
ಮುಂಬೈ(ಮೇ.11): CSK ಆಯ್ತು, ಈಗ KKR ಸರದಿ, ರವೀಂದ್ರ ಜಡೇಜಾನನ್ನು ಕ್ಯಾಪ್ಟನ್ ಮಾಡಿದ್ದ CSK ಫ್ರಾಂಚೈಸಿ, ದಿಢೀರ್ ಅಂತ ಕೆಳೆಗಿಸಿ, ಮತ್ತೆ ಧೋನಿ ಕ್ಯಾಪ್ಟನ್ ಮಾಡಿ, ಏನೂ ಆಗಿಲ್ಲವೇನೋ ಅನ್ನೋ ಹಾಗೆ ಸೈಲೆಂಟ್ ಆಗಿ ಇದ್ದಾರೆ. CSK ನಾಯಕತ್ವದ ವಿವಾದ ತಣ್ಣಗಾದ ಬೆನ್ನಲ್ಲೇ ಈಗ KKR ನಾಯಕ ಅಸಮಾಧಾನ ಹೊರಹಾಕಿದ್ದಾನೆ. ಸ್ಫೋಟಕ ಹೇಳಿಕೆ ನೀಡೋ ಮೂಲಕ ವಿವಾದ ಸೃಷ್ಟಿಸಿದ್ದಾನೆ. KKR ತಂಡ 12 ಪಂದ್ಯಗಳಲ್ಲಿ ಐದು ಗೆದ್ದು ಏಳನ್ನು ಸೋತು 10 ಅಂಕಗಳಿಸಿದೆ. ಉಳಿದ ಎರಡು ಗೆದ್ದರೂ ಪ್ಲೇ ಆಫ್ಗೆ ಹೋಗಲ್ಲ. ಮೊನ್ನೆ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದ ಬೆನ್ನಲ್ಲೇ KKR ನಾಯಕ ಶ್ರೇಯಸ್ ಅಯ್ಯರ್ ವಿವಾದಾತ್ಮಕ ಹೇಳಿಕೆ ನೀಡಿದ್ದು, ಆ ಸ್ಟೇಟ್ಮೆಂಟ್ IPLನಲ್ಲಿ ಮಿಂಚಿನ ಸಂಚಲನ ಉಂಟು ಮಾಡಿದೆ.
ಪ್ಲೇಯಿಂಗ್-11ನಲ್ಲಿ ಸಿಇಒ ಹಸ್ತಕ್ಷೇಪ ಯಾಕೆ..?:
ಐಪಿಎಲ್ನಲ್ಲಿ ತಂಡದ ಪ್ಲೇಯಿಂಗ್-11 ಅನ್ನ ಕೋಚ್ ಮತ್ತು ಕ್ಯಾಪ್ಟನ್ ನಿರ್ಧರಿಸುತ್ತಾರೆ. ಆದರೆ KKRನಲ್ಲಿ ಮಾತ್ರ ಪ್ಲೇಯಿಂಗ್-11 ಆಯ್ಕೆ ಮಾಡುವಾಗ CEO ವೆಂಕಿ ಮೈಸೂರ್ ಹಸ್ತಕ್ಷೇಪ ಇರುತ್ತದೆ ಎಂದು ಶ್ರೇಯಸ್ ಹೇಳೋ ಮೂಲ್ಕ ಹೊಸ ವಿವಾದವನ್ನ ಸೃಷ್ಟಿಸಿದ್ದಾರೆ. KKR ತಂಡದ ಪ್ಲೇಯಿಂಗ್-11 ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತದೆ. ಈ ಮೀಟಿಂಗ್ನಲ್ಲಿ ಕೋಚ್ ಜೊತೆ ಟೀಮ್ CEO ಕೂಡ ಇರುತ್ತಾರೆ ಎಂದು ಸಹ ಅಯ್ಯರ್ ಹೇಳಿದ್ದಾರೆ.
ಈಗ ಪ್ಲೇಯಿಂಗ್-11ನಲ್ಲಿ CEO ಕೆಲ್ಸ ಏನು ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ನಾಯಕ ಮತ್ತು ಕೋಚ್ಗೆ ಆಟಗಾರರ ಸ್ಟ್ರೆಂಥ್ & ವೀಕ್ನೆಸ್ ಗೊತ್ತಿರುತ್ತೆ. ಅವರ ಮನಸ್ಥಿತಿಯನ್ನೂ ಅರಿತಿರುತ್ತಾರೆ. ಜೊತೆಗೆ ಮ್ಯಾಚ್ ಸೋತ್ರೆ ಅವರೇ ಹೊಣೆ ಆಗ್ತಾರೆ. ಹೀಗಿರುವಾಗ CEO ಪ್ಲೇಯಿಂಗ್-11ನಲ್ಲಿ ಹಸ್ತಕ್ಷೇಪ ಮಾಡಿದ್ರೆ ತಂಡದ ಪ್ರದರ್ಶನದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಜೊತೆಗೆ ಸೋಲಿನ ಹೊಣೆಯನ್ನ ಯಾರು ಒಪ್ಪಿಕೊಳ್ತಾರೆ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ.
ಸತತ ಸೋಲಿನಿಂದ ಹತಾಶರಾದ್ರಾ ಶ್ರೇಯಸ್..?:
ಕಳೆದ ವರ್ಷ ಇಂಜುರಿಯಾಗಿದ್ದರಿಂದ ಶ್ರೇಯಸ್ ಅಯ್ಯರ್, ಭಾರತದಲ್ಲಿ ನಡೆದ ಮೊದಲಾರ್ಧ ಐಪಿಎಲ್ ಆಡಲಿಲ್ಲ. ಹಾಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ರಿಷಭ ಪಂತ್ ಲೀಡ್ ಮಾಡಿದ್ರು. ಯುಎಇನಲ್ಲಿ ನಡೆದ ಉಳಿದಾರ್ಧವನ್ನ ಶ್ರೇಯಸ್ ಆಡಿದರಾದ್ರೂ ಕೇವಲ ಆಟಗಾರನಾಗಿ ಆಡಿದ್ರು. ನಾಯಕನಾದರೆ ಮಾತ್ರ ಡೆಲ್ಲಿಯಲ್ಲಿ ಇರ್ತಿನಿ. ಇಲ್ಲದಿದ್ದರೆ ನನ್ನನ್ನ ರಿಟೈನ್ ಮಾಡಬೇಡಿ ಅಂತ ಡೆಲ್ಲಿ ಫ್ರಾಂಚೈಸಿಗೆ ಶ್ರೇಯಸ್ ಹೇಳಿದ್ದರಿಂದ ರಿಟೈನ್ ಮಾಡದೆ ಬಿಡ್ಗೆ ಬಿಡಲಾಯ್ತು. ಬಿಡ್ನಲ್ಲಿ 12.25 ಕೋಟಿಗೆ KKR ಪಾಲಾದ್ರು.
Virat Kohli: ಬ್ಯಾಟಿಂಗ್ ಸೂರ್ಯನಿಗೆ ಕವಿದಿದೆ ಕ್ರಿಕೆಟ್ ಗ್ರಹಣ..!
KKR ತಂಡವನ್ನ ಯಶಸ್ವಿಯಾಗಿ ಮುನ್ನಡೆಸಿ, ಟೀಂ ಇಂಡಿಯಾ ಚುಕ್ಕಾಣಿ ಹಿಡಿಯುವ ಪ್ಲಾನ್ ಶ್ರೇಯಸ್ ಅವರದ್ದಾಗಿತ್ತು. ಆದ್ರೆ ಅವರ ನಾಯಕತ್ವದಲ್ಲಿ KKR ಲೀಗ್ನಿಂದಲೇ ಹೊರಬಿದ್ದಿದೆ. ಇದರ ನೇರ ಹೊಣೆಯನ್ನ ಕ್ಯಾಪ್ಟನ್ ಹೊರಬೇಕು. ಆದ್ರೆ ಆಡುವ ಹನ್ನೊಂದರ ಬಳಗ CEO ಹಸ್ತಕ್ಷೇಪ ಮಾಡಿದ್ದರಿಂದಲೇ KKR ಕಳಪೆ ಪ್ರದರ್ಶನ ನೀಡಿತು. ಇದರಲ್ಲಿ ನನ್ನದೇನು ಪಾತ್ರವಿಲ್ಲ ಅನ್ನೋದನ್ನ ಶ್ರೇಯಸ್ ನಾಜೂಕಾಗಿ ಹೇಳಿ, KKR ಫ್ರಾಂಚೈಸಿ ಜೊತೆ ಕಿರಿಕ್ ಮಾಡಿದ್ದಾರೆ. ಶ್ರೇಯಸ್ ಮತ್ತು KKR ಸಂಬಂಧ ಹದಗೆಟ್ಟಿದೆ ಅನ್ನೋದು ಈಗ ಜಗಜ್ಜಾಹಿರವಾಗಿದೆ. ಅಲ್ಲಿಗೆ ಮುಂದಿನ ಸೀಸನ್ನಲ್ಲಿ ಶ್ರೇಯಸ್ KKR ಟೀಮ್ನಲ್ಲಿ ಇರೋದಿಲ್ಲ, ಇದ್ದರೂ ನಾಯಕನಾಗಿ ಇರೋದಿಲ್ಲ ಅನ್ನೋದು ಕನ್ಫರ್ಮ್. ಯಾಕಂದರೆ ಕೋಚ್ ಮೆಕ್ಕಲಂ ಜೊತೆ ಕಿತ್ತಾಡಿಕೊಂಡಿದ್ದ ಶ್ರೇಯಸ್, ಈಗ CEO ಜೊತೆಯೂ ಕಿರಿಕ್. ವೆಂಕಿ KKR ಬಿಗ್ಬಾಸ್ ಅನ್ನೋದನ್ನ ಮರಿಬೇಡಿ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.