IPL 2022 : RCBಗೆ ಆಘಾತ, ಹರ್ಷಲ್ ಪಟೇಲ್ ಸಹೋದರಿ ನಿಧನ, ಮುಂಬೈಗೆ ತೆರಳಿದ  ವೇಗಿ 

Published : Apr 10, 2022, 07:03 PM IST
IPL 2022 : RCBಗೆ ಆಘಾತ, ಹರ್ಷಲ್ ಪಟೇಲ್ ಸಹೋದರಿ ನಿಧನ, ಮುಂಬೈಗೆ ತೆರಳಿದ  ವೇಗಿ 

ಸಾರಾಂಶ

* ಹರ್ಷಲ್ ಪಟೇಲ್ ಮತ್ತು ಆರ್‌ಸಿಬಿ ಕುಟುಂಬಕ್ಕೆ ಆಘಾತ * ಹರ್ಷಲ್ ಪಟೇಲ್ ಸಹೋದರಿ ಸಾವು * ಪುಣೆಯಿಂದ ಮುಂಬೈಗೆ ತೆರಳಿದ ವೇಗಿ * ಸಿಎಸ್‌ಕೆ ವಿರುದ್ಧದ ಪಂದ್ಯಕ್ಕೆ ಮರಳಲಿದ್ದಾರೆ

ಪುಣೆ(ಏ. 10)  ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore)  (RCB) ಮತ್ತು ತಂಡದ ವೇಗಿ ಹರ್ಷಲ್ ಪಟೇಲ್  ಗೆ(Harshal Patel)  ಆಘಾತಕಾರಿ ಸುದ್ದಿ ಬಂದಿದ್ದು ಪಟೇಲ್ ಮನೆಗೆ ಮರಳಿದ್ದಾರೆ. ದುರಂತವೊಂದರಲ್ಲಿ  ಹರ್ಷಲ್ ಪಟೇಲ್ ಸಹೋದರಿ ನಿಧನ (Death) ಹೊಂದಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದ ಬಳಿಕ ಈ ವಿಚಾರ ತಿಳಿದು ಬಂದಿದ್ದು ತಕ್ಷಣವೇ ಹರ್ಷಲ್ ಪಟೇಲ್ ತಂಡದ ಬಯೋಬಬಲ್  ತೊರೆದು ಮನೆಗೆ ಮರಳಿದ್ದಾರೆ.

ಮುಂಬೈ ಇಂಡಿಯನ್ಸ್ (Mumbai Indains) ವಿರುದ್ಧ ಶನಿವಾರ ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ತಂಡ 7 ವಿಕೆಟ್‌ಗಳ ಅಂತರದ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ಹರ್ಷಲ್ ಪಟೇಲ್ ಅದ್ಭುತ ಪ್ರದರ್ಶನ ನೀಡಿದ್ದರು. ಈ ಪಂದ್ಯದ ಮುಕ್ತಾಯದ ಬಳಿಕ ಕುಟುಂಬದಲ್ಲಿ ನಡೆದ ದುರಂತದ ಬಗ್ಗೆ ಹರ್ಷಲ್ ಪಟೇಲ್‌ಗೆ ತಿಳಿದಿದ್ದು ತಕ್ಷಣವೇ ಅವರು ತಂಡದ ಬಯೋಬಬಲ್ ತೊರೆದಿದ್ದಾರೆ.

ದುರದೃಷ್ಟವಶಾತ್ ಕುಟುಂಬದಲ್ಲಿ ನಡೆದ ಸಾವಿನಿಂದಾಗಿ ಹರ್ಷಲ್ ಪಟೇಲ್ ಐಪಿಎಲ್ (IPL) ಬಯೋಬಬಲ್‌ಅನ್ನು ತೊರೆಯಬೇಕಾಗಿದೆ. ಅವರ ಸೋದರಿ ಸಾವನ್ನಪ್ಪಿದ್ದಾರೆ. ಅವರು ಪುಣೆಯಿಂದ ಮುಂಬೈಗೆ ಬಸ್‌ನಲ್ಲಿ ಪ್ರಯಾಣವನ್ನು ಮಾಡಯತ್ತಿಲ್ಲ ಎಂದು ತಂಡ ಮಾಹಿತಿ ನೀಡಿದೆ. ಹರ್ಷಲ್ ಪಟೇಲ್ ಅವರ ಸೋದರಿ ಅರ್ಚಿತಾ ಪಟೇಲ್ ಅನಾರೋಗ್ಯದಿಂದ ಬಳಲುತ್ತಿದ್ದರು.

ಅನಿಲ್ ಕುಂಬ್ಳೆ ಬೆನ್ನಿಗೆ ಬಿದ್ಧ ಬೇತಾಳ

ಸಿಎಸ್ ಕೆ ವಿರುದ್ಧದ ಪಂದ್ಯ ಆಡಲಿದ್ದಾರೆ:  ಈ ಬಾರಿ ಆರ್‌ ಸಿಬಿ ತಂಡ ಅದ್ಭುತ ಪ್ರದರ್ಶನ ನೀಡುತ್ತಿದ್ದು ಗೆಲುವಿನ ಅಲೆಯಲ್ಲಿದೆ. ಏ. 12 ರಂದು  ಆರ್ ಸಿಬಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣೆಸಾಟ ನಡೆಸಲಿದ್ದು ಪಂದ್ಯಕ್ಕೆ ಹರ್ಷಲ್ ಪಟೇಲ್ ಮರಳಲಿದ್ದಾರೆ.

ಕಳೆದ ಐಪಿಎಲ್ ಆವೃತ್ತಿಯಲಲ್ಇ ಪಟೇಲ್ ಅತಿ ಹೆಚ್ಚು ವಿಕೆಟ್ ಪಡೆದುಕೊಂಡು ಪರ್ಪಲ್ ಕ್ಯಾಪ್ ಧರಿಸಿಕೊಂಡಿದ್ದರು. ಶನಿವಾರ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿಯೂ ಹರ್ಷಲ್ ಪಟೇಲ್ ಉತ್ತಮ ಪ್ರದರ್ಶನ ನೀಡಿದ್ದು 23 ರನ್‌ಗಳನ್ನು ನೀಡಿ 2 ವಿಕೆಟ್ ಸಂಪಾದಿಸಿದ್ದರು. #

ಹರ್ಷಲ್ ಪಟೇಲ್ ಕುಟುಂಬ 2005ರಲ್ಲಿ ಅಮೆರಿಕಾಗೆ ಸ್ಥಳಾಂತರವಾಗಿತ್ತು. ಹರ್ಷಲ್ ಪಟೇಲ್ ಕೂಡ ಗ್ರೀನ್‌ಕಾರ್ಡ್ ಹೋಲ್ಡರ್ ಆಗಿದ್ದಾರೆ. ವಿಕ್ರಮ್ ಪಟೇಲ್ ಹರ್ಷಲ್ ಪಟೇಲ್ ಅವರ ತಂದೆಯಾಗಿದ್ದು ದರ್ಶನಾ ಪಟೇಲ್ ತಾಯಿ. ಈ ದಂಪತಿಯ ಮೂವರು ಮಕ್ಕಳ ಪೈಕಿ ಆಟಗಾರ ನಮೊದಲನೆಯವರಾಗಿದ್ದು ಅರ್ಚಿತಾ ಪಟೇಲ್ ಕೊನೆಯವರಾಗಿದ್ದಾರೆ. ತಪನ್ ಪಟೇಲ್ ಎಂಬ ಇನ್ನೊಬ್ಬ ಸಹೋದರ ಇದ್ದಾರೆ.

 

 

 

 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!
ಹೃತಿಕ್‌ ರೋಶನ್‌ 'ಕ್ರಿಶ್‌' ಸಿನಿಮಾದಲ್ಲಿ ಬಾಲನಟಿಯಾಗಿದ್ರಾ ಧೋನಿ ಪತ್ನಿ ಸಾಕ್ಷಿ?