
ಜೈಪುರ್(ಏ.13) ರಾಜಸ್ಥಾನ ರಾಯಲ್ಸ್ ಹಾಗೂ ಆರ್‌ಸಿಬಿ ನಡುವಿನ ಐಪಿಎಲ್ 2025 ಪಂದ್ಯವನ್ನು ಬೆಂಗಳೂರು ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಈ ಪಂದ್ಯದಲ್ಲಿ ಆರ್‌ಸಿಬಿ 9 ವಿಕೆಟ್ ಗೆಲುವು ದಾಖಲಿಸಿದೆ. ಆದರೆ ಸಂಭ್ರಮದ ನಡುವೆ ಅಭಿಮಾನಿಗಳ ಆತಂಕವೂ ಹೆಚ್ಚಾಗಿತ್ತು. ಕಾರಣ ರಾಜಸ್ಥಾನ ರಾಯಲ್ಸ್ ವಿರುದ್ದ ಚೇಸಿಂಗ್ ವೇಳೆ ವಿರಾಟ್ ಕೊಹ್ಲಿ ಎದೆನೋವಿನಿಂದ ಬಳಲಿದ್ರಾ? ಕೊಹ್ಲಿ ಎದೆಬಡಿತದಲ್ಲಿ ವ್ಯತ್ಯಾಸವಾಗಿತ್ತಾ? ಈ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಕಾಡುತ್ತಿದೆ.ಕಾರಣ ಕೊಹ್ಲಿ ಬ್ಯಾಟಿಂಗ್ ನಡುವೆ ಏಕಾಏಕಿ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಬಳಿ ಬಂದು ಎದೆಬಡಿತ ಪರೀಕ್ಷಿಸುವಂತೆ ಸೂಚಿಸಿದ್ದಾರೆ. ಇದರಂತೆ ಸ್ಯಾಮ್ಸನ್ ತಕ್ಷಣವೇ ಕೊಹ್ಲಿ ಎದೆಬಡಿತ ಪರೀಕ್ಷಿಸಿ ಸೂಚನೆ ನೀಡಿದ ಘಟನೆ ಸೆರೆಯಾಗಿದೆ. ಈ ವಿಡಿಯೋ ಇದೀಗ ಅಭಿಮಾನಿಗಳ ಆತಂಕ ಹೆಚ್ಚಿಸಿದೆ.
ಡಬಲ್ಸ್ ಓಡಿದ ಬೆನ್ನಲ್ಲೇ ಎದೆಬಡಿತ ವ್ಯತ್ಯಾಸ
ರಾಜಸ್ಥಾನ ರಾಯಲ್ಸ್ ನೀಡಿದ 174 ರನ್ ಟಾರ್ಗೆಟ್ ಚೇಸಿಂಗ್ ವೇಳೆ ಈ ಘಟನೆ ನಡೆದಿದೆ. ಆರ್‌ಸಿಬಿ ದಿಟ್ಟ ಹೋರಾಟದ ಮೂಲಕ ಚೇಸಿಂಗ್ ಮಾಡಿತ್ತು. ವಿರಾಟ್ ಕೊಹ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. 15ನೇ ಓವರ್‌ನಲ್ಲಿ ವಿರಾಟ್ ಕೊಹ್ಲಿ ಎದೆಬಡಿತದಲ್ಲಿ ಕೊಂಚ ವ್ಯತ್ಯಾಸವಾಗಿದೆ. ವಾನಿಂಡು ಹಸರಂಗ ಓವರ್‌ನಲ್ಲಿ ಡಬಲ್ಸ್ ಪಡೆದ ವಿರಾಟ್ ಕೊಹ್ಲಿ ಎದೆಬಡಿತ ಜೋರಾಗಿದೆ. ಕೊಹ್ಲಿ ರನ್ನಿಂಗ್ ಬಿಟ್ವೀನ್ ವಿಕೆಟ್ ಉತ್ತಮವಾಗಿದೆ. ಸಿಂಗಲ್ಸ್, ಡಬಲ್ಸ್ ಮೂಲಕವೂ ರನ್ ಕಲೆ ಹಾಕುತ್ತಾರೆ. ಹೀಗಾಗಿ ಕೊಹ್ಲಿಗೆ ಡಬಲ್ಸ್ ಹೊಸದೇನಲ್ಲ. ಆದರೆ 15ನೇ ಓವರ್‌ನಲ್ಲಿ ಡಬಲ್ ರನ್‌ಗೆ ಓಡಿದ ವಿರಾಟ್ ಕೊಹ್ಲಿ ಎದೆಬಡಿತದಲ್ಲಿ ವ್ಯತ್ಯಾಸದ ಅರಿವಾಗಿದೆ.
ತವರು ಆಗಿಬರ್ತಿಲ್ಲ, ಹೊರಗಡೆ ಯಾರನ್ನೂ ಬಿಡಲ್ಲ, ರಾಜಸ್ಥಾನ ಮಣಿಸಿ ಅಂಕಪಟ್ಟಿ ಬದಲಿಸಿದ ಆರ್‌ಸಿಬಿ
ಕೊಹ್ಲಿ ಎದೆಬಡಿತ ಪರಿಶೀಲಿಸಿದ ಸಂಜು ಸ್ಯಾಮ್ಸನ್
ಎದೆಬಡಿತ ವ್ಯತ್ಯಾಸವಾಗುತ್ತಿದೆ ಎಂದು ಅರಿವಾಗುತ್ತದ್ದಂತೆ ವಿರಾಟ್ ಕೊಹ್ಲಿ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಬಳಿ ಬಂದು ತನ್ನ ಎದೆಬಡಿತ ಪರೀಶಿಸುವಂತೆ ಸೂಚಿಸಿದ್ದಾರೆ. ತಕ್ಷಣವೇ ಸಂಜು ಸ್ಯಾಮ್ಸನ್ ಕೈಗೆ ಹಾಕಿದ್ದ ಗ್ಲೌಸ್ ತೆಗೆದು ಕೊಹ್ಲಿ ಎದೆಗೆ ಕೈಯಿಟ್ಟು ಪರೀಶೀಲಿಸಿದ್ದಾರೆ. ಬಳಿಕ ನಾರ್ಮಲ್ ಇದೆ ಎಂದು ಸೂಚಿಸಿದ್ದಾರೆ.
ಎದೆಮುಟ್ಟಿ ನಿಟ್ಟುಸಿರು ಬಿಟ್ಟ ಕೊಹ್ಲಿ
ಸಂಜು ಸ್ಯಾಮ್ಸನ್ ಎದಬಡಿತ ಪರಿಶೀಲಿಸಿದ ಬೆನ್ನಲ್ಲೇ ಕೊಹ್ಲಿ ಎದೆಮುಟ್ಟಿ ನಿಟ್ಟುಸಿರು ಬಿಟ್ಟಿದ್ದಾರೆ. ಬಳಿಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮುಂದುವರಿಸಿದ್ದಾರೆ. ಈ ಘಟನೆ ವಿಡಿಯೋ ಸೆರೆಯಾಗಿದೆ. ಪಂದ್ಯದ ಬಳಿಕ ಕೊಹ್ಲಿ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ.ಆದರೆ ಅಭಿಮಾನಿಗಳ ಆತಂಕ ದೂರವಾಗಿಲ್ಲ.
ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಕೊಹ್ಲಿ 45 ಎಸೆತದಲ್ಲಿ ಅಜೇಯ 62 ರನ್ ಸಿಡಿಸಿದ್ದಾರೆ. ಈ ಮೂಲಕ ಆರ್‌ಸಿಬಿಗೆ ಭರ್ಜರಿ ಗೆಲುವು ತಂದುಕೊಟ್ಟಿದ್ದಾರೆ. ಕೊಹ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದ್ದಾರೆ.
ಸತತ ಸೋಲಿನಿಂದ ಕಂಗೆಟ್ಟ ಸಿಎಸ್‌ಕೆ ತಂಡಕ್ಕೆ ಮೇಜರ್ ಸರ್ಜರಿ, ಮೂವರಿಗೆ ಗೇಟ್‌ಪಾಸ್?
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.