IPL 2022: ಅನಿಲ್ ಕುಂಬ್ಳೆ ಬೆನ್ನಿಗೆ ಬಿದ್ದ ಬೇತಾಳ..!

Published : Apr 10, 2022, 06:36 PM IST
IPL 2022: ಅನಿಲ್ ಕುಂಬ್ಳೆ ಬೆನ್ನಿಗೆ ಬಿದ್ದ ಬೇತಾಳ..!

ಸಾರಾಂಶ

* ಪಂಜಾಬ್ ಕಿಂಗ್ಸ್‌ ತಂಡವನ್ನು ಕಾಡುತ್ತಿದ್ದಾರೆ ರಾಹುಲ್ ತೆವಾಟಿಯಾ * ಕನ್ನಡಿಗ ಅನಿಲ್ ಕುಂಬ್ಳೆ ಬೆನ್ನಿಗೆ ಬಿದ್ದಿದ್ದಾನೆ ತೆವಾಟಿಯಾ * ಕುಂಬ್ಳೆ ಹುಡುಗರನ್ನ ಕಾಡೋದು ನಿಲ್ಲಿಸಿಲ್ಲ ಎಡಗೈ ಬ್ಯಾಟರ್‌

ಬೆಂಗಳೂರು(ಏ.10): ಮುಯೂರ ಸಿಂಹಾಸನವನ್ನ ನಿರ್ಮಿಸಿ ರಾಜ್ಯಭಾರ ಮಾಡಿದ ರಾಜ ವಿಕ್ರಮಾದಿತ್ಯನಿಗೆ ಬೇತಾಳ ಹೇಗೆಲ್ಲಾ ಕಾಡಿತ್ತು ಅನ್ನೋದು ಎಲ್ಲರಿಗೂ ಗೊತ್ತು. ರಾಜ ಎಲ್ಲಿಗೆ ಹೋದ್ರು, ಏನೇ ಮಾಡಿದ್ರೂ ಬೇತಾಳ ಮಾತ್ರ ರಾಜನ ಬೆನ್ನ ಹಿಂದೆಯೇ ಇರುತ್ತಿತ್ತು. ಬಿಟ್ಟು ಬಿಡದೆ ಕಾಡುತ್ತಿತ್ತು. ಈಗ ಐಪಿಎಲ್​ನಲ್ಲಿ ಒಬ್ಬ ಆಟಗಾರ ಕನ್ನಡಿಗ ಅನಿಲ್ ಕುಂಬ್ಳೆ (Anil Kumble) ಬೆನ್ನಿಗೆ ಬಿದ್ದಿದ್ದಾನೆ. ವಿಕ್ರಮಾದಿತ್ಯನಿಗೆ ಬೇತಾಳ ಹೇಗೆ ಕಾಡಿತೋ ಹಾಗೆ ಕುಂಬ್ಳೆಯನ್ನ ಈತ ಕಾಡ್ತಿದ್ದಾನೆ. ತಂಡದ ಬದಲಾದ್ರೂ ಕುಂಬ್ಳೆಯನ್ನ ಮತ್ತು ಕುಂಬ್ಳೆ ಹುಡುಗರನ್ನ ಕಾಡೋದು ನಿಲ್ಲಿಸಿಲ್ಲ. ಆ ಬೇತಾಳ ಬೇರೆ ಯಾರೂ ಅಲ್ಲ. ರಾಹುಲ್ ತೆವಾಟಿಯಾ.

ತಂಡ ಬದಲಿಸಿದ್ರೂ ಪಂಜಾಬ್ ಕಾಡೋದು ಬಿಡ್ತಿಲ್ಲ:

ಕರ್ನಾಟಕದ ಅನಿಲ್ ಕುಂಬ್ಳೆ ಪಂಜಾಬ್ ಕಿಂಗ್ಸ್ (Punjab Kings) ಕೋಚ್. ಅವರು ಕೋಚ್ ಆದ್ಮೇಲೆ ಪಂಜಾಬ್ ತಂಡವನ್ನ ಕನ್ನಡಿಗನೇ ಆದ ಕೆಎಲ್ ರಾಹುಲ್ (KL Rahul) ಮುನ್ನಡೆಸಿದ್ದರು. ಈ ಸಲ ಮತ್ತೊಬ್ಬ ಕನ್ನಡಿಗ ಮಯಾಂಕ್ ಅಗರ್ವಾಲ್ (Mayank Agarwal) ಪಂಜಾಬ್ ಟೀಮ್ ಲೀಡ್ ಮಾಡ್ತಿದ್ದಾರೆ. ಆದರೆ ಈ ಪಂಜಾಬ್​​​​​​​​​​​ ತಂಡವನ್ನ ರಾಹುಲ್ ತೆವಾಟಿಯಾ ಬಿಟ್ಟು ಬಿಡದೆ ಕಾಡೋಕೆ ಶುರು ಮಾಡಿದ್ದಾರೆ. ಅದು ಯಾವ ಮಟ್ಟಕ್ಕೆ ಅಂದ್ರೆ ಪಂಜಾಬ್ ಕೈಯಲ್ಲಿದ್ದ ಗೆಲುವನ್ನ ಕಸಿದುಕೊಳ್ತಿದ್ದಾರೆ.

2020ರಲ್ಲಿ ಒಂದೇ ಓವರ್​​ನಲ್ಲಿ 5 ಸಿಕ್ಸ್​: 2022ರಲ್ಲಿ ಸತತ 2 ಸಿಕ್ಸ್ 

2020ರಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡಿದ್ದ ರಾಹುಲ್​ ತೆವಾಟಿಯಾ, ಪಂಜಾಬ್ ಕಿಂಗ್ಸ್ ವಿರುದ್ಧ 31 ಬಾಲ್​ನಲ್ಲಿ 7 ಸಿಕ್ಸ್ ಸಹಿತ 53 ರನ್ ಬಾರಿಸಿದ್ದರು. ರಾಯಲ್ಸ್ 224 ರನ್ ಚೇಸ್ ಮಾಡಿ ಗೆದ್ದಿತ್ತು. ತೆವಾಟಿಯಾ ಒಂದೇ ಓವರ್​ನಲ್ಲಿ ಐದು ಸಿಕ್ಸ್ ಸಿಡಿಸಿ, ಪಂಜಾಬ್ ಕೈಯಿಂದ ಗೆಲುವನ್ನ ಕಸಿದುಕೊಂಡಿದ್ದರು. ಈ ಸಲ ರಾಹುಲ್ ತೆವಾಟಿಯಾ, ಲಕ್ನೋ ಸೂಪರ್ ಜೈಂಟ್ಸ್ ತಂಡ ಸೇರಿಕೊಂಡರೂ, ಪಂಜಾಬ್ ಕಿಂಗ್ಸ್ ತಂಡವನ್ನ ಕಾಡೋದನ್ನ ನಿಲ್ಲಿಸಿಲ್ಲ. ಮೊನ್ನೆ ಪಂಜಾಬ್ ವಿರುದ್ಧ ಕೊನೆ ಎರಡು ಬಾಲ್​ನಲ್ಲಿ ಲಕ್ನೋ ಗೆಲುವಿಗೆ 12 ರನ್ ಬೇಕಿತ್ತು. ಒಡೆಯನ್ ಸ್ಮಿತ್​​​​​ಗೆ ಸತತ ಎರಡು ಸಿಕ್ಸ್ ಸಿಡಿಸಿ ಲಕ್ನೋ ತಂಡವನ್ನ ರೋಚಕವಾಗಿ ಗೆಲ್ಲಿಸಿದ್ರು ತೆವಾಟಿಯಾ. ಪುಣೆಯಲ್ಲಿದ್ದಾಗ ಧೋನಿ ಇದೇ ಪಂಜಾಬ್ ವಿರುದ್ಧ ಸತತ ಎರಡು ಸಿಕ್ಸ್ ಸಿಡಿಸಿ ಗೆಲ್ಲಿಸಿದ್ದರು. ಆ ದಾಖಲೆಯನ್ನ ತೆವಾಟಿಯಾ ಸರಿಗಟ್ಟಿದ್ದಾರೆ.

ಪಂಜಾಬ್ ಕಿಂಗ್ಸ್​ ವಿರುದ್ಧ ಕೊನೆ 10 ಬಾಲ್, 8 ಸಿಕ್ಸ್:

ಮೊನ್ನೆಯ ಪಂದ್ಯ ಸೇರಿದಂತೆ ಪಂಜಾಬ್ ಕಿಂಗ್ಸ್ ವಿರುದ್ಧ ಚೇಸಿಂಗ್ ವೇಳೆ ರಾಹುಲ್ ಕೊನೆ 10 ಬಾಲ್​ನಲ್ಲಿ 8 ಸಿಕ್ಸರ್​ ಸಿಡಿಸಿದ್ದಾರೆ. ಜೊತೆಗೆ ಎರಡು ಪಂದ್ಯವನ್ನ ಪಂಜಾಬ್ ಕೈಯಿಂದ ಕಿತ್ತುಕೊಂಡಿದ್ದಾರೆ. ರಾಜಸ್ಥಾನದಿಂದ ಲಕ್ನೋಗೆ ಹೋದ್ರೂ ಪಂಜಾಬ್ ರಾಜರನ್ನ ಕಾಡೋದನ್ನ ನಿಲ್ಲಿಸಿಲ್ಲ. ಅದಕ್ಕೆ ನಾವ್ ಮೊದಲೇ ಹೇಳಿದ್ದು ಅನಿಲ್ ಕುಂಬ್ಳೆ ಬೆನ್ನಿಗೆ ಬಿದ್ದ ಬೇತಾಳ ಅಂತ.

IPL 2022: ಸಿಕ್ಸರ್ ಬಾರಿಸಿನೇ ಐಪಿಎಲ್‌ ಮ್ಯಾಚ್​ ಗೆದ್ದ 4 ತಂಡಗಳಿವು..!

ಮುಂಬೈ: ಮಾರ್ಚ್​ 26ಕ್ಕೆ ಆರಂಭಗೊಂಡ ಐಪಿಎಲ್ ನಲ್ಲಿ 17 ಪಂದ್ಯಗಳು ಮುಗಿದಿವೆ. ಮೊದಲ ವಾರಕ್ಕಿಂತ ಎರಡನೇ ವಾರದ ಪಂದ್ಯಗಳು ಸಖತ್ ಥ್ರಿಲ್ಲಿಂಗ್​ ​​​​​​​ನೀಡ್ತಿವೆ. ಅದ್ರಲ್ಲೂ ಈ ವಾರದಲ್ಲಿ ಮಂಗಳವಾರದಿಂದ ಶುಕ್ರವಾರದವರೆಗೆ ನಡೆದ ನಾಲ್ಕು ಪಂದ್ಯಗಳು ಸಿಕ್ಸ್​​​ನೊಂದಿಗೆ ಜಯಗಳಿಸಿವೆ. ಈ ಮ್ಯಾಚಸ್​​ ನೋಡುಗರಿಗೆ ಭರ್ಜರಿ ಭರಪೂರ ಮನರಂಜನೆ ನೀಡಿವೆ. 

ಸಿಕ್ಸ್ ಬಾರಿಸಿ ಆರ್​ಸಿಬಿಗೆ ಗೆಲುವು ತಂದುಕೊಟ್ಟ ಹರ್ಷಲ್: ಏಪ್ರಿಲ್ 5ರಂದು ನಡೆದ ಆರ್​ಸಿಬಿ ಹಾಗೂ ರಾಜಸ್ಥಾನ ರಾಯಲ್ಸ್‌ ನಡುವಿನ ಪಂದ್ಯ ಸಾಕಷ್ಟು ರೋಚಕವಾಗಿತ್ತು. ಡುಪ್ಲೆಸಿಸ್ ಪಡೆ 170 ರನ್ ಗುರಿ ಬೆನ್ನಟ್ಟಿದ್ದಾಗ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹರ್ಷಲ್ ಪಟೇಲ್,​ ಸಿಕ್ಸ್ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ರು.

ಕಮಿನ್ಸ್ ​ಸಿಕ್ಸ್ ಮೋಡಿ.. ಕೆಕೆಆರ್​ಗೆ ಪ್ರಚಂಡ ಜಯ: ಈ ಪಂದ್ಯವಂತೂ ಅಭಿಮಾನಿಗಳ ಕಣ್ಣುಂಚಿನಲ್ಲಿ ಇನ್ನೂ ಹಾಗೇ ಉಳಿದಿದೆ. ಮುಂಬೈ ಇಂಡಿಯನ್ಸ್‌ ಎದುರಿನ ಪಂದ್ಯದಲ್ಲಿ ಪ್ಯಾಟ್​​ ಕಮಿನ್ಸ್ ವೀರಾವೇಶ ತೋರಿದ್ರು. ಶರವೇಗದ ಅರ್ಧಶತಕದ ಜೊತೆ ಸಿಕ್ಸ್​ ಸಿಡಿಸಿ ಕೆಕೆಆರ್​​​​​ಗೆ ಪ್ರಚಂಡ ಗೆಲುವಿಗೆ ಕಾರಣರಾಗಿದ್ರು. 14 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ಐಪಿಎಲ್‌ನಲ್ಲಿ ಕೆ.ಎಲ್‌ ರಾಹುಲ್‌ ಜತೆ ಅತಿವೇಗದ ಆಟಗಾರರ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.

ಆಯುಶ್ ಬದೋನಿ ವಿನ್ನಿಂಗ್​ ಸಿಕ್ಸ್​​​.. ಡೆಲ್ಲಿಗೆ ಶಾಕ್​​: ಇನ್ನು 15ನೇ ಐಪಿಎಲ್​​​​ನ 15ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಹಾಗೂ ಲಕ್ನೋ ತಂಡಗಳು ಮುಖಾಮುಖಿಯಾಗಿದ್ವು. ಭಾರಿ ಜಿದ್ದಾಜಿದ್ದಿನಿಂದ ಕೂಡಿದ ಪಂದ್ಯದಲ್ಲಿ ಯಂಗ್​​​​​​​​​ ಟೈಗರ್​​ ಆಯುಶ್​ ಬದೋನಿ ಸಿಕ್ಸ್​​​ನೊಂದಿಗೆ ತಂಡಕ್ಕೆ ಗೆಲುವು ತಂದುಕೊಟ್ರು.

ಕೊನೆ ಎಸೆತದಲ್ಲಿ ಸಿಕ್ಸ್​  ಸಿಡಿಸಿ ಪಂಜಾಬ್​​ಗೆ​ ವಿಲನ್ ಆದ ತೆವಾಟಿಯಾ: ಪಂಜಾಬ್​​​-ಗುಜರಾತ್ ನಡುವಿನ ಪಂದ್ಯ ಕೊನೆ ಎಸೆತದವರೆಗೂ ಸಾಗಿತ್ತು. ಪಂಜಾಬ್​ ಗೆಲ್ಲಲು ಕೊನೆ ಎಸೆತದಲ್ಲಿ 6 ರನ್​​​ ಬೇಕಿತ್ತು. ಸ್ಟ್ರೈಕ್​ನಲ್ಲಿದ್ದ ಆಲ್​ರೌಂಡರ್  ರಾಹುಲ್​ ತೆವಾಟಿಯಾ ಚೆಂಡನ್ನ ಸಿಕ್ಸರ್​ಗಟ್ಟಿ ವಿನ್ನಿಂಗ್ ಹೀರೋ ಅನ್ನಿಸಿಕೊಂಡಿದ್ರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮುಂಬೈನಲ್ಲಿ ಮೆಸ್ಸಿ ಮೇನಿಯಾ! ಫುಟ್ಬಾಲ್‌ ಲೆಜೆಂಡ್‌ಗೆ 2011ರ ವಿಶ್ವಕಪ್ ಜೆರ್ಸಿ ಕೊಟ್ಟ ಸಚಿನ್
ಸೌತ್ ಆಫ್ರಿಕಾ ವಿರುದ್ದ 3ನೇ ಟಿ20 ಗೆದ್ದ ಟೀಂ ಇಂಡಿಯಾ, ಸರಣಿಯಲ್ಲಿ 2-1 ಮುನ್ನಡೆ