ಬಿಗ್‌ಬಾಸ್ 17ರ ವಿನ್ನರ್ ಮುನಾವರ್ ಫಾರೂಖಿ ಅದ್ಭುತ ಬೌಲಿಂಗ್ ಮೂಲಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ವಿಕೆಟ್ ಕಬಳಿಸಿದ್ದಾರೆ. ಸಚಿನ್ ಔಟಾಗುತ್ತಿದ್ದಂತೆ ಇಡೀ ಕ್ರೀಡಾಂಗಣವೇ ಸ್ತಬ್ಧವಾಗಿದೆ.
ಮುಂಬೈ(ಮಾ.06) ಸಚಿನ್ ತೆಂಡೂಲ್ಕರ್ ಬ್ಯಾಟಿಂಗ್ ಕಣ್ತುಂಬಿಕೊಳ್ಳಲು ಕ್ರೀಡಾಂಗಣ ಭರ್ತಿಯಾಗಿತ್ತು. ಎಲ್ಲೆಡೆ ಸಚಿನ್ ಸಚಿನ್ ಘೋಷಣೆ ಮೊಳಗಿತ್ತು. ಆದರೆ ಬಿಗ್‌ಬಾಸ್ 17ರ ವಿನ್ನರ್ ಮುನಾವರ್ ಫಾರೂಖಿ ಅದ್ಭುತ ಬೌಲಿಂಗ್ ದಾಳಿಗೆ ಸಚಿನ್ ವಿಕೆಟ್ ಕೈಚೆಲ್ಲಿದ್ದಾರೆ. ಸಚಿನ್ ವಿಕೆಟ್ ಪತನವಾಗುತ್ತಿದ್ದಂತೆ ಇಡೀ ಕ್ರೀಡಾಂಗಣವೇ ಸ್ತಬ್ಧವಾಗಿದೆ. ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿನ ಈ ಹೋರಾಟದ ವಿಡಿಯೋ ಭಾರಿ ವೈರಲ್ ಆಗಿದೆ.
ಮುಂಬೈನಲ್ಲಿ ಆಯೋಜನೆಗೊಂಡಿರುವ ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ ಟೂರ್ನಿ ಇದೀಗ ಭಾರಿ ಕುತೂಹಲ ಕೆರಳಿಸಿದೆ. ನಾಟು ನಾಟು ಹಾಡಿಗೆ ರಾಮಚರಣ ಜೊತೆ ಸಚಿನ್ ತೆಂಡೂಲ್ಕರ್ ಸೇರಿದಂತೆ ಕ್ರಿಕೆಟಿಗರು ಹೆಜ್ಜೆ ಹಾಕಿದ ಬಳಿಕ ಫ್ರೆಂಡ್ಲಿ ಮ್ಯಾಚ್ ಆಯೋಜಿಸಲಾಗಿತ್ತು. ಟೂರ್ನಿ ಆರಂಭಕ್ಕೂ ಮುನ್ನ ಆಯೋಜಿಸಿದ್ದ ಈ ಪಂದ್ಯದಲ್ಲಿ ಮಾಸ್ಟರ್ 11 ಹಾಗೂ ಖಿಲಾಡಿ 11 ತಂಡಗಳು ಮುಖಾಮುಖಿಯಾಗಿತ್ತು.
undefined
ಸಚಿನ್ ತೆಂಡೂಲ್ಕರ್ ಅಂಜಲಿ ಜೋಡಿ ವಯಸ್ಸು ರಿವರ್ಸ್ ಗೇರ್ ಅಲ್ಲಿ ಹೋಗ್ತಿದ್ಯಾ?
ಮಾಸ್ಟರ್ 11 ತಂಡದಲ್ಲಿ ಸಚಿನ್ ತೆಂಡೂಲ್ಕರ್ ಸೇರಿದಂತೆ ಮಾಜಿ ದಿಗ್ಗಜ ಕ್ರಿಕೆಟಿಗರ ದಂಡಿದ್ದರೆ, ಇತ್ತ ಖಿಲಾಡಿ 11 ತಂಡದಲ್ಲಿ ಸಿನಿ, ಕಿರುತೆರೆ ಕ್ಷೇತ್ರದ ಹಲವರಿದ್ದರು. ಸಚಿನ್ ತೆಂಡೂಲ್ಕರ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ. 16 ಎಸೆತದಲ್ಲಿ ಸಚಿನ್ 30 ರನ್ ಸಿಡಿಸಿದ್ದರು. ಆದರೆ ಮುನಾವರ್ ಫಾರೂಖಿ ಎಸೆತದಲ್ಲಿ ಸಿಕ್ಸರ್ ಸಿಡಿಸಿಲು ಯತ್ನಿಸಿದ ಸಚಿನ್ ತೆಂಡೂಲ್ಕರ್ ಶಾರ್ಟ್ ಥರ್ಡ್ ಮ್ಯಾನ್‌ಗೆ ಕ್ಯಾಚ್ ನೀಡಿ ವಿಕೆಟ್ ಕೈಚೆಲ್ಲಿದರು.ಸಚಿನ್ ವಿಕೆಟ್ ಪತನ ಕ್ರೀಡಾಂಗಣವನ್ನೇ ಸ್ತಬ್ಧ ಮಾಡಿತ್ತು.
Can't believe Sachin sir is playing cricket with this people 😭🤝 pic.twitter.com/dW1gsrzH4R
— Sportstalker._ (@C13RajuSingh)
ಸಚಿನ್ ವಿಕೆಟ್ ಪತನದ ಬಳಿಕ ಇರ್ಫಾನ್ ಪಠಾಣ್, ಯೂಸುಫ್ ಪಠಾಣ್ ಅಬ್ಬರಿಸಿದರು. ಇರ್ಫಾನ್ ಪಠಾಣ್ 32 ರನ್ ಸಿಡಿಸಿದ್ದರು. 10 ಓವರ್ ಪಂದ್ಯದಲ್ಲಿ ಮಾಸ್ಟರ್ 11 ತಂಡ ಭರ್ಜರಿ ಗೆಲುವು ದಾಖಲಿಸಿತ್ತು. ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಖಿಲಾಡಿ 11 ತಂಡದ ಮುನಾವರ್ ಬ್ಯಾಟಿಂಗ್‌ನಲ್ಲೂ ಅಬ್ಬರಿಸಿದರು. 26 ಎಸೆತದಲ್ಲಿ 26 ರನ್ ಸಿಡಿಸಿದರು. ಆದರೆ ಗೆಲುವು ಸಿಗಲಿಲ್ಲ.
ಕಾಶ್ಮೀರದಲ್ಲಿ ಗಲ್ಲಿ ಕ್ರಿಕೆಟ್ ಆಡಿದ ಸಚಿನ್ ತೆಂಡುಲ್ಕರ್; ಮಾಸ್ಟರ್ ಬ್ಲಾಸ್ಟರ್ ಸಿಂಪ್ಲಿಸಿಟಿಗೆ ನೆಟ್ಟಿಗರು ಫಿದಾ
ಇಂದಿನಿಂದ(ಮಾ.06) ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಗೊಂಡಿದೆ. ಮುಂಬೈನಲ್ಲಿ ಆಯೋಜನೆಗೊಂಡಿರುವ ಈ 10 ಓವರ್‌ಗಳ ಟೂರ್ನಿ ಮಾರ್ಚ್ 15ರ ಫೈನಲ್ ಪಂದ್ಯದೊಂದಿಗೆ ಅಂತ್ಯವಾಗಲಿದೆ.