IPL 2023: ಟಾಸ್‌ ಗೆದ್ದ ಮುಂಬೈ ಇಂಡಿಯನ್ಸ್‌ ಬೌಲಿಂಗ್‌ ಆಯ್ಕೆ

By Santosh NaikFirst Published May 26, 2023, 7:55 PM IST
Highlights

2023ರ ಐಪಿಎಲ್‌ನ ಫೈನಲ್‌ಗೇರುವ ಕೊನೆಯ ಘಟ್ಟದಲ್ಲಿರುವ ಮುಂಬೈ ಇಂಡಿಯನ್ಸ್‌ ಹಾಗೂ ಗುಜರಾತ್‌ ಟೈಟಾನ್ಸ್‌ ತಂಡಗಳು ಶುಕ್ರವಾರಸ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕಾದಾಟ ನಡೆಸಲಿವೆ.

ಅಹಮದಾಬಾದ್‌ (ಮೇ.26): ಹಾಲಿ ಆವೃತ್ತಿಯ ಐಪಿಎಲ್‌ನ ಕೊನೆಯ ಘಟ್ಟದಲ್ಲಿರುವ ಮುಂಬೈ ಇಂಡಿಯನ್ಸ್‌ ಹಾಗೂ ಹಾಲಿ ಚಾಂಪಿಯನ್‌ ಗುಜರಾತ್‌ ಟೈಟಾನ್ಸ್‌ ತಂಡಗಳು ಶುಕ್ರವಾರ ನಡೆಯಲಿರುವ 2ನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಟಾಸ್‌ ಗೆದ್ದಿರುವ ಮುಂಬೈ ಇಂಡಿಯನ್ಸ್‌ ತಂಡ ಮೊದಲು ಬೌಲಿಂಗ್‌ ಮಾಡುವ ತೀರ್ಮಾನ ಮಾಡಿದೆ. ಗುಜರಾತ್‌ ಟೈಟಾನ್ಸ್‌ ತಂಡ ಪಂದ್ಯಕ್ಕಾಗಿ ಎರಡು ಪ್ರಮುಖ ಬದಲಾವಣೆಗಳನ್ನು ಮಾಡಿದೆ. ದಸುನ್‌ ಶನಕ ಹಾಗೂ ದರ್ಶನ್‌ ನಲ್ಕಂಡೆ ಬದಲಿಗೆ ಜೋಶ್‌ ಲಿಟಲ್‌ ಹಾಗೂ ಸಾಯಿ ಸುದರ್ಶನ್‌ ಅವರನ್ನು ತಂಡಕ್ಕೆ ಆಯ್ಕೆ ಮಾಡಿದ್ದರೆ,  ಮುಂಬೈ ಇಂಡಿಯನ್ಸ್‌ ತಂಡ ಹೃತಿಕ್‌ ಶೋಕೀನ್‌ ಅವರನ್ನು ತಂಡದಿಂದ ಕೈಬಿಟ್ಟಿದ್ದು, ಕುಮಾರ ಕಾರ್ತಿಕೇಯ ಅವರನ್ನು ಆಯ್ಕೆ ಮಾಡಿದೆ.

ಗುಜರಾತ್ ಟೈಟಾನ್ಸ್ (ಪ್ಲೇಯಿಂಗ್ XI): ವೃದ್ಧಿಮಾನ್ ಸಹಾ(ವಿ.ಕೀ), ಶುಬ್ಮನ್ ಗಿಲ್, ಸಾಯಿ ಸುದರ್ಶನ್, ವಿಜಯ್ ಶಂಕರ್, ಹಾರ್ದಿಕ್ ಪಾಂಡ್ಯ(ನಾಯಕ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೋಹಿತ್ ಶರ್ಮಾ, ನೂರ್ ಅಹ್ಮದ್, ಮೊಹಮ್ಮದ್ ಶಮಿ.

ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ XI): ಇಶಾನ್ ಕಿಶನ್ (ವಿ.ಕೀ), ರೋಹಿತ್ ಶರ್ಮಾ (ನಾಯಕ), ಕ್ಯಾಮೆರಾನ್ ಗ್ರೀನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಟಿಮ್ ಡೇವಿಡ್, ಕ್ರಿಸ್ ಜೋರ್ಡಾನ್, ಪಿಯೂಷ್ ಚಾವ್ಲಾ, ಜೇಸನ್ ಬೆಹ್ರೆನ್‌ಡಾರ್ಫ್, ಕುಮಾರ್ ಕಾರ್ತಿಕೇಯ, ಆಕಾಶ್ ಮಧ್ವಲ್.

ನಾವು ಮೊದಲು ಬೌಲಿಂಗ್‌ ಮಾಡಬೇಕೆಂದೇ ಬಯಸಿದ್ದೆವು. ಆದರೆ, ತೊಂದರೆಯೇನಿಲ್ಲ. ನಾಕೌಟ್‌ಗಳು ಹಾಗೂ ಕ್ವಾಲಿಫೈಯರ್‌ ಪಂದ್ಯಗಳು ಮಜವಾಗಿರುತ್ತದೆ. ನಿಮ್ಮ ಶ್ರೇಷ್ಠ ಗೇಮ್‌ಅನ್ನು ಇಲ್ಲಿ ಆಡಬೇಕಾಗುತ್ತದೆ. ಅದರೊಂದಿಗೆ ಆಟವನ್ನು ಎಂಜಾಯ್‌ ಮಾಡಬೇಕು. ನಮ್ಮೆಲ್ಲಾ ಆಟವನ್ನು ಇಲ್ಲಿ ಆಡಿದರೆ, ರಿಸಲ್ಟ್‌ ಏನೇ ಆದರೂ ನಮಗೆ ತೃಪ್ತಿ ನೀಡುತ್ತದೆ. ನಮಗೆ ಜನರ ಬೆಂಬಲ ಹೇಗಿದೆ ಎನ್ನುವುದು ಅರ್ಥವಾಗುತ್ತಿದೆ. ಗುಜರಾತಿ ಜನರು ನಿಷ್ಠರು. ನಮ್ಮ ತಂಡದಲ್ಲಿ ಎರಡು ಬದಲಾವಣೆ ಮಾಡಿದ್ದೇವೆ ಎಂದು ಗುಜರಾತ್‌ ತಂಡದ ನಾಯಕ ಹಾರ್ದಿಕ್‌ ಪಾಂಡ್ಯ ತಿಳಿಸಿದ್ದಾರೆ.

ಮುಂಬೈ vs ಗುಜ​ರಾ​ತ್‌: ಯಾರಿಗೆ IPL 2023 ಫೈನಲ್‌ ಅದೃಷ್ಟ?

ನಾವು ಚೇಸ್‌ ಮಾಡಲು ಬಯಸುತ್ತೇವೆ. ಪಿಚ್‌ ಸ್ವಲ್ಪ ಮಟ್ಟಿಗೆ ಅಂಟು ಸ್ವಭಾವ ಇದ್ದಂತೆ ಕಾಣುತ್ತಿದೆ. ಪಿಚ್‌ನ ಉತ್ತಮ ಲಾಭವನ್ನು ಪಡೆದುಕೊಳ್ಳಲು ಪ್ರಯತ್ನಿಸಲಿದ್ದೇವೆ. ಪಂದ್ಯ ಸಾಗುತ್ತಿದ್ದಂತೆ ಪಿಚ್‌ ಕೂಡ ಉತ್ತಮವಾಗುತ್ತದೆ. ಆದರೆ, ಚೇಸಿಂಗ್‌ ನಮ್ಮ ಕಂಫರ್ಟ್‌. ಈ ಋತುವಿನಲ್ಲಿ ನಮ್ಮ ಚೇಸಿಂಗ್‌ ಅದ್ಭುತವಾಗಿದೆ. ಇದು ಬಹಳ ಭಿನ್ನ ತಂಡ. ತಂಡದಲ್ಲಿ ಸಾಕಷ್ಟು ಹೊಸ ಮುಖಗಳಿವೆ. ಇಂಥದ್ದೇ ಹಲವಾರು ಸ್ಥಿತಿಗಳನ್ನು ದಾಟಿಕೊಂಡು ನಾವು ಬಂದಿದ್ದೇವೆ. ಟೂರ್ನಿಯ ಆರಂಭದಲ್ಲಿ ಕೊಂಚ ಹಿಂಜರಿಕೆಗಳಿದ್ದೆವು. ಆದರೆ, ಈಗ ಎಲ್ಲವೂ ಸರಿಯಾಗಿದೆ ಎಂದು ಮುಂಬೈ ಇಂಡಿಯನ್ಸ್‌ ತಂಡದ ನಾಯಕ ರೋಹಿತ್‌ ಶರ್ಮ ಹೇಳಿದ್ದಾರೆ.

5 ರನ್‌ಗೆ 5 ವಿಕೆಟ್ ಕಿತ್ತ ವೇಗಿ ಆಕಾಶ್‌ ಮಧ್ವಾಲ್..! ಈತ ಒಂದು ಕಾಲದಲ್ಲಿ ಆರ್‌ಸಿಬಿ ನೆಟ್ ಬೌಲರ್‌..!

click me!