ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಸೂಪರ್ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಬೌಲಿಂಗ್ ಆಯ್ದುಕೊಂಡಿದ್ದು, ಕರ್ನಾಟಕಕ್ಕೆ ಮೊದಲ ಶಾಕ್ ಎದುರಾಗಿದೆ. ಕೆ.ಎಲ್ ರಾಹುಲ್ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಸೂರತ್(ನ.25): ಸಯ್ಯದ್ ಮುಷ್ತಾಕ್ ಅಲಿ ರಾಷ್ಟ್ರೀಯ ಟಿ20 ಟೂರ್ನಿಯಲ್ಲಿ ಸೆಮಿಫೈನಲ್ಗೇರಲು ಕರ್ನಾಟಕ ಕಾತರಿಸುತ್ತಿದೆ. ಇದೀಗ ಮುಂಬೈ ತಂಡ ಟಾಸ್ ಗೆದ್ದು ಕರ್ನಾಟಕವನ್ನು ಬ್ಯಾಟಿಂಗ್’ಗೆ ಆಹ್ವಾನಿಸಿದೆ. ಕರ್ನಾಟಕ ತಂಡ ಸೂಪರ್ ಲೀಗ್ ಹಂತದ ಅಂತಿಮ ಪಂದ್ಯ ಇದಾಗಿದ್ದು, ಕರ್ನಾಟಕ ತಂಡಕ್ಕೆ ಆರಂಭಿಕ ಆಘಾತ ಎದುರಾಗಿದೆ. ಕೆ.ಎಲ್ ರಾಹುಲ್ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದ್ದಾರೆ.
undefined
ಪಂಜಾಬ್ ವಿರುದ್ಧ ಕರ್ನಾಟಕಕ್ಕೆ ಜಯ:
ಭಾನುವಾರ ಇಲ್ಲಿ ನಡೆದ ಸೂಪರ್ ಲೀಗ್ ಹಂತದ 3ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ತಂಡ ಪಂಜಾಬ್ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ತಂಡ ಆಡಿರುವ 3 ಪಂದ್ಯಗಳಲ್ಲೂ ಗೆದ್ದಿದ್ದು, ‘ಬಿ’ ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ತಂಡಕ್ಕೆ ಇನ್ನೊಂದು ಪಂದ್ಯ ಬಾಕಿ ಇದ್ದು, ಸೆಮಿಫೈನಲ್ ಪ್ರವೇಶ ಬಹುತೇಕ ಖಚಿತ ಎನಿಸಿದೆ.
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ತಂಡವನ್ನು ಕರ್ನಾಟಕ 20 ಓವರಲ್ಲಿ 6 ವಿಕೆಟ್ ನಷ್ಟಕ್ಕೆ 163 ರನ್‌ಗಳಿಗೆ ನಿಯಂತ್ರಿಸಿತು. ಬಳಿಕ ಕೆ.ಎಲ್.ರಾಹುಲ್ (48 ಎಸೆತಗಳಲ್ಲಿ ಅಜೇಯ 84 ರನ್) ಅಬ್ಬರದ ಬ್ಯಾಟಿಂಗ್ ನೆರವಿನಿಂದ ಇನ್ನು 2 ಓವರ್ ಬಾಕಿ ಇರುವಂತೆ ಗೆಲುವು ಸಾಧಿಸಿತು.
ಯುವ ಆರಂಭಿಕ ದೇವದತ್ ಪಡಿಕ್ಕಲ್ (02) ಅಪರೂಪ ಎಂಬಂತೆ ವೈಫಲ್ಯ ಕಂಡರು. ರೋಹನ್ ಕದಂ (23), ಮನೀಶ್ ಪಾಂಡೆ (33) ಹಾಗೂ ಕರುಣ್ ನಾಯರ್ (23), ರಾಹುಲ್‌ಗೆ ಉತ್ತಮ ಬೆಂಬಲ ನೀಡಿದರು. ರಾಹುಲ್ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ, 4 ಸಿಕ್ಸರ್ಗಳಿದ್ದವು.
ಮುಷ್ತಾಕ್ ಅಲಿ ಟ್ರೋಫಿ: ಕರ್ನಾಟಕಕ್ಕೆ ಹ್ಯಾಟ್ರಿಕ್ ಜಯದ ತವಕ
ಪಂಜಾಬ್‌ಗೆ ಮನದೀಪ್ ಆಸರೆ: ಟಾಸ್ ಗೆದ್ದು ಪಂಜಾಬ್ ತಂಡವನ್ನು ಮೊದಲು ಬ್ಯಾಟ್ ಮಾಡುವಂತೆ ಆಹ್ವಾನಿಸಿದ ಕರ್ನಾಟಕ, ಆರಂಭಿಕರಾದ ಅಭಿಷೇಕ್ ಶರ್ಮಾ (05) ಹಾಗೂ ಶುಭ್‌ಮನ್ ಗಿಲ್ (11) ಅವರನ್ನು ಬೇಗನೆ ಪೆವಿಲಿಯನ್ಗಟ್ಟಿತು. ನಾಯಕ ಮನ್‌ದೀಪ್ ಸಿಂಗ್ 50 ಎಸೆತಗಳಲ್ಲಿ 76 ರನ್, ಗುರ್‌ಕೀರತ್ ಮಾನ್ 32 ಎಸೆತಗಳಲ್ಲಿ 44 ರನ್ ಹೋರಾಟದ ನೆರವಿನಿಂದ ಪಂಜಾಬ್ ಸ್ಪರ್ಧಾತ್ಮಕ ಮೊತ್ತ ತಲುಪಿತು. ಕರ್ನಾಟಕ ಪರ ವೇಗಿ ರೋನಿತ್ ಮೋರೆ 4 ವಿಕೆಟ್ ಕಬಳಿಸಿದರೆ, ಕೌಶಿಕ್ ಹಾಗೂ ಶ್ರೇಯಸ್ ಗೋಪಾಲ್ ತಲಾ 1 ವಿಕೆಟ್ ಕಿತ್ತರು.
ಸ್ಕೋರ್:
ಪಂಜಾಬ್ 20 ಓವರಲ್ಲಿ 163/3 (ಮನ್‌ದೀಪ್ 76, ಗುರ್‌ಕೀರತ್ 44, ರೋನಿತ್ 4-27)
ಕರ್ನಾಟಕ 18 ಓವರಲ್ಲಿ 167/3 (ರಾಹುಲ್ 84, ಮನೀಶ್ 33, ಕರುಣ್ 23)