ಉಲ್ಟಾ ಹೊಡೆದ ಹೆಡ್‌ಕೋಚ್ ಗೌತಮ್ ಗಂಭೀರ್..! ಹೇಳೋದೊಂದು, ಮಾಡೋದು ಮತ್ತೊಂದು..!

By Suvarna News  |  First Published Aug 16, 2024, 4:35 PM IST

ಟೀಂ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಈ ಹಿಂದೆ ಹೇಳಿದ್ದ ವಿದೇಶಿ ಕೋಚ್‌ಗಳ ಬಗ್ಗೆ ಆಡಿದ್ದ ಮಾತುಗಳ ಬಗ್ಗೆ ಈಗ ಯೂಟರ್ನ್‌ ತೆಗೆದುಕೊಂಡಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ


ಬೆಂಗಳೂರು: ಮಾತು ಆಡಿದ್ರೆ ಹೋಯ್ತು, ಮುತ್ತು ಒಡೆದ್ರೆ ಹೋಯ್ತು. ಒಮ್ಮೊಮ್ಮೆ ನಾವು ಆಡೋ ಮಾತುಗಳು ನಮಗೇ ಮುಳುವಾಗುತ್ತವೆ. ಆಡಿದವರಿಗೆ ನೆನಪಿಲ್ಲವೆಂದರೂ, ಕೇಳಿಸಿಕೊಂಡವರಿಗೆ ಚೆನ್ನಾಗಿ ನೆನಪಿರುತ್ತೆ. ಸದ್ಯ ಟೀಂ ಇಂಡಿಯಾ ಕೋಚ್ ಗಂಭೀರ್ ಪರಿಸ್ಥಿತಿ ಅದೇ ಆಗಿದೆ. 2 ವರ್ಷಗಳ ಹಿಂದೆ ಗಂಭೀರ್ ಆಡಿದ್ದ ಮಾತು, ಈಗ ಅವರಿಗೆ ಮುಳುವಾಗಿದೆ. ಯಾವುದು ಆ ಮಾತು..? ಏನ್ ಕಥೆ ಅಂತೀರಾ..? ಈ ಸ್ಟೋರಿ ನೋಡಿ ನಿಮಗೆ ಗೊತ್ತಾಗುತ್ತೆ.
2 ವರ್ಷದ ಕೆಳಗೆ ಆಡಿದ ಮಾತು ಮರೆತು ಬಿಟ್ರಾ ..?

ಗೌತಮ್ ಗಂಭೀರ್ ಟೀಂ ಇಂಡಿಯಾ ಕೋಚ್ ಆದ್ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆಗಳಿದ್ವು. ಶ್ರೀಲಂಕಾ ಪ್ರವಾಸದಲ್ಲಿ ಟಿ20 ಸರಣಿಯಲ್ಲಿ ಗಂಭೀರ್ ತಮ್ಮ ಸಾಮರ್ಥ್ಯ ಪ್ರೂವ್ ಮಾಡಿದ್ರು. ಆದ್ರೆ, ಏಕದಿನ ಸರಣಿಯಲ್ಲಿ ಗಂಭೀರ್ ತಂತ್ರಗಾರಿಕೆಗಳ್ಯಾವು ವರ್ಕೌಟ್ ಆಗಲಿಲ್ಲ. ಪರಿಣಾಮ 2-0 ಅಂತರದಿಂದ ರೋಹಿತ್ ಶರ್ಮಾ ಪಡೆ ಸರಣಿ ಕೈ ಚೆಲ್ಲಿತ್ತು. 27 ವರ್ಷಗಳ ನಂತರ ಶ್ರೀಲಂಕಾ ವಿರುದ್ಧ ಸರಣಿ ಸೋತಿತ್ತು. ಇದ್ರಿಂದ ಗಂಭೀರ್ ತರಬೇತಿ, ಗೇಮ್‌ಪ್ಲಾನ್ ಬಗ್ಗೆ ಟೀಕೆಗಳು ಕೇಳಿಬಂದಿದ್ವು. 

Latest Videos

undefined

ಮತ್ತೊಂದು ಫಾರಿನ್ ಹುಡುಗಿ ಜತೆ ಹಾರ್ದಿಕ್ ಪಾಂಡ್ಯ ಡೇಟಿಂಗ್..! ಗ್ರೀಸ್‌ನಲ್ಲಿ ಜಾಸ್ಮಿನ್‌ ಜತೆ ಲವ್ವಿ-ಡವ್ವಿ..!

ಆದ್ರೀಗ, ಸಪೋರ್ಟಿಂಗ್ ಸ್ಟಾಫ್ ಆಯ್ಕೆಯಲ್ಲೂ ಗಂಭೀರ್ ವಿರುದ್ಧ ಅಪಸ್ವರ ಎದ್ದಿವೆ. ಡೆಲ್ಲಿ ಡ್ಯಾಶರ್ 2 ವರ್ಷದ ಹಿಂದೆ ಆಡಿದ್ದ ಮಾತುಗಳನ್ನ ಅಷ್ಟು ಬೇಗಾ ಮರೆತು ಬಿಟ್ರಾ? ಅನ್ನೋ ಪ್ರಶ್ನೆಗಳು ಮೂಡಿವೆ. ಅದಕ್ಕೆ ಕಾರಣ, ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಮಾರ್ನೆ  ಮಾರ್ಕೆಲ್.! 

 ಯೆಸ್, ಮಾರ್ನೆ  ಮಾರ್ಕೆಲ್ ಟೀಂ ಇಂಡಿಯಾದ ನೂತನ ಬೌಲಿಂಗ್ ಕೋಚ್ ಆಗಿ ನೇಮಕವಾಗಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಏಕದಿನ ಟೆಸ್ಟ್ ಸರಣಿ ವೇಳೆಗೆ ಮಾರ್ಕೆಲ್, ಟೀಂ ಇಂಡಿಯಾವನ್ನ ಸೇರಿಕೊಳ್ಳಲಿದ್ದಾರೆ. ಗಂಭೀರ್ ಮನವಿ ಮೇರೆಗೆ ಬಿಸಿಸಿಐ ಮಾರ್ಕೆಲ್‌ರನ್ನ ಬೌಲಿಂಗ್ ಕೋಚ್ ಆಗಿ ನೇಮಕ ಮಾಡಿದೆ. ಆದ್ರೆ, ಇದೇ ಗಂಭೀರ್ 2022ರಲ್ಲಿ ಫಾರಿನ್ ಕೋಚ್ಗಳ ವಿರುದ್ಧ ಮಾತನಾಡಿದ್ರು. ವಿದೇಶಿ ಕೋಚ್‌ಗಳು ಕೇವಲ ದುಡ್ಡು ಮಾಡಲು ಬರ್ತಾರೆ ಎಂದಿದ್ರು. ಅಲ್ಲದೇ ಭಾರತೀಯ ಕೋಚ್‌ಗಳ ಪರ ಬ್ಯಾಟ್  ಬೀಸಿದ್ರು. 

ಟೀಂ ಇಂಡಿಯಾಗೆ ವಿದೇಶಿ ಕೋಚ್‌ಗಳ ಅಗತ್ಯ ಇಲ್ಲ. ನಮ್ಮ ತಂಡವನ್ನ ಅವರು ನಾಶ ಮಾಡ್ತಾರೆ. ಭಾರತೀಯ ಕೋಚ್‌ಗಳಲ್ಲಿ ಯಾವ ಲೋಪವಿದೆ. ಅವರು ಮಾಡಿದ ತಪ್ಪೇನು..? ಕ್ರೀಡೆಯಲ್ಲಿ ಎಮೋಷನ್ ಅಡಗಿದೆ. ಭಾರತೀಯ ಕ್ರಿಕೆಟ್‌ಗೆ ಭಾವನಾತ್ಮಕವಾಗಿ ಕನೆಕ್ಟ್ ಆಗಿರುವವರು, ಭಾರತೀಯ ಕ್ರಿಕೆಟ್ ತಂಡವನ್ನ ಪ್ರತಿನಿಧಿಸಿದವರು ಮಾತ್ರ ಟೀಂ ಇಂಡಿಯಾ ಕೋಚ್ ಆಗಬೇಕು ಅಂತ ಗಂಭೀರ್ ಹೇಳಿದ್ರು. 

ಈ ವರ್ಷ ಭಾರತದಲ್ಲೇ ನಡೆಯುತ್ತಾ ಮಹಿಳಾ ಟಿ20 ವಿಶ್ವಕಪ್‌?: ಅಪ್‌ಡೇಟ್‌ ಕೊಟ್ಟ ಜಯ್ ಶಾ..!

ಆದ್ರೆ, ಅಂದು ವಿದೇಶಿ ಕೋಚ್‌ಗಳ ಬಗ್ಗೆ ಸಿಡಿದೆದ್ದವರೇ, ಇಂದು ಅವರ ಪರ ನಿಂತಿದ್ದಾರೆ. ಮಾರ್ಕೆಲ್ ಅಷ್ಟೇ ಅಲ್ಲ, ಅಸಿಸ್ಟೆಂಟ್ ಕೋಚ್ ಆಗಿ  ರಿಯಾನ್ ಟೆನ್ ಡೋಸ್ಚೇಟ್ ಅವ್ರ ನೇಮಕಕ್ಕೂ ಗಂಭೀರ್ ಕಾರಣವಾಗಿದ್ದಾರೆ. ವಿಶೇಷ ಅಂದ್ರೆ, ಐಪಿಎಲ್‌ನಲ್ಲಿ ಇವರಿಬ್ರು ಗಂಭೀರ್ ಜೊತೆ ಕೆಲಸ ಮಾಡಿದ್ರು. ಗಂಭೀರ್ ಲಖನೌ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿದ್ದಾಗ, ಮಾರ್ಕೆಲ್ ಬೌಲಿಂಗ್ ಕೋಚ್ ಆಗಿದ್ರು. ಡೋಸ್ಚೇಟ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಫೀಲ್ಡಿಂಗ್ ಕೋಚ್ ಆಗಿದ್ರು. 

ಭಾರತೀಯ ಕೋಚ್‌ಗಳಿದ್ದಾಗ ಅದ್ಭುತ ಪ್ರದರ್ಶನ..!

ಯೆಸ್, ಈ ಹಿಂದೆ ಭಾರತೀಯರು ಬೌಲಿಂಗ್ ಕೋಚ್ ಆಗಿದ್ದಾಗ, ಟೀಂ ಇಂಡಿಯಾ ಬೌಲರ್ಸ್ ಅದ್ಭುತ ಪ್ರದರ್ಶನ ನೀಡಿದ್ರು. ಭರತ್ ಅರುಣ್ ಕೋಚಿಂಗ್‌ನಲ್ಲಿ ನಮ್ಮ ಬೌಲರ್ಸ್ ವಿದೇಶದಲ್ಲಿ ಅಬ್ಬರಿಸಿದ್ರು. ಇನ್ನು ಪರಾಸ್ ಮಾಂಬ್ರೆ ಕೋಚಿಂಗ್ನಲ್ಲೂ ಮಿಂಚಿದ್ರು. 2023ರ ಏಕದಿನ ವಿಶ್ವಕಪ್ ಮತ್ತು ಇದೇ ವರ್ಷ ನಡೆದ ಟಿ20 ವಿಶ್ವಕಪ್ ಟೂರ್ನಿಗಳೇ ಅದಕ್ಕೆ ಸಾಕ್ಷಿ..! ಇಷ್ಟೆಲ್ಲಾ ಇದ್ರೂ, ಗಂಭೀರ್ ಫಾರಿನ್ ಕೋಚ್ ಮೊರೆ ಹೋಗಿದ್ಯಾಕೆ..? ಅನ್ನೋದೆ ದೊಡ್ಡ ಪ್ರಶ್ನೆ ಆಗಿದೆ.  

- ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್ 
 

click me!