IPL 2027 ಆರಂಭ ಯಾವಾಗಿನಿಂದ? ಫೈನಲ್ ಮ್ಯಾಚ್ ಯಾವಾಗ? ಮುಂಬರುವ ಐಪಿಎಲ್‌ನ ಮಹತ್ವದ ಅಪ್‌ಡೇಟ್ಸ್‌ ಇಲ್ಲಿದೆ

Published : Jun 18, 2026, 04:54 PM IST
IPL 2027 Updates

ಸಾರಾಂಶ

2027ರ ಐಪಿಎಲ್ ಟೂರ್ನಿಗೆ ಬಿಸಿಸಿಐ ಈಗಿನಿಂದಲೇ ಸಿದ್ಧತೆ ಆರಂಭಿಸಿದೆ. ಮಳೆಯಿಂದಾಗುವ ಅಡಚಣೆಗಳನ್ನು ತಪ್ಪಿಸಲು, ಟೂರ್ನಿಯನ್ನು ಮಾರ್ಚ್ 10 ರಂದು ಪ್ರಾರಂಭಿಸಿ ಮೇ 15 ರೊಳಗೆ ಫೈನಲ್ ನಡೆಸಲು ಚಿಂತನೆ ನಡೆಸಿದೆ. ಪಂದ್ಯಗಳ ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಇಲ್ಲದೆ, 74 ಪಂದ್ಯಗಳು ನಡೆಯಲಿವೆ.

ಬೆಂಗಳೂರು: 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಯಶಸ್ವಿಯಾಗಿ ಮುಕ್ತಾಯವಾಗಿದೆ. ಇದೀಗ 20ನೇ ಸೀಸನ್ ಐಪಿಎಲ್ ಟೂರ್ನಿಗೆ ಬಿಸಿಸಿಐ ಈಗಿನಿಂದಲೇ ಸಿದ್ದತೆ ಆರಂಭಿಸಿದೆ. ಕೆಲ ದಿನಗಳ ಹಿಂದೆ ಬಿಸಿಸಿಐ ಮುಂಬರುವ ಐಪಿಎಲ್ ಟೂರ್ನಿಯನ್ನು ಮತ್ತಷ್ಟು ವಿಸ್ತರಿಸುವ ಚಿಂತನೆಯಲ್ಲಿದ್ದು, ಮ್ಯಾಚ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ತೀರ್ಮಾನಿಸಿದೆ ಎಂದು ವರದಿಯಾಗಿತ್ತು. ಆದರೆ ಈ ಬಗ್ಗೆ ಬಿಸಿಸಿಐ ಮೂಲಗಳು ಮುಂಬರುವ ಐಪಿಎಲ್‌ನಲ್ಲಿ ಮ್ಯಾಚ್‌ಗಳ ಸಂಖ್ಯೆ ಹೆಚ್ಚಿಸುವ ಯಾವುದೇ ಪ್ಲಾನ್ ಇಲ್ಲ ಎಂದು ತಿಳಿಸಿರುವುದಾಗಿ ವರದಿಯಾಗಿದೆ.

ಪಿಟಿಐ ಸುದ್ದಿಸಂಸ್ಥೆ ವರದಿಯ ಪ್ರಕಾರ, 2027ರ ಐಪಿಎಲ್ ಟೂರ್ನಿಯು ಕೊಂಚ ಮುಂಚಿತವಾಗಿಯೇ ಆರಂಭವಾಗಲಿದೆ. ಯಾಕೆಂದರೆ ಕಳೆದ ಸೀಸನ್‌ ಐಪಿಎಲ್ ಟೂರ್ನಿಯಲ್ಲಿ ಎದುರಾದ ಮಳೆಯಿಂದಾಗಿ ಕೆಲ ಪಂದ್ಯಗಳು ರದ್ದಾಗಿದ್ದವು. ಇದನ್ನು ತಡೆಯುವ ನಿಟ್ಟಿನಲ್ಲಿ ಬಿಸಿಸಿಐ, ಮುಂಬರುವ ಐಪಿಎಲ್ ಟೂರ್ನಿಯನ್ನು ಕೊಂಚ ಮುಂಚಿತವಾಗಿ ಆರಂಭಿಸಲು ಬಿಸಿಸಿಐ ಅಧ್ಯಕ್ಷ ದೇವಜಿತ್ ಸೈಕಿಯಾ ಒಲವು ತೋರಿದ್ದಾರೆ. ಟೂರ್ನಿ ಆಯೋಜನೆಯ ಸಂಭಾವ್ಯ ವೇಳಾಪಟ್ಟಿಯೂ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

IPL 2027 ಯಾವಾಗ ಆರಂಭವಾಗಬಹುದು?

ಪಿಟಿಐ ವರದಿಯ ಪ್ರಕಾರ 2027ರ ಐಪಿಎಲ್ ಟೂರ್ನಿಯು ಮುಂಬರುವ ಮಾರ್ಚ್ 10ರಂದು ಆರಂಭವಾಗುವ ಸಾಧ್ಯತೆ ದಟ್ಟವಾಗಿದೆ. ಮುಂಬರುವ ಐಪಿಎಲ್ ಟೂರ್ನಿ ಕೊಂಚ ಮುಂಚಿತವಾಗಿ ಆರಂಭವಾಗಲು ಕಾರಣ, ಹವಾಮಾನ ವರದಿ ಎನ್ನಲಾಗುತ್ತಿದೆ. 2027ರ ಐಪಿಎಲ್ ಟೂರ್ನಿಯ ಪ್ಲೇ ಆಫ್ ಹಾಗೂ ಫೈನಲ್ ಪಂದ್ಯಕ್ಕೆ ಯಾವುದೇ ಹವಾಮಾನ ವಾತಾವರಣ ಅಡ್ಡಿಯಾಗಬಾರದು ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಮುಂಬರುವ ಐಪಿಎಲ್ ಟೂರ್ನಿಯನ್ನು ಕೊಂಚ ಮುಂಚಿತವಾಗಿ ಆಯೋಜಿಸಲು ಬಿಸಿಸಿಐ ಚಿಂತನೆ ನಡೆಸಿದೆ.

ಇನ್ನು 2027ರ ಫೈನಲ್ ಮ್ಯಾಚ್ ಯಾವಾಗ?

2026ರ ಐಪಿಎಲ್ ಫೈನಲ್ ಪಂದ್ಯವು ಮೇ 31ರಂದು ನಡೆದಿತ್ತು. ಆದರೆ ಮುಂಬರುವ ಐಪಿಎಲ್ ಟೂರ್ನಿಯು ಕೊಂಚ ಮುಂಚಿತವಾಗಿಯೇ ಆರಂಭಿಸಿ, ಫೈನಲ್‌ ಮ್ಯಾಚ್ ಯಾವುದೇ ಅಡ್ಡಿ ಆತಂಕವಿಲ್ಲದೇ ಕೊನೆಗೊಳಿಸುವ ಚಿಂತನೆಯಲ್ಲಿದೆ. ಹೀಗಾಗಿ ಪಿಟಿಐ ವರದಿಯ ಪ್ರಕಾರ ಮೇ 15ಕ್ಕೆ 2027ರ ಐಪಿಎಲ್ ಫೈನಲ್‌ ಪಂದ್ಯ ನಡೆಯುವ ಸಾಧ್ಯತೆ ದಟ್ಟವಾಗಿದೆ.

ಟೂರ್ನಮೆಂಟ್‌ನ ಫಾರ್ಮ್ಯಾಟ್‌ನಲ್ಲಿ ಯಾವುದೇ ವ್ಯತ್ಯಾಸವಿಲ್ಲ!

ಕೆಲದಿನಗಳ ಹಿಂದಿನ ವರದಿಯ ಪ್ರಕಾರ, ಟೂರ್ನಿಯ ಪಂದ್ಯಗಳ ಸಂಖ್ಯೆ ಹೆಚ್ಚಳವಾಗಬಹುದು ಎಂದು ವರದಿಯಾಗಿತ್ತು. ಆದರೆ ಇದೀಗ ಸದ್ಯದ ವರದಿಯ ಪ್ರಕಾರ, ಪ್ರತಿ ವರ್ಷದಂತೆ ಮುಂಬರುವ ಐಪಿಎಲ್ ಟೂರ್ನಿಯಲ್ಲೂ 74 ಪಂದ್ಯಗಳು ನಡೆಯಲಿವೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Ira Aery: ಕ್ರಿಕೆಟ್ ಲೋಕದ ಹೊಸ ಕ್ರಶ್: ಆಸೀಸ್‌ ಟೀಮ್‌ನಲ್ಲಿ ಮಿಂಚುತ್ತಿರುವ ಭಾರತೀಯ ಮೂಲದ ಮೂಗುತಿ ಸುಂದರಿ
ತ್ರಿಕೋನ ಸರಣಿಯಲ್ಲಿ ವೈಭವ್ ಸೂರ್ಯವಂಶಿ ಇದುವರೆಗೂ ಗಳಿಸಿದ ರನ್ ಎಷ್ಟು? ಬಾರಿಸಿದ ಬೌಂಡರಿ, ಸಿಕ್ಸರ್‌ಗಳೆಷ್ಟು?