ವಿರಾಟ್ ಕೊಹ್ಲಿ 49ನೇ ಏಕದಿನ ಶತಕ ಸಿಡಿಸಿ ಸಚಿನ್ ತೆಂಡೂಲ್ಕರ್ ದಾಖಲೆ ಸರಿಗಟ್ಟಿದ್ದಾರೆ. ಇದೀಗ ಬೆಂಗಳೂರಿನಲ್ಲಿ ದಾಖಲೆ ಬ್ರೇಕ್ ಮಾಡಬಲ್ಲ ಸಾಧ್ಯತೆಗಳು ದಟ್ಟವಾಗಿದೆ. ಆದರೆ 2012ರಲ್ಲೇ ಸಚಿನ್ ತೆಂಡೂಲ್ಕರ್ ತಮ್ಮ ದಾಖಲೆಯನ್ನು ಕೊಹ್ಲಿ,ರೋಹಿತ್ ಬ್ರೇಕ್ ಮಾಡುತ್ತಾರೆ ಎಂದು ಸಲ್ಮಾನ್ ಖಾನ್ ಮುಂದೆ ಭವಿಷ್ಯ ನುಡಿದಿದ್ದರು.
ಮುಂಬೈ(ನ.06) ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ದಿಟ್ಟ ಪ್ರದರ್ಶನದ ಮೂಲಕ 8 ಗೆಲುವು ದಾಖಲಿಸಿದೆ. ಕಳೆದ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ದ ದಾಖಲೆ ಗೆಲುವು ಕಂಡಿದೆ. ಇದರ ಜೊತೆಗೆ ವಿರಾಟ್ ಕೊಹ್ಲಿ 49ನೇ ಶತಕ ಸಿಡಿಸಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಸೆಂಚುರಿ ದಾಖಲೆ ಸರಿಗಟ್ಟಿದ್ದಾರೆ. ಕೊಹ್ಲಿ ಸಾಧನೆಗೆ ಪ್ರಶಂಸೆಗಳ ಸುರಿಮಳೆ ವ್ಯಕ್ತವಾಗಿದೆ. ಇತ್ತ ಸಚಿನ್ ತೆಂಡೂಲ್ಕರ್ ಅಭಿನಂದನೆ ಸಲ್ಲಿಸಿದ್ದಾರೆ. ಇದೇ ವೇಳೆ ಶೀಘ್ರದಲ್ಲೇ ದಾಖಲೆ ಮುರಿಯುವಂತಾಗಲಿ ಎಂದು ಹಾರೈಸಿದ್ದಾರೆ. ವಿಶೇಷ ಅಂದರೆ ತನ್ನ ರೆಕಾರ್ಡ್‌ನ್ನು ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಬ್ರೇಕ್ ಮಾಡುತ್ತಾರೆ ಎಂದು 2012ರಲ್ಲೇ ಸಚಿನ್ ತೆಂಡೂಲ್ಕರ್ ಭವಿಷ್ಯ ನುಡಿದಿದ್ದರು. ಬಾಲಿವುಡ್ ನಟ ಸಲ್ಮಾನ್ ಖಾನ್ ಕೇಳಿದ ಪ್ರಶ್ನೆಗೆ ಬರೋಬ್ಬರಿ ದಶಕಗಳ ಹಿಂದೆ ಸಚಿನ್ ನುಡಿದಿದ್ದ ಭವಿಷ್ಯ ನಿಜವಾಗುತ್ತಿದೆ.
2012ರಲ್ಲಿ ಸಚಿನ್ ತೆಂಡೂಲ್ಕರ್ 49ನೇ ಏಕದಿನ ಶತಕ ಸಿಡಿಸಿ ಮಿಂಚಿದ್ದರು. ಇದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ 100ನೇ ಶತಕ ಸಾಧನೆಯಾಗಿತ್ತು. ಕೆಲ ತಿಂಗಳ ಬಳಿಕ ಸಚಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಸಚಿನ್ ಸಾಧನೆಯನ್ನು ಅಭಿನಂದಿಸಲು ಉದ್ಯಮಿ ಮುಕೇಶ್ ಅಂಬಾನಿ ಅದ್ಧೂರಿ ಕಾರ್ಯಕ್ರಮ ಆಯೋಜಿಸಿದ್ದರು.
ಬರ್ತ್ ಡೇ ಬಾಯ್ ಕೊಹ್ಲಿಗೆ ಸೆಂಚುರಿ ಸಂಭ್ರಮ; ಈಡನ್ ಗಾರ್ಡನ್ಸ್‌ನಲ್ಲಿ ತೆಂಡುಲ್ಕರ್ ದಾಖಲೆ ಸರಿಸಮ..!
ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕ್ರಿಕೆಟಿಗ್ ದಿಗ್ಗಜರು, ಬಾಲಿವುಡ್ ನಟ ನಟಿಯರು ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಬಹುತೇಕ ದಿಗ್ಗಜರು ಸಚಿನ್ ಸಾಧನೆಯನ್ನು ಕೊಂಡಾಡಿದ್ದರು. ಬಾಲಿವುಡ್ ನಟ ಸಲ್ಮಾನ್ ಖಾನ ಮಾತನಾಡುತ್ತಾ ಸಚಿನ್ ಗುಣಗಾನ ಮಾಡಿದ್ದರು. ಇದೇ ವೇಳೆ ಸಚಿನ್ ದಾಖಲೆಯನ್ನು ಯಾರೂ ಬ್ರೇಕ್ ಮಾಡಲು ಸಾಧ್ಯ ಎಂದು ನನಗೆ ಅನಿಸುತ್ತಿಲ್ಲ ಎಂದಿದ್ದರು. ಇದೇ ಪ್ರಶ್ನೆಯನ್ನು ಸಲ್ಮಾನ್ ಖುದ್ದು ಸಚಿನ್ ಬಳಿಯೇ ಕೇಳಿದ್ದರು.
Sachin Tendulkar had predicted this way back in 2012 about and 🔥🏏
- God of Cricket for a reason 💙🙏🏻 pic.twitter.com/WGzCui4clN
ಈ ವೇಳೆ ಸಚಿನ್ ನನ್ನ ರೆಕಾರ್ಡ್ ಮುರಿಯುಲು ಸಾಧ್ಯ ಎಂದು ಉತ್ತರ ನೀಡಿದ್ದರು. ತಕ್ಷಣ ಪ್ರತಿಕ್ರಿಯೆ ನೀಡಿದ ಸಲ್ಮಾನ್ ಖಾನ್, ಚಾನ್ಸೇ ಇಲ್ಲ ಎಂದಿದ್ದರು. ಆದರೆ ಸಚಿನ್ ತೆಂಡೂಲ್ಕರ್, ಸಾಧ್ಯವಿದೆ. ಇದೇ ಕೋಣೆಯಲ್ಲಿ ಕುಳಿತ ಯುವ ಕ್ರಿಕೆಟಿಗರು ನನ್ನ ರೆಕಾರ್ಡ್ ಮುರಿಯುತ್ತಾರೆ ಎಂದಿದ್ದರು. ಮತ್ತೊಂದು ಪ್ರಶ್ನೆ ಕೇಳಿದ ಸಲ್ಮಾನ್ ಖಾನ್, ಅವರು ಯಾರು ಎಂದು ಕೇಳಿದ್ದರು. ಈ ವೇಳೆ ಮರುಕ್ಷಣ ಯೋಚನೆ ಮಾಡದೆ ಸಚಿನ್ ತೆಂಡೂಲ್ಕರ್ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ನನ್ನ ದಾಖಲೆ ಮುರಿಯುತ್ತಾರೆ ಎಂದಿದ್ದರು.
ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದ್ದ ಮತ್ತೊಂದು ಸಾರ್ವಕಾಲಿಕ ದಾಖಲೆ ಮುರಿದ ವಿರಾಟ್ ಕೊಹ್ಲಿ..!
2012ರಲ್ಲಿ ಸಚಿನ್ ತೆಂಡೂಲ್ಕರ್ ಈ ಭವಿಷ್ಯ ನುಡಿದಿದ್ದರು. ಇದೀಗ ಈ ಭವಿಷ್ಯ ನಿಜವಾಗುತ್ತಿದೆ.ಏಕದಿನದಲ್ಲಿ ಗರಿಷ್ಠ ಸೆಂಚುರಿ ದಾಖಲೆ ಮುರಿಯಲು ಕೊಹ್ಲಿಗೆ ಇನ್ನೊಂದು ಶತಕ ಮಾತ್ರ ಸಾಕು.