ಬದಲಾಯ್ತು ಇಂಡೋ-ವಿಂಡೀಸ್ ಟಿ20 ಪಂದ್ಯಗಳ ವೇಳಾಪಟ್ಟಿ..!

Web Desk   | Asianet News
Published : Nov 25, 2019, 11:26 AM IST
ಬದಲಾಯ್ತು ಇಂಡೋ-ವಿಂಡೀಸ್ ಟಿ20 ಪಂದ್ಯಗಳ ವೇಳಾಪಟ್ಟಿ..!

ಸಾರಾಂಶ

ಭಾರತ-ವೆಸ್ಟ್ ಇಂಡೀಸ್ ನಡುವಿನ ಟಿ20 ಸರಣಿಯ ವೇಳಾಪಟ್ಟಿ ತಾಂತ್ರಿಕ ಕಾರಣಗಳಿಂದ ಬದಲಾಗಿದೆ. ಯಾವಾಗ ಎಲ್ಲಿ ಪಂದ್ಯ ನಡೆಯುತ್ತೆ ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ..

ಮುಂಬೈ[ನ.25]: ಭಾರತ ಹಾಗೂ ವೆಸ್ಟ್‌ ಇಂಡೀಸ್‌ ನಡು​ವಿನ ಮೊದಲ ಹಾಗೂ 3ನೇ ಟಿ20 ಪಂದ್ಯ​ಗಳ ಸ್ಥಳ ಅದಲು ಬದಲು ಮಾಡ​ಲಾ​ಗಿದೆ. ಡಿ.6ರ ಮುಂಬೈ ಟಿ20 ಪಂದ್ಯ​ವನ್ನು ಹೈದ​ರಾ​ಬಾ​ದ್‌ ಹಾಗೂ ಡಿ.11ರ ಹೈದ​ರಾ​ಬಾದ್‌ ಟಿ20ಯನ್ನು ಮುಂಬೈಗೆ ಸ್ಥಳಾಂತರಿಸ​ಲಾ​ಗಿ​ದೆ. 

’ನೀವೆಲ್ಲ ಸಂಜು ಬ್ಯಾಟಿಂಗ್ ಪರೀಕ್ಷಿಸುತ್ತಿದ್ದಿರೋ ಇಲ್ಲಾ ಹೃದಯವನ್ನೋ..?’

ಹೌದು, ಡಿ.6 ಬಾಬ್ರಿ ಮಸೀದಿ ಉರು​ಳಿ​ಸಿದ ದಿನ​ವಾ​ಗಿದ್ದು, ಮುಂಬೈ​ ಪೊಲೀ​ಸರು ಹೈ ಅಲ​ರ್ಟ್‌ ಘೋಷಿ​ಸಿದ್ದಾರೆ. ಅಲ್ಲದೆ ಸಂವಿ​ಧಾನ ಶಿಲ್ಪಿ ಬಿ.ಆರ್‌ ಅಂಬೇ​ಡ್ಕರ್‌ ಪುಣ್ಯ​ತಿ​ಥಿಯಾಗಿದ್ದು, ದಾದ​ರ್‌​ನಲ್ಲಿ ಲಕ್ಷ​ಗ​ಟ್ಟಲೆ ಜನ ಚೈತ​ನ್ಯ​ಭೂ​ಮಿಗೆ ಭೇಟಿ ನೀಡ​ಲಿ​ದ್ದಾರೆ. ಸರ​ಣಿಯ ದ್ವಿತೀ​ಯ ಟಿ20 ಪಂದ್ಯ ಯಾವುದೇ ಬದ​ಲಾ​ವ​ಣೆ​ ಇಲ್ಲದೆ ಡಿ.8ರಂದು ತಿರು​ವ​ನಂತ​ಪು​ರಂನಲ್ಲಿ ನಡೆ​ಯ​ಲಿ​ದೆ.

INDvWI; 2ನೇ ಟಿ20 ಪಂದ್ಯಕ್ಕೆ ಬಹಿಷ್ಕಾರ, ಬೇಡಿಕೆ ಈಡೇರಿಸಲು ಫ್ಯಾನ್ಸ್ ಪಟ್ಟು!

ವೆಸ್ಟ್ ಇಂಡೀಸ್ ವಿರುದ್ಧದ ಸೀಮಿತ ಓವರ್’ಗಳ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಭುವನೇಶ್ವರ್ ಕುಮಾರ್ ತಂಡ ಕೂಡಿಕೊಂಡಿದ್ದಾರೆ. ಕೇದಾರ್ ಜಾದವ್’ಗೂ ಅವಕಾಶ ಕಲ್ಪಿಸಲಾಗಿದ್ದು, ಸಂಜು ಸ್ಯಾಮ್ಸನ್ ಅವರನ್ನು ತಂಡದಿಂದ ಕೈಬಿಟ್ಟಿದ್ದು ವ್ಯಾಪಕ ಟೀಕೆಗೆ ಗುರಿಯಾಗಿದೆ. 

ವಿಂಡೀಸ್ ಸರಣಿಗೆ ಭಾರತ ತಂಡ ಪ್ರಕಟ; ಇಬ್ಬರು ಕನ್ನಡಿಗರಿಗೆ ಚಾನ್ಸ್!

ಇತ್ತೀಚೆಗಷ್ಟೇ 5 ನ್ಯಾಯಮೂರ್ತಿಗಳನ್ನೊಳಗೊಂಡ ಸುಪ್ರೀಂ ಕೋರ್ಟ್ ನ್ಯಾಯಪೀಠ ಅಯೋಧ್ಯ ತೀರ್ಪು ಪ್ರಕಟಿಸಿತ್ತು. ಅಯೋಧ್ಯ ರಾಮ ಜನ್ಮ ಭೂಮಿಯ ಸಂಪೂರ್ಣ ಹಕ್ಕನ್ನು ರಾಮ್’ಲಲ್ಲಾಗೆ ನೀಡಿತ್ತು. ಇನ್ನು ಸುನ್ನಿ ವಕ್ಫ್ ಬೋರ್ಡ್’ಗೆ ಅಯೋಧ್ಯೆಯ ಬೇರೊಂದು ಜಾಗದಲ್ಲಿ ಮಸೀದಿ ನಿರ್ಮಿಸಲು ಕೇಂದ್ರ ಹಾಗೂ ಉತ್ತರ ಪ್ರದೇಶ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿದ್ದನ್ನು ಸ್ಮರಿಸಬಹುದಾಗಿದೆ. 
 
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ
ಕಾಂಗರೂ ನಾಡಲ್ಲಿ ಶತಕದ ಬರ ನೀಗಿಸಿಕೊಂಡ ಜೋ ರೂಟ್! ಕೊನೆಗೂ ತಪ್ಪಿದ ಹೇಡನ್ 'ಬೆತ್ತಲೆ ಸೇವೆ'!