ತವರು ಆಗಿಬರ್ತಿಲ್ಲ, ಹೊರಗಡೆ ಯಾರನ್ನೂ ಬಿಡಲ್ಲ, ರಾಜಸ್ಥಾನ ಮಣಿಸಿ ಅಂಕಪಟ್ಟಿ ಬದಲಿಸಿದ ಆರ್‌ಸಿಬಿ

Published : Apr 13, 2025, 06:46 PM ISTUpdated : Apr 13, 2025, 07:06 PM IST
ತವರು ಆಗಿಬರ್ತಿಲ್ಲ, ಹೊರಗಡೆ ಯಾರನ್ನೂ ಬಿಡಲ್ಲ, ರಾಜಸ್ಥಾನ ಮಣಿಸಿ ಅಂಕಪಟ್ಟಿ ಬದಲಿಸಿದ ಆರ್‌ಸಿಬಿ

ಸಾರಾಂಶ

ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗಡೆ ಆರ್‌ಸಿಬಿ ಯಾವ ತಂಡ ಆದರೂ ಸರಿ ಸೋಲಿಸದೆ ಹಿಂದಿರುಗುವುದಿಲ್ಲ. ಇದೀಗ ರಾಜಸ್ಥಾನ ರಾಯಲ್ಸ್ ವಿರುದ್ಧವೂ ಭರ್ಜರಿ ಗೆಲುವು ದಾಖಲಿಸಿದೆ. 

ಜೈಪುರ(ಏ.13) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಅಗ್ರೆಸ್ಸೀವ್ ಪ್ರದರ್ಶನ ನೀಡುತ್ತಿದೆ. ಆದರೆ ತವರಿನಲ್ಲಿ ಮಾತ್ರ ಹಿನ್ನಡೆಯಾಗುತ್ತಿದೆ. ಕಳೆದ ಪಂದ್ಯದಲ್ಲಿ ತವರಿನಲ್ಲಿ ಮುಗ್ಗರಿಸಿದ್ದ ಆರ್‌ಸಿಬಿ ಇದೀಗ ಜೈಪುರದಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧ ಭರ್ಜರಿ 9 ವಿಕೆಟ್ ಗೆಲುವು ದಾಖಲಿಸಿದೆ. ಈ ಆವೃತ್ತಿಯಲ್ಲಿ ಆರ್‌ಸಿಬಿ ತವರಿನಲ್ಲಿ 2 ಪಂದ್ಯ ಆಡಿದೆ. ಎರಡಲ್ಲೂ ಸೋಲು ಕಂಡಿದೆ. ತವರಿನ ಆಚೆ 4 ಪಂದ್ಯ ಆಡಿ ನಾಲ್ಕರಲ್ಲೂ ಗೆಲುವು ದಾಖಲಿಸಿದೆ.  ಇದೀಗ ಆರ್‌ಸಿಬಿ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ. 

ರಾಜಸ್ಥಾನ ರಾಯಲ್ಸ್ 174 ರನ್ ಟಾರ್ಗೆಟ್ ನೀಡಿತ್ತು.  ಮೊದಲೇ ಚೇಸಿಂಗ್ ಪಡೆದಿದ್ದ ಆರ್‌ಸಿಬಿಗೆ ಇದು ಯಾವ ಹಂತದಲ್ಲೂ ಸವಾಲು ಏನಿಸಲೇ ಇಲ್ಲ. ಆರಂಭದಿಂದಲೇ ಅಬ್ಬರ ಆರಂಭಗೊಂಡಿಿತು. ಫಿಲಿಪ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಸ್ಫೋಟಕ ಬ್ಯಾಟಿಂಗ್, ಬಳಿಕ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಆಟ ಆರ್‌ಸಿಬಿಗೆ ಸುಲಭ ಗೆಲುವು ತಂದುಕೊಟ್ಟಿತು. 17.3 ಓವರ್‌ಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು ಆರ್‌ಸಿಬಿ ಗೆಲುವು ದಾಖಲಿಸಿತು.

ಒಂದೇ ಪಂದ್ಯ! ಹಲವು ದಾಖಲೆಗಳನ್ನು ಮುರಿದ ಅಭಿಷೇಕ್ ಶರ್ಮಾ! ಒಂದೇ ಪಂದ್ಯ! ಹಲವು ದಾಖಲೆಗಳನ್ನು ಮುರಿದ ಅಭಿಷೇಕ್ ಶರ್ಮಾ!

5ನೇ ಸ್ಥಾನದಿಂದ 3ನೇ ಸ್ಥಾನ
ರಾಜಸ್ಥಾನ ರಾಯಲ್ಸ್ ಮಣಿಸಿದ ಆರ್‌ಸಿಬಿ ಇದೀಗ ಐಪಿಎಲ್ 2025 ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದ. ಈ ಪಂದ್ಯಕ್ಕೂ ಮೊದಲು ಆರ್‌ಸಿಬಿ 5ನೇ ಸ್ಥಾನಕ್ಕೆ ಕುಸಿದಿತ್ತು. ಇದೀಗ ಮೊದಲ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರಾಜಮಾನವಾಗಿದೆ. ಡೆಲ್ಲಿ ಆಡಿದ ನಾಲ್ಕು ಪಂದ್ಯದಲ್ಲಿ ನಾಲ್ಕರಲ್ಲೂ ಗೆಲುವು ದಾಖಲಿಸಿದೆ. 2ನೇ ಸ್ಥಾನದಲ್ಲಿರುವ ಗುಜರಾಟ್ ಟೈಟಾನ್ಸ್ ಹಾಗೂ 3ನೇ ಸ್ಥಾನದಲ್ಲಿರುವ ಆರ್‌ಸಿಬಿ 6ರಲ್ಲಿ 4 ಪಂದ್ಯ ಗೆದ್ದುಕೊಂಡಿದೆ. ಆದರ ನೆಟ್ ರನ್‌ರೇಟ್ ಆಧಾರದಲ್ಲಿ ಗುಜರಾತ್ 2ನೇ ಸ್ಥಾನದಲ್ಲಿದೆ.  ಲಖನೌ ಹಾಗೂ ಕೆಕೆಆರ್ ನಾಲ್ಕು ಮತ್ತು 5ನೇ ಸ್ಥಾನದಲ್ಲಿದೆ. 

ಆರ್‌ಸಿಬಿ ಬ್ಯಾಟಿಂಗ್
ಫಿಲಿಪ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಅಬ್ಬರದ ಬ್ಯಾಟಿಂಗ್ ರಾಜಸ್ಥಾನ ರಾಯಲ್ಸ್ ಲೆಕ್ಕಾಚಾರ ಉಲ್ಟಾ ಮಾಡಿತು. ಈ ಜೋಡಿ ಮೊದಲ ವಿಕೆಟ್‌ಗೆ 92 ರನ್ ಜೊತೆಯಾಟ ನೀಡಿತು. ಫಿಲ್ ಸಾಲ್ಟ್ 65 ರನ್ ಸಿಡಿಸಿದ್ದರು. ಅಷ್ಟರಲ್ಲೇ ಆರ್‌ಸಿಬಿ ಗೆಲುವು ಬಹುತೇಕ ಖಚಿತಗೊಂಡಿತ್ತು. ಇನ್ನು ದೇವದತ್ ಪಡಿಕ್ಕಲ್ ಜೊತೆ ಸೇರಿದ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮುಂದುವರಿಸಿದರು. ವಿರಾಟ್ ಕೊಹ್ಲಿ ಅಜೇಯ 62 ರನ್ ಸಿಡಿಸಿದರೆ, ದೇವದತ್ ಪಡಿಕ್ಕಲ್ ಅಜೇಯ 40 ರನ್ ಸಿಡಿಸಿದರು. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಸರಣಿ ಗೆಲುವಿನ ಬೆನ್ನಲ್ಲೇ ಐಸಿಸಿ ರ್‍ಯಾಂಕಿಂಗ್‌ ಪ್ರಕಟ; ಕೊಹ್ಲಿಗೆ ಜಾಕ್‌ಪಾಟ್!
ತಲೆಗೆ 20 ಹೊಲಿಗೆ, ಭುಜಕ್ಕೆ ಬಲವಾದ ಪೆಟ್ಟು! ಕ್ರಿಕೆಟ್ ತಂಡಕ್ಕೆ ಆಯ್ಕೆ ಮಾಡದ್ದಕ್ಕೆ ಕೋಚ್‌ ಮೇಲೆ ಆಟಗಾರರ ಮಾರಣಾಂತಿಕ ಹಲ್ಲೆ!