ಐಪಿಎಲ್ ಪ್ಲೇ ಆಫ್‌ನಲ್ಲಿ ಶತಕ ಸಿಡಿಸಿದ ಶುಭ್‌ಮನ್ ಗಿಲ್
ಗಿಲ್ ಒಂದು ಶತಕ, ಹಲವು ದಾಖಲೆಗಳು ನಿರ್ಮಾಣ
ಗಿಲ್ ಶತಕದ ನೆರವಿನಿಂದ ಫೈನಲ್‌ಗೆ ಲಗ್ಗೆಯಿಟ್ಟ ಗುಜರಾತ್ ಟೈಟಾನ್ಸ್
ಅಹಮದಾಬಾದ್(ಮೇ.27): ಇತ್ತೀಚಿಗೆ ಶತಕಗಳ ಮೂಲಕವೇ ಎಲ್ಲಾ ಮಾದರಿ ಕ್ರಿಕೆಟ್ನಲ್ಲೂ ಅಬ್ಬರಿಸುತ್ತಿರುವ ಶುಭ್‌ಮನ್ ಗಿಲ್ 16ನೇ ಆವೃತ್ತಿ ಐಪಿಎಲ್‌ನಲ್ಲಿ 3ನೇ ಶತಕ ಸಿಡಿಸಿದ್ದು, ಹಲವು ದಾಖಲೆಗಳನ್ನು ಪುಡಿಗುಟ್ಟಿದ್ದಾರೆ. ಶುಕ್ರವಾರ ಮುಂಬೈ ವಿರುದ್ಧದ 2ನೇ ಕ್ವಾಲಿಫೈಯರ್ನಲ್ಲಿ ಗಿಲ್ 60 ಎಸೆತಗಳಲ್ಲಿ 7 ಬೌಂಡರಿ, 10 ಸಿಕ್ಸರ್‌ನೊಂದಿಗೆ 129 ರನ್ ಸಿಡಿಸಿದರು.
ಅವರ 3 ಶತಕಗಳು ಕೊನೆಯ 4 ಇನ್ನಿಂಗ್್ಸಗಳಲ್ಲಿ ಬಂದಿದೆ ಎಂಬುದು ಗಮನಾರ್ಹ. ಹೈದರಾಬಾದ್ ವಿರುದ್ಧ 101, ಆರ್‌ಸಿಬಿ ವಿರುದ್ಧ ಔಟಾಗದೆ 104 ರನ್ ಗಳಿಸಿದ್ದರು. ಇದರೊಂದಿಗೆ ಆವೃತ್ತಿಯೊಂದರಲ್ಲಿ 3 ಅಥವಾ ಅದಕ್ಕಿಂತ ಹೆಚ್ಚು ಶತಕ ಸಿಡಿಸಿದ ಭಾರತದ ಎರಡನೇ ಹಾಗೂ ಒಟ್ಟಾರೆ 3ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
.'s 𝐇𝐀𝐋𝐋 𝐎𝐅 𝐅𝐀𝐌𝐄:
✔️Youngest to score a century in IPL Playoffs
✔️Highest score in Playoffs (129)
✔️Joint-fastest hundred in Playoffs (49 balls)
✔️2nd batter in T20 history to score 3 centuries in 4 consecutive innings
✔️Most runs in 4… pic.twitter.com/VsIcbehYUc
2016ರಲ್ಲಿ ವಿರಾಟ್ ಕೊಹ್ಲಿ, 2022ರಲ್ಲಿ ಜೋಸ್ ಬಟ್ಲರ್ ತಲಾ 4 ಶತಕ ಬಾರಿಸಿದ್ದರು. ಅಲ್ಲದೇ ಐಪಿಎಲ್ ಪ್ಲೇ-ಆಫ್ ಪಂದ್ಯದಲ್ಲಿ ಶತಕ ಸಿಡಿಸಿದ 7ನೇ ಹಾಗೂ 10+ ಸಿಕ್ಸರ್ ಸಿಡಿಸಿದ ಮೊದಲ ಬ್ಯಾಟರ್ ಎನಿಸಿಕೊಂಡರು. ಇನ್ನು ಗಿಲ್ ಸಿಡಿಸಿದ 129 ರನ್ ಪ್ಲೇ-ಆಫ್‌ನಲ್ಲಿ ಆಟಗಾರನ ಗರಿಷ್ಠ ವೈಯಕ್ತಿಕ ಸ್ಕೋರ್. 2014ರಲ್ಲಿ ಚೆನ್ನೈ ವಿರುದ್ಧ ಪಂಜಾಬ್ನ ಸೆಹ್ವಾಗ್ 122 ರನ್ ಸಿಡಿಸಿದ್ದರು. 23 ವರ್ಷ 260 ದಿನದ ಶುಭ್‌ಮನ್ ಗಿಲ್, ಐಪಿಎಲ್ ಪ್ಲೇ ಆಫ್‌ನಲ್ಲಿ ಶತಕ ಸಿಡಿಸಿದ ಅತ್ಯಂತ ಕಿರಿಯ ಆಟಗಾರ ಎನ್ನುವ ದಾಖಲೆಯನ್ನು ನಿರ್ಮಿಸಿದ್ದಾರೆ.
IPL 2023 'ವರ್ಣಿಸಲು ಪದಗಳು ಸಾಲದು': ಶುಭ್‌ಮನ್ ಗಿಲ್ ಆಟ ಕೊಂಡಾಡಿದ ಕೊಹ್ಲಿ, ಎಬಿಡಿ..!
ಐಪಿಎಲ್ ಪ್ಲೇ ಆಫ್‌ನಲ್ಲಿ ಅತಿವೇಗದ ಶತಕ: ಶುಭ್‌ಮನ್ ಗಿಲ್, ಕೇವಲ 49 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ, ಐಪಿಎಲ್ ಪ್ಲೇ ಆಫ್‌ನಲ್ಲಿ ಅತಿವೇಗದ ಶತಕ ಸಿಡಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನಕ್ಕೇರಿದ್ದಾರೆ. ಈ ಮೊದಲು ವೃದ್ದಿಮಾನ್ ಸಾಹ ಹಾಗೂ ರಜತ್ ಪಾಟೀದಾರ್ ಕೂಡಾ ಐಪಿಎಲ್ ಪ್ಲೇ ಆಫ್ ಪಂದ್ಯದಲ್ಲಿ 49 ಎಸೆತಗಳಲ್ಲಿ ಮೂರಂಕಿ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾಗಿದ್ದರು.
ಐಪಿಎಲ್‌ನಲ್ಲಿ 3 ಶತಕ ಸಿಡಿಸಿದ ಅತಿಕಿರಿಯ ಕ್ರಿಕೆಟಿಗ: ಐಪಿಎಲ್ ಇತಿಹಾಸದಲ್ಲಿ, ಟೂರ್ನಿಯೊಂದರಲ್ಲಿ 3 ಶತಕ ಸಿಡಿಸಿದ 23 ವರ್ಷದೊಳಗೆ ಆಟಗಾರ ಎನ್ನುವ ಹೆಗ್ಗಳಿಕೆಗೆ ಗಿಲ್ ಪಾತ್ರರಾಗಿದ್ದಾರೆ.
ಪ್ಲೇ ಆಫ್ ಪಂದ್ಯದಲ್ಲಿ ಗರಿಷ್ಠ ಸಿಕ್ಸರ್(10) ಸಿಡಿಸಿದ ದಾಖಲೆ ಕೂಡಾ ಇದೀಗ ಶುಭ್‌ಮನ್ ಗಿಲ್ ಪಾಲಾಗಿದೆ. ಈ ಮೊದಲು ವೃದ್ದಿಮಾನ್ ಸಾಹ, ಕೆಕೆಆರ್ ಎದುರು ಪ್ಲೇ ಆಫ್ ಪಂದ್ಯದಲ್ಲಿ 8 ಸಿಕ್ಸರ್ ಸಿಡಿಸಿದ್ದರು. ಇದೀಗ ಗಿಲ್ ಪ್ಲೇ ಆಫ್‌ನಲ್ಲಿ 10 ಸಿಕ್ಸರ್ ಸಿಡಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ.
800+ ರನ್:
ಗಿಲ್ ಈ ಬಾರಿ 16 ಪಂದ್ಯಗಳಲ್ಲಿ 64.92ರ ಸರಾಸರಿಯಲ್ಲಿ 844 ರನ್ ಕಲೆಹಾಕಿದ್ದಾರೆ. ಈ ಮೂಲಕ ಐಪಿಎಲ್ ಆವೃತ್ತಿಯೊಂದರಲ್ಲಿ 800ಕ್ಕೂ ಹೆಚ್ಚು ರನ್ ಸಿಡಿಸಿದ ಭಾರತದ ಎರಡನೇ ಹಾಗೂ ಒಟ್ಟಾರೆ 4ನೇ ಬ್ಯಾಟರ್ ಎನಿಸಿಕೊಂಡರು. ಈ ಮೊದಲು ಕೊಹ್ಲಿ 2016ರಲ್ಲಿ 973, ಬಟ್ಲರ್ 2022ರಲ್ಲಿ 863 ಹಾಗೂ ವಾರ್ನರ್ 2016ರಲ್ಲಿ 848 ರನ್ ಗಳಿಸಿದ್ದರು. ಇನ್ನು ಶುಭ್‌ಮನ್ ಗಿಲ್ ಕೇವಲ 123 ರನ್ ಬಾರಿಸಿದರೆ, ವಿರಾಟ್ ಕೊಹ್ಲಿ ಹೆಸರಿನಲ್ಲಿರುವ ಗರಿಷ್ಠ ರನ್(973) ದಾಖಲೆ ಅಳಿಸಿ ಹಾಕಲಿದ್ದಾರೆ.