ಖಲೀಲ್ ಅಹ್ಮದ್ ಹಿಂದೆ ಬಿಸಿಸಿಐ ಬಿದ್ದಿರೋದ್ಯಾಕೆ..?

Published : Apr 28, 2022, 04:00 PM IST
ಖಲೀಲ್ ಅಹ್ಮದ್ ಹಿಂದೆ ಬಿಸಿಸಿಐ ಬಿದ್ದಿರೋದ್ಯಾಕೆ..?

ಸಾರಾಂಶ

ಐಪಿಎಲ್ 2022 ಅಲ್ಲಿ ಖಲೀಲ್ ಅಹ್ಮದ್ ನೀರಸ ನಿರ್ವಹಣೆ ತೋರಿದ್ದರೂ ಬಿಸಿಸಿಐ ಮಾತ್ರ ಖಲೀಲ್ ಅವರ ಮೇಲೆ ಹೆಚ್ಚಿನ ವಿಶ್ವಾಸವಿಟ್ಟಿದೆ. ಖಲೀಲ್ ಅಹ್ಮದ್ ಫಾರ್ಮ್ ಗೆ ಬರುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಅವಕಾಶಗಳನ್ನು ಸೃಷ್ಟಿಸಲು ಬಿಸಿಸಿಐ ಮುಂದಾಗಿದೆ.

ಮುಂಬೈ (ಏ. 28): ಐಪಿಎಲ್​ನ (IPL 2022) 41ನೇ ಪಂದ್ಯದಲ್ಲಿ ಇಂದು ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders ) ಮುಖಾಮುಖಿಯಾಗ್ತಿವೆ. ಮೊದಲ ಮುಖಾಮುಖಿಯಲ್ಲಿ ಡೆಲ್ಲಿ (DC) ಜಯ ಸಾಧಿಸಿತ್ತು. ಆ ಸೇಡು ತೀರಿಸಿಕೊಳ್ಳಲು ರೈಡರ್ಸ್ ಕಾದು ಕುಳಿತಿದೆ. ಡೆಲ್ಲಿ 7 ಪಂದ್ಯಗಳಲ್ಲಿ ಮೂರು ಗೆದ್ದು ನಾಲ್ಕರಲ್ಲಿ ಸೋಲು ಕಂಡಿದ್ದರೆ, ಕೆಕೆಆರ್​​ 8ರಲ್ಲಿ ಮೂರು ಗೆದ್ದು ಐದರಲ್ಲಿ ಸೋಲು ಕಂಡಿದೆ. ಎರಡೂ ತಂಡಕ್ಕೂ ಇಂದು ಗೆಲುವು ಅನಿವಾರ್ಯ. ಹಾಗಾಗಿ ವಾಂಖೆಡೆ ಸ್ಟೇಡಿಯಂನಲ್ಲಿ ಇಂದು ಬಿಗ್ ಫೈಟ್ ನಿರೀಕ್ಷಿಸಲಾಗಿದೆ.

ಭಾರತೀಯ ಕ್ರಿಕೆಟ್ (Indian Cricket) ಕಣ್ಣು ಖಲೀಲ್ ಅಹ್ಮದ್​ ಮೇಲೆ: ಇಂದಿನ ಪಂದ್ಯಕ್ಕಿಂತ ಇಡೀ ಭಾರತೀಯ ಕ್ರಿಕೆಟ್ ಚಿತ್ತ ಖಲೀಲ್ ಅಹ್ಮದ್ ಅವರತ್ತ ನೆಟ್ಟಿದೆ. ಈ ರಾಜಸ್ಥಾನ ಬೌಲರ್, ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿದ್ದು, 6 ಪಂದ್ಯಗಳಿಂದ 11 ವಿಕೆಟ್ ಪಡೆದಿದ್ದಾರೆ. 144 ಬಾಲ್​ ಎಸೆದು 190 ರನ್ ಬಿಟ್ಟುಕೊಟ್ಟಿದ್ದಾರೆ. ಅಂದರೆ 7.91ರ ಎಕಾನಮಿಯಲ್ಲಿ ರನ್ ನೀಡಿದ್ದಾರೆ. ಇವತ್ತು ಡೆಲ್ಲಿ ಪರ ಈತನೇ ಟ್ರಂಪ್​ ಕಾರ್ಡ್​ ಬೌಲರ್ ಕೂಡ.

ಅಷ್ಟೇ ಎಫೆಕ್ಟೀವ್ ಬೌಲರ್ ಅಲ್ಲದ ಖಲೀಲ್ ಅಹ್ಮದ್ ಹಿಂದೆ ಬಿಸಿಸಿಐ ಬಿದ್ದಿರೋದ್ಯಾಕೆ ಅನ್ನೋ ಪ್ರಶ್ನೆ ನಿಮ್ಮನ್ನ ಕಾಡ್ತಾ ಇರಬಹುದು. ಅದಕ್ಕೂ ಒಂದು ಕಾರಣವಿದೆ. ಖಲೀಲ್ ಈಗಲೇ ಟೀಂ ಇಂಡಿಯಾ ಪರ 11 ಒನ್​ಡೇ, 14 ಟಿ20 ಪಂದ್ಯಗಳನ್ನಾಡಿದ್ದಾರೆ. ಆದ್ರೆ 2019ರ ಬಳಿಕ ಅವರು ಟೀಮ್​ಗೆ ಸೆಲೆಕ್ಟ್ ಆಗಿಲ್ಲ. ಈಗ ಇವರ ಸೇವೆ ಟೀಂ ಇಂಡಿಯಾಗೆ ಬೇಕಿದೆ. ಘಟಾನುಘಟಿ ಬೌಲರ್ ಇದ್ದರೂ ಖಲೀಲ್ ಹಿಂದೆ ಬಿಸಿಸಿಐ ಬಿದ್ದಿರೋದ್ಯಾಕೆ ಗೊತ್ತಾ..? ಲೆಫ್ಟ್ ಆರ್ಮ್​ ಫಾಸ್ಟ್ ಬೌಲರ್ ಅನ್ನೋ ಒಂದೇ ಕಾರಣಕ್ಕೆ.

ಟಿ20 ವರ್ಲ್ಡ್​​ಕಪ್ ಗೆಲ್ಲಬೇಕು ಅಂದರೆ ಖಲೀಲ್ ಬೇಕೇ ಬೇಕು: 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದ ನಂತರ ಟೀಂ ಇಂಡಿಯಾ ಒಂದೇ ಒಂದು ಐಸಿಸಿ ಟೂರ್ನಿ ಗೆದ್ದಿಲ್ಲ. ಇದಕ್ಕೆ ಕಾರಣ ಹುಡುಕಿಕೊಂಡು ಹೊರಟರೆ ಒಬ್ಬ ಬೌಲರ್​ ಹೆಸರು ಬರುತ್ತದೆ. ಹೌದು, ಆ ಒಬ್ಬ ಬೌಲರ್​​​ಗೆ ಭಾರತೀಯರು ಹೆದರಿದ್ದರಿಂದಲೇ 9 ವರ್ಷದಿಂದ ಭಾರತಕ್ಕೆ ಐಸಿಸಿ ಟ್ರೋಫಿ ದಕ್ಕಿಲ್ಲ. ಆ ಬೌಲರ್ ಬೇರೆ ಯಾರೂ ಅಲ್ಲ, ಲೆಫ್ಟ್ ಆರ್ಮ್​ ಫಾಸ್ಟ್ ಬೌಲರ್.

IPL 2022 ಕೊನೇ ಓವರ್ ನಲ್ಲಿ 4 ಸಿಕ್ಸರ್ ಸಿಡಿಸಿ ಗೆದ್ದ ಗುಜರಾತ್ ಟೈಟಾನ್ಸ್!

2017ರ ಚಾಂಪಿಯನ್ಸ್ ಟ್ರೋಫಿ ಫೈನಲ್​ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸೋಲಲು ಮೊಹಮ್ಮದ್ ಅಮಿರ್​ ಅನ್ನೋ ಲೆಫ್ಟ್ ಆರ್ಮ್​ ಫಾಸ್ಟ್ ಬೌಲರ್ ಕಾರಣ. 2019ರ ಒನ್​ಡೇ ವರ್ಲ್ಡ್​ ಸೆಮಿಫೈನಲ್​ನಲ್ಲಿ ಸೋಲಲು ನ್ಯೂಜಿಲೆಂಡ್ ತಂಡದಲ್ಲಿದ್ದ ಲೆಫ್ಟಿ ಬೌಲರ್ ಕಾರಣ. 2021ರ ಟಿ20 ವಿಶ್ವಕಪ್​​ನಲ್ಲಿ ಪಾಕ್ ವಿರುದ್ಧ ಸೋಲಲೂ ಸಹ ಅದೇ ಲೆಫ್ಟ್ ಆರ್ಮ್​ ಫಾಸ್ಟ್ ಬೌಲರ್ಸ್ ಕಾರಣ. ಕಣ್ಣಿಗೆ ಕಾಣೋದು ಈ ಮೂರು ಪಂದ್ಯ ಮಾತ್ರ. ಆದರೆ ಅದೆಷ್ಟೋ ಪಂದ್ಯಗಳಲ್ಲಿ ಲೆಫ್ಟ್ ಆರ್ಮ್​ ಫಾಸ್ಟ್ ಬೌಲರ್ಸ್​ಗೆ ಭಾರತೀಯರು ಆಡಲು ಪರದಾಡಿದ್ದಾರೆ.

ಸಾರ್ವಕಾಲಿನ ಕನಸಿನ ಐಪಿಎಲ್ ತಂಡವನ್ನು ಪ್ರಕಟಿಸಿದ ಹರ್ಭಜನ್ ಸಿಂಗ್..!

ಈಗ ಭಾರತಕ್ಕೆ ಒಬ್ಬ ಲೆಫ್ಟ್ ಆರ್ಮ್​ ಫಾಸ್ಟ್ ಬೌಲರ್ ಬೇಕಿದ್ದಾನೆ. ಈ ಐಪಿಎಲ್​ನಲ್ಲಿ ಭಾರತೀಯ ಲೆಫ್ಟಿ ಬೌಲರ್ ಪೈಕಿ ಶೈನ್ ಆಗ್ತಿರೋದು ಖಲೀಲ್ ಅಹ್ಮದ್ ಮಾತ್ರ. ಹಾಗಾಗಿಯೇ ಬಿಸಿಸಿಐ ಖಲೀಲ್ ಹಿಂದೆ ಬಿದ್ದಿರೋದು. ಈ ಸೀಸನ್​ನಲ್ಲಿ ಅಹ್ಮದ್ ಉತ್ತಮ ಪ್ರದರ್ಶನ ನೀಡಿದ್ದೇ ಆದ್ರೆ ಟಿ20 ವಿಶ್ವಕಪ್  ತಂಡದಲ್ಲಿ ಸ್ಥಾನ ಪಡೆಯೋದು ಕನ್ಫರ್ಮ್​. ಟೀಮ್​ನಲ್ಲಿ ಸ್ಥಾನ ಪಡೆಯದಿದ್ದರೂ ಹೆಚ್ಚುವರಿ ಆಟಗಾರನಾಗಿ ಆಸ್ಟ್ರೇಲಿಯಾ ಫ್ಲೈಟ್ ಹತ್ತಲಿದ್ದಾರೆ. ಯಾಕೆ ಗೊತ್ತಾ..? ಟಿ20 ವಿಶ್ವಕಪ್ ವೇಳೆ ಭಾರತೀಯರಿಗೆ ನೆಟ್ಸ್​ನಲ್ಲಿ ಬೌಲಿಂಗ್ ಮಾಡೋಕೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಕಷ್ಟ ನಿವಾರಣೆಗೆ ಸಿಂಹಾಚಲಂ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವಿರಾಟ್ ಕೊಹ್ಲಿ
ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ ವೆಂಕಟೇಶ್ ಪ್ರಸಾದ್ ಅಧ್ಯಕ್ಷ, ಚುನಾವಣಾ ಫಲಿತಾಂಶ ಪ್ರಕಟ