ಫೈನಲ್‌ಗೇರುವ 2ನೇ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲೇಬೇಕು ಎನ್ನುವ ಇರಾದೆಯಲ್ಲಿರುವ ಹಾಲಿ ಚಾಂಪಿಯನ್ ಗುಜರಾತ್ ಜೈಂಟ್ಸ್ ತಂಡ ಮುಂಬೈ ಇಂಡಿಯನ್ಸ್ ತಂಡಕ್ಕೆ ಬೃಹತ್ ಗುರಿ ನಿಗದಿ ಮಾಡಿದೆ.
ಅಹಮದಾಬಾದ್ (ಮೇ.26): ಕೇವಲ 60 ಎಸೆತ, 10 ಆಕರ್ಷಕ ಸಿಕ್ಸರ್‌ಗಳು ಹಾಗೂ 7 ಮನಮೋಹಕ ಬೌಂಡರಿ ಸಿಡಿಸಿದ ಶುಭ್‌ಮನ್ ಗಿಲ್ ಅಕ್ಷರಶಃ ಮುಂಬೈ ಬೌಲರ್‌ಗಳನ್ನು ಚೆಂಡಾಡಿದರು. ಕ್ರಿಸ್ ಜೋರ್ಡನ್, ಪೀಯುಷ್ ಚಾವ್ಲಾ ಹಾಗೂ ಆಕಾಶ್ ಮಧ್ವಲ್‌ರ ಎಸೆತಗಳನ್ನು ಲೀಲಾಜಾಲವಾಗಿ ಚೆಂಡಾಡಿದ ಶುಭ್‌ಮನ್ ಗಿಲ್ 129 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಶುಭ್‌ಮನ್ ಗಿಲ್ ಅವರ ಸಾಹಸಿಕ ಬ್ಯಾಟಿಂಗ್‌ನ ನೆರವಿನಿಮದ ಗುಜರಾತ್ ಟೈಟಾನ್ಸ್ ತಂಡ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಗೆಲುವಿಗೆ 234 ರನ್‌ಗಳ ಗುರಿ ನೀಡಿದೆ. ಶುಕ್ರವಾರ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ತಂಡ 3 ವಿಕೆಟ್‌ಗೆ 233 ರನ್ ಬಾರಿಸಿತು. ಈ ಶತಕದೊಂದಿಗೆ ಹಾಲಿ ಐಪಿಎಲ್‌ನಲ್ಲಿ ಗಿಲ್ ಒಟ್ಟು 851 ರನ್ ಬಾರಿಸಿದಂತಾಗಿದೆ. 2016ರಲ್ಲಿ ವಿರಾಟ್ ಕೊಹ್ಲಿ 973 ರನ್ ಬಾರಿಸಿದ್ದು ಹಾಗೂ 2022ರಲ್ಲಿ ಜೋಸ್ ಬಟ್ಲರ್ 863 ರನ್ ಬಾರಿಸಿದ್ದು ಮೊದಲೆರಡು ಸ್ಥಾನದಲ್ಲಿದೆ.
ಇದು ಹಾಲಿ ಋತುವಿನಲ್ಲಿ ಶುಭ್‌ಮನ್ ಗಿಲ್ ಅವರ ಮೂರನೇ ಶತಕವಾಗಿದೆ. ಕೇವಲ 49 ಎಸೆತಗಳಲ್ಲಿ ಅವರ ಈ ಶತಕ ದಾಖಲಾಗಿದೆ. ಒಂದೇ ಋತುವಿನ ಐಪಿಎಲ್‌ನಲ್ಲಿ ಗರಿಷ್ಠ ಶತಕ ಬಾರಿಸಿದ ದಾಖಲೆ ವಿರಾಟ್ ಕೊಹ್ಲಿ ಹಾಗೂ ಜೋಸ್ ಬಟ್ಲರ್ ಹೆಸರಿನಲ್ಲಿದೆ. ಇವರಿಬ್ಬರೂ ತಲಾ ನಾಲ್ಕು ಶತಕ ಬಾರಿಸಿದ್ದಾರೆ. ಅದಲ್ಲದೆ, ಮೈಕೆಲ್ ಕ್ಲಿಂಗರ್ ಬಳಿಕ ಟಿ20 ಕ್ರಿಕೆಟ್‌ನಲ್ಲಿ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಮೂರು ಶತಕ ಬಾರಿಸಿದ ವಿಶ್ವದ ಕೇವಲ 2ನೇ ಬ್ಯಾಟ್ಸ್‌ಮನ್ ಎನಿಸಿದ್ದಾರೆ.
ಬ್ಯಾಟಿಂಗ್‌ಗೆ ಇಳಿದ ಗುಜರಾತ್ ಟೈಟಾನ್ಸ್ ತಂಡ ಪ್ಲೇ ಆಫ್‌ನಲ್ಲಿ ಅಷ್ಟೇನೂ ಉತ್ತಮವಾಗಿ ಬ್ಯಾಟಿಂಗ್ ಮಾಡಲಿಲ್ಲ. ಮೊದಲ ವಿಕೆಟ್‌ಗೆ 38 ಎಸೆತಗಳಲ್ಲಿ ತಂಡ 54 ರನ್ ಬಾರಿಸಿತು. ಇದರಲ್ಲಿ ಗಿಲ್ ಅವರದೇ ಹೆಚ್ಚಿನ ಪಾಲು ಇದ್ದವು. 16 ಎಸೆತಗಳಲ್ಲಿ 3 ಬೌಂಡರಿಯೊಂದಿಗೆ 18 ರನ್ ಬಾರಿಸಿದ್ದ ವೃದ್ಧಿಮಾನ್ ಸಾಹ, ಪೀಯುಷ್ ಚಾವ್ಲಾಗೆ ವಿಕೆಟ್ ಒಪ್ಪಿಸಿದ ಬಳಿಕ ನಿಜವಾದ ಆಟ ಆರಂಭವಾಯಿತು.
ಮುಂಬೈ vs ಗುಜರಾತ್: ಯಾರಿಗೆ IPL 2023 ಫೈನಲ್ ಅದೃಷ್ಟ?
2ನೇ ವಿಕೆಟ್‌ಗೆ ಶುಭ್‌ಮನ್ ಗಿಲ್‌ಗೆ ಜೊತೆಯಾದ ಬಿ.ಸಾಯಿ ಸುದರ್ಶನ್ ಕೇವಲ 64 ಎಸೆತಗಳಲ್ಲಿ 138 ರನ್ ಬಾರಿಸಿದರು. ಇದರಲ್ಲಿ ಸಾಯಿ ಸುದರ್ಶನ್ ಅವರ ಪಾಲು ಕೇವಲ 26 ಎಸೆತಗಳಲ್ಲಿ 38 ರನ್. ಇನ್ನೊಂದೆಡೆ ರಣಭೀಕರವಾಗಿ ಅಬ್ಬರಿಸಿದ ಶುಭ್‌ಮನ್ ಗಿಲ್ ಕೇವಲ 38 ಎಸೆತಗಳಲ್ಲಿ 95 ರನ್ ಚಚ್ಚಿದರು. 17ನೇ ಓವರ್‌ನ ಕೊನೆಯ ಎಸೆತದಲ್ಲಿ ಗಿಲ್ ಔಟಾಗುವ ವೇಳೆಗೆ ಗುಜರಾತ್ ಟೈಟಾನ್ಸ್ ತಂಡ 192 ರನ್ ಬಾರಿಸಿತ್ತಲ್ಲದೆ, ಸಲೀಸಾಗಿ 200ರ ಗಡಿ ದಾಟುವ ಹಂತದಲ್ಲಿತ್ತು. ಗಿಲ್ ಅಬ್ಬರದ ಆಟವಾಡಿದರೆ, ಎಸೆತಕ್ಕೆ ಒಂದರಂತೆ ರನ್ ಬಾರಿಸುತ್ತಿದ್ದ ಸಾಯಿ ಸುದರ್ಶನ್ ಅವರನ್ನು 19ನೇ ಓವರ್ ವೇಳೆಗೆ ಗುಜರಾತ್ ತಂಡ ನಿವೃತ್ತಿ ಮಾಡಿಸಿತು. ಈ ವೇಳೆಗೆ ಅವರು 31 ಎಸೆತಗಳಲ್ಲಿ 43 ರನ್ ಬಾರಿಸಿದರು. ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಕೇವಲ 13 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್‌ನೊಂದಿಗೆ 28 ರನ್ ಸಿಡಿಸುವ ಮೂಲಕ ತಂಡದ ಮೊತ್ತವನ್ನು 200ರ ಗಡಿ ದಾಟಿಸುವಲ್ಲಿ ನೆರವಾದರು. ಮುಂಬೈ ಇಂಡಿಯನ್ಸ್ ಪರವಾಗಿ ಆಕ್ಷ್ ಮಾಧ್ವಲ್ ಹಾಗೂ ಪೀಯುಷ್ ಚಾವ್ಲಾ ಹೊರತುಪಡಿಸಿ ಉಳಿದವರು ವಿಕೆಟ್ ಉರುಳಿಸುವಲ್ಲಿ ವಿಫಲರಾದರು.
5 ರನ್‌ಗೆ 5 ವಿಕೆಟ್ ಕಿತ್ತ ವೇಗಿ ಆಕಾಶ್ ಮಧ್ವಾಲ್..! ಈತ ಒಂದು ಕಾಲದಲ್ಲಿ ಆರ್‌ಸಿಬಿ ನೆಟ್ ಬೌಲರ್..!