ಐಪಿಎಲ್ ಟೂರ್ನಿಯಲ್ಲಿ ಇದೀಗ ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟಾನ್ಸ್ ಹೊಸ ವೈರತ್ವ ತಂಡಗಳಾಗಿ ಮಾರ್ಪಟ್ಟಿದೆ. ಗುಜರಾತ್‌ನಿಂದ ಮುಂಬೈ ತಂಡ ಸೇರಿಕೊಂಡ ಹಾರ್ದಿಕ್ ಪಾಂಡ್ಯ ಇದೀಗ ಟಾಸ್ ಗೆದ್ದುಕೊಂಡಿದ್ದಾರೆ.
ಅಹಮ್ಮದಾಬಾದ್(ಮಾ.24) ಐಪಿಎಲ್ 2024ರಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಹೋರಾಟ ಹಲವು ಕಾರಣಗಳಿಂದ ಭಾರಿ ಸಂಚಲನ ಸೃಷ್ಟಿಸಿದೆ. ಕೊನೆಯ ಕ್ಷಣದಲ್ಲಿ ತಂಡ ತೊರೆದು ಮುಂಬೈ ಇಂಡಿಯನ್ಸ್ ನಾಯಕನಾದ ಹಾರ್ದಿಕ್ ಪಾಂಡ್ಯ ತಮ್ಮ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದಲ್ಲಿ 7 ಬ್ಯಾಟ್ಸ್‌ಮನ್‌ಗೆ ಸ್ಥಾನ ನೀಡಲಾಗಿದೆ. ಕಳೆದ ಆವೃತ್ತಿವರೆಗೆ ನಾಯಕನಾಗಿದ್ದ ರೋಹಿತ್ ಶರ್ಮಾ ಈ ಬಾರಿ ಬ್ಯಾಟ್ಸ್‌ಮನ್ ಆಗಿ ಸ್ಥಾನ ಪಡೆದಿದ್ದಾರೆ.
ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ 11
ರೋಹಿತ್ ಶರ್ಮಾ, ಇಶಾನ್ ಕಿಶನ್, ತಿಲಕ್ ವರ್ಮಾ, ನಮನ್ ಧೀರ್, ಹಾರ್ದಿಕ್ ಪಾಂಡ್ಯ(ನಾಯಕ), ಟಿಮ್ ಡೇವಿಡ್, ಶ್ಯಾಮ್ಸ್ ಮುಲಾನಿ, ಪಿಯೂಷ್ ಚಾವ್ಲಾ, ಗೆರಾಲ್ಡ್ ಕೊಯೆಟ್ಜ್, ಜಸ್ಪ್ರೀತ್ ಬುಮ್ರಾ, ಲ್ಯೂಕ್ ವುಡ್
undefined
ಬೆಂಗ್ಳೂರಲ್ಲಿ RCB vs PBKS ಮ್ಯಾಚ್, ಎಲ್ಲರ ಚಿತ್ತ ಕೊಹ್ಲಿಯತ್ತ..!
ಮುಂಬೈ ಇಂಡಿಯನ್ಸ್ ಸಬ್ ಪ್ಲೇಯರ್ಸ್:
ಡೇವಿಡ್ ಬ್ರೇವಿಸ್, ರೊಮಾರಿಯೋ ಶೆಫರ್ಡ್, ವಿಷ್ಣು ವಿನೋದ್, ನೆಹಾಲ್ ವಾಧೇರಾ, ಮೊಹಮ್ಮದ್ ನಬಿ
ಹಾರ್ದಿಕ್ ಪಾಂಡ್ಯ ತಂಡ ತೊರೆದ ಬಳಿಕ ಗುಜರಾತ್ ಟೈಟಾನ್ಸ್ ತಂಡದ ನಾಯಕನಾಗಿ ಬಡ್ತಿಪಡೆದಿರುವ ಶುಭಮನ್ ಗಿಲ್ ಬಲಿಷ್ಠ ತಂಡವನ್ನೇ ಕಣಕ್ಕಿಳಿಸಿದ್ದಾರೆ. ಈ ಮೂಲಕ ಶುಬಾರಂಭದ ವಿಶ್ವಾಸದಲ್ಲಿದ್ದಾರೆ.
ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ 11
ಶುಭಮನ್ ಗಿಲ್(ನಾಯಕ), ವೃದ್ಧಿಮಾನ್ ಸಾಹ, ಸಾಯಿ ಸುದರ್ಶನ್, ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ಅಜ್ಮತುಲ್ಹಾ ಒಮರ್ಝಾಯ್, ರಾಹುಲ್ ಟಿವಾಟಿಯಾ, ರಶೀದ್ ಖಾನ್, ಉಮೇಶ್ ಯಾದವ್, ಸಾಯಿ ಕಿಶೋರ್, ಸ್ಪೆನ್ಸರ್ ಜಾನ್ಸನ್
ಗುಜರಾತ್ ಟೈಟಾನ್ಸ್ ಸಬ್ ಪ್ಲೇಯರ್ಸ್: ಬಿಆರ್ ಭರತ್, ಮೋಹಿತ್ ಶರ್ಮಾ, ಮಾನವ್ ಸುಥರ್, ಅಭಿನವ್ ಮನೋಹರ್, ನೂರ್ ಅಹಮ್ಮದ್
ರೋಹಿತ್ ಶರ್ಮಾ ನಾಯಕತ್ವವನ್ನು ಹಾರ್ದಿಕ್ ಪಾಂಡ್ಯಗೆ ನೀಡಿದ ನಿರ್ಧಾರ ಮುಂಬೈ ಅಭಿಮಾನಿಗಳನ್ನು ಕೆರಳಿಸಿತ್ತು. ಇತ್ತ ತಂಡವವನ್ನು ತೊರೆದ ಹಾರ್ದಿಕ್ ಪಾಂಡ್ಯಗೆ ತಿರುಗೇಟು ನೀಡಲು ಗುಜರಾತ್ ಟೈಟಾನ್ಸ್ ಕೂಡ ಸಜ್ಜಾಗಿದೆ. ಹೀಗಾಗಿ ಇಂದಿನ ಈ ಹೋರಾಟ ರೋಚಕತೆ ಹೆಚ್ಚಿಸಿದೆ.ಮುಂಬೈ ಇಂಡಿಯನ್ಸ್ ತಂಡಕ್ಕೆ ದಾಖಲೆ ಟ್ರೋಫಿ ತಂದುಕೊಟ್ಟ ನಾಯಕ ರೋಹಿತ್ ಶರ್ಮಾ ಈ ಐಪಿಎಲ್ ಟೂರ್ನಿಯಲ್ಲಿ ಬ್ಯಾಟ್ಸ್‌ಮನ್ ಆಗಿ ಕಣಕ್ಕಿಳಿಯುತ್ತಿದ್ದಾರೆ. ಹೀಗಾಗಿ ಮತ್ತಷ್ಟು ಸ್ಪೋಟಕ ಬ್ಯಾಟಿಂಗ್ ಪ್ರದರ್ಶನವನ್ನು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ. ಈ ಪಂದ್ಯದಲ್ಲಿ ಹೊಸ ದಾಖಲೆಗಳು ಸೃಷ್ಟಿಯಾಗುವ ಸಾಧ್ಯತೆಗಳಿವೆ.