ಲಖನೌ ಸೂಪರ್ ಜೈಂಟ್ಸ್ ವೇಗದ ಬೌಲರ್ ಮಯಾಂಕ್ ಯಾದವ್ ಗಾಯಗೊಂಡಿದ್ದಾರೆ. ಸಿಟ್ಟಿನಲ್ಲಿ ಮಂಚಕ್ಕೆ ಒದ್ದು ಕಾಲುಬೆರಳು ಮುರಿದುಕೊಂಡಿದ್ದಾರೆ. ಇದರಿಂದಾಗಿ ತಂಡಕ್ಕೆ ಹಿನ್ನಡೆಯಾಗಿದೆ.
ಬೆಂಗಳೂರು: ಲಖನೌ ಸೂಪರ್ ಜೈಂಟ್ಸ್ ವೇಗದ ಬೌಲರ್ ಮಯಾಂಕ್ ಯಾದವ್ ಅವರ ಪರಿಸ್ಥಿತಿ ಬೆಂಕಿಯಿಂದ ಬಾಣಲೆಗೆ ಬಿದ್ದಂತೆ ಆಗಿದೆ. ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಮಯಾಂಕ್ ಯಾದವ್, ಇದೀಗ ಸಿಟ್ಟಿನಲ್ಲಿ ಮಂಚಕ್ಕೆ ಒದ್ದು ಕಾಲುಬೆರಳು ಗಾಯ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಈಗಾಗಲೇ 2025ರ ಐಪಿಎಲ್ ಆರಂಭಿಕ ಪಂದ್ಯಗಳಿಂದ ಹೊರಬಿದ್ದಿರುವ ಮಯಾಂಕ್ ಯಾದವ್, ಇದೀಗ ಐಪಿಎಲ್‌ಗೆ ಕಮ್‌ಬ್ಯಾಕ್ ಮಾಡುವುದು ಮತ್ತಷ್ಟು ತಡವಾಗುವ ಸಾಧ್ಯತೆಯಿದೆ.
"ಕಳೆದ ವರ್ಷದ ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನದ ಮೂಲಕ ಮಯಾಂಕ್ ಯಾದವ್ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಆದರೆ ಅವರು ಬೆನ್ನು ನೋವಿನ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಇದೀಗ ತಾವು ಮಲಗುವ ಮಂಚಕ್ಕೆ ಒದ್ದು, ಕಾಲು ಬೆರಳು ಗಾಯ ಮಾಡಿಕೊಂಡಿದ್ದಾರೆ ಎಂದು ಲಖನೌ ಸೂಪರ್ ಜೈಂಟ್ಸ್ ತಂಡದ ಹೆಡ್‌ಕೋಚ್ ಜಸ್ಟಿನ್ ಲ್ಯಾಂಗರ್ ಅಪ್‌ಡೇಟ್ ನೀಡಿದ್ದಾರೆ.
ಇದನ್ನೂ ಓದಿ: ಅದೃಷ್ಟದಿಂದ ಡೆಲ್ಲಿ ಗೆದ್ದಿದ್ದು ಎಂದ ಪಂತ್; ಟ್ರೋಲ್ ಮಾಡಿದ ನೆಟ್ಟಿಗರು!
'ಅವರ ಕಾಲುಬೆರಳಿಗೆ ಸೋಂಕು ತಗುಲಿದೆ, ಅವರೀಗ ಪುನಶ್ಚೇತನ ಶಿಬಿರದಲ್ಲಿದ್ದು, ಚೇತರಿಸಿಕೊಳ್ಳಲು ಇನ್ನೂ ಒಂದು ವಾರ ಅಥವಾ ಎರಡು ವಾರಗಳು ಬೇಕಾಗಬಹುದು. ಆದರೆ ಈಗ ಅವರು ಚೆನ್ನಾಗಿ ಓಡುತ್ತಿದ್ದಾರೆ. ಜತೆಗೆ ಅವರು ಬೌಲಿಂಗ್ ಮಾಡುತ್ತಿರುವುದನ್ನು ವಿಡಿಯೋಗಳಲ್ಲಿ ನಿರಂತರವಾಗಿ ನೋಡುತ್ತಿದ್ದೇವೆ. ನಿನ್ನೆ ಕೂಡಾ ನಾನು ಅವರು ಬೌಲಿಂಗ್ ಮಾಡಿದ್ದನ್ನು ನೋಡಿದ್ದೇನೆ. ಅವರು ಟೂರ್ನಿಯ ಕೊನೆಯ ಹಂತದಲ್ಲಿ ತಂಡ ಕೂಡಿಕೊಳ್ಳುವ ವಿಶ್ವಾಸವಿದೆ' ಎಂದು ಜಸ್ಟಿನ್ ಲ್ಯಾಂಗರ್ ಹೇಳಿದ್ದಾರೆ.
ಲಖನೌ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ಈಗಾಗಲೇ ತನ್ನ ತಂಡದ ಯುವ ವೇಗಿ ಮೊಹ್ಸಿನ್ ಖಾನ್ ಗಾಯದ ಸಮಸ್ಯೆಯಿಂದ ಐಪಿಎಲ್‌ಗೆ ಅಲಭ್ಯರಾಗಿದ್ದಾರೆ. ಈ ಕಾರಣಕ್ಕಾಗಿಯೇ ಐಪಿಎಲ್ ಮೆಗಾ ಹರಾಜಿನಲ್ಲಿ ಅನ್‌ಸೋಲ್ಡ್ ಆಗಿದ್ದ ಶಾರ್ದೂಲ್ ಠಾಕೂರ್ ಅವರನ್ನು ಲಖನೌ ಫ್ರಾಂಚೈಸಿ ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಇನ್ನು ತಂಡದ ಪ್ರಮುಖ ವೇಗಿಗಳಾದ ಆವೇಶ್ ಖಾನ್ ಹಾಗೂ ಆಕಾಶ್ ದೀಪ್ ಕೂಡ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: IPL 2025: ಡೆಲ್ಲಿಯನ್ನು ಗೆಲ್ಲಿಸಿದ ಅಶುತೋಷ್ ಶರ್ಮಾ ಸಾಹಸ!
ಡೆಲ್ಲಿ ಎದುರು ಮುಗ್ಗರಿಸಿದ ಲಖನೌ ಸೂಪರ್ ಜೈಂಟ್ಸ್:
ರಿಷಭ್ ಪಂತ್ ನೇತೃತ್ವದ ಲಖನೌ ಸೂಪರ್ ಜೈಂಟ್ಸ್ ತಂಡವು 2025ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ತಾನಾಡಿದ ಮೊದಲ ಪಂದ್ಯದಲ್ಲಿ ವಿರೋಚಿತ ಸೋಲು ಅನುಭವಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವು ಒಂದು ವಿಕೆಟ್ ಅಂತರದ ರೋಚಕ ಗೆಲುವು ಸಾಧಿಸಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ 8 ವಿಕೆಟ್‌ಗೆ 209 ರನ್ ಕಲೆಹಾಕಿತು. ಬಳಿಕ ಡೆಲ್ಲಿ ಆರಂಭ ಗಮನಿಸಿದರೆ, ಲಖನೌ ಸುಲಭದಲ್ಲಿ ಗೆಲ್ಲಲಿದೆ ಎಂದೇ ಹೇಳಲಾಗುತ್ತಿತ್ತು. ಆದರೆ ಟ್ರಿಸ್ಟನ್ ಸ್ಟಬ್ಸ್, ವಿಪ್ರಾಜ್ ನಿಗಂ ಹಾಗೂ ಅಶುತೋಷ್‌ರ ಸಾಹಸದಿಂದಾಗಿ 19.3 ಓವರ್‌ಗಳಲ್ಲಿ ಗೆಲುವಿನ ದಡ ಸೇರಿತು.