IPL 2022 ರಾಜಸ್ಥಾನ ವಿರುದ್ಧ ಟಾಸ್ ಗೆದ್ದ ಲಖನೌ ಸೂಪರ್ ಜೈಂಟ್ಸ್!

By Suvarna NewsFirst Published Apr 10, 2022, 7:03 PM IST
Highlights
  • ರಾಜಸ್ಥಾನ ಹಾಗೂ ಲಖನೌ ನಡುವಿನ 20ನೇ ಐಪಿಎಲ್ ಲೀಗ್ ಪಂದ್ಯ
  • ಟಾಸ್ ಗೆದ್ದ ಲಖನೌ ಸೂಪರ್ ಜೈಂಟ್ಸ್ ತಂಡ ಫೀಲ್ಡಿಂಗ್ ಆಯ್ಕೆ
  • ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯ

ಮುಂಬೈ(ಏ.10): ಐಪಿಎಲ್ 2022ರ ಟೂರ್ನಿಯ 20ನೇ ಲೀಗ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡ ಮುಖಾಮುಖಿಯಾಗಿದೆ. ಟಾಸ್ ಗೆದ್ದ ಲಖನೌ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.

ಲಖನೌ ಸೂಪರ್ ಜೈಂಟ್ಸ್  ಪ್ಲೇಯಿಂಗ್ 11
ಕೆಎಲ್ ರಾಹುಲ್(ನಾಯಕ), ಕ್ವಿಂಟನ್ ಡಿಕಾಕ್, ಮಾರ್ಕಸ್ ಸ್ಟೊಯ್ನಿಸ್, ದೀಪಕ್ ಹೂಡ, ಆಯುಷ್ ಬದೋನಿ, ಕ್ರುನಾಲ್ ಪಾಂಡ್ಯ, ಜೇಸನ್ ಹೋಲ್ಡರ್, ಕೆ ಗೌತಮ್, ದುಷ್ಮಂತ್ ಚಮೀರಾ, ರವಿ ಬಿಶ್ನೋಯ್, ಅವೇಶ್ ಖಾನ್

Latest Videos

ರಾಜಸ್ಥಾನ ರಾಯಲ್ಸ್ ಪ್ಲೇಯಿಂಗ್ 11
ಜೋಸ್ ಬಟ್ಲರ್,, ರಸಿ ವ್ಯಾಂಡರ್ ಡಸೆನ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್(ನಾಯಕ), ಶಿಮ್ರೊನ್ ಹೆಟ್ಮೆಯರ್, ರಿಯಾನ್ ಪರಾಗ್, ಕುಲ್ದೀಪ್ ಸೇನ್, ಆರ್ ಅಶ್ವಿನ್, ಟ್ರೆಂಟ್ ಬೋಲ್ಟ್, ಪ್ರಸಿದ್ಧ್ ಕೃಷ್ಣ, ಯಜುವೇಂದ್ರ ಚಹಾಲ್

IPL 2022: ದಿನೇಶ್​ ಕಾರ್ತಿಕ್ ಡಿಫರೆಂಟ್​​ ಹೆಲ್ಮೆಟ್​​ ಹಾಕಿ ಆಡೋದ್ಯಾಕೆ..?

ಮುಂಬೈ ವಾಂಖೆಡೆ ಕ್ರೀಡಾಂಗಣದಲ್ಲಿ ರಾಜಸ್ಥಾನ ರಾಯಲ್ಸ್ ಆಡಿದ 14 ಪಂದ್ಯಗಳ ಪೈಕಿ 8 ಪಂದ್ಯಗಳನ್ನು ಸೋತಿದೆ. 6 ಗೆಲುವು ಕಂಡಿದೆ. ಇತ್ತ ಲಖನೌ ಸೂಪರ್ ಜೈಂಟ್ಸ್ ಕೇವಲ ಒಂದು ಪಂದ್ಯ ಸೋತಿದ್ದರೆ, 3 ಪಂದ್ಯಗಳನ್ನು ವಾಂಖೆಡೆ ಕ್ರೀಡಾಂಗಣದಲ್ಲಿ ಗೆದ್ದುಕೊಂಡಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ಚೇಸಿಂಗ್ ಮಾಡಲು ಹೆಚ್ಚಿನ ತಂಡಗಳು ಬಯಸುತ್ತಿದೆ. ಇಲ್ಲಿ ಚೇಸಿಂಗ್ ತಂಡ ಹೆಚ್ಚಿನ ಗೆಲುವು ಕಂಡಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಡ್ಯೂ ಫ್ಯಾಕ್ಟರ್ ಸವಾಲಾಗಲಿದೆ.

ರಾಜಸ್ಥಾನ ರಾಯಲ್ಸ್ ತಂಡದ ಜೋಸ್ ಬಟ್ಲರ್ ಸದ್ಯ ಆರೇಂಜ್ ಕ್ಯಾಪ್ ಧರಿಸಿದ್ದಾರೆ. 205 ರನ್ ಸಿಡಿಸಿರುವ ಬಟ್ಲರ್ ಇಂದೂ ಕೂಡ ಅಬ್ಬರಿಸುವ ವಿಶ್ವಾಸದಲ್ಲಿದ್ದಾರೆ. ಇತ್ತ ಅತ್ಯುತ್ತಮ ಆರಂಭ ನೀಡುತ್ತಿರುವ ಕೆಎಲ್ ರಾಹುಲ್ 132 ರನ್ ಸಿಡಿಸಿ ಗರಿಷ್ಠ ರನ್ ಸಿಡಿಸಿದ 2022ರ ಐಪಿಎಲ್ ಆಟಗಾರರ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದಾರೆ.

IPL 2022: ಚೆನ್ನೈ ತಂಡ ಸೇರಲು ನಾನಿನ್ನು 2 ವರ್ಷ ಚಿಕ್ಕವನು ಅಂದಿದ್ದೇಕೆ ಅಮಿತ್ ಮಿಶ್ರಾ..?

ಲಖನೌ ತಂಡಕ್ಕೆ ಡೆತ್ ಓವರ್‌ನಲ್ಲಿ ರನ ತಂದುಕೊಡಬಲ್ಲ ಆಯುಷ್ ಬದೋನಿ 39 ಎಸೆತದಲ್ಲಿ 74 ರನ್ ಸಿಡಿಸಿದ್ದಾರೆ. 189.74 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ. 

ಐಪಿಎಲ್ ಪಾಯಿಂಟ್ಸ್ ಟೇಬಲ್‌ನಲ್ಲಿ ಲಖನೌ ಸೂಪರ್ ಜೈಂಟ್ಸ್  4ನೇ ಸ್ಥಾನದಲ್ಲಿದೆ. ರಾಜಸ್ಥಾನ ರಾಯಲ್ಸ್ 5ನೇ ಸ್ಥಾನದಲ್ಲಿದೆ. ಲಖನೌ ಆಡಿದ 4 ಪಂದ್ಯದಲ್ಲಿ 3 ಗೆಲುವು ಕಂಡಿದೆ. ಇತ್ತ ರಾಜಸ್ಥಾನ 3ರಲ್ಲಿ 2 ಗೆಲುವು ದಾಖಲಿಸಿದೆ.

ಅಂಕಪಟ್ಟಿಯಲ್ಲಿ ಕೆಕೆಆರ್ 4 ಪಂದ್ಯದಲ್ಲಿ 3 ಗೆಲುವಿನೊಂದಿಗೆ ಮೊದಲ ಸ್ಥಾನದಲ್ಲಿದೆ. ಗುಜರಾತ್ ಟೈಟಾನ್ಸ್ 3 ಪಂದ್ಯದಲ್ಲೂ ಗೆಲುವು ಸಾಧಿಸಿದೆ. ಈ ಮೂಲಕ 2ನೇ ಸ್ಥಾನದಲ್ಲಿದೆ. ಟೂರ್ನಿಯಲ್ಲಿ ಗುಜರಾತ್ ಸೋಲಿಲ್ಲದ ಸರದಾರ ಎನಿಸಿಕೊಂಡಿದೆ. ಅತ್ಯುತ್ತಮ ಪ್ರದರ್ಶನದ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡಿದ 4ರಲ್ಲಿ 3 ಪಂದ್ಯಗಳನ್ನು ಗೆದ್ದು 3ನೇ ಸ್ಥಾ ಅಲಂಕರಿಸಿದೆ. ಇನ್ನು ನಾಲ್ಕು ಮತ್ತು 5ನೇ ಸ್ಥಾನದಲ್ಲಿ ಲಖನೌ ಹಾಗೂ ರಾಜಸ್ಥಾನ ತಂಡವಿದೆ. ಪಂಜಾಬ್ ಕಿಂಗ್ಸ್ 4ರಲ್ಲಿ 2 ಪಂದ್ಯ ಗೆದದು 6ನೇ ಸ್ಥಾನದಲ್ಲಿದೆ. ಡೆಲ್ಲಿ ಕ್ಯಾಪಿಟಲ್ಸ್ 3ರಲ್ಲಿ 1 ಗೆಲುವು ದಾಖಲಿಸಿ 7ನೇ ಸ್ಥಾನದಲ್ಲಿದೆ. ಇನ್ನು ಸತತ ಸೋಲಿನಿಂದ ಕಂಗೆಟ್ಟಿರುವ ಸನ್ ರೈಸರ್ಸ್ ಹೈದರಾಬಾದ್ 3ರಲ್ಲಿ 1 ಗೆಲುವು ದಾಖಲಿಸಿ 8ನೇ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್ ಆಡಿದ 4 ಪಂದ್ಯಗಳನ್ನು ಸೋತು 9 ಹಾಗೂ ಚೆನ್ನೈ ಸೂಪರ್ ಕಿಂಗ್ಸ್  4 ಪಂದ್ಯಗಳನ್ನು ಸೋತು ಕೊನೆಯ ಸ್ಥಾನದಲ್ಲಿದೆ.

click me!