IPL 2022 ರಾಜಸ್ಥಾನ ವಿರುದ್ಧ ಟಾಸ್ ಗೆದ್ದ ಡೆಲ್ಲಿ, ತಂಡದಲ್ಲಿ ಮಹತ್ವದ ಬದಲಾವಣೆ!

By Suvarna NewsFirst Published May 11, 2022, 7:13 PM IST
Highlights
  • ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಡೆಲ್ಲಿ ಕ್ಯಾಪಿಟಲ್ಸ್
  • ಡೆಲ್ಲಿ ತಂಡದಲ್ಲಿ 2 ಬದಲಾವಣೆ, ರಾಜಸ್ಥಾನದಲ್ಲಿ 1
  • ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯ

ಮುಂಬೈ(ಮೇ.11): ಐಪಿಎಲ್ 2022 ಟೂರ್ನಿಯ 58ನೇ ಲೀಗ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಿದೆ. ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಡೆಲ್ಲಿ ತಂಡದಲ್ಲಿ 2 ಬದಲಾವಣೆ ಮಾಡಿದ್ದರೆ, ರಾಜಸ್ಥಾನ ತಂಡದಲ್ಲಿ 1 ಬದಲಾವಣೆ ಮಾಡಲಾಗಿದೆ.

ಡೆಲ್ಲಿ ತಂಡದ ರಿಪಲ್ ಪಟೇಲ್ ಹಾಗೂ ಖಲೀಲ್ ಅಹಮ್ಮದ್ ತಂಡದಿಂದ ಹೊರಗುಳಿದಿದ್ದಾರೆ.ಇವರ ಸ್ಥಾನಕ್ಕೆ ಲಲಿತ್ ಯಾದವ್ ಹಾಗೂ ಚೇತನ್ ಸಕಾರಿಯಾ ತಂಡ ಸೇರಿಕೊಂಡಿದ್ದಾರೆ. ಇತ್ತ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಶಿಮ್ರೊನ್ ಹೆಟ್ಮೆಯರ್ ಬದಲು ರಸಿ ವ್ಯಾಂಡರ್ ಡಸೆನ್ ತಂಡ ಸೇರಿಕೊಂಡಿದ್ದಾರೆ.

Latest Videos

ಈ 3 ಕಾರಣಕ್ಕಾಗಿಯಾದರೂ ಲೆಜೆಂಡ್​ ಧೋನಿಯ IPL ನಿವೃತ್ತಿ ಚಿಂತೆ ಬಿಟ್ಟುಬಿಡಿ..

ರಾಜಸ್ಥಾನ ರಾಯಲ್ಸ್ ಪ್ಲೇಯಿಂಗ್ 11
ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್(ನಾಯಕ), ದೇವದತ್ ಪಡಿಕ್ಕಲ್, ರಸಿ ವ್ಯಾಂಡರ್ ಡಸೆನ್, ರಿಯಾನ್ ಪರಾಗ್, ರವಿಚಂದ್ರನ್ ಆಶ್ವಿನ್, ಟ್ರೆಂಟ್ ಬೋಲ್ಟ್, ಪ್ರಸಿದ್ಧ್ ಕೃಷ್ಣ, ಯಜುವೇಂದ್ರ ಚಹಾಲ್, ಕುಲ್ದೀಪ್ ಸೇನ್

ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ 11
ಡೇವಿಡ್ ವಾರ್ನರ್, ಶ್ರೀಕಾರ್ ಭರತ್, ಮಿಚೆಲ್ ಮಾರ್ಶ್, ರಿಶಬ್ ಪಂತ್(ನಾಯಕ), ಲಲಿತ್ ಯಾದವ್, ರೋವ್ಮನ್ ಪೊವೆಲ್, ಅಕ್ಸರ್ ಪಟೇಲ್, ಶಾರ್ದೂಲ್ ಠಾಕೂರ್, ಚೇತನ್ ಸಕಾರಿಯಾ, ಕುಲ್ದೀಪ್ ಯಾದವ್, ಅನ್ರಿಚ್ ನೊರ್ಜೆ

ಪ್ಲೇ-ಆಫ್‌ಗೆ ಲಗ್ಗೆ ಇಟ್ಟಟೈಟಾನ್ಸ್‌
ಚೊಚ್ಚಲ ಬಾರಿ ಐಪಿಎಲ್‌ ಆಡುತ್ತಿರುವ ಗುಜರಾತ್‌ ಟೈಟಾನ್ಸ್‌ 15ನೇ ಆವೃತ್ತಿಯ ಐಪಿಎಲ್‌ನಲ್ಲಿ ಪ್ಲೇ-ಆಫ್‌ ಪ್ರವೇಶಿಸಿದ ಮೊದಲ ತಂಡ ಎನಿಸಿಕೊಂಡಿದೆ. ಮಂಗಳವಾರ ಲಖನೌ ಸೂಪರ್‌ ಜೈಂಟ್ಸ್‌ ವಿರುದ್ಧದ ಕಡಿಮೆ ಮೊತ್ತದ ಪಂದ್ಯದಲ್ಲಿ 62 ರನ್‌ಗಳ ಭರ್ಜರಿ ಜಯಗಳಿಸಿದ ತಂಡ ಈ ಆವೃತ್ತಿಯಲ್ಲಿ 9ನೇ ಜಯ ದಾಖಲಿಸಿ 18 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿತು. ಟೈಟಾನ್ಸ್‌ ವಿರುದ್ಧ ಎರಡೂ ಪಂದ್ಯ ಸೋತಿರುವ ಲಖನೌ 2ನೇ ಸ್ಥಾನಕ್ಕೆ ಕುಸಿದಿದೆ. ಸತತ 4 ಪಂದ್ಯಗಳಲ್ಲಿ ಗೆದ್ದಿದ್ದ ತಂಡಕ್ಕೆ ಈ ಸೋಲು ಆಘಾತ ನೀಡಿತು.

IPL 2022: ಎಬಿ ಡಿವಿಲಿಯರ್ಸ್‌ ಕುರಿತಂತೆ ಗುಡ್‌ ನ್ಯೂಸ್ ನೀಡಿದ ವಿರಾಟ್ ಕೊಹ್ಲಿ..!

ಮೊದಲು ಬ್ಯಾಟ್‌ ಮಾಡಿದ ಗುಜರಾತ್‌ ಶುಭ್‌ಮನ್‌ ಗಿಲ್‌ ಹೋರಾಟದ ಅರ್ಧಶತಕದ ಹೊರತಾಗಿಯೂ 4 ವಿಕೆಟ್‌ ಕಳೆಕೊಂಡು 144 ರನ್‌ ಕಲೆ ಹಾಕಿತು. ಸುಲಭ ಗುರಿ ಬೆನ್ನತ್ತಿದರೂ ಟೈಟಾನ್ಸ್‌ ಸ್ಪಿನ್ನರ್‌ಗಳ ಮುಂದೆ ಮಂಕಾದ ಲಖನೌ 13.5 ಓವರ್‌ಗಳಲ್ಲಿ ಕೇವಲ 82 ರನ್‌ಗೆ ಆಲೌಟಾಗಿ ಸೋಲೊಪ್ಪಿಕೊಂಡಿತು. ಇದು ಈ ಆವೃತ್ತಿಯಲ್ಲಿ ತಂಡವೊಂದರ 2ನೇ ಕನಿಷ್ಠ ಸ್ಕೋರ್‌.

 

ಆರಂಭದಲ್ಲೇ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿದ ತಂಡ ಯಾವ ಕ್ಷಣದಲ್ಲೂ ಪ್ರತಿರೋಧ ತೋರಲಿಲ್ಲ. ದೀಪಕ್‌ ಹೂಡಾ(27) ಮತ್ತು ಡಿ ಕಾಕ್‌(11) ಮಾತ್ರ ಎರಡಂಕಿ ಮೊತ್ತ ಗಳಿಸಿದರು. ನಾಯಕ ಕೆ.ಎಲ್‌.ರಾಹುಲ್‌ 8 ರನ್‌ ಗಳಿಸಿದರು. ಲೆಗ್‌ ಸ್ಪಿನ್ನರ್‌ ರಶೀದ್‌ ಖಾನ್‌ 4, ಪಾದಾರ್ಪಣಾ ಪಂದ್ಯವಾಡಿದ ಎಡಗೈ ಆಫ್‌ ಸ್ಪಿನ್ನರ್‌ ಸಾಯಿ ಕಿಶೋರ್‌ 7 ರನ್‌ಗೆ 2 ವಿಕೆಟ್‌ ಕಿತ್ತರು.

ಗಿಲ್‌ ಫಿಫ್ಟಿ: ನಿಧಾನ ಆರಂಭ ಪಡೆದ ಟೈಟಾನ್ಸ್‌ ಸಾಹ (05) ವಿಕೆಟನ್ನು ಬೇಗನೇ ಕಳೆದುಕೊಂಡಿತು. ಮ್ಯಾಥ್ಯೂ ವೇಡ್‌(10), ಹಾರ್ದಿಕ್‌ ಪಾಂಡ್ಯ(11) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಈ ವೇಳೆ ತಂಡಕ್ಕೆ ಆಸರೆಯಾಗಿದ್ದು ಶುಭ್‌ಮನ್‌ ಗಿಲ್‌. 49 ಎಸೆತಗಳಲ್ಲಿ ಅಜೇಯ 63 ರನ್‌ ಸಿಡಿಸಿದ ಅವರು ಈ ಆವೃತ್ತಿಯ 4ನೇ ಅರ್ಧಶತಕ ಪೂರ್ತಿಗೊಳಿಸಿದರು. ಡೇವಿಡ್‌ ಮಿಲ್ಲರ್‌ 26, ತೆವಾಟಿಯಾ 22 ರನ್‌ ಕೊಡುಗೆ ನೀಡಿದರು.

click me!