Asianet Suvarna News Asianet Suvarna News

ಗೌತಮ್‌ ಗಂಭೀರ್‌ಗೆ ಖಾಲಿ ಚೆಕ್‌ ನೀಡಿ ಕೆಕೆಆರ್‌ಗೆ ಸ್ವಾಗತಿಸಿದ್ದ ಶಾರುಖ್‌? ಆದ್ರೆ ಒಂದು ಕಂಡೀಷನ್ ಹಾಕಿದ್ದ ಕಿಂಗ್ ಖಾನ್

ಕೆಕೆಆರ್‌ ಈ ಹಿಂದೆ 2 ಬಾರಿ ಐಪಿಎಲ್‌ ಚಾಂಪಿಯನ್‌ ಆಗಿತ್ತು. 2012, 2014ರಲ್ಲಿ ಟ್ರೋಫಿ ಎತ್ತಿಹಿಡಿದಾಗ ತಂಡದ ನಾಯಕರಾಗಿದ್ದವರು ಗೌತಮ್‌ ಗಂಭೀರ್‌. ಆ ನಂತರ ಗಂಭೀರ್‌ ತಂಡ ತೊರೆದು ಬಳಿಕ ನಿವೃತ್ತಿ ಪಡೆದಿದ್ದರು. 2024ರ ಐಪಿಎಲ್‌ಗೂ ಮುನ್ನ ಕೆಕೆಆರ್‌ ಗಂಭೀರ್‌ರನ್ನು ತಂಡಕ್ಕೆ ಮರಳಿ ಕರೆತಂದಿತು.

Shah Rukh Khan Offered Blank Cheque To Gautam Gambhir To Be At KKR For 10 Years Says report kvn
Author
First Published May 27, 2024, 12:18 PM IST

ನವದೆಹಲಿ: ಭಾರತ ತಂಡದ ನೂತನ ಕೋಚ್‌ ಹುದ್ದೆ ರೇಸ್‌ನಲ್ಲಿರುವ ಗೌತಮ್‌ ಗಂಭೀರ್‌ಗೆ 2024ರ ಐಪಿಎಲ್‌ಗೂ ಮುನ್ನ ತಂಡದ ಮೆಂಟರ್‌ ಆಗಿ ಸೇರ್ಪಡೆಗೊಳ್ಳಲು ಕೋಲ್ಕತಾ ನೈಟ್‌ರೈಡರ್ಸ್‌ ತಂಡದ ಮಾಲಿಕ ಶಾರುಖ್‌ ಖಾನ್‌ ಖಾಲಿ ಚೆಕ್‌ ನೀಡಿ ಸ್ವಾಗತಿಸಿದ್ದರು ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

ಗಂಭೀರ್‌ಗೆ ಮುಂದಿನ 10 ವರ್ಷಗಳ ಕಾಲ ತಂಡದೊಂದಿಗೆ ಇರುವಂತೆ ಶಾರುಖ್‌ ಕೇಳಿದ್ದರು ಎನ್ನಲಾಗಿದೆ. ಸದ್ಯ ಭಾರತ ತಂಡದ ಕೋಚ್‌ ಆಗಲು ಗಂಭೀರ್‌ ಹೆಸರು ಮುಂಚೂಣಿಯಲ್ಲಿದ್ದು, ಗಂಭೀರ್‌ರ ನಡೆ ಬಗ್ಗೆ ಕುತೂಹಲ ಮೂಡಿದೆ.

ಟ್ರೋಫಿ ಗೆಲ್ಲಿಸಲು ಗಂಭೀರ್‌ ಮತ್ತೆ ಬರಬೇಕಾಯಿತು!

ಚೆನ್ನೈ: ಕೆಕೆಆರ್‌ ಈ ಹಿಂದೆ 2 ಬಾರಿ ಐಪಿಎಲ್‌ ಚಾಂಪಿಯನ್‌ ಆಗಿತ್ತು. 2012, 2014ರಲ್ಲಿ ಟ್ರೋಫಿ ಎತ್ತಿಹಿಡಿದಾಗ ತಂಡದ ನಾಯಕರಾಗಿದ್ದವರು ಗೌತಮ್‌ ಗಂಭೀರ್‌. ಆ ನಂತರ ಗಂಭೀರ್‌ ತಂಡ ತೊರೆದು ಬಳಿಕ ನಿವೃತ್ತಿ ಪಡೆದಿದ್ದರು. 2024ರ ಐಪಿಎಲ್‌ಗೂ ಮುನ್ನ ಕೆಕೆಆರ್‌ ಗಂಭೀರ್‌ರನ್ನು ತಂಡಕ್ಕೆ ಮರಳಿ ಕರೆತಂದಿತು.

ತಂಡದ ಮಾರ್ಗದರ್ಶಕರಾಗಿ ನೇಮಕಗೊಂಡ ಗಂಭೀರ್‌, ಭಾರತೀಯ ದೇಸಿ ಕ್ರಿಕೆಟ್‌ನ ಅತ್ಯಂತ ಯಶಸ್ವಿ ಕೋಚ್‌ಗಳಲ್ಲಿ ಒಬ್ಬರಾದ ಚಂದ್ರಕಾಂತ್‌ ಪಂಡಿತ್‌ ಜೊತೆಗೂಡಿ ಕೆಕೆಆರ್‌ಗೆ 10 ವರ್ಷ ಬಳಿಕ ಮತ್ತೊಂದು ಐಪಿಎಲ್‌ ಟ್ರೋಫಿ ಗೆಲ್ಲಿಸಿಕೊಟ್ಟಿದ್ದಾರೆ.

ದಶಕದ ಬಳಿಕ ಕಪ್ ಬರ ನೀಗಿಸಿಕೊಂಡ ಕೆಕೆಆರ್

17ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಚಾಂಪಿಯನ್‌ ಆಗಿ ಕೋಲ್ಕತಾ ನೈಟ್‌ರೈಡರ್ಸ್‌ ಹೊರಹೊಮ್ಮಿದೆ. ಭಾನುವಾರ ಚೆನ್ನೈನ ಚೆಪಾಕ್‌ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಕೋಲ್ಕತಾ ತಂಡ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಕೆಕೆಆರ್‌ಗೆ ಇದು 3ನೇ ಐಪಿಎಲ್‌ ಟ್ರೋಫಿ. 2012, 2014ರಲ್ಲಿ ಪ್ರಶಸ್ತಿ ಗೆದ್ದಿದ್ದ ಕೋಲ್ಕತಾ, 10 ವರ್ಷಗಳ ಬಳಿಕ ಐಪಿಎಲ್‌ ಕಿರೀಟ ಮುಡಿಗೇರಿಸಿಕೊಂಡಿದೆ.

2012-2024ರ ಗೆಲುವಿನ ನಡುವೆ ಇದೆ ಸಾಮ್ಯತೆ

ಕೆಕೆಆರ್‌ನ 2012ರ ಹಾಗೂ 2024ರ ಟ್ರೋಫಿ ಗೆಲುವಿನ ನಡುವೆ ಹಲವು ಸಾಮ್ಯತೆಗಳಿವೆ. 2012ರಲ್ಲಿ ಕೆಕೆಆರ್‌ ಮುಂಬೈ ವಿರುದ್ಧ ಮುಂಬೈನಲ್ಲಿ ಕೊನೆ ಬಾರಿಗೆ ಗೆದ್ದಿತ್ತು. ಫೈನಲ್‌ ಚೆನ್ನೈನಲ್ಲಿ ನಡೆದಿತ್ತು. ಅದು ಕೆಕೆಆರ್‌ನ ನಾಯಕನಾಗಿ ಗಂಭೀರ್‌ಗೆ 2ನೇ ವರ್ಷ. 2024ರಲ್ಲಿ ಕೆಕೆಆರ್‌ ಮುಂಬೈನಲ್ಲಿ ಮುಂಬೈ ತಂಡವನ್ನು ಸೋಲಿಸಿತು. ಫೈನಲ್‌ ಚೆನ್ನೈನಲ್ಲೇ ನಡೆಯಿತು. ಕೆಕೆಆರ್‌ ನಾಯಕನಾಗಿ ಶ್ರೇಯಸ್‌ ಅಯ್ಯರ್‌ಗಿದು 2ನೇ ವರ್ಷ.

Latest Videos
Follow Us:
Download App:
  • android
  • ios