ಐಪಿಎಲ್ 2023 ಟೂರ್ನಿ ಫೈನಲ್ ಪಂದ್ಯ ಮಳೆಯಿಂದ ರದ್ದಾದ ಕಾರಣ ಮೀಸಲು ದಿನದಲ್ಲಿ ಪ್ರಶಸ್ತಿ ಸುತ್ತಿನ ಪಂದ್ಯ ಆಯೋಜಿಸಲಾಗಿದೆ. ಇದೀಗ ಗುಜರಾತ್‌ನ ಹಲವೆಡೆ ಮೋಡ ಕವಿದ ವಾತಾವರಣವಿದೆ. ಹಾಗಾದರೆ ಫೈನಲ್ ಪಂದ್ಯ ನಡೆಯಲಿರುವ ಅಹಮ್ಮದಾಬಾದ್‌ನಲ್ಲಿನ ಪರಿಸ್ಥಿತಿ ಹೇಗಿದೆ?
ಅಹಮ್ಮದಾಬಾದ್(ಮೇ.29): ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಹಾಗೂ ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಫೈನಲ್ ಹೋರಾಟಕ್ಕೆ ವೇದಿಕೆ ಸಜ್ಜಾಗಿದೆ. ನಿನ್ನೆ(ಮೇ.28) ನಿಗದಿಯಾಗಿದ್ದ ಫೈನಲ್ ಪಂದ್ಯ ಮಳೆಯಿಂದ ರದ್ದಾಗಿತ್ತು. ಹೀಗಾಗಿ ಮೀಸಲು ದಿನವಾದ ಇಂದು(ಮೇ.29 ರೋಚಕ ಹೋರಾಟ ನಡೆಯಲಿದೆ. ಕಳೆದೊಂದು ವಾರದಿಂದ ಗುಜರಾತ್, ಮಧ್ಯಪ್ರದೇಶ ಸೇರದಂತೆ ಹಲವೆಡೆ ಮಳೆಯಾಗುತ್ತಿದೆ. ಇಂದು ಕೂಡ ಗುಜರಾತ್‌ನ ಹಲವು ಭಾಗದಲ್ಲಿ ಮೋಡ ಕವಿದ ವಾತಾವರಣವಿದೆ. ಫೈನಲ್ ಪಂದ್ಯ ನಡೆಯುತ್ತಿರುವ ಅಹಮ್ಮದಾಬಾದ್ ಸುತ್ತ ಮುತ್ತ ಇದುವರೆಗೂ ಮಳೆ ಸೂಚನೆ ಇಲ್ಲ. ಹೀಗಾಗಿ ಇಂದು ಒಟ್ಟು 40 ಓವರ್ ಪಂದ್ಯ ನಡೆಯುವ ಎಲ್ಲಾ ಸಾಧ್ಯತೆ ಇದೆ.
ಗುಜರಾತ್‌ನ ಮಧ್ಯ ಪಶ್ಚಿಮ ಭಾಗದಲ್ಲಿ ಮೋಡ ಕವಿದ ವಾತಾವರಣವಿದೆ. ಹವಾಮಾನ ವರದಿ ಪ್ರಕಾರ ಗುಜರಾತ್‌ನ ಕೆಲೆವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಅಹಮ್ಮದಾಬಾದ್ ಹಾಗೂ ಭವನಗರ ವಲಯದಲ್ಲೂ ಮಳೆಯಾಗುವ ಸಾಧ್ಯತೆ ಇದೆ. ಆದರೆ ಪೂರ್ವ ಮುಂಗಾರು ಸೆಂಟ್ರಲ್ ವೆಸ್ಟ್‌ನಿಂದ ನಾರ್ತ್ ಈಸ್ಟ್ ಕಡೆ ಚಲಿಸುವ ಕಾರಣ ಅಹಮ್ಮದಾಬಾದ್ ಹಾಗೂ ಭವನಗರ ವಲಯದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಪೂರ್ವ ಮುಂಗಾರು ಅಹಮ್ಮದಾಬಾದ್ ತಲುವ ವೇಳೆ ಮತ್ತಷ್ಟು ಕ್ಷೀಣಿಸಲಿದೆ. ಹೀಗಾಗಿ ಮಳೆ ಭಾರಿ ಮಳೆಯ ಸಾಧ್ಯತೆಗಳು ಕಡಿಮೆ ಎಂದು ವರದಿ ಹೇಳುತ್ತಿದೆ.
IPL Final: ಇಂದೂ ಫೈನಲ್‌ಗೆ ಮಳೆ ಅಡ್ಡಿಪಡಿಸಿದರೆ ಏನಾಗುತ್ತೆ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
ಸದ್ಯ ಅಹಮ್ಮದಾಬಾದ್ ಸುತ್ತ ಮುತ್ತ ಪಂದ್ಯಕ್ಕೆ ಪೂರಕ ವಾತಾವರಣವಿದೆ. ಹೀಗಾಗಿ ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ. ಇಂದು ಬಹುತೇಕ ಪಂದ್ಯ ನಡೆಯುವ ಸಾಧ್ಯತೆ ದಟ್ಟವಾಗಿದೆ. ಇಷ್ಟೇ ಅಲ್ಲ ಪಂದ್ಯದ ನಡುವೆ ಮಳೆ ಅಡ್ಡಿಪಡಿಸುವ ಸಾಧ್ಯತೆಗಳು ಕಡಿಮೆಯಾಗಿದೆ. ಇದೇ ಮೊದಲ ಬಾರಿಗೆ ಮೀಸಲು ದಿನದಲ್ಲಿ ಐಪಿಎಲ್ ಫೈನಲ್ ಪಂದ್ಯ ನಡೆಯುತ್ತಿದೆ. ಕಳೆದ ಎಲ್ಲಾ ಆವೃತ್ತಿಗಳು ನಿಗದಿತ ದಿನಾಂಕದಲ್ಲೇ ನಡೆದಿದೆ.
Nowcast-3
Things look little grim for tonight’s match as WD induce activities are affecting the parts of west-central . These activities will move SE, towards , area.
•Thunderstorm with (30-50km/h) and light to moderate… pic.twitter.com/CE1JWXDadH
ಭಾನುವಾರ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಬೇಕಿದ್ದ 16ನೇ ಆವೃತ್ತಿಯ ಫೈನಲ್ ಪಂದ್ಯಕ್ಕೆ ಭಾರಿ ಮಳೆ ಅಡ್ಡಿಯಾಗಿತ್ತು. ಸಂಜೆಯಿಂದಲೇ ಸುರಿಯಲು ಆರಂಭಿಸದ ಮಳೆಗೆ ಕ್ರೀಡಾಂಗಣ ನೀರಿನಿಂದ ತುಂಬಿತ್ತು. ಕ್ರೀಡಾಂಗಣ ಸುತ್ತ ಮುತ್ತ ಕೂಡ ನೀರು ತುಂಬಿಕೊಂಡಿತ್ತು. ರಾತ್ರಿ 11 ಗಂಟೆ ಆದರೂ ಮಳೆ ನಿಂತಿಲ್ಲ. ನಡು ನಡುವೆ ಮಳೆರಾಯ ಬ್ರೇಕ್ ನೀಡಿದ ಕಾರಣ ಅಭಿಮಾನಿಗಳು ಪಂದ್ಯ ಆರಂಭವಾಗುವ ಕನಸು ಕಂಡಿದ್ದರು. ಇತ್ತ ಮೈದಾನದ ಸಿಬ್ಬಂದಿಗಳು ಮೈದಾನ ಸಜ್ಜುಗೊಳಿಸುವಲ್ಲೂ ನಿರತರಾಗಿದ್ದರು. ಆದರೆ ಮತ್ತೆ ದಿಢೀರ್ ಸುರಿಯುತ್ತಿದ್ದ ಮಳೆಯಿಂದ ಅಂತಿಮವಾಗಿ ಪಂದ್ಯ ರದ್ದುಗೊಳಿಸಲಾಯಿತು.
ಐಪಿಎಲ್ಗೆ ವಿದಾಯ ಘೋಷಿಸಿದ ರಾಯುಡು..! ರಾಜಕೀಯಕ್ಕೆ ಎಂಟ್ರಿ?
ಗುಜರಾತ್ ಟೈಟಾನ್ಸ್ ಸತತ 2ನೇ ಬಾರಿಗೆ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ 10ನೇ ಬಾರಿಗೆ ಫೈನಲ್ ಪ್ರವೇಶಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪ್ಲೇ-ಆಫ್‌ನ ಕ್ವಾಲಿಫೈಯರ್-2 ಪಂದ್ಯದಲ್ಲಿ 62 ರನ್ ಗೆಲುವು ಸಾಧಿಸಿದ ಗುಜರಾತ್, ಸತತ 2ನೇ ಬಾರಿಗೆ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿತು. 20 ಓವರಲ್ಲಿ 3 ವಿಕೆಟ್‌ಗೆ 233 ರನ್ ಕಲೆಹಾಕಿ, ಈ ಆವೃತ್ತಿಯ 3ನೇ ಗರಿಷ್ಠ ಮೊತ್ತ ದಾಖಲಿಸಿದ ಗುಜರಾತ್, ಮುಂಬೈಯನ್ನು 18.2 ಓವರಲ್ಲಿ 171 ರನ್‌ಗೆ ಆಲೌಟ್ ಮಾಡಿ ಸಂಭ್ರಮಿಸಿತು.