ಪಾಕ್ ವಿರುದ್ಧದ ಪಂದ್ಯಕ್ಕಾಗಿ ಸ್ಪೆಷಲ್ ಗೇಮ್‌ಪ್ಲಾನ್! ತಂಡಕ್ಕಾಗಿ ತಮ್ಮ ಸ್ಥಾನ ತ್ಯಾಗ ಮಾಡ್ತಾರಾ ರೋಹಿತ್ ಶರ್ಮಾ..?

By Suvarna News  |  First Published Aug 31, 2023, 1:31 PM IST

ಕೆ.ಎಲ್ ರಾಹುಲ್ ಇನ್ನು ಫುಲ್ ಫಿಟ್ ಆಗಿಲ್ಲ. ಇದರಿಂದ ಟೂರ್ನಿಯ ಮೊದಲೆರಡು ಪಂದ್ಯಗಳನ್ನಾಡಲ್ಲ. ಇದನ್ನ ಈಗಾಗ್ಲೇ ತಂಡದ ಕೋಚ್ ರಾಹುಲ್ ದ್ರಾವಿಡ್ ಸ್ಟಷ್ಟಪಡಿಸಿದ್ದಾರೆ. ಇದರಿಂದ 5ನೇ ಕ್ರಮಾಂಕದಲ್ಲಿ ಇಶಾನ್ ಕಿಶನ್‌ರನ್ನು ಆಡಿಸಲಾಗುತ್ತೆ ಎನ್ನಲಾಗಿತ್ತು. ಆದ್ರೆ, ಆರಂಭಿಕ ಆಟಗಾರನಾಗಿ ಬಿಟ್ರೆ, ಬೇರೆ ಸ್ಲಾಟ್​ನಲ್ಲಿ ಇಶಾನ್ ಕಿಶನ್‌ ಸಕ್ಸಸ್ ಕಂಡಿಲ್ಲ. ಇದೇ ಕಾರಣದಿಂದ ಇಶಾನ್ ಓಪನರ್ ಆಗಿಯೇ  ಕಣಕ್ಕಿಳಿಸಲು ಪ್ಲಾನ್ ಮಾಡಲಾಗಿದೆ.


ಬೆಂಗಳೂರು(ಆ.31) ಏಷ್ಯಾಕಪ್ ಸಮರಕ್ಕೆ ಟೀಂ ಇಂಡಿಯಾ ಸಜ್ಜಾಗಿದೆ. ಕಳೆದ ವರ್ಷ ಏಷ್ಯಾಕಪ್‌ ಟೂರ್ನಿಯಲ್ಲಿ ಮಕಾಡೆ ಮಲಗಿದ್ದ ರೋಹಿತ್ ಪಡೆ, ಈ ಬಾರಿ ಕಪ್ ಎತ್ತಿ ಹಿಡಿಯಲೇಬೇಕು ಅಂತ ಪಣತೊಟ್ಟಿದೆ. ಇದಕ್ಕಾಗಿ ಸ್ಪೆಷಲ್ ಗೇಮ್‌ಪ್ಲಾನ್ ಮಾಡಿದೆ. ತಂಡದ ಗೆಲುವಿಗಾಗಿ ಕ್ಯಾಪ್ಟನ್ ರೋಹಿತ್ ಶರ್ಮಾ, ತಮ್ಮ ಸ್ಥಾನವನ್ನು ತ್ಯಾಗ ಮಾಡಲು ಮುಂದಾಗಿದ್ದಾರೆ. 

ಯೆಸ್, ಕೆ.ಎಲ್ ರಾಹುಲ್ ಇನ್ನು ಫುಲ್ ಫಿಟ್ ಆಗಿಲ್ಲ. ಇದರಿಂದ ಟೂರ್ನಿಯ ಮೊದಲೆರಡು ಪಂದ್ಯಗಳನ್ನಾಡಲ್ಲ. ಇದನ್ನ ಈಗಾಗ್ಲೇ ತಂಡದ ಕೋಚ್ ರಾಹುಲ್ ದ್ರಾವಿಡ್ ಸ್ಟಷ್ಟಪಡಿಸಿದ್ದಾರೆ. ಇದರಿಂದ 5ನೇ ಕ್ರಮಾಂಕದಲ್ಲಿ ಇಶಾನ್ ಕಿಶನ್‌ರನ್ನು ಆಡಿಸಲಾಗುತ್ತೆ ಎನ್ನಲಾಗಿತ್ತು. ಆದ್ರೆ, ಆರಂಭಿಕ ಆಟಗಾರನಾಗಿ ಬಿಟ್ರೆ, ಬೇರೆ ಸ್ಲಾಟ್​ನಲ್ಲಿ ಇಶಾನ್ ಕಿಶನ್‌ ಸಕ್ಸಸ್ ಕಂಡಿಲ್ಲ. ಇದೇ ಕಾರಣದಿಂದ ಇಶಾನ್ ಓಪನರ್ ಆಗಿಯೇ  ಕಣಕ್ಕಿಳಿಸಲು ಪ್ಲಾನ್ ಮಾಡಲಾಗಿದೆ. 

Latest Videos

undefined

5ನೇ ಕ್ರಮಾಂಕದಲ್ಲಿ  ಕಣಕ್ಕಿಳಿಯಲಿದ್ದಾರಾ ಹಿಟ್‌ಮ್ಯಾನ್..?

ಶುಭ್‌ಮನ್​ ಗಿಲ್ ಕೂಡ ಆರಂಭಿಕರಾಗಿ ಸೂಪರ್ ಟ್ರ್ಯಾಕ್​ ರೆಕಾರ್ಡ್ ಹೊಂದಿದ್ದಾರೆ. ಇದೇ ವರ್ಷ ಒಂದು ದ್ವಿಶತಕ ಮತ್ತು 2 ಶತಕ ಸಿಡಿಸಿದ್ದಾರೆ. ಹೀಗಾಗಿ ಗಿಲ್​ನ ಮಿಡಲ್​ ಆರ್ಡರ್‌ನಲ್ಲಿ ಆಡಿಸಲು ಸಾಧ್ಯವಿಲ್ಲ. ಈ ಎಲ್ಲಾ ಕಾರಣದಿಂದಾನೇ ರೋಹಿತ್ ಶರ್ಮಾ, ತಮ್ಮ ಸ್ಥಾನವನ್ನು ಇಶಾನ್‌ಗೆ ಬಿಟ್ಟು ಕೊಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಆ ಮೂಲಕ ತಾವು ಮಾಜಿ ಕ್ಯಾಪ್ಟನ್ ಧೋನಿಯಂತೆ 5ನೇ ಕ್ರಮಾಂಕದಲ್ಲಿ  ಸ್ಲಾಟ್​ನಲ್ಲಿ ರೋಹಿತ್ ಬ್ಯಾಟ್ ಬೀಸಲಿದ್ದಾರೆ ಅಂತ ಹೇಳಲಾಗ್ತಿದೆ.

Asia Cup 2023 ಶತಕ ಸಿಡಿಸಿ ಟೀಂ ಇಂಡಿಯಾಗೆ ಎಚ್ಚರಿಕೆ ಕೊಟ್ಟ ಪಾಕ್ ನಾಯಕ ಬಾಬರ್ ಅಜಂ..!  

ಧೋನಿ ತಮ್ಮ ಕರಿಯರ್‌ನಲ್ಲಿ ಒಟ್ಟು 83 ಇನ್ನಿಂಗ್ಸ್‌ಗಳಲ್ಲಿ ನಂ.5 ಫೈವ್ ಸ್ಲಾಟ್​ನಲ್ಲಿ ಆಡಿದ್ರು. ಕೊನೆಯವರೆಗೂ ಕ್ರೀಸ್​ನಲ್ಲಿ ನಿಂತು, ಫಿನಿಶರ್ ರೋಲ್‌ನ ಯಶಸ್ವಿಯಾಗಿ ನಿಭಾಯಿಸಿದ್ರು. ಈಗ ರೋಹಿತ್ ಕೂಡ ಕೂಡ ಧೋನಿಯಂತೆ ಫಿನಿಶರ್​ ಅಗಿ ಮಿಂಚಲು ರೆಡಿಯಾಗಿದ್ದಾರೆ. 

ಶಾಹೀನ್ ಅಫ್ರಿದಿ ದಾಳಿಯನ್ನ ಮಟ್ಟಹಾಕಲು ಸ್ಕೆಚ್..!

ಯೆಸ್, ರೋಹಿತ್​ ಶರ್ಮಾ ಮಿಡಲ್ ಆರ್ಡರ್​ನಲ್ಲಿ ಆಡೋದ್ರ ಹಿಂದೆ ಮತ್ತೊಂದು ಮಾಸ್ಟರ್ ಪ್ಲಾನ್ ಅಡಗಿದೆ. ಅದೇನಂದ್ರೆ, ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಪಾಕಿಸ್ತಾನ ವಿರದ್ಧ ಆಡಲಿದೆ. ಪಾಕ್  ಎಡಗೈ ವೇಗಿ ಶಾಹೀನ್ ಅಫ್ರಿದಿ, ಹೊಸ ಬಾಲ್​ನೊಂದಿಗೆ ಪವರ್ ​ಪ್ಲೇನಲ್ಲಿ ಅಬ್ಬರಿಸ್ತಾರೆ. ಎರಡೂ ಬದಿಯಲ್ಲಿ ಸ್ವಿಂಗ್ ಮಾಡೋ ಮೂಲಕ ಬಲಗೈ ಬ್ಯಾಟರ್‌ನ ಕಟ್ಟಿಹಾಕ್ತಾರೆ. ಇದರಿಂದ ಶಾಹೀನ್ ಶರ್ಮಾ ವಿರುದ್ಧ ರೈಟ್​ ಹ್ಯಾಂಡ್ ಮತ್ತು ಲೆಫ್ಟ್​ ಹ್ಯಾಂಡ್ ಕಾಂಬಿನೇಷನ್‌ ಕಣಕ್ಕಿಳಿಸಲು ಕೋಚ್ ರಾಹುಲ್ ದ್ರಾವಿಡ್ ಮತ್ತು ರೋಹಿತ್ ಶರ್ಮಾ ಸ್ಕೆಚ್ ಹಾಕಿದ್ದಾರೆ. 

ಏಷ್ಯಾಕಪ್‌ನಲ್ಲಿ ವಿರಾಟ್ ಕೊಹ್ಲಿ ವಿರಾಟ ರೂಪ..! ಏಷ್ಯಾಕಪ್‌ಗೂ ಮುನ್ನ ಎದುರಾಳಿ ಪಡೆಯಲ್ಲಿ ಢವ ಢವ

ಒಟ್ಟಿನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕಾಗಿ ಟೀಂ ಇಂಡಿಯಾ ಸ್ಪೆಷಲ್ ಗೇಮ್ ​ಪ್ಲಾನ್ ಮಾಡಿದೆ. ಆದ್ರೆ, ಈ ಪ್ಲಾನ್ ವರ್ಕೌಟ್ ಅಗುತ್ತಾ..? ರೋಹಿತ್ ಶರ್ಮಾ ನಿಜ್ವಾಗ್ಲೂ ಮಿಡಲ್​ ಆರ್ಡರ್​ನಲ್ಲಿ ಆಡ್ತಾರಾ..? ಅನ್ನೋದನ್ನ ಕಾದು ನೋಡ ಬೇಕಿದೆ.

click me!