Virat Kohli: ಬ್ಯಾಟಿಂಗ್ ಸೂರ್ಯನಿಗೆ ಕವಿದಿದೆ ಕ್ರಿಕೆಟ್ ಗ್ರಹಣ..!

Published : May 11, 2022, 07:29 PM IST
Virat Kohli: ಬ್ಯಾಟಿಂಗ್ ಸೂರ್ಯನಿಗೆ ಕವಿದಿದೆ ಕ್ರಿಕೆಟ್ ಗ್ರಹಣ..!

ಸಾರಾಂಶ

* ಬ್ಯಾಟಿಂಗ್‌ನಲ್ಲಿ ಪದೇ ಪದೇ ವೈಫಲ್ಯ ಅನುಭವಿಸುತ್ತಿರುವ ವಿರಾಟ್ ಕೊಹ್ಲಿ * ರನ್ ಬೇಟೆಗಾರ, ಈಗ ಒಂದೊಂದು ರನ್ ಬಾರಿಸಲು ಪರದಾಟ * 71ನೇ ಶತಕಕ್ಕಾಗಿ ಎರಡುವರೆ ವರ್ಷಗಳಿಂದ ಕಾಯುತ್ತಿರುವ ಕಿಂಗ್ ಕೊಹ್ಲಿ

ಬೆಂಗಳೂರು(ಮೇ11): ಎಂಥಾ ಆಟಗಾರನಿಗೆ ಅದೆಂಥಾ ದುಸ್ಥಿತಿ. ಭಾರತೀಯ ಕ್ರಿಕೆಟ್ ಕಂಡ ಪ್ರಚಂಡ ಬ್ಯಾಟ್ಸ್​​ಮನ್, ಅಪ್ರತಿಮ ಮ್ಯಾಚ್ ವಿನ್ನರ್, ಚೇಸ್ ಮಾಸ್ಟರ್, ಬ್ಯಾಟ್ ಹಿಡಿದು ನಿಂತ್ರೆ ಬೌಲರ್​​ಗಳನ್ನು ಬೆಂಡೆತ್ತಿ ಹುರಿದು ಮುಕ್ಕಿ ಬಿಡುತ್ತಿದ್ದ ರಣ ಬೇಟೆಗಾರ, ರನ್ ಬೇಟೆಗಾರ. ಅದೇ ಬೇಟೆಗಾರನೀಗ ಒಂದೊಂದು ರನ್​​​​ಗೂ ಪರದಾಡುತ್ತಿದ್ದಾನೆ.

ಕ್ರಿಕೆಟ್ ಮೈದಾನದಲ್ಲಿ ಪ್ರಚಂಡನ ಘೋರ ವೈಫಲ್ಯ!:

ಯೆಸ್, ಇದು ಗ್ರಹಣವಲ್ಲದೆ ಮತ್ತಿನ್ನೇನೂ ಅಲ್ಲ. ಶರವೇಗದಲ್ಲಿ 70 ಅಂತಾರಾಷ್ಟ್ರೀಯ ಶತಕಗಳನ್ನು ಚಚ್ಚಿ ಬಿಸಾಕಿದ್ದ ಬ್ಯಾಟಿಂಗ್ ಮಾಸ್ಟರ್, 71ನೇ ಶತಕಕ್ಕಾಗಿ ಎರಡುವರೆ ವರ್ಷಗಳಿಂದ ಕಾಯುತ್ತಲೇ ಇದ್ದಾನೆ. ನಾಯಕತ್ವವನ್ನು ಬಿಟ್ಟು, ಒತ್ತಡಗಳನ್ನೆಲ್ಲಾ ಬದಿಗಿಟ್ಟು ಆಡಿದ್ರೂ ವಿರಾಟ್ ಕೊಹ್ಲಿಗೆ ರನ್ ಗಳಿಸಲಾಗುತ್ತಿಲ್ಲ. ಈ ಬಾರಿಯ ಐಪಿಎಲ್​​ನಲ್ಲಿ ವಿರಾಟ್ ಅಬ್ಬರ ಕಾದಿದೆ ಅಂತ ಕಾದು ಕುಳಿತವರಿಗೆ ವಿರಾಟ್ ಕೊಹ್ಲಿ (Virat Kohli) ನಿರಾಸೆ ಮಾಡಿ ಬಿಟ್ಟಿದ್ದಾನೆ. 

ಈ ಸೀಸನ್ ಐಪಿಎಲ್​ನಲ್ಲಿ ಆಡಿರೋ 12 ಇನ್ನಿಂಗ್ಸ್​ಗಳಲ್ಲಿ ವಿರಾಟ್ ಕೊಹ್ಲಿ ಗಳಿಸಿರೋದು ಕೇವಲ 216 ರನ್. ಸರಾಸರಿ 19.63, ಸ್ಟ್ರೈರ್​ರೇಟ್ 11.34. ಇದು ಕೊಹ್ಲಿ ಆಟ ಅಲ್ಲವೇ ಇಲ್ಲ. ಕೊಹ್ಲಿಗೆ ಎದುರಾಗಿರೋ ದುಸ್ಥಿತಿಯನ್ನು ನೆನೆದು ಆತನ ಅಭಿಮಾನಿಗಳು ಮರುಗುತ್ತಿದ್ದಾರೆ. ಯಾಕಂದ್ರೆ ವಿರಾಟ್ ಕೊಹ್ಲಿ ಯಾರದ್ದೋ ಕೃಪೆಯಿಂದ ಆಡಿದವನೂ ಅಲ್ಲ, ಯಾವುದೋ ಲಾಬಿಯಿಂದ ಇಲ್ಲಿಯವರೆಗೆ ಬಂದವನೂ ಅಲ್ಲ. ಆತನದ್ದು pure, pure, merit. ಆತ ಯಾರೋ ಚಿಲ್ಚು-ಪಲ್ಟುಗಳನ್ನು ಹೊಡೆದು ಸ್ಟಾರ್ ಆದವನಲ್ಲ. ಮದ್ದಾನೆಗಳ ಮದವನ್ನು ಕರಗಿಸಿದ ಭುಜಬಲವದು. ಕೂಕಬುರ ಚೆಂಡು ಭುಜದೆತ್ತರಕ್ಕೆ ನುಗ್ಗಿ ಬರುವ ಆಸ್ಟ್ರೇಲಿಯಾದಲ್ಲಿ, ಡ್ಯೂಕ್ ಬಾಲ್ ಯರ್ರಾಬಿರ್ರಿ ಸ್ವಿಂಗ್ ಆಗುವ ಇಂಗ್ಲೆಂಡ್​​ನಲ್ಲಿ ಒಂದೇ ಟೆಸ್ಟ್ ಸರಣಿಯಲ್ಲಿ ನಾಲ್ಕು ನಾಲ್ಕು ಸೆಂಚುರಿ..! That is ವಿರಾಟ್ ಕೊಹ್ಲಿ.

ಈ 3 ಕಾರಣಕ್ಕಾಗಿಯಾದರೂ ಲೆಜೆಂಡ್​ ಧೋನಿಯ IPL ನಿವೃತ್ತಿ ಚಿಂತೆ ಬಿಟ್ಟುಬಿಡಿ..!

ದಾಖಲೆಗಳನ್ನು ಮುರಿಯುತ್ತಾ ಮುನ್ನಗ್ಗುತ್ತಿದ್ದ ಆಧುನಿಕ ಕ್ರಿಕೆಟ್​ನ ದಿಗ್ಗಜ ಆಟಗಾರನೀಗ ದಿಕ್ಕೇ ತೋಚದಂತೆ ನಿಂತು ಬಿಟ್ಟಿದ್ದಾನೆ. ವಿರಾಟ್ ಕೊಹ್ಲಿ ಇವತ್ತು ಸೆಂಚುರಿ ಹೊಡೀತಾನೆ, ನಾಳೆ ಹೊಡೀತಾನೆ. ಕೊಹ್ಲಿ ಬ್ಯಾಟ್​​ನಿಂದ ರನ್ ಪ್ರವಾಹ ಹರಿಯತ್ತೆ ಅಂತ ಅಭಿಮಾನಿಗಳು ಕಾಯುತ್ತಲೇ ಇದ್ದಾರೆ. ಆದ್ರೆ ಆ ದಿನ ಮಾತ್ರ ಬರ್ತಾನೇ ಇಲ್ಲ. ಹಾಗಾದ್ರೆ ಅಪ್ರತಿಮ ಆಟಗಾರನ ಕಥೆ ಮುಗಿದೇ ಹೋಯ್ತಾ..? ಖಂಡಿತಾ ಇಲ್ಲ. ಯಾಕಂದ್ರೆ ವಿರಾಟ್ ಕೊಹ್ಲಿಗೆ ಈಗ ಕವಿದಿರೋದು ಒಂದು ಗ್ರಹಣ ಅಷ್ಟೇ. ಜಗತ್ತಿಗೆ ಬೆಳಕು ಕೊಡುವ ಸೂರ್ಯನನ್ನೇ ಬಿಡದ ಗ್ರಹಣ, ವಿರಾಟ್ ಕೊಹ್ಲಿಯನ್ನು ಬಿಟ್ಟೀತೇ..? One bad season does not define years of legacy. Come Back Stronger Champ King Kohli.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸ್ಮೃತಿ ಮಂಧನಾ ಮದುವೆ ಮುರಿದ ಬಳಿಕ ಟೀಮ್‌ ಇಂಡಿಯಾ ಆಟಗಾರ್ತಿಯರ ಮಹಾ ನಿರ್ಧಾರ!
ಸಂಕಷ್ಟ ನಿವಾರಣೆಗೆ ಸಿಂಹಾಚಲಂ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವಿರಾಟ್ ಕೊಹ್ಲಿ