ಹೊಸ ಅವತಾರದಲ್ಲಿ ಕಾಣಿಸಿಕೊಂಡು ಐಪಿಎಲ್‌ಗೆ ಕಿಚ್ಚು ಹಚ್ಚಿದ ಧೋನಿ!

Published : Mar 06, 2024, 06:26 PM IST
ಹೊಸ ಅವತಾರದಲ್ಲಿ ಕಾಣಿಸಿಕೊಂಡು ಐಪಿಎಲ್‌ಗೆ ಕಿಚ್ಚು ಹಚ್ಚಿದ ಧೋನಿ!

ಸಾರಾಂಶ

ಐಪಿಎಲ್ 2024 ಟೂರ್ನಿ ಆರಂಭಕ್ಕೆ ಕೆಲ ದಿನಗಳು ಮಾತ್ರ ಬಾಕಿ. ದಿಗ್ಗಜ ಕ್ರಿಕೆಟಿಗರನ್ನು ಮೈದಾನದಲ್ಲಿ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಈ ಪೈಕಿ ಎಂಎಸ್ ಧೋನಿ ಮೊದಲ ಸ್ಥಾನದಲ್ಲಿದ್ದಾರೆ. ಟೂರ್ನಿ ಆರಂಭಕ್ಕೂ ಮುನ್ನ ಧೋನಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಅಜ್ಜನಾಗಿ ಕಾಣಿಸಿಕೊಂಡ ಧೋನಿ ಐಪಿಎಲ್ ಟೂರ್ನಿಗೆ ಕಿಚ್ಚು ಹಚ್ಚಿದ್ದಾರೆ. ಈ ವಿಡಿಯೋ ಭಾರಿ ವೈರಲ್ ಆಗಿದೆ.

ಮುಂಬೈ(ಮಾ.06) ಐಪಿಎಲ್ ಟೂರ್ನಿಗೆ ಕೌಂಟ್‌ಡೌನ್ ಶುರುವಾಗಿದೆ. ಆರ್‌ಸಿಬಿ, ಸಿಎಸ್‌ಕೆ, ಮುಂಬೈ ಇಂಡಿಯನ್ಸ್ ಸೇರಿದಂತೆ 10 ತಂಡಗಳು ಭರ್ಜರಿ ತಯಾರಿ ನಡೆಸುತ್ತಿದೆ.ಇತ್ತ ಎಂಎಸ್ ಧೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ದಿಗ್ಗಜ ಕ್ರಿಕೆಟಿಗರ ಹೊಡಿ ಬಡಿ ಆಟ ನೋಡಲು ಅಭಿಮಾನಿಗಳು ಕಾದು ಕುಳಿತಿದ್ದಾರೆ. ಎಂಎಸ್ ಧೋನಿಗೆ ಇದು ಕೊನೆಯ ಟೂರ್ನಿ ಎಂದೇ ಹೇಳಲಾಗುತ್ತಿದೆ. ಈ ಎಲ್ಲಾ ಕುತೂಹಲ ನಡುವೆ ಎಂಎಸ್ ಧೋನಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಐಪಿಎಲ್ 2024ರ ಟೂರ್ನಿಯ ಪ್ರೋಮೋ ಬಿಡುಗಡೆಯಾಗಿದೆ. ಜಿಯೋ ಸಿನಿಮಾ ಪ್ರೋಮೋದಲ್ಲಿ ಧೋನಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಜ್ಜ ಹಾಗೂ ಮೊಮ್ಮಗನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಪ್ರೋಮೊ ಇದೀಗ ಸಂಚಲನ ಸೃಷ್ಟಿಸಿದೆ.

 ಎಂಎಸ್ ಧೋನಿ ಅಜ್ಜ ಮತ್ತು ಮೊಮ್ಮಗನ ವಿಶಿಷ್ಟ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಮೊಮ್ಮಗನು ತನ್ನ ಫೋನ್ ಮೂಲಕ ಐಪಿಎಲ್ ಪಂದ್ಯ ವೀಕ್ಷಿಸುತ್ತಿರುವ ದೃಶ್ಯದೊಂದಿಗೆ ಆರಂಭಗೊಳ್ಳುತ್ತದೆ, ನಂತರ ತಾತ ಕೂಡ ತನ್ನ ಫೋನ್‌ನಲ್ಲಿ ಅದೇ ಪಂದ್ಯವನ್ನು ನೋಡುತ್ತಾ ತಲ್ಲೀನರಾಗಿರುವ ದೃಶ್ಯವಿದೆ. ಇದೇ ವೇಳೆ ಅಜ್ಜನಿಗೆ ದಿಢೀರ್ ಎದೆ ನೋವು ಕಾಣಿಸಿಕೊಳ್ಳುತ್ತದೆ.  ಆಂಬ್ಯುಲೆನ್ಸ್‌ ಮೂಲಕ ಆಸ್ಪತ್ರೆ ಕಡೆಗೆ ಸಾಗಿದಾಗ ದಾರಿಯಲ್ಲೂ ಅಜ್ಜ ಹಾಗೂ ಮೊಮ್ಮದ ಐಪಿಎಲ್ ಮ್ಯಾಚ್ ನೋಡುತ್ತಲೆ ಸಾಗುತ್ತಾರೆ. ಜೊತೆಗೆ ಆ್ಯಂಬುಲೆನ್ಸ್‌ನಲ್ಲಿರುವ ವೈದ್ಯಕೀಯ ಸಿಬ್ಬಂದಿ ಕೂಡ ಐಪಿಎಲ್ ಪಂದ್ಯ ನೋಡುತ್ತೂ ಬ್ಯೂಸಿಯಾಗಿದ್ದಾರೆ. ಅಜ್ಜ ತೇಗು ತೇಗೆದ ಬಳಿದ ಎದೆನೋವಲ್ಲ, ಗ್ಯಾಸ್ ಎಂದು ಹೇಳುವ ಈ ದೃಶ್ಯ ಐಪಿಎಲ್ ಟೂರ್ನಿಯ ರೋಚಕತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಹೊಸ ಆವೃತ್ತಿಯಲ್ಲಿ ಹೊಸ ಜವಾಬ್ದಾರಿ, ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಎಂಎಸ್ ಧೋನಿ!

2024 ರ ಮಾರ್ಚ್ 22 ರಂದು ಎಂ.ಎಸ್‌. ಧೋನಿಯ ಚೆನ್ನೈ ಸೂಪರ್ ಕಿಂಗ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜೊತೆ ಮುಖಾಮುಖಿಯಾಗಲಿದೆ. ಇದರೊಂದಿಗೆ  ಜಿಯೋಸಿನೆಮಾದಲ್ಲಿ ದಕ್ಷಿಣದ ಡರ್ಬಿಯೊಂದಿಗೆ  ಟಾಟಾ ಐಪಿಎಲ್‌ 2024ಪ್ರಾರಂಭವಾಗುತ್ತದೆ. ವೀಕ್ಷಕರು 12 ಭಾಷೆಗಳಲ್ಲಿ ಹೊಸ ಸೀಸನ್ ಅನ್ನು 4K ನಲ್ಲಿ ಉಚಿತವಾಗಿ ವೀಕ್ಷಿಸಬಹುದಾಗಿದೆ. ಇದೇ ಮೊದಲ ಬಾರಿಗೆ ಹರಿಯಾಣ ಭಾಷೆಯನ್ನು ಕೂಡ ಪರಿಚಯಿಸಲಾಗುತ್ತಿದೆ. ಇದು ಬಹು-ಹೈಪ್ಡ್ ಹೀರೋ ಕ್ಯಾಮ್ ಸೇರಿದಂತೆ ಬಹು-ಕ್ಯಾಮ್ ಆಯ್ಕೆಗಳು ಮತ್ತು ಜೀತೋ ಧನ್ ಧನಾ ಧನ್ ಸೇರಿದಂತೆ ಇನ್ನೂ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರೋಹಿತ್ ಶರ್ಮಾ ಪದಚ್ಯುತಿ ರಹಸ್ಯ: ಗೌತಮ್ ಗಂಭೀರ್ ಕೈವಾಡದ ಶಂಕೆ ವ್ಯಕ್ತಪಡಿಸಿದ ಮಾಜಿ ಕ್ರಿಕೆಟರ್!
'ಅವನ ವಿಷಯದಲ್ಲಿ ಮಾತ್ರ ಯಾಕೆ ಈ ತಾರತಮ್ಯ?' ಈ ಆಟಗಾರನನ್ನು ಕೈಬಿಟ್ಟಿದ್ದಕ್ಕೆ ಗಂಭೀರ್ ವಿರುದ್ಧ ಅಶ್ವಿನ್ ಕಿಡಿ!