ಐಪಿಎಲ್ 2023 ಫೈನಲ್ ಹೋರಾಟಕ್ಕೆ ಚೆನ್ನೈ ಹಾಗೂ ಗುಜರಾತ್ ಟೈಟಾನ್ಸ್ ಸಜ್ಜಾಗಿದೆ. ಈ ಬಾರಿ ಟ್ರೋಫಿ ಗೆಲ್ಲುವ ತಂಡ ಯಾವುದು? ಈ ಕುತೂಹಲಕ್ಕೆ 2016ರ ಅಂಕಿ ಅಂಶ ಉತ್ತರ ಹೇಳುತ್ತಿದೆ.
ಅಹಮ್ಮದಾಬಾದ್(ಮೇ.27): ಐಪಿಎಲ್ 2023 ಟೂರ್ನಿ ಫೈನಲ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಪ್ರಶಸ್ತಿಗಾಗಿ ಹೋರಾಟ ನಡೆಸಲಿದೆ. ಮೇ.28 ರಂದು ಅಹಮ್ಮದಾಬಾದ್‌ನಲ್ಲಿ ಪಂದ್ಯ ನಡೆಯಲಿದೆ. ಇದರ ನಡುವೆ ಈ ಬಾರಿ ಟ್ರೋಫಿ ಗೆಲ್ಲುವ ತಂಡ ಯಾವುದು ಅನ್ನೋದು ಭಾರಿ ಚರ್ಚೆಯಾಗುತ್ತಿದೆ. ಇದರ ನಡುವೆ 2016ರ ಐಪಿಎಲ್ ಅಂಕಿ ಅಂಶದ ಪ್ರಕಾರ ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ಟ್ರೋಫಿ ಗೆಲ್ಲಲಿದೆ. ಗುಜರಾತ್ ಟೈಟಾನ್ಸ್ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಲಿದೆ.
2016ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ 2023ರಲ್ಲಿ ಗುಜರಾತ್ ಟೈಟಾನ್ಸ್ ಫೈನಲ್ ಹಾದಿ ಬಹುತೇಕ ಒಂದೇ ರೀತಿ ಇದೆ. ಹೀಗಾಗಿ ಈ ಬಾರಿ ಗುಜರಾತ್ ರನ್ನರ್ ಅಪ್ ಸ್ಥಾನ ಪಡೆದುಕೊಂಡರೆ, ಸಿಎಸ್‌ಕೆ ಕಪ್ ಗೆಲ್ಲಲಿದೆ ಎಂದು ಐಪಿಎಲ್ ಇತಿಹಾಸ ಹೇಳುತ್ತಿದೆ. ಉಭಯ ತಂಡಗಳು ಟೇಬಲ್ ಟಾಪರ್ಸ್ ಆಗಿ ಪ್ಲೇ ಆಫ್ ಪ್ರವೇಶ ಮಾಡಿತ್ತು. ಆದರೆ ಚೆನ್ನೈ ನೇರವಾಗಿ ಫೈನಲ್ ಪ್ರವೇಶಿಸಿದರೆ, ಗುಜರಾತ್ 2ನೇ ಕ್ವಾಲಿಫೈಯರ್ ಪಂದ್ಯ ಆಡಿ ಫೈನಲ್ ತಲುಪಿದೆ.
IPL 2023 ಚಾಂಪಿಯನ್ ತಂಡಕ್ಕೆ ಸಿಗುವ ಬಹುಮಾನ ಮೊತ್ತವೆಷ್ಟು?
2016ರಲ್ಲಿ ಫೈನಲ್ ತಲುಪಿದ ಆರ್‌ಸಿಬಿ ತಂಡ ಆರೇಂಜ್ ಕ್ಯಾಪ್ ಹೊಂದಿತ್ತು. ಅಂದು ನಾಯಕ ವಿರಾಟ್ ಕೊಹ್ಲಿ ಗರಿಷ್ಠ ರನ್ ಸಿಡಿಸಿ ಆರೇಂಜ್ ಕ್ಯಾಪ್‌ನೊಂದಿಗೆ ಫೈನಲ್ ಪಂದ್ಯ ಆಡಿದ್ದರು. 2023ರಲ್ಲಿ ಗುಜರಾತ್ ಟೈಟಾನ್ಸ್ ಆಟಗಾರ ಶುಬಮನ್ ಗಿಲ್ ಆರೇಂಜ್ ಕ್ಯಾಪ್ ಗಿಟ್ಟಿಸಿಕೊಂಡಿದ್ದಾರೆ. 2016ರಲ್ಲಿ ಆರ್‌ಸಿಬಿ ಸ್ಫೋಟಕ ಬ್ಯಾಟಿಂಗ್, ಅಸಾಧರಣ ಚೇಸಿಂಗ್, ಗರಿಷ್ಠ ರನ್ ಟಾರ್ಗೆಟ್ ಸೆಟ್ ಮೂಲಕ ಅದ್ಭುತ ಆಟ ಪ್ರದರ್ಶಿಸಿತ್ತು. ಈ ಬಾರಿ ಗುಜರಾತ್ ಟೈಟಾನ್ಸ್ 8ನೇ ಕ್ರಮಾಂಕದ ವರೆಗೂ ಸ್ಫೋಟಕ ಬ್ಯಾಟ್ಸ್‌ಮನ್ ಹೊಂದಿದೆ.
2016ರಲ್ಲಿ ಆರ್‌ಸಿಬಿ ತಂಡ ತವರಿನಲ್ಲಿ(ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು) ನಡೆದ ಕ್ವಾಲಿಫೈರ್ ಪಂದ್ಯದಲ್ಲಿ ಗೆಲುವು ಸಾಧಿಸಿ ಫೈನಲ್ ತಲುಪಿತ್ತು. ಇದೀಗ ಗುಜರಾತ್ ಟೈಟಾನ್ಸ್ ತನ್ನ ತವರಿನಲ್ಲಿ(ಅಹಮ್ಮದಾಬಾದ್)ಕ್ವಾಲಿಫೈಯರ್ ಪಂದ್ಯದಲ್ಲಿ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದೆ. ಇಷ್ಟೇ ಅಲ್ಲ 2016ರಲ್ ಆರ್‌ಸಿಬಿ ಫೈನಲ್ ಪಂದ್ಯವನ್ನೂ ತವರು ನೆಲ ಬೆಂಗಳೂರಿನಲ್ಲಿ ಆಡಿತ್ತು. ಇದೀಗ ಗುಜರಾತ್ ಟೈಟಾನ್ಸ್ ಫೈನಲ್ ಪಂದ್ಯವನ್ನ ಅಹಮ್ಮಾದಬಾದ್‌ನಲ್ಲಿ ಆಡುತ್ತಿದೆ.
2016ರಲ್ಲಿ ಆರ್‌ಸಿಬಿ 2023ರಲ್ಲಿ ಗುಜರಾತ್ ತನ್ನ ತವರಿನಲ್ಲಿ ಅತ್ಯುತ್ತಮ ಆಟ ಪ್ರದರ್ಶಿಸಿತ್ತು. ಇಷ್ಟೇ ಅಲ್ಲ ಗೆಲುವಿನ ಸರಾಸರಿಯಲ್ಲಿ ಗರಿಷ್ಠ ಪ್ರಮಾಣ ದಾಖಲಿಸಿತ್ತು. 2016ರಲ್ಲಿ ಆರ್‌ಸಿಬಿ ಫೈನಲ್ ಪಂದ್ಯಕ್ಕೂ ಮುನ್ನ ತವರಿನಲ್ಲಿ ಆಡಿದ 8 ಪಂದ್ಯದಲ್ಲಿ 5 ಗೆಲುವು ಸಾಧಿಸಿತ್ತು. 2023ರಲ್ಲಿ ಗುಜರಾತ್ ಟೈಟಾನ್ಸ್ ತವರಿನಲ್ಲಿ ಆಡಿದ 8 ಪಂದ್ಯದಲ್ಲಿ 5 ಗೆಲುವು ಸಾಧಿಸಿದೆ.
IPL 2023 ಶುಭ್‌ಮನ್ ಗಿಲ್ 3ನೇ ಶತಕದ ಅಬ್ಬರ; ಹಲವು ದಾಖಲೆ ನುಚ್ಚುನೂರು..!
2016ರ ಅಂಕಿ ಅಂಶದ ಪ್ರಕಾರ ಈ ಬಾರಿ ಗುಜರಾತ್ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವ ಸಾಧ್ಯತೆ ಇದೆ. ಆದರೆ ಅಂಕಿ ಅಂಶ ಪ್ರಸಕ್ತ ಪಂದ್ಯಕ್ಕೆ ನೆರವು ನೀಡಿದ್ದು ತೀರಾ ಕಡಿಮೆ. ಅಂದಿನ ಪ್ರದರ್ಶನ, ಕಂಡೀಷನ್, ತಂತ್ರ, ಎದುರಾಳಿಗಳ ಮೇಲೆ ಹೇರುವ ಒತ್ತಡ ಸೇರಿದಂತೆ ಹಲವು ಕಾರಣಗಳು ಗೆಲುವಿನ ಹಿಂದೆ ಅಡಗಿರುತ್ತದೆ. ಹೀಗಾಗಿ ಚೆನ್ನೈ ಅಥವಾ ಗುಜರಾತ್, ಫೈನಲ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ತಂಡ ಗೆಲುವು ಸಾಧಿಸಲಿದೆ.