು. ಇನ್ನು ಕಠಿಣ ಗುರಿ ಬೆನ್ನತ್ತಿದ ಬೆಂಗಳೂರು ಬ್ಲಾಸ್ಟರ್ಸ್ ತಂಡವು 17.1 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಬೆಂಗಳೂರು ಪರ ಭುವನ್ ರಾಜ ಚುರುಕಿನ ಅರ್ಧಶತಕ ಸಿಡಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

click me!