IPL 2022 ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ಆಯ್ಕೆ

Published : Apr 28, 2022, 07:11 PM ISTUpdated : Apr 28, 2022, 07:31 PM IST
IPL 2022 ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ಆಯ್ಕೆ

ಸಾರಾಂಶ

ಸೋಲು ಗೆಲುವುಗಳ ಏರಿಳಿತದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ 2022 ಐಪಿಎಲ್ ನ 41ನೇ ಪಂದ್ಯದಲ್ಲಿ ಗುರುವಾರ ಕೋಲ್ಕತ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ಇನ್ನೊಂದೆಡೆ ಕೆಕೆಆರ್ ತಂಡ ತಂಡದಲ್ಲಿ ಮೂರು ಬದಲಾವಣೆಯೊಂದಿಗೆ ಕಣಕ್ಕಿಳಿಯಲಿದೆ.

ಮುಂಬೈ (ಏ.28): ಕೆಲ ದಿನಗಳ ವಿಶ್ರಾಂತಿಯ ಬಳಿಕ ಮತ್ತೆ ಕಣಕ್ಕಿಳಿದಿರುವ ಕೋಲ್ಕತ ನೈಟ್ ರೈಡರ್ಸ್ (Kolkata Knight Riders) ತಂಡ ತನ್ನ 9ನೇ ಪಂದ್ಯದಲ್ಲಿ ಗುರುವಾರ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡವನ್ನು ಎದುರಿಸಲಿದೆ. ಟಾಸ್ ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ವಾಂಖೆಡೆ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದ್ದು, ಕೆಕೆಆರ್ (KKR)ತಂಡ ಪ್ರಮುಖ ಮೂರು ಬದಲಾವಣೆಯೊಂದಿಗೆ ಕಣಕ್ಕಿಳಿದಿದೆ. ಆರನ್ ಫಿಂಚ್ (AronFinch), ಹರ್ಷಿತ್ ರಾಣಾ (Harshith Rana) ಹಾಗೂ ಇಂದ್ರಜಿತ್  (Baba Indrajit)ರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಎರಡು ಪ್ರಮುಖ ಬದಲಾವಣೆ ಮಾಡಲಾಗಿದೆ. ಖಲೀಲ್ ಅಹ್ಮದ್ ಹಾಗೂ ಸರ್ಫ್ರಾಜ್ ಅಹ್ಮದ್ ಬದಲಿಗೆ ಮಿಚೆಲ್ ಮಾರ್ಷ್ ಹಾಗೂ ಚೇತನ್ ಸಕಾರಿಯಾ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ ಇಲೆವೆನ್: ಪೃಥ್ವಿ ಶಾ, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ರಿಷಭ್ ಪಂತ್ (ನಾಯಕ/ವಿ.ಕೀ ), ಲಲಿತ್ ಯಾದವ್, ರೋವ್ ಮನ್ ಪೊವೆಲ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮುಸ್ತಾಫಿಜುರ್ ರೆಹಮಾನ್, ಚೇತನ್ ಸಕರಿಯಾ

ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇಯಿಂಗ್ ಇಲೆವೆನ್: ಆರನ್ ಫಿಂಚ್, ಸುನೀಲ್ ನಾರಾಯಣ್,  ಶ್ರೇಯಸ್ ಅಯ್ಯರ್ (ನಾಯಕ), ನಿತೀಶ್ ರಾಣಾ, ವೆಂಕಟೇಶ್ ಅಯ್ಯರ್, ಬಾಬಾ ಇಂದ್ರಜಿತ್ (ವಿ.ಕೀ), ರಿಂಕು ಸಿಂಗ್, ಆಂಡ್ರೆ ರಸೆಲ್, ಉಮೇಶ್ ಯಾದವ್, ಟಿಮ್ ಸೌಥಿ, ಹರ್ಷಿತ್ ರಾಣಾ

ಟಾಸ್ ಗೆಲುವು ನಮ್ಮದಾಗಿದ್ದರೆ ನಾನೂ ಕೂಡ ಬೌಲಿಂಗ್ ಆಯ್ಕೆ ಮಾಡಿಕೊಳ್ಳುತ್ತಿದ್ದೆ. ಅದಕ್ಕೆ ಕಾರಣ ಈ ಮೈದಾನದ ಚೇಸಿಂಗ್ ಇತಿಹಾಸ. ಆದರೆ, ಇಬ್ಬನಿ ಇಲ್ಲಿ ಸಂಪೂರ್ಣವಾಗಿ ಮಾಯವಾಗಿದ್ದು, ಆರ್ದ್ರ ವಾತಾವರಣವಿದೆ. ಪ್ರತಿ ಆಟಗಾರರು ಕೂಡ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಟವಾಡುವುದರೊಂದಿಗೆ, ಅವರಾಗಿಯೇ ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ಪಂದ್ಯಗಳನ್ನು ಫಿನಿಶ್ ಮಾಡುವತ್ತ ಗಮನ ನೀಡಬೇಕು. ಪಂದ್ಯಕ್ಕಾಗಿ ನಾವು ಮೂರು ಬದಲಾವಣೆಯನ್ನು ಮಾಡಿಕೊಂಡಿದ್ದೇವೆ. ಆರನ್ ಫಿಂಚ್‌, ಹರ್ಷಿತ್ ರಾಣಾ ಹಾಗೂ ಬಾಬಾ ಇಂದ್ರಜಿತ್ ತಂಡಕ್ಕೆ ಬಂದಿದ್ದಾರೆ. ಕಳೆದ ಕೆಲವು ಪಂದ್ಯಗಳಲ್ಲಿ ಯಾವೊಂದು ಸಂಯೋಜನೆ ಕೂಡ ನಮಗೆ ಉತ್ತಮ ಫಲಿತಾಂಶ ತಂದಿಲ್ಲ. ಆ ಕಾರಣಕ್ಕಾಗಿ ಸೂಕ್ತ ಸಂಯೋಜನೆಯನ್ನು ನಾವು ಪರೀಕ್ಷೆ ಮಾಡುತ್ತಿದ್ದೇವೆ. ಪ್ಲೇ ಆಫ್ ಗೆ ಏರಬೇಕೆಂದಲ್ಲಿ ನಾವೀಗ ಆರರಲ್ಲಿ ಆರು ಪಂದ್ಯಗಳನ್ನು ಗೆಲ್ಲಬೇಕಿದೆ.
ಶ್ರೇಯಸ್ ಅಯ್ಯರ್, ಕೆಕೆಆರ್ ತಂಡದ ನಾಯಕ

ಪಿಚ್ ಒಣವಾಗಿರುವ ರೀತಿ ಕಾಣುತ್ತಿದೆ. 2ನೇ ಅವಧಿಯ ಆಟದಲ್ಲಿ ಇಬ್ಬನಿಯ ಕಾಡಬಹುದು. ಆ ಕಾರಣಕ್ಕಾಗಿ ಮೊದಲು ಬೌಲಿಂಗ್ ಮಾಡಲಿದ್ದೇವೆ. ಒಬ್ಬರು ಮತ್ತೊಬ್ಬರಿಗೆ ಬೆಂಬಲ ನೀಡುತ್ತಿರುವುದೇ ನಮ್ಮ ಬಲ. ನಾವೂ ಕೂಡ ಕಠಿಣ ಸಮಯಗಳನ್ನು ಎದುರಿಸಿದ್ದೇವೆ. ಆದರೆ, ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಿಕೊಂಡು ಮುಂದೆ ಹೋಗಲು ಪ್ರಯತ್ನಿಸುತ್ತಿದ್ದೇವೆ. ಖಲೀಲ್ ಗಾಯಕ್ಕೆ ತುತ್ತಾಗಿದ್ದು ಪಂದ್ಯಕ್ಕೆ ಅಲಭ್ಯರಾಗಿದ್ದರೆ, ಕೋವಿಡ್ ನಿಮದ ಚೇತರಿಕೊಂಡು ಮಿಚೆಲ್ ಮಾರ್ಷ್ ತಂಡಕ್ಕೆ ಬಂದಿದ್ದಾರೆ.
ರಿಷಭ್ ಪಂತ್, ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ

ನಿಮಗಿದು ಗೊತ್ತೇ?

-ಕೆಕೆಆರ್ ತನ್ನ ಕೊನೆಯ ನಾಲ್ಕು ಪಂದ್ಯಗಳಲ್ಲಿ ನಾಲ್ಕು ವಿಭಿನ್ನ ಆರಂಭಿಕ ಸಂಯೋಜನೆಗಳನ್ನು ಪ್ರಯತ್ನಿಸಿದೆ ಮತ್ತು ಐಪಿಎಲ್ 2022 ರಲ್ಲಿ ಅವರ  ಅತ್ಯುತ್ತಮ ಆರಂಭಿಕ ಜೊತೆಯಾಟ ಕೇವಲ 43 ರನ್ ಆಗಿದೆ.

ಸಮಂತಾ 'ಊ ಅಂಟಾವಾ..' ಹಾಡಿಗೆ ಕಿಂಗ್ ಕೊಹ್ಲಿ ಸಖತ್ ಸ್ಟೆಪ್ಸ್!

- ಪೃಥ್ವಿ ಶಾ ಕೆಕೆಆರ್ ವಿರುದ್ಧ ಏಳು ಪಂದ್ಯಗಳಲ್ಲಿ ಐದು ಅರ್ಧಶತಕಗಳನ್ನು ಬಾರಿಸಿದ್ದಾರೆ.

ಮೊದಲು ಕಿರಿಕ್ ಮಾಡಿದ್ದು ಯಾರು ಗೊತ್ತಾ..?

- ಐಪಿಎಲ್ 2022 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪವರ್‌ಪ್ಲೇನಲ್ಲಿ ಕೇವಲ ಎಂಟು ವಿಕೆಟ್‌ಗಳನ್ನು ಪಡೆದಿದೆ. ಇದು ಐಪಿಎಲ್ 2022 ರಲ್ಲಿ ಎಲ್ಲಾ ತಂಡಗಳಿಗೆ ಹೋಲಿಸಿದರೆ ಕನಿಷ್ಠ ಎನಿಸಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮುಂಬೈಗೆ ಬಂದಿಳಿದ ವಿರುಷ್ಕಾ ದಂಪತಿ; ಮೆಸ್ಸಿಯನ್ನು ಭೇಟಿಯಾಗ್ತಾರಾ ವಿರಾಟ್ ಕೊಹ್ಲಿ?
ಟೀಂ ಇಂಡಿಯಾ ಕ್ರಿಕೆಟಿಗರಿಗೆ ದುಶ್ಚಟವಿದೆ, ಆದರೆ ನನ್ನ ಪತಿಗಿಲ್ಲ! ಈ ಕ್ರಿಕೆಟರ್ ಪತ್ನಿಯಿಂದ ವಿವಾದಾತ್ಮಕ ಹೇಳಿಕೆ