ಅಂದು ತ್ರಿಮೂರ್ತಿಗಳನ್ನ ಟಿ20 ತಂಡದಿಂದ ಹೊರಹಾಕಿಸಿದ್ದ ಪಾಂಡ್ಯ, ಇಂದು ವಿಶ್ವಕಪ್‌ನಿಂದಲೇ ಕಿಕೌಟ್..!

By Naveen Kodase  |  First Published Nov 6, 2023, 3:48 PM IST

ಹಾರ್ದಿಕ್ ಪಾಂಡ್ಯ ಏನು ಕರ್ಮ ಮಾಡಿದ್ರು ಅಂತ ಹೇಳೋಕೆ ಮುನ್ನ ಅವರು ವಿಶ್ವಕಪ್ನಿಂದ ಕಿಕೌಟ್ ಆದ ಬಗ್ಗೆ ಹೇಳ್ತೀವಿ ಕೇಳಿ. ಬಾಂಗ್ಲಾದೇಶ ವಿರುದ್ಧದ ಪಂದ್ಯದ ವೇಳೆ ಬೌಲಿಂಗ್ ಮಾಡುವಾಗ ಪಾದದ ನೋವಿಗೆ ತುತ್ತಾದ್ರು. ಕೇವಲ ಮೂರು ಬಾಲ್ ಹಾಕಿ ಮೈದಾನದಿಂದ ಹೊರನಡೆದ ಪಾಂಡ್ಯ, ಕಳೆದ ಮೂರು ಪಂದ್ಯಗಳನ್ನೂ ಆಡಿರಲಿಲ್ಲ.


ಬೆಂಗಳೂರು(ನ.06): ಮನುಷ್ಯನು ತಾನು ಹಿಂದೆ ಮಾಡಿರುವ ಪುಣ್ಯ ಪಾಪ ಕರ್ಮಫಲಗಳ ರೂಪದಲ್ಲಿ ಅವನಿಗೆ ಬರುವ ಸುಖ-ದುಃಖಗಳನ್ನು ಈ ಜನ್ಮದಲ್ಲಿ  ಅನುಭವಿಸುತ್ತಿರುತ್ತಾನೆ. ಅಯ್ಯೋ, ಕ್ರಿಕೆಟ್ನಲ್ಲಿ ಪಾಪ-ಪುಣ್ಯ, ಕರ್ಮ ಇಲ್ ಯಾಕ ಬಂದ್ವು ಅನ್ನಬೇಡಿ. ಇಲ್ಲೊಬ್ಬ ಭಾರತೀಯ ಕ್ರಿಕೆಟರ್, ವರ್ಷದ ಹಿಂದೆ ತಾನು ಮಾಡಿದ ಕರ್ಮವನ್ನ ಈಗ ವಿಶ್ವಕಪ್ನಲ್ಲಿ ಅನುಭವಿಸುವಂತಾಗಿದೆ. ಯಾರಾತ ಅನ್ನೋದನ್ನ ನೀವೇ ನೋಡಿ.

ಯೆಸ್, ಉಪ್ಪಿ-2 ಸಿನಿಮಾದ ಎಲ್ಲರ ಕಾಲೆಳೆಯುತ್ತೆ ಕಾಲ ಸಾಂಗ್ ಈಗ ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಗೆ ಸಖತ್ ಸ್ಯೂಟ್ ಆಗ್ತಿದೆ. ಕಾಲ ಅನ್ನೋದು ಎಲ್ಲರ ಕಾಲೆಳೆಯುತ್ತೆ ಅನ್ನೋದು ಸತ್ಯವಾಗಿದೆ. ಈಗ ಕಾಲ, ಪಾಂಡ್ಯರ ಕಾಲೆಳೆದಿದೆ. ಕರ್ಮ ರಿಟರ್ನ್ಸ್ ಅಂತರಲ್ಲ ಹಾಗೆ. ತಾವು ಮಾಡಿದ ಕರ್ಮವನ್ನ ತಾವೇ ಅನುಭವಿಸಬೇಕು.

Tap to resize

Latest Videos

ನನ್ನ ದಾಖಲೆ ಕೊಹ್ಲಿ-ರೋಹಿತ್ ಮುರಿಯುತ್ತಾರೆ; 2012ರಲ್ಲೇ ಸಲ್ಮಾನ್ ಖಾನ್‌ಗೆ ಭವಿಷ್ಯ ನುಡಿದಿದ್ದ ಸಚಿನ್!

ಹಾರ್ದಿಕ್ ಪಾಂಡ್ಯ ಏನು ಕರ್ಮ ಮಾಡಿದ್ರು ಅಂತ ಹೇಳೋಕೆ ಮುನ್ನ ಅವರು ವಿಶ್ವಕಪ್ನಿಂದ ಕಿಕೌಟ್ ಆದ ಬಗ್ಗೆ ಹೇಳ್ತೀವಿ ಕೇಳಿ. ಬಾಂಗ್ಲಾದೇಶ ವಿರುದ್ಧದ ಪಂದ್ಯದ ವೇಳೆ ಬೌಲಿಂಗ್ ಮಾಡುವಾಗ ಪಾದದ ನೋವಿಗೆ ತುತ್ತಾದ್ರು. ಕೇವಲ ಮೂರು ಬಾಲ್ ಹಾಕಿ ಮೈದಾನದಿಂದ ಹೊರನಡೆದ ಪಾಂಡ್ಯ, ಕಳೆದ ಮೂರು ಪಂದ್ಯಗಳನ್ನೂ ಆಡಿರಲಿಲ್ಲ. ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಫಿಟ್ನೆಸ್ ಪರೀಕ್ಷೆಗೆ ಒಳಗಾಗಿ ಫಿಟ್ನೆಸ್ ಸಾಧಿಸುವ ವಿಶ್ವಾಸದಲ್ಲಿದ್ದರು. ಆದ್ರೆ ಅದು ಸಾಧ್ಯವಾಗಿಲ್ಲ. ಈಗ ಅವರು ಇಡೀ ವಿಶ್ವಕಪ್ನಿಂದಲೇ ಕಿಕೌಟ್ ಆಗಿದ್ದಾರೆ. ಇದು ಟೀಂ ಇಂಡಿಯಾಗೆ ಹಿನ್ನಡೆಯಾದ್ರೂ ಆಶ್ಚರ್ಯವಿಲ್ಲ.

ಪಾಂಡ್ಯ ಬದಲು ಪ್ರಸಿದ್ದ್ಗೆ ಚಾನ್ಸ್, ರಾಹುಲ್ ವೈಸ್ ಕ್ಯಾಪ್ಟನ್:

ಹಾರ್ದಿಕ್ ಪಾಂಡ್ಯ ಬದಲು ಕರ್ನಾಟಕದ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಹಾಗೆ ಪಾಂಡ್ಯ ಬದಲು ಇನ್ನೊಬ್ಬ ಕನ್ನಡಿಗ ಕೆ ಎಲ್ ರಾಹುಲ್, ಏಕದಿನ ತಂಡದ ವೈಸ್ ಕ್ಯಾಪ್ಟನ್ ಸಹ ಆಗಿದ್ದಾರೆ. ಪಾಂಡ್ಯ ಇಂಜುರಿಯಿಂದ ಇಬ್ಬರು ಕನ್ನಡಿಗರಿಗೆ ಲಕ್ ಹೊಡೆದಿದೆ.

2022ರ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಹೀನಾಯವಾಗಿ ಸೋತ್ಮೇಲೆ ಭಾರತ ಟಿ20 ತಂಡದಲ್ಲಿ ಸಾಕಷ್ಟು ಬದಲಾವಣೆಗಳಾದ್ವು. ಟಿ20 ಟೀಮ್ನಿಂದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅವರನ್ನ ಕಿಕೌಟ್ ಮಾಡಲಾಯ್ತು. ಹಾರ್ದಿಕ್ ಪಾಂಡ್ಯ ಏಕಾಏಕಿ ಕ್ಯಾಪ್ಟನ್ ಆದ್ರು. ಈ ತ್ರಿಮೂರ್ತಿಗಳನ್ನ ಟಿ20 ಟೀಮ್ನಿಂದ ಕಿಕೌಟ್ ಮಾಡಿಸಿದ್ದು ಪಾಂಡ್ಯ ಅನ್ನೋದು ಗುಟ್ಟಾಗಿ ಉಳಿದಿಲ್ಲ. 

ಬರ್ತ್‌ ಡೇ ಬಾಯ್ ಕೊಹ್ಲಿಗೆ ಸೆಂಚುರಿ ಸಂಭ್ರಮ; ಈಡನ್‌ ಗಾರ್ಡನ್ಸ್‌ನಲ್ಲಿ ತೆಂಡುಲ್ಕರ್ ದಾಖಲೆ ಸರಿಸಮ..!

ಯಂಗ್ ಇಂಡಿಯಾ ಕಟ್ಟಿಕೊಂಡು 2024ರ ಟಿ20 ವಿಶ್ವಕಪ್ ಗೆಲ್ಲುತ್ತೇನೆ. ಟಿ20 ತಂಡದಲ್ಲಿ ಸೀನಿಯರ್ಸ್ಗೆ ಸ್ಥಾನ ನೀಡ್ಬೇಡಿ ಅಂತ ಹೇಳಿ ಮೂವರಿಗೆ ಕೊಕ್ ಕೊಡಿಸಿ ಕ್ಯಾಪ್ಟನ್ ಆಗಿದ್ದರು ಪಾಂಡ್ಯ. ಈಗಲೂ ಅವರೇ ಟಿ20 ಕ್ಯಾಪ್ಟನ್. ಆದ್ರೆ ಈಗ ನೋಡಿ. ಅವರು ಮಾಡಿದ ಕರ್ಮ ಅವರೇ ಅನುಭವಿಸುವಂತಾಗಿದೆ. ತ್ರಿಮೂರ್ತಿಗಳು ಮುಂದಿನ ವರ್ಷದ ಟಿ20 ವಿಶ್ವಕಪ್ ಆಡದಂತೆ ಅಡ್ಡಗಾಲಾಗಿ ನಿಂತಿರುವ ಪಾಂಡ್ಯ, ಈಗ ಏಕದಿನ ವಿಶ್ವಕಪ್ ಪೂರ್ತಿ ಆಡದೆಯೇ ಹೊರ ನಡೆದಿದ್ದಾರೆ. ಇದೆ ಅಲ್ವಾ ಕರ್ಮ ರಿಟರ್ನ್ಸ್ ಅಂದ್ರೆ.

ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್, ಸುವರ್ಣ ನ್ಯೂಸ್

click me!