ಇಂಡಿಯಾದ ಹಾರ್ದಿಕ್ ಪಾಂಡ್ಯಗೂ, ಸರ್ಬಿಯಾದ ನತಾಶಾಗೂ ಲವ್ ಆಗಿದ್ದೇಗೆ?

By Mahmad Rafik  |  First Published May 27, 2024, 11:13 AM IST

Hardik Pandya-Natasa Stankovic Love story: ಇಂಡಿಯಾದ ಹಾರ್ದಿಕ್ ಪಾಂಡ್ಯಗೂ ಮತ್ತು ಸರ್ಬಿಯಾದ ನತಾಶಾ ನಡುವೆ ಪ್ರೇಮದ ಅನುರಾಗ ಅರಳಿದ್ದು ಹೇಗೆ ಗೊತ್ತಾ? ಇಲ್ಲಿದೆ ನೋಡಿ ವಿವರ


ಬೆಂಗಳೂರು: ಈ ವರ್ಷ ಹಾರ್ದಿಕ್ ಪಾಂಡ್ಯಗೆ (Cricketer Hardik Pandya) ಅನ್‌ಲಕ್ಕಿ ಎಂದು ಅಭಿಮಾನಿಗಳು (Fans) ಮಾತನಾಡಿಕೊಳ್ಳುತ್ತಿದ್ದಾರೆ. ಕಾರಣ ಮುಂಬೈ ಇಂಡಿಯನ್ಸ್ ತಂಡದ (Mumbai Indians Team) ನಾಯಕನಾಗಿ ವಿಫಲವಾಗಿದ್ದರೆ, ಇತ್ತ ಖಾಸಗಿ ಬದುಕಿನಲ್ಲಿಯೂ ಎಲ್ಲವೂ ಸರಿ ಇಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಪತ್ನಿ ನತಾಶಾ ಸ್ಟಾಂಕೋವಿಕ್‌ (Natasa Stankovic) ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ತಮ್ಮ ಹೆಸರಿನ ಮುಂದೆ ಪಾಂಡ್ಯ ಸರ್‌ನೇಮ್ (Pandya Surname) ತೆಗೆದು ಹಾಕಿದ್ದಾರೆ. ಆದರೆ ಇದುವರೆಗೂ ಈ ಕುರಿತು ಯಾರೂ ಯಾವ ಹೇಳಿಕೆಯನ್ನು ನೀಡಿಲ್ಲ. ನತಾಶಾ ಸ್ಟಾಂಕೋವಿಕ್‌ ಸರ್ಬಿಯಾ (Serbia) ಮೂಲದವರು. ಇಂಡಿಯಾದ ಹಾರ್ದಿಕ್ ಪಾಂಡ್ಯಗೂ ಮತ್ತು ಸರ್ಬಿಯಾದ ನತಾಶಾ ನಡುವೆ ಪ್ರೇಮದ ಅನುರಾಗ (Hardik Pandya-Natasa Stankovic Love story) ಅರಳಿದ್ದು ಹೇಗೆ ಗೊತ್ತಾ? ಇಲ್ಲಿದೆ ನೋಡಿ ವಿವರ

ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ನೈಟ್‌ಕ್ಲಬ್‌ವೊಂದರಲ್ಲಿ ಭೇಟಿಯಾಗಿದ್ದರು. ಅಲ್ಲಿ ಇಬ್ಬರಿಗೂ ಪರಿಚಯವಾಗಿದೆ. ಪರಿಚಯ ಕೆಲವೇ ದಿನಗಳಲ್ಲಿ ಪ್ರೇಮವಾಗಿ ಬದಲಾಗಿತ್ತು. 2019ರಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ನಾನು ಬೆಸ್ಟ್ ಫ್ರೆಂಡ್ ಎಂದು ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಬರೆದುಕೊಳ್ಳುವ ಮೂಲಕ ಪ್ರೀತಿಯ ಸುಳಿವನ್ನು ಅಭಿಮಾನಿಗಳಿಗೆ ನೀಡಿದ್ದರು. 

Tap to resize

Latest Videos

ಇದಾಗಿ ಒಂದು ವರ್ಷದ ಕಳೆದ ನಂತರ ಹೊಸ ವರ್ಷದ ಮೊದಲ ದಿನ ಅಂದ್ರೆ 2020 ಜನವರಿ 1ರಂದು ನ್ಯೂ ಇಯರ್ ಪಾರ್ಟಿಯಲ್ಲಿ ಗೆಳತಿಯ ಮುಂದೆ ಮೊಳಕಾಲೂರಿ ಪ್ರಪೋಸ್ ಮಾಡಿದ್ದರು. 

ರೊಮ್ಯಾಂಟಿಕ್ ಸಾಲು ಮೂಲಕ ಪ್ರೀತಿ ವಿಷಯ ಬಹಿರಂಗ

ಪ್ರಪೋಸ್ ಮಾಡಿದ್ದ ಕ್ಷಣಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದ ಹಾರ್ದಿಕ್ ಪಾಂಡ್ಯ ರೊಮ್ಯಾಂಟಿಕ್‌ ಆಗಿ "ಮೇ ತೇರಾ, ತು ಮೇರಿ, ಜಾನೇ ಸಾರಾ ಹಿಂದೂಸ್ತಾನ್" (ನಾನು ನಿನ್ನವ, ನೀನು ನನ್ನವಳು, ಈ ವಿಷಯ ಹಿಂದೂಸ್ತಾನಕ್ಕೆ ಗೊತ್ತಾಗಲಿ) ಎಂಬ ಸಾಲು ಬರೆದುಕೊಂಡಿದ್ದರು. ಈ ಮೂಲಕ ನತಾಶಾ ಜೊತೆಗಿನ ಪ್ರೇಮ ಕಥನವನ್ನು ಜಗಜ್ಜಾಹೀರು ಮಾಡಿದ್ದರು. 

ಮದುವೆಗೂ ಮುನ್ನ ಅಂದ್ರೆ ಪ್ರಪೋಸ್ ಮಾಡಿದ ವರ್ಷ ಮೇ 31ರಂದು ನತಾಶಾ ಗರ್ಭಿಣಿ ಎಂಬ ವಿಷಯವನ್ನು ಪಾಂಡ್ಯ ಹೇಳಿಕೊಂಡಿದ್ದರು. ಜುಲೈ 30, 2020ರಂದು ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಜೀವನಕ್ಕೆ ಮುದ್ದಾದ ಗಂಡು ಮಗುವಿನ ಆಗಮನವಾಗಿತ್ತು.

ಹಾರ್ದಿಕ್ ಪಾಂಡ್ಯ ಪತ್ನಿ ನತಾಶಾ ನಟಿಸಿದ ಕನ್ನಡ ಸಿನಿಮಾ ಇದೇ ನೋಡಿ!

ಮಗನ ಆಗಮನವನ್ನು ಸಂತೋಷದಿಂದ ಹಾರ್ದಿಕ್ ಪಾಂಡ್ಯ ಎಲ್ಲರ ಜೊತೆ ಹಂಚಿಕೊಂಡಿದ್ದರು. ನಂತರ ಆಗಾಗ್ಗೆ ಕುಟುಂಬದ ಜೊತೆಗಿನ ಸುಂದರ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದು ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದರು. 

ಎರಡು ವರ್ಷದ ಮಗನ ಸಮ್ಮುಖದಲ್ಲಿ ಮದುವೆ

ನಾಲ್ಕು ವರ್ಷ ಜೊತೆಯಾಗಿ ಜೀವನ ನಡೆಸಿದ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಎರಡು ವರ್ಷದ ಮಗ ಆಗಸ್ತ್ಯನ ಸಮ್ಮುಖದಲ್ಲಿ 14 ಫೆಬ್ರವರಿ 2023ರಂದು ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ಉದಯಪುರದಲ್ಲಿ ಮದುವೆಯಾಗಿದ್ದರು. ಈ ಮದುವೆಗೆ ಎರಡು ಕುಟುಂಬಸ್ಥರು ಮತ್ತು ಆಪ್ತ ಬಳಗವನ್ನು ಮಾತ್ರ ಆಹ್ವಾನಿಸಲಾಗಿತ್ತು. ಪ್ರಮುಖ ಗಣ್ಯರಿಗೂ ಮದುವೆಗೆ ಆಹ್ವಾನ ನೀಡಲಾಗಿತ್ತು.

ಪತ್ನಿ ಹೇಳಿದ ಹಾಗೆ, 30 ಕೋಟಿಯ ಮನೆ ಸೇರಿ 90 ಕೋಟಿ ಆಸ್ತಿ ಹೊಂದಿರುವ ಹಾರ್ದಿಕ್‌ ಪಾಂಡ್ಯ ಬೀದಿಗೆ ಬೀಳ್ತಾರಾ?

ಡಿವೋರ್ಸ್ ವದಂತಿ ನಿಜನಾ?

ಇಬ್ಬರು ಡಿವೋರ್ಸ್ ಪಡೆಯಲಿದ್ದಾರೆ ಎಂಬ ಮಾತುಗಳು ಸೋಶಿಯಲ್ ಮೀಡಿಯಾಲ್ಲಿ ಕೇಳಿ ಬರುತ್ತಿವೆ. ಡಿವೋರ್ಸ್ ನೀಡಿದ್ರೆ ಹಾರ್ದಿಕ್ ಪತ್ನಿಗೆ ತನ್ನ ಆಸ್ತಿಯಲ್ಲಿ ಶೇ.70ರಷ್ಟು ಭಾಗವನ್ನು ನೀಡಬೇಕು ಎಂದು ಕೆಲವರು ಪೋಸ್ಟ್ ಮಾಡ್ತಿದ್ದರೆ, ಪಾಂಡ್ಯ ಅಭಿಮಾನಿಗಳು, ಅವರದ್ದು ಪಕ್ಕಾ ಗುಜರಾತಿ ತಲೆ, ಬಹುತೇಕ ಎಲ್ಲಾ ಆಸ್ತಿಯೂ ಹಾರ್ದಿಕ ಪಾಂಡ್ಯ ಅವರ ತಾಯಿ ಹೆಸರಿನಲ್ಲಿದೆ. ಡಿವೋರ್ಸ್ ಆದ್ರೆ ಯಾವುದೇ ಆಸ್ತಿ ನೀಡಬೇಕಿಲ್ಲ ಎಂದು ಅಭಿಮಾನಿಗಳು ತಮ್ಮ ತಮ್ಮಲ್ಲಿಯೇ ಚರ್ಚೆ ನಡೆಸುತ್ತಿದ್ದಾರೆ. 

click me!